ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಕವಾಸಕಿಯು ತನ್ನ ಹೊಸ ನಿಂಜಾ 400 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಇದರ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 4.69 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.
2017ರ ಇಐಸಿಎಂಎ ಮೋಟಾರ್ ಶೋನಲ್ಲಿ ನಿಂಜಾ 400 ಬೈಕ್ ಪ್ರದರ್ಶನ ಮಾಡಿದ್ದ ಕವಾಸಕಿ ಸಂಸ್ಥೆಯು ಭಾರತೀಯ ಗ್ರಾಹಕರನ್ನು ಸೆಳೆಯಲು ಹೊಸ ವಿನ್ಯಾಸಗಳೊಂದಿಗೆ ಹೊಸ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿನ ಕವಾಸಕಿ 300 ಬೈಕ್ ಅನ್ನು ಬದಲಾಯಿಸಿದೆ.
ಇನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಕವಾಸಕಿ ನಿಂಜಾ 400 ಬೈಕ್‌ಗಳು ಮುಂಭಾಗದಲ್ಲಿ ಶಾರ್ಪ್ ಫ್ರಂಟ್ ಎಂಡ್ ಮತ್ತು ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಅನ್ನು ಪಡೆದಿದ್ದು, ಪ್ರೀಮಿಯಂ ಡಿಸ್ಪ್ಲೇ ಹೊಂದಿರುವ ಹೊಸ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ.
ಕವಾಸಕಿ ನಿಂಜಾ 400 ಬೈಕ್ ಎಲ್ಇಡಿ ಟೈಲ್ ಲೈಟ್ ಮತ್ತು ವಿನೂತನವಾದ ಎಕ್ಸಾಸ್ಟ್ ಕ್ಯಾನಿಸ್ಟರ್ ಅನ್ನು ಹೊಂದಿದ್ದು, ಸಿಗ್ನೇಚರ್ ಗ್ರೀನ್ ಮತ್ತು ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರಲಿದೆ.
ಜೊತೆಗೆ ಬೈಕಿನ ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಸಸ್ಪೆಷನ್ ಅನ್ನಿ ಹೊಂದಿದ್ದು, ಮುಂಭಾಗದ ಚಕ್ರಗಳಿಗೆ 310ಎಂಎಂ ಡಿಸ್ಕ್ ಬ್ರೇಕ್ ಹಾಗು 220ಎಂಎಂ ಡಿಸ್ಕ್ ಬ್ರೇಕ್ ಮತ್ತು ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಆಯ್ಕೆಯಾಗಿ ಪಡೆದಿದೆ.
ಇದಲ್ಲದೇ ಈ ಬೈಕ್ ಪಿಲ್ಲಿಯಾನ್ ಸೀಟ್ ಕವ್ಲ್, ಹೆಲ್ಮೆಟ್ ಲಾಕ್, ರೇಡಿಯೇಟರ್ ಸ್ಕ್ರೀನ್, ಟ್ಯಾಂಕ್ ಬ್ಯಾಗ್ ಮತ್ತು ಟ್ಯಾಂಕ್ ಪ್ಯಾಡ್‍ನಂತಹ ಉಪಕರಣಗಳನ್ನು ಕೂಡ ಈ ಬೈಕಿನಲ್ಲಿ ಪಡೆದಿರಲಿದೆ.
ಕವಾಸಕಿ ನಿಂಜಾ ಬೈಕಿನ ತೂಕದ ಬಗ್ಗೆ ಹೇಳುವುದಾದರೆೇ, ಸ್ಟೀಲ್ ಫ್ರೇಮ್ ದೇಹವನ್ನು ಹೊಂದಿರುವ ನಿಂಜಾ 400, 168 ಕರ್ಬ್ ವೇಯ್ಟ್ ಅನ್ನು ಪಡೆದಿದೆ. ಕವಾಸಕಿ ನಿಂಜಾ 300 ಬೈಕ್‍ಗೆ ಹೋಲಿಸಿದರೆ 6 ಕೆಜಿ ತೂಕ ಕಡಿಮೆಯೇ ಇದೆ.
ಎಂಜಿನ್ ಸಾಮರ್ಥ್ಯ
ಕವಾಸಕಿ ನಿಂಜಾ ಬೈಕ್ 399ಸಿಸಿ ಪ್ಯಾರಲಲ್ ಟ್ವಿನ್, ಲಿಕ್ವಿಡ್ ಕೂಲ್ಡ್ ಎಂಜಿನ್ 48.3-ಬಿಹೆಚ್‍ಪಿ ಮತ್ತು 38-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, 6 ಸ್ಪೀಡ್ ಗೇರ್‍ಬಾಕ್ಸ್ ಗೆ ಜೋಡಿಸಲಾಗಿದೆ.
ಕವಾಸಕಿ ಕಂಪನಿಯ ನಿಂಜಾ 400 ಬೈಕ್ ನಿಂಜಾ 300 ಬೈಕ್‍ಗಿಂತಾ ಹೊಸ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಪಡೆದಿದ್ದು, ಯಮಹಾ ವೈಜೆಡ್ಎಫ್-ಆರ್3, ಕೆಟಿಎಂ ಆರ್‍ಸಿ 390, ಟಿವಿಎಸ್ ಅಪಾಚೆ ಆರ್‍ಆರ್ 310 ಮತ್ತು ಬೆನೆಲ್ಲಿ 302ಆರ್ ಬೈಕುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
1. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..
2. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!
3. ಕಾರು ