ತಗ್ಗಿದ ಆಮದು ಸುಂಕ- ಇಂಡಿಯನ್ ಮೋಟಾರ್ ಸೈಕಲ್‌ಗಳ ಮೇಲೆ 3 ಲಕ್ಷ ಕಡಿತ

Written By:

ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲಾಗುವ ಐಷಾರಾಮಿ ಬೈಕ್‌ಗಳ ಮೇಲಿನ ಆಮದು ಸುಂಕವನ್ನು ತಗ್ಗಿಸಲಾಗಿದ್ದು, ಈ ಹಿನ್ನೆಲೆ ಅಮೆರಿಕದ ಪ್ರಸಿದ್ದ ಬೈಕ್ ತಯಾರಕ ಸಂಸ್ಥೆಯಾದ ಇಂಡಿಯನ್ ಮೋಟಾರ್ ಸೈಕಲ್ ತನ್ನ ಉತ್ಪನ್ನಗಳ ಮೇಲೆ ಭಾರೀ ಪ್ರಮಾಣದ ಬೆಲೆ ಕಡಿತ ಮಾಡಿದೆ.

ತಗ್ಗಿದ ಆಮದು ಸುಂಕ- ಇಂಡಿಯನ್ ಮೋಟಾರ್ ಸೈಕಲ್‌ಗಳ ಮೇಲೆ 3 ಲಕ್ಷ ಕಡಿತ

ಈ ಹಿಂದೆ ಐಷಾರಾಮಿ ಬೈಕ್‌ಗಳ ಆಮದು ಮೇಲಿನ ಶೇ.75ರಷ್ಟು ಸುಂಕವನ್ನು ಇದೀಗ ಶೇ.50ಕ್ಕೆ ಇಳಿಕೆ ಮಾಡಲಾಗಿದ್ದು, ಇಂಡಿಯನ್ ಮೋಟಾರ್ ಸೈಕಲ್ ಸೇರಿದಂತೆ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮೇಲಿನ ದರಗಳನ್ನು ಕೂಡಾ ತಗ್ಗಿಸಿವೆ.

ತಗ್ಗಿದ ಆಮದು ಸುಂಕ- ಇಂಡಿಯನ್ ಮೋಟಾರ್ ಸೈಕಲ್‌ಗಳ ಮೇಲೆ 3 ಲಕ್ಷ ಕಡಿತ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ ಐಷಾರಾಮಿ ಕ್ರೂಸರ್ ಬೈಕ್‌ಗಳನ್ನು ಮಾರಾಟ ಮಾಡುವ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು, ತನ್ನ ಪ್ರಮುಖ ಬೈಕ್ ಮಾದರಿಗಳಾದ ಎಂಟ್ರಿ ಲೆವಲ್ ಸ್ಕೌಟ್ ಸಿಕ್ಸ್ಟಿಯಿಂದ ಉನ್ನತ ಮಾದರಿಯಾದ ರೋಡ್ ಮಾಸ್ಟರ್ ತನಕ ವಿವಿಧ ಶ್ರೇಣಿಗಳಲ್ಲಿ ಬೆಲೆ ಕಡಿತಗೊಳಿಸಿದೆ.

ತಗ್ಗಿದ ಆಮದು ಸುಂಕ- ಇಂಡಿಯನ್ ಮೋಟಾರ್ ಸೈಕಲ್‌ಗಳ ಮೇಲೆ 3 ಲಕ್ಷ ಕಡಿತ

ಕಡಿತವಾಗಿರುವ ಬೆಲೆಗಳು ಇಂದಿನಿಂದ ಅನ್ವಯವಾಗುವಂತೆ ಹೊಸ ದರ ಪಟ್ಟಿ ಬಿಡುಗಡೆ ಮಾಡಿರುವ ಇಂಡಿಯನ್ ಮೋಟಾರ್ ಸೈಕಲ್, ಕೇಂದ್ರದ ಮಹತ್ಪದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದೆ.

ತಗ್ಗಿದ ಆಮದು ಸುಂಕ- ಇಂಡಿಯನ್ ಮೋಟಾರ್ ಸೈಕಲ್‌ಗಳ ಮೇಲೆ 3 ಲಕ್ಷ ಕಡಿತ

ಈ ಬಗ್ಗೆ ಮಾತನಾಡಿರುವ ಪೊಲಾರಿಸ್ ಇಂಡಿಯಾ ಪ್ರೈ.ಲಿ ಕಂಟ್ರಿ ಹೆಡ್ ಪಂಕಜ್ ದುಬೆ, ಕೇಂದ್ರ ನಿರ್ಧಾರದಿಂದ ಐಷಾರಾಮಿ ಬೈಕ್ ಮಾರಾಟ ಪ್ರಮಾಣವು ಹೆಚ್ಚಲಿದ್ದು, ಇಂಡಿಯನ್ ಮೋಟಾರ್ ಸೈಕಲ್ ಉತ್ಪನ್ನಗಳು ಸಹ ಪ್ರಮುಖ ಪಾತ್ರವಹಿಸಲಿವೆ ಎಂದಿದ್ದಾರೆ.

