ಆರ್‌ಇ ಕ್ಲಾಸಿಕ್ 350 ಬೈಕಿನಲ್ಲಿ ಸಿದ್ಧಗೊಂಡ ಮಾಡಿಫೈ ಸ್ಕ್ರ್ಯಾಂಬ್ಲರ್

Written By:

ಸೂಪರ್ ಕ್ಲಾಸಿಕ್ ಬೈಕ್‌ಗಳಲ್ಲಿ ಡುಕಾಟಿ ಸಂಸ್ಥೆಯ ಸ್ಕ್ರ್ಯಾಂಬ್ಲರ್ ಬೈಕ್ ಆವೃತ್ತಿಗೆ ಅತಿಹೆಚ್ಚು ಬೇಡಿಕೆಯನ್ನು ಹೊಂದಿದ್ದು, ಈ ಹಿನ್ನೆಲೆ ದುಬಾರಿಯ ಬೆಲೆಯ ಬೈಕ್ ಮಾದರಿಯನ್ನು ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 350 ಬೈಕಿನೊಂದಿಗೆ ಮಾಡಿಫೈಗೊಳಿಸಲಾಗಿದೆ.

ಆರ್‌ಇ ಕ್ಲಾಸಿಕ್ 350 ಬೈಕಿನಲ್ಲಿ ಸಿದ್ಧಗೊಂಡ ಮಾಡಿಫೈ ಸ್ಕ್ರ್ಯಾಂಬ್ಲರ್

ಹೈದ್ರಾಬಾದ್ ಮೂಲದ ಎಮಿರ್ ಕಸ್ಟಮ್ ಎನ್ನುವ ಮಾಡಿಫೈ ಸಂಸ್ಥೆಯೊಂದು ಸ್ಕ್ರ್ಯಾಂಬ್ಲರ್ ಮಾಡಿಫೈ ವಿಶೇಷ ಆವೃತ್ತಿಯನ್ನು ಸಿದ್ದಗೊಂದಿದ್ದು, ಆಪ್ ರೋಡಿಂಗ್ ಪ್ರಿಯರಿಗಾಗಿ ರಾಯಲ್ ಎನ್‌ಫೀಲ್ಡ್ ಕ್ಲಾಸಿರ್ 350 ಎಂಜಿನ್ ಬಳಕೆ ಮಾಡಿಕೊಂಡು ವಿನೂತನ ಸ್ಕ್ರ್ಯಾಂಬ್ಲರ್ ಮಾಡಿಫೈ ಆವೃತ್ತಿಯನ್ನು ಸಿದ್ದಗೊಳಿಸಿದ್ದಾರೆ. ಹೊಸ ಬೈಕಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಸೇರಿಸಲಾಗಿದ್ದು, ಮೂಲ ಬೈಕಿಗಿಂತ ಮಾಡಿಫೈ ಬೈಕ್ ವಿಭಿನ್ನ ಲುಕ್ ಪಡೆದುಕೊಂಡಿದೆ.

ಆರ್‌ಇ ಕ್ಲಾಸಿಕ್ 350 ಬೈಕಿನಲ್ಲಿ ಸಿದ್ಧಗೊಂಡ ಮಾಡಿಫೈ ಸ್ಕ್ರ್ಯಾಂಬ್ಲರ್

ತೆಲಂಗಾಣ ಮೂಲದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮಾಲೀಕರೊಬ್ಬರು ಎಮಿರ್ ಕಸ್ಟಮ್ಸ್ ವಿನ್ಯಾಸಕಾರರ ಬಳಿ ಈ ಬೈಕ್ ಅನ್ನು ಮಾಡಿಫೈ ಮಾಡಿಸಿಕೊಂಡಿದ್ದು, ಬೈಕಿನಲ್ಲಿ ಒದಗಿಸಲಾಗಿರುವ ಗುಣಮಟ್ಟದ ಸೌಲಭ್ಯಗಳೇ ಮಾಡಿಫೈ ಬೈಕಿನ ಹೈಲೆಟ್ಸ್..

ಆರ್‌ಇ ಕ್ಲಾಸಿಕ್ 350 ಬೈಕಿನಲ್ಲಿ ಸಿದ್ಧಗೊಂಡ ಮಾಡಿಫೈ ಸ್ಕ್ರ್ಯಾಂಬ್ಲರ್

ಇನ್ನೊಂದು ಪ್ರಮುಖ ವಿಚಾರವೆಂದರೇ ಬೈಕ್ ಮಾಡಿಫೈಗಳಿಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳೇ ಹೆಚ್ಚು ಸೂಕ್ತವಾಗಿದ್ದು, ಹಲವಾರು ಸೂಪರ್ ಬೈಕ್‌ ಮಾದರಿಗಳನ್ನು ಮಾಡಿಫೈ ಮಾಡಲು ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೇ ಬಳಕೆ ಮಾಡಲಾಗುತ್ತಿದೆ.

ಆರ್‌ಇ ಕ್ಲಾಸಿಕ್ 350 ಬೈಕಿನಲ್ಲಿ ಸಿದ್ಧಗೊಂಡ ಮಾಡಿಫೈ ಸ್ಕ್ರ್ಯಾಂಬ್ಲರ್

ಜೊತೆಗೆ, ಮಾಡಿಫೈ ವಿನ್ಯಾಸಗಳನ್ನು ಕೈಗೊಳ್ಳಲು ಆರ್‌ಇ ಬೈಕ್‌ಗಳು ಸುಲಭವಾಗಿದ್ದು, ಎಮಿರ್ ಕಸ್ಟಮ್ ಸಂಸ್ಥೆಯು ಸಿದ್ದಗೊಳಿಸಿರುವ ಮಾಡಿಫೈ ಬೈಕ್ ಸಹ ಹ್ಯಾಂಡಲ್‌ ಮತ್ತು ಸೀಟುಗಳ ವಿಭಾಗದಲ್ಲಿ ಪ್ರಮುಖ ಆಕರ್ಷಣೆ ಪಡೆದುಕೊಂಡಿರುವುದು ಕಸ್ಟಮ್ ಬೈಕ್ ಪ್ರಿಯರನ್ನು ಸೆಳೆಯುವಂತಿವೆ.

ಆರ್‌ಇ ಕ್ಲಾಸಿಕ್ 350 ಬೈಕಿನಲ್ಲಿ ಸಿದ್ಧಗೊಂಡ ಮಾಡಿಫೈ ಸ್ಕ್ರ್ಯಾಂಬ್ಲರ್

ಹೊಸ ಬೈಕ್‌ಗೆ ಎಮಿರ್ ಎನ್ವಿ ಎಂದು ನಾಮಕರಣ ಮಾಡಲಾಗಿದ್ದು, ಮೂಲ ಬೈಕ್‌ನಲ್ಲಿದ್ದ ಎಲ್ಲಾ ಸೌಲಭ್ಯಗಳನ್ನು ತೆಗೆದು ಹಾಕಿ ಸಂಪೂರ್ಣ ಬದಲಾವಣೆಯೊಂದಿಗೆ ಮಾಡಿಫೈ ಮಾದರಿಯಲ್ಲೂ ಅಭಿವೃದ್ಧಿ ಪಡಿಸಲಾಗಿದೆ.

ಆರ್‌ಇ ಕ್ಲಾಸಿಕ್ 350 ಬೈಕಿನಲ್ಲಿ ಸಿದ್ಧಗೊಂಡ ಮಾಡಿಫೈ ಸ್ಕ್ರ್ಯಾಂಬ್ಲರ್

ಗುಣಮಟ್ಟದ ಸೀಟುಗಳನ್ನು ಹೊಂದಿರುವ ಮಾಡಿಫೈ ಬೈಕಿನಲ್ಲಿ ಮ್ಯಾಟೆ ಗ್ರಿನ್ ಬಣ್ಣಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗಿದ್ದು, ಸ್ಪೋಕ್ ಚಕ್ರಗಳು, ಎಬಿಎಸ್, ವಿಶೇಷ ವಿನ್ಯಾಸದ ಎಕ್ಸಾಸ್ಟ್, ಹೆಡ್‌ಲ್ಯಾಂಪ್ ಮತ್ತು ಇನ್ಟ್ರುಮೆಂಟಲ್ ಕ್ರಸ್ಟರ್ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

ಆರ್‌ಇ ಕ್ಲಾಸಿಕ್ 350 ಬೈಕಿನಲ್ಲಿ ಸಿದ್ಧಗೊಂಡ ಮಾಡಿಫೈ ಸ್ಕ್ರ್ಯಾಂಬ್ಲರ್

ಇನ್ನು ಸ್ಕ್ರ್ಯಾಂಬ್ಲರ್ ಮಾಡಿಫೈ ಎಂಜಿನ್ ವಿಭಾಗದ ಸಾಮರ್ಥ್ಯವನ್ನು ಮೂಲ ಬೈಕಿನಂತೆಯೇ ಮುಂದುವರಿಸಲಾಗಿದ್ದು, 349-ಸಿಸಿ ಸಿಂಗಲ್ ಸಿಲಿಂಡನ್ ಎಂಜಿನ್ ಜೋಡಿಸಲಾಗಿದೆ. ಹೀಗಾಗಿ ಮಾಡಿಫೈ ಬೈಕ್ ಮಾದರಿಯು 19.8-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಆರ್‌ಇ ಕ್ಲಾಸಿಕ್ 350 ಬೈಕಿನಲ್ಲಿ ಸಿದ್ಧಗೊಂಡ ಮಾಡಿಫೈ ಸ್ಕ್ರ್ಯಾಂಬ್ಲರ್

ಇನ್ನೊಂದು ವಿಶೇಷ ಅಂದ್ರೆ, ಮಾಡಿಫೈ ಬೈಕ್ ಉತ್ಪಾದನೆ ಮಾಡುವಲ್ಲಿ ಜನಪ್ರಿಯತೆ ಸಾಧಿಸಿರುವ ಎಮಿರ್ ಕಸ್ಟಮ್ ಸಂಸ್ಥೆಯು ದೇಶಾದ್ಯಂತ ಅತಿದೊಡ್ಡ ಮಾರಾಟಜಾಲ ಹೊಂದಿದ್ದು, ಇದು ಈಗಾಗಲೇ ನೂರಾರು ಬಗೆಯ ಮಾಡಿಫೈ ಬೈಕ್ ತಯಾರಿಸುವ ತನ್ನದೇ ಆದ ಗ್ರಾಹಕ ವರ್ಗ ಪಡೆದುಕೊಂಡಿದೆ.

English summary
Eimor Customs Envy — A Royal Enfield Bullet Classic 350 Modified Into A Scrambler.
Story first published: Saturday, April 14, 2018, 16:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark