ಅನಾವರಣಗೊಂಡ ಇಂಡಿಯನ್ ಸ್ಕೌಟ್‍‍ನ ಹೊಸ ಬೈಕ್..

Written By: Rahul TS

ಅಮೆರಿಕಾದ ಮೂಲದ ಇಂಡಿಯನ್ ಮೋಟಾರ್‍‍ಸೈಕಲ್ ಸಂಸ್ಥೆಯು ತನ್ನ ಸ್ಕೌಟ್ ಬಾಬ್ಬರ್ ಮತ್ತು ಜಾಕ್ ಡಾನಿಯಲ್ಸ್ ಮಾದರಿಯಲ್ಲಿ ಲಿಮೆಟೆಡ್ ಎಡಿಷನ್ ಬೈಕ್ ಮಾದರಿಗಳನ್ನು ಅನಾವರಣಗೊಳಿಸುವ ಮೂಲಕ ಐಷಾರಾಮಿ ಬೈಕ್ ಸವಾರರಿಗೆ ಮತ್ತೊಂದು ಆಯ್ಕೆಯನ್ನು ನೀಡಿದೆ.

ಅನಾವರಣಗೊಂಡ ಇಂಡಿಯನ್ ಸ್ಕೌಟ್‍‍ನ ಹೊಸ ಬೈಕ್..

ಹೊಸ ಬೈಕಿನ ವಿನ್ಯಾಸವನ್ನು ಪ್ರತ್ಯೇಕವಾಗಿ ಜಾಕ್ ಡ್ಯಾನಿಯಲ್ಸ್ ನ ಫೈರ್ ಬ್ರಿಗೇಡ್ ಸ್ಪೂರ್ತಿಯೊಂದಿಗೆ ತಯಾರು ಮಾಡಲಾಗಿದ್ದು, ಗೋಲ್ಡ್ ಮತ್ತು ಫೈರ್ ಟ್ರಕ್ ವಿನ್ಯಾಸವನ್ನು ಆಧಾರವಾಗಿಟ್ಟುಕೊಂಡು ಹೊಸ ವಿನ್ಯಾಸವನ್ನು ಸಿದ್ದಪಡಿಸಲಾಗಿದೆ.

ಅನಾವರಣಗೊಂಡ ಇಂಡಿಯನ್ ಸ್ಕೌಟ್‍‍ನ ಹೊಸ ಬೈಕ್..

ಬೈಕಿನಲ್ಲಿ ಒದಗಿಸಲಾಗಿರುವ ಫೈರ್ ಟ್ರಕ್ ಬಗ್ಗೆ ಚರ್ಚಿಸುವುದಾದರೇ ಜಾಕ್ ಡ್ಯಾನಿಯಲ್ಸ್ ತನ್ನದೆಯಾದ ವಿಶೇಷ ವಿನ್ಯಾಸಗಳನ್ನು ಪಡೆದಿದ್ದು, ಎರ್ಮಜೆನ್ಸಿ ಮೆಡಿಕಲ್ ಸರ್ವಿಸ್ ವ್ಯವಸ್ಥೆಯನ್ನು ಸಹ ಈ ಬೈಕಿನಲ್ಲಿ ಇರಿಸಲಾಗಿದೆ.

ಅನಾವರಣಗೊಂಡ ಇಂಡಿಯನ್ ಸ್ಕೌಟ್‍‍ನ ಹೊಸ ಬೈಕ್..

ಹೀಗಾಗಿ ಸ್ಕೌಟ್ ಬಾಬರ್ ಜಾಕ್ ಡ್ಯಾನಿಯಲ್ಸ್ ಎಡಿಷನ್ ಬೈಕ್ ಅನ್ನು ವಿಶೇಷವಾಗಿ ಸಮುದಾಯವನ್ನು ರಕ್ಷಿಸುತ್ತಿರುವವರಿಗೆ ಮತ್ತು ತುರ್ತು ವೈದ್ಯಕೀಯ ಸೇವೆಯನ್ನು ಮಾಡುತ್ತಿರುವ ವೃತ್ತಿಪರರಿಗಾಗಿ ತಯಾರಿಸಲಾಗಿದೆ ಎನ್ನಬಹುದು.

ಅನಾವರಣಗೊಂಡ ಇಂಡಿಯನ್ ಸ್ಕೌಟ್‍‍ನ ಹೊಸ ಬೈಕ್..

ಸ್ಕೌಟ್ ಬಾಬರ್ ಜಾಕ್ ಡ್ಯಾನಿಯಲ್ಸ್ ಲಿಮಿಟೆಡ್ ಎಡಿಷನ್ ಬೈಕ್ ಆಗಿರುವುದರಿಂದ ಕೇವಲ 177 ಯೂನಿಟ್ ಗಳನ್ನು ಮಾತ್ರ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಮಾಡಲಿದೆ ಎನ್ನಲಾಗಿದ್ದು, ಪ್ರತಿ ಬೈಕ್ ವೈಯಕ್ತಿಕವಾಗಿ ಸಂಖ್ಯೆಯನ್ನು ಗುರುತಿಸಿ ಹಾಗೆಯೇ ಜಾಕ್ ಡ್ಯಾನಿಯಲ್ಸ್ ನ ಫೈರ್ ಬ್ರಿಗೇಡ್ ಥೀಮ್ ಪಡೆದುಕೊಂಡಿರುತ್ತದೆ.