ತಗ್ಗಿದ ಆಮದು ಸುಂಕ- ಇಂಡಿಯನ್ ಮೋಟಾರ್ ಸೈಕಲ್‌ಗಳ ಮೇಲೆ 3 ಲಕ್ಷ ಕಡಿತ

ಬೈಕ್ ಮಾದರಿಗಳು - ಪ್ರಸ್ತುತ ಬೆಲೆಗಳು(ಎಕ್ಸ್ ಶೋರಂ)

ಇಂಡಿಯನ್ ಸ್ಕೌಟ್ ಸಿಕ್ಸ್ಟಿ - ರೂ. 10.99 ಲಕ್ಷ

ಇಂಡಿಯನ್ ಸ್ಕೌಟ್ - ರೂ. 12.69 ಲಕ್ಷ

ಇಂಡಿಯನ್ ಸ್ಕೌಟ್ ಬಾಬ್ಬರ್ - ರೂ. 11.99 ಲಕ್ಷ

ಇಂಡಿಯನ್ ಚೀಫ್ ಡಾರ್ಕ್ ಹಾರ್ಸ್- ರೂ. 18.81 ಲಕ್ಷ

ಇಂಡಿಯನ್ ಚೀಫ್ ಕ್ಲಾಸಿಕ್ - ರೂ. 21. 29 ಲಕ್ಷ

ಇಂಡಿಯನ್ ಚೀಫ್ ವೀಟೆಂಜ್ - ರೂ. 25.32 ಲಕ್ಷ

ಇಂಡಿಯನ್ ಚೀಫ್ ಸ್ಪ್ರಿಂಗ್ ಫೀಲ್ಡ್- ರೂ. 33. 50 ಲಕ್ಷ

ಇಂಡಿಯನ್ ಚೀಫ್ ಟ್ರೈನ್ - ರೂ. 32.01 ಲಕ್ಷ

ಇಂಡಿಯನ್ ರೋಡ್ ಮಾಸ್ಟರ್ - ರೂ. ರೂ. 39 ಲಕ್ಷ

ತಗ್ಗಿದ ಆಮದು ಸುಂಕ- ಇಂಡಿಯನ್ ಮೋಟಾರ್ ಸೈಕಲ್‌ಗಳ ಮೇಲೆ 3 ಲಕ್ಷ ಕಡಿತ

ಐಷಾರಾಮಿ ಬೈಕ್ ಮಾದರಿಗಳಲ್ಲೇ ಅತ್ಯಂತ ದುಬಾರಿಯಾಗಿರುವ ಇಂಡಿಯನ್ ಸೈಕಲ್ ಸಂಸ್ಥೆಯು, ಭಾರತೀಯ ಮಾರುಕಟ್ಟೆಯ ಬೇಡಿಕೆಗೆ ಅನುಗಣವಾಗಿ ವಿವಿಧ ಬೈಕ್ ಮಾದರಿಗಳನ್ನು ಪರಿಚಯಿಸುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬಿಡುಗಡೆಗೊಳಿಸಿತ್ತು.

ತಗ್ಗಿದ ಆಮದು ಸುಂಕ- ಇಂಡಿಯನ್ ಮೋಟಾರ್ ಸೈಕಲ್‌ಗಳ ಮೇಲೆ 3 ಲಕ್ಷ ಕಡಿತ

ಇದೀಗ ಕೇಂದ್ರದ ಹೊಸ ನೀತಿಯಿಂದಾಗಿ ಇಂಡಿಯನ್ ಬೈಕ್‌ಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಲಿದ್ದು, ಮುಂಬರುವ ದಿನಗಳಲ್ಲಿ ಭಾರತೀಯ ರಸ್ತೆಗಳು ಐಷಾರಾಮಿ ಬೈಕ್‌ಗಳ ಸದ್ದು ಕೂಡಾ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Read more on indian super bikes
English summary
Indian Motorcycle Prices Slashed By Up To Rs 3 Lakh.
Story first published: Thursday, March 8, 2018, 13:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark