TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಮುಂದಿನ ವರ್ಷ ಬಿಡುಗಡೆಗೊಳ್ಳಲಿದೆಯೆ ಟಿವಿಎಸ್‍ನ ಹೈಬ್ರಿಡ್ ಸ್ಕೂಟರ್..??
ದೇಶಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಟಿವಿಎಸ್ ಮೋಟಾರ್, ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಐಕ್ಯೂಬ್ ಅನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದ್ದು, ಬಿಡುಗಡೆಯ ಬಗ್ಗೆ ಟಿವಿಎಸ್ ಸಾಂಸ್ಥೆಯು ಅಧಿಕೃತ ಮಾಹಿತಿ ನೀಡಲಿಲ್ಲವಾದರೂ ಮಾಹಿತಿಗಳ ಪ್ರಕಾರ ಮುಂದಿನ ವರ್ಷ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎನ್ನಲಾಗಿದೆ.
ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಅದರಲ್ಲೂ ಸ್ಕೂಟರ್ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಇಂಧನ ಕ್ಷಮತೆ ಕಾಪಾಡಿಕೊಳ್ಳುವ ಹೈಬ್ರಿಡ್ ಸ್ಕೂಟರ್ ಗಳು ಸೂಕ್ತ ಆಯ್ಕೆಯಾಗಿರಲಿದೆ.
2012 ಆಟೋ ಎಕ್ಸ್ ಪೋದಲ್ಲಿ ಸಂಸ್ಥೆಯು ಪ್ರದರ್ಶನಕ್ಕಿರಿಸಿರುವ ಕ್ಯೂಬ್ ಕಾನ್ಸೆಪ್ಟ್ ತಳಹದಿಯಲ್ಲಿ ನೂನತ ಐಕ್ಯೂಬ್ ಹೈಬ್ರಿಡ್ ಸ್ಕೂಟರ್ ಅನ್ನು ನಿರ್ಮಿಸಲಾಗಿದೆ.
ಐಕ್ಯೂಬ್ ಸ್ಕೂಟರ್ ನಲ್ಲಿ 110 ಸಿಸಿ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರು ಲಗತ್ತಿಸಲಾಗುವುದು. ಇದು ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆಯಲಿದೆ. ಜೊತೆಗೆ ಇನ್ನು ಸವಾರನ ಅಗತ್ಯಗಳಿಗಾನುಸಾರವಾಗಿ ವಿವಿಧ ಚಾಲನಾ ವಿಧಗಳನ್ನು ನೀಡಲಾಗುವುದು.
ಆಟೋ ಎಕ್ಸ್ ಪೋನಲ್ಲಿ ಪ್ರದರ್ಶಿಸಲಾದ ಟಿವಿಎಸ್ ಐಕ್ಯೂಬ್ ಸ್ಕೂಟರ್ 150 ವ್ಯಾಟ್ಸ್ ಹಾಗು 500 ವ್ಯಾಟ್ಸ್ ಎಂಬ ಎರಡು ಬ್ಯಾಟರಿಯನ್ನು ಹೊಂದಿದ್ದು, ಮುಂಭಾಗದ ವ್ಹೀಲ್ ಗಂಟೆಗೆ 20 ಕಿಲೋಮೀಟರ್ ಪವರ್ ನೀಡಲಾಗಿದ್ದು ಗಾಡಿ ಸ್ಟಾರ್ಟ್ ಆದ ಕೆಲ ಸಮಯದ ನಂತರ ಸ್ಕೂಟರಿನ ಫ್ಯುಯಲ್ ಎಂಜಿನ್ ಚಾಲ್ತಿಯಾಗುತ್ತದೆ.
ಬ್ರೇಕ್ ಎನರ್ಜಿ ರಿ ಜನರೇಷನ್ ಅಥವಾ ಸವಾರ ಬ್ರೇಕ್ ಅದುಮಿದಾಗ ಲಿಥಿಯಂ ಇಯಾನ್ ಬ್ಯಾಟರಿಯಲ್ಲಿ ಪವರ್ ಶೇಖರಣೆಯಾಗಲಿದೆ. ಇದು ಬಳಿಕ ಎಲೆಕ್ಟ್ರಿಕ್ ಮೋಟಾರು ಮುಖಾಂತರ ಚಾಲನೆ ಮಾಡಲು ಸಹಕಾರಿಯಾಗಲಿದೆ.
ಇದು ಹೈಬ್ರಿಡ್ ಎಕಾನಮಿ ಮತ್ತು ಹೈಬ್ರಿಡ್ ಪವರ್ ಮೋಡ್ ಗಳನ್ನು ಪಡೆಯಲಿದೆ. ಪವರ್ ಮೋಡ್ ನಲ್ಲಿ ಹೆಚ್ಚು ಶಕ್ತಿ ವಿತರಣೆಯಾಗಲಿದ್ದು, ಎಕಾನಮಿ ಮೋಡ್ ನಲ್ಲಿ ಇಂಧನ ಕ್ಷಮತೆಗೆ ಆದ್ಯತೆ ಕೊಡಲಾಗುವುದು.
ಟಿವಿಎಸ್ 2017 ರಲ್ಲಿ ಐಸಿ-ಎಲೆಕ್ಟ್ರಿಕ್ ಹೈಬ್ರಿಡ್ ಡ್ರೈವ್ ಸಿಸ್ಟಮ್ಗೆ ಹಕ್ಕುಸ್ವಾಮ್ಯ ನೀಡಿತು ಮತ್ತು ಈಗ ಕಂಪನಿಯು ಪರಿಕಲ್ಪನೆಯ ಉತ್ಪಾದನಾ ಆವೃತ್ತಿಯನ್ನು ಪ್ರಾರಂಭಿಸಬಹುದು ಎನ್ನಲಾಗಿದ್ದು, ಒಟ್ಟಾರೆಯಾಗಿ, ಸ್ಕೂಟರಿನ ದೇಹದ ವಿನ್ಯಾಸವು ಬ್ಯಾಟರಿಗಳಿಗೆ ಸರಿಹೊಂದಿಸಲು ತಯಾರಿಸಲಿದೆ.
ವಿದ್ಯುತ್ ಮತ್ತು ಹೈಬ್ರಿಡ್ ವಾಹನಗಳು ಜನಪ್ರಿಯಗೊಳಿಸಲು ಸರ್ಕಾರವು ನೀಡುತ್ತಿರುವ ಫೇಮ್ ಸಬ್ಸಿಡಿ ಅಡಿಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಟಿವಿಎಸ್ ಸ್ಕೂಟರನ್ನು ಆರಂಭಿಸಬಹುದು. ಆದಾಗ್ಯೂ, ಪ್ರಸ್ತುತ ಸಬ್ಸಿಡಿ ರಚನೆಯು 2018 ರ ಸೆಪ್ಟೆಂಬರ್ವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಸಬ್ಸಿಡಿಯಲ್ಲಿ ಲಾಭ ಪಡೆಯಲು ಟಿವಿಎಸ್ ಶೀಘ್ರದಲ್ಲೇ ಉತ್ಪನ್ನವನ್ನು ಪ್ರಾರಂಭಿಸಬಹುದು ಎನ್ನಲಾಗಿದೆ.
ಟಿವಿಎಸ್ ನೂತನ ಹೈಬ್ರಿಡ್ ಸ್ಕೂಟರ್ ಪ್ರಯೋಗವು ದೇಶದ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿನಲ್ಲಿ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
Source : Cartoq