ಅನಾವರಣಗೊಂಡ ಇಂಡಿಯನ್ ಸ್ಕೌಟ್‍‍ನ ಹೊಸ ಬೈಕ್..

ಲಿಮಿಟೆಡ್ ಎಡಿಷನ್ ನ ಈ ಬೈಕ್ ಎರಡು ಟೋನ್ ಮೇಟ್ ಬ್ಲಾಕ್ ಪೆಯಿಂಟ್ ಸ್ಕೀಮ್ ಮತ್ತು ನಿಜವಾದ 24 ಕ್ಯಾರೆಟ್ ಚಿನ್ನದ ಗ್ರಾಫಿಕ್ಸ್ ಅನ್ನು ಫ್ಯುಯಲ್ ಟ್ಯಾಂಕ್ ಮತ್ತು ಫೆಂಡರ್‍‍ಗಳ ಮೇಲೆ ಬಳಸಲಾಗಿದೆ.

ಅನಾವರಣಗೊಂಡ ಇಂಡಿಯನ್ ಸ್ಕೌಟ್‍‍ನ ಹೊಸ ಬೈಕ್..

ಫ್ಯುಯಲ್ ಟ್ಯಾಂಕ್ ಮೇಲೆ ಗೋಲ್ಡ್ ಪೇಯಿಂಟ್ ಸ್ಕೀಮ್ ನೊಂದಿಗೆ 'ಬಾಟಲ್ಸ್ ಆಂಡ್ ಥ್ರೋಟಲ್ಸ್ ಡೋಂಟ್ ಮಿಕ್ಸ್' ಎಂಬ ಲೋಗೊವನ್ನು ಮುಂಭಾಗದ ಫೆಂಡರ್‍‍ಗಳ ಮೇಲೆ ಬಳಸಲಾಗಿದೆ.

ಅನಾವರಣಗೊಂಡ ಇಂಡಿಯನ್ ಸ್ಕೌಟ್‍‍ನ ಹೊಸ ಬೈಕ್..

ಜ್ಯಾಕ್ ಡ್ಯಾನಿಯಲ್ಸ್ ನ ಕಸೂತಿಗಾರಿಕೆ (ಎಂಬ್ರಾಯ್ಡರಿ) ಹೊಂದಿರುವ ಸಿಂಗಲ್ ಲೆದರ್ ಸೀಟ್ ಮತ್ತು ಕಸ್ಟಮ್ ಗ್ರಿಪ್ಸ್, ಪೆಗ್ಸ್, ಹಾಗೆಯೇ 'ಓಲ್ಡ್ ನಂ.7 ಬ್ರಾಂಡ್' ನಿಂದ ಸ್ಪೂರ್ತಿ ಪಡೆದ ಶಿಫ್ಟ್ ಲೆವೆರ್ಸ್ ಶಿಫ್ಟ್ ಲೆವೆರ್‍‍ಗಳನ್ನು ಪಡೆದಿದೆ.

ಅನಾವರಣಗೊಂಡ ಇಂಡಿಯನ್ ಸ್ಕೌಟ್‍‍ನ ಹೊಸ ಬೈಕ್..

ಇದರೊಂದಿಗೆ ಸ್ಕೌಟ್ ಬಾಬ್ಬರ್ ಜ್ಯಾಕ್ ಡ್ಯಾನಿಯಲ್ಸ್ ಲಿಮಿಟೆಡ್ ಎಡಿಷನ್‌ನಲ್ಲಿ ಕತ್ತರಿಸಲಾಗಿರುವ ಫೆಂಡರ್ಸ್, ಬಾರ್-ಎಂಡ್ ಮಿರರ್ಸ್, ವೆಂಟೆಡ್ ಎಕ್ಸಾಸ್ಟ್ ಶೀಲ್ಡ್, ಕ್ನಾಬಿ ಟೈರ್ಸ್ ಮತ್ತು ಸ್ಲೀಕ್ ಹೆಡ್ಲೈಟ್ ಕೇಸಿಂಗ್ಅನ್ನು ಪಡೆದಿರುತ್ತವೆ.

ಅನಾವರಣಗೊಂಡ ಇಂಡಿಯನ್ ಸ್ಕೌಟ್‍‍ನ ಹೊಸ ಬೈಕ್..

ಸ್ಕೌಟ್ ಬಾಬರ್ ಜಾಕ್ ಡ್ಯಾನಿಯಲ್ಸ್ ಲಿಮಿಟೆಡ್ ಎಡಿಶನ್ ಬೈಕ್ ಯುಎಸ್ ಮತ್ತು ಕೆನಾಡ ಪ್ರಾಂತ್ಯದಲ್ಲಿನ ಡೀಲರ್‍‍ಗಳ ಹತ್ತಿರ ಇದೇ ತಿಂಗಳು 13ರಿಂದ ಖರೀದಿಗೆ ಲಭ್ಯವಿರಲಿವೆ ಎನ್ನಲಾಗಿದ್ದು, ಭಾರತದಲ್ಲಿ ಈ ಬೈಕ್ ಬಿಡುಗಡೆಯ ಬಗ್ಗೆ ಯಾವುದೇ ರೀತಿಯಾದ ಮಾಹಿತಿಯನ್ನು ಹೊರಹಾಕಲಿಲ್ಲ.

Read more on indian super bike
English summary
Indian Scout Bobber Jack Daniel's Limited Edition Unveiled.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark