ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೋಂಡಾ ಗ್ರಾಜಿಯಾ..!!

ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟದಲ್ಲಿ ವಿನೂತನ ದಾಖಲೆ ಮಾಡಿದ್ದು, ಕೇವಲ ಎರಡೂವರೆ ತಿಂಗಳಿನಲ್ಲಿ ಬರೋಬ್ಬರಿ 50 ಸಾವಿರ ಸ್ಕೂಟರ್‌ಗಳು ಮಾರಾಟಗೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

By Praveen

Recommended Video

Tata Nexon Faces Its First Recorded Crash

ಕಳೆದ ಎರಡೂವರೆ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಭರ್ಜರಿ ಮಾರಾಟಗೊಳ್ಳುತ್ತಿರುವ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟದಲ್ಲಿ ವಿನೂತನ ದಾಖಲೆ ಮಾಡಿದ್ದು, ಕೇವಲ ಎರಡೂವರೆ ತಿಂಗಳಿನಲ್ಲಿ ಬರೋಬ್ಬರಿ 50 ಸಾವಿರ ಸ್ಕೂಟರ್‌ಗಳು ಮಾರಾಟಗೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೋಂಡಾ ಗ್ರಾಜಿಯಾ..!!

ಹೋಂಡಾ ಮೋಟಾರ್ಸ್ ಇಂಡಿಯಾ ಸಂಸ್ಥೆಯು ಕಳೆದ ನ.8 ರಂದು ಗ್ರಾಜಿಯಾ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಸ್ಕೂಟರ್ ವಿಭಾಗದಲ್ಲಿ ಟ್ರೆಂಡ್ ಸೃಷ್ಠಿಸಿದ್ದಲ್ಲದೇ ಮಾರಾಟದಲ್ಲೂ ಮುನ್ನುಗ್ಗುತ್ತಿದೆ. ಜೊತೆಗೆ ಬಿಡುಗಡೆಯಾದ ಅಲ್ಪಾವಧಿಯಲ್ಲಿ ಇಷ್ಟೊಂದು ಪ್ರಮಾಣದ ಸ್ಕೂಟರ್‌ಗಳು ಮಾರಾಟವಾಗಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೋಂಡಾ ಗ್ರಾಜಿಯಾ..!!

ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ನಿರ್ಮಾಣದ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರನ್ನು ಸೆಳೆಯುವ ಉದ್ದೇಶದಿಂದ ಗ್ರಾಜಿಯಾ ಸ್ಕೂಟರ್ ಪರಿಚಯಿಸಿರುವುದು ಭರ್ಜರಿ ಮಾರಾಟಕ್ಕೆ ಕಾರಣವಾಗಿದೆ.

ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೋಂಡಾ ಗ್ರಾಜಿಯಾ..!!

ಬೆಲೆಗಳು

ಗ್ರಾಜಿಯಾ ಮಾದರಿಗಳು -ಬೆಲೆಗಳು(ದೆಹಲಿ ಎಕ್ಸ್‌ಶೋರಂ ಪ್ರಕಾರ)

ಗ್ರಾಜಿಯಾ ಎಸ್‌ಟಿಡಿ -ರೂ. 57,827

ಗ್ರಾಜಿಯಾ ಅಲಾಯ್ -ರೂ. 57,897

ಗ್ರಾಜಿಯಾ ಡಿಎಲ್ಎಕ್ಸ್ -ರೂ. 62,269

ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೋಂಡಾ ಗ್ರಾಜಿಯಾ..!!

ಗ್ರಾಜಿಯಾ ಎಂಜಿನ್ ಸಾಮರ್ಥ್ಯ

ಹೋಂಡಾ ಗ್ರಾಜಿಯಾ ಸ್ಕೂಟರ್ ಆವೃತ್ತಿಯು ಆಕ್ಟಿವಾ ಮಾದರಿಯಲ್ಲೇ 124.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.52-ಬಿಎಚ್‌ಪಿ ಮತ್ತು 10.54 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

Trending On DriveSpark Kannada:

2018ರ ಮಾರುತಿ ಸುಜುಕಿ ಸ್ವಿಫ್ಟ್ ಕುರಿತು ತಿಳಿದುಕೊಳ್ಳಬೇಕಾದ 5 ಪ್ರಮುಖ ವಿಚಾರಗಳಿವು...

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು...

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೋಂಡಾ ಗ್ರಾಜಿಯಾ..!!

ಗ್ರಾಜಿಯಾ ವಿನ್ಯಾಸಗಳು

ಗ್ರಾಜಿಯಾ ಸ್ಕೂಟರ್ ಹೋಂಡಾ ಸ್ಕೂಟರ್ ಮಾದರಿಗಳಲ್ಲೇ ವಿಭಿನ್ನವಾಗಿದ್ದು, 1,812 ಎಂಎಂ ಉದ್ದ, 697ಎಂಎಂ ಅಗಲ, 1,146 ಎಂಎಂ ಎತ್ತರ, 1,260 ಲಾಂಗ್ ವೀಲ್ಹ್ ಬೇಸ್, 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೋಂಡಾ ಗ್ರಾಜಿಯಾ..!!

ಜೊತೆಗೆ 5.3 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಜೋಡಣೆ ಮಾಡಲಾಗಿದ್ದು, 12 ಇಂಚಿನ ಅಲಾಯ್ ವೀಲ್ಹ್, ಮುಂಭಾಗದ ಚಕ್ರದಲ್ಲಿ 190 ಎಂಎಂ ಗಾತ್ರದ ಡಿಸ್ಕ್ ಬ್ರೇಕ್ ಪಡೆದುಕೊಂಡಿರುವುದು ಡಿಯೋ ಸ್ಕೂಟರ್‌ಗಿಂತಲೂ ಉತ್ತಮ ಎನ್ನಬಹುದಾಗಿದೆ.

ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೋಂಡಾ ಗ್ರಾಜಿಯಾ..!!

ಗ್ರಾಜಿಯಾ ಹೊರನೋಟ

ಟ್ವಿನ್ ಪಾಡ್ ಎಲ್‌ಇಡಿ ಹೆಡ್ ಲ್ಯಾಂಪ್ ಹೊಂದಿರುವ ಗ್ರಾಜಿಯಾ ಸ್ಕೂಟರ್ ಮಾದರಿಯು ಮುಂಭಾಗದಲ್ಲಿ ವಿ ಆಕಾರವನ್ನು ಪಡೆದುಕೊಂಡಿದ್ದು, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಮತ್ತು 18 ಲೀಟರ್‌ನಷ್ಟು ಸೀಟ್ ತಳಹದಿ ಸ್ಪೆಸ್ ಬಿಡಲಾಗಿದೆ.

ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಹೋಂಡಾ ಗ್ರಾಜಿಯಾ..!!

ಲಭ್ಯವಿರುವ ಬಣ್ಣಗಳು

ಗ್ರಾಜಿಯಾ ಹೊಸ ಸ್ಕೂಟರ್ ನಿಯೋ ಆರೇಂಜ್ ಮೆಟಾಲಿಕ್, ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್, ಪರ್ಲ್ ಸ್ಪ್ಯಾರ್ಟನ್ ರೆಡ್, ಪರ್ಲ್ ಅಮೆಜಿಂಗ್ ವೈಟ್, ಮ್ಯಾಟೆ ಆಕ್ಸಿಸ್ ಗ್ರೆ ಮೆಟಾಲಿಕ್ ಮತ್ತು ಮ್ಯಾಟೆ ಮಾರ್ರವೆಲ್ ಬ್ಲೂ ಮೆಟಾಲಿಕ್ ಬಣ್ಣದಲ್ಲಿ ಪರಿಚಯಿಸಲಾಗಿದೆ.

Trending On DriveSpark Kannada:

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on honda scooter
English summary
Honda Grazia Sales Cross 50,000 Units In 2.5 Months.
Story first published: Saturday, January 27, 2018, 12:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X