ಕೇವಲ 5 ತಿಂಗಳಿನಲ್ಲಿ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾಗಿ ಭರ್ಜರಿ ಮಾರಾಟಗೊಳ್ಳುತ್ತಿರುವ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟದಲ್ಲಿ ವಿನೂತನ ದಾಖಲೆ ಮಾಡಿವೆ.

By Praveen Sannamani

ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾಗಿ ಭರ್ಜರಿ ಮಾರಾಟಗೊಳ್ಳುತ್ತಿರುವ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟದಲ್ಲಿ ವಿನೂತನ ದಾಖಲೆ ಮಾಡಿದ್ದು, ಕೇವಲ ಐದು ತಿಂಗಳ ಅವಧಿಯಲ್ಲಿ ಬರೋಬ್ಬರಿ 1 ಲಕ್ಷ ಸ್ಕೂಟರ್‌ಗಳು ಮಾರಾಟಗೊಂಡಿರುವುದು ಹೊಸ ದಾಖಲೆಗೆ ಕಾರಣವಾಗಿದೆ.

ಕೇವಲ 5 ತಿಂಗಳಿನಲ್ಲಿ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ವಿನೂತನ ಮಾದರಿಯ ಗ್ರಾಜಿಯಾ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಸ್ಕೂಟರ್ ವಿಭಾಗದಲ್ಲೇ ಹೊಸ ಟ್ರೆಂಡ್ ಸೃಷ್ಠಿಸಿದ್ದಲ್ಲದೇ ಮಾರಾಟದಲ್ಲೂ ಮುನ್ನುಗ್ಗುತ್ತಿರುವ ಹೋಂಡಾ ಸಂಸ್ಥೆಯು, ಅಲ್ಪಾವಧಿಯಲ್ಲಿಯೇ ಇಷ್ಟೊಂದು ಪ್ರಮಾಣದ ಸ್ಕೂಟರ್‌ಗಳು ಮಾರಾಟವಾಗಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಗೂ ಕೂಡಾ ಪಾತ್ರವಾಗಿದೆ.

ಕೇವಲ 5 ತಿಂಗಳಿನಲ್ಲಿ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ನಿರ್ಮಾಣದ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರನ್ನು ಸೆಳೆಯುವ ಉದ್ದೇಶದಿಂದ ಗ್ರಾಜಿಯಾ ಸ್ಕೂಟರ್ ಪರಿಚಯಿಸಿರುವುದು ಭರ್ಜರಿ ಮಾರಾಟಕ್ಕೆ ಕಾರಣವಾಗಿದೆ.

ಕೇವಲ 5 ತಿಂಗಳಿನಲ್ಲಿ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಸ್ಕೂಟರ್ ಬೆಲೆಗಳು

ಗ್ರಾಜಿಯಾ ಮಾದರಿಗಳು -ಬೆಲೆಗಳು(ದೆಹಲಿ ಎಕ್ಸ್‌ಶೋರಂ ಪ್ರಕಾರ)

ಗ್ರಾಜಿಯಾ ಎಸ್‌ಟಿಡಿ -ರೂ. 57,827

ಗ್ರಾಜಿಯಾ ಅಲಾಯ್ -ರೂ. 57,897

ಗ್ರಾಜಿಯಾ ಡಿಎಲ್ಎಕ್ಸ್ -ರೂ. 62,269

ಕೇವಲ 5 ತಿಂಗಳಿನಲ್ಲಿ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಗ್ರಾಜಿಯಾ ಎಂಜಿನ್ ಸಾಮರ್ಥ್ಯ

ಹೋಂಡಾ ಗ್ರಾಜಿಯಾ ಸ್ಕೂಟರ್ ಆವೃತ್ತಿಯು ಆಕ್ಟಿವಾ ಮಾದರಿಯಲ್ಲೇ 124.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.52-ಬಿಎಚ್‌ಪಿ ಮತ್ತು 10.54 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ. ಜೊತೆಗೆ ರಫ್ ಆ್ಯಂಡ್ ಟಫ್ ಸ್ಕೂಟರ್ ಚಾಲನೆಗೂ ಅತ್ಯುತ್ತಮ ಮಾದರಿಯಾಗಿದೆ ಎಂದು ಹೇಳಬಹುದು.

ಕೇವಲ 5 ತಿಂಗಳಿನಲ್ಲಿ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಗ್ರಾಜಿಯಾ ವಿನ್ಯಾಸಗಳು

ಗ್ರಾಜಿಯಾ ಸ್ಕೂಟರ್ ಹೋಂಡಾ ಸ್ಕೂಟರ್ ಮಾದರಿಗಳಲ್ಲೇ ವಿಭಿನ್ನವಾಗಿದ್ದು, 1,812 ಎಂಎಂ ಉದ್ದ, 697ಎಂಎಂ ಅಗಲ, 1,146 ಎಂಎಂ ಎತ್ತರ, 1,260 ಲಾಂಗ್ ವೀಲ್ಹ್ ಬೇಸ್, 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಕೇವಲ 5 ತಿಂಗಳಿನಲ್ಲಿ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಜೊತೆಗೆ 5.3 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಜೋಡಣೆ ಮಾಡಲಾಗಿದ್ದು, 12 ಇಂಚಿನ ಅಲಾಯ್ ವೀಲ್ಹ್, ಮುಂಭಾಗದ ಚಕ್ರದಲ್ಲಿ 190 ಎಂಎಂ ಗಾತ್ರದ ಡಿಸ್ಕ್ ಬ್ರೇಕ್ ಪಡೆದುಕೊಂಡಿರುವುದು ಡಿಯೋ ಸ್ಕೂಟರ್‌ಗಿಂತಲೂ ಉತ್ತಮ ಎನ್ನಬಹುದಾಗಿದೆ.

ಕೇವಲ 5 ತಿಂಗಳಿನಲ್ಲಿ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಗ್ರಾಜಿಯಾ ಹೊರನೋಟ

ಟ್ವಿನ್ ಪಾಡ್ ಎಲ್‌ಇಡಿ ಹೆಡ್ ಲ್ಯಾಂಪ್ ಹೊಂದಿರುವ ಗ್ರಾಜಿಯಾ ಸ್ಕೂಟರ್ ಮಾದರಿಯು ಮುಂಭಾಗದಲ್ಲಿ ವಿ ಆಕಾರವನ್ನು ಪಡೆದುಕೊಂಡಿದ್ದು, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಮತ್ತು 18 ಲೀಟರ್‌ನಷ್ಟು ಸೀಟ್ ತಳಹದಿ ಸ್ಪೆಸ್ ಬಿಡಲಾಗಿದೆ.

ಕೇವಲ 5 ತಿಂಗಳಿನಲ್ಲಿ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಲಭ್ಯವಿರುವ ಬಣ್ಣಗಳು

ಗ್ರಾಜಿಯಾ ಹೊಸ ಸ್ಕೂಟರ್ ನಿಯೋ ಆರೇಂಜ್ ಮೆಟಾಲಿಕ್, ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್, ಪರ್ಲ್ ಸ್ಪ್ಯಾರ್ಟನ್ ರೆಡ್, ಪರ್ಲ್ ಅಮೆಜಿಂಗ್ ವೈಟ್, ಮ್ಯಾಟೆ ಆಕ್ಸಿಸ್ ಗ್ರೆ ಮೆಟಾಲಿಕ್ ಮತ್ತು ಮ್ಯಾಟೆ ಮಾರ್ರವೆಲ್ ಬ್ಲೂ ಮೆಟಾಲಿಕ್ ಬಣ್ಣದಲ್ಲಿ ಪರಿಚಯಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ?

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...

Most Read Articles

Kannada
Read more on honda scooter
English summary
Honda Grazia Sales Figures — Sells Over 1 Lakh Units in Five Months.
Story first published: Saturday, April 7, 2018, 17:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X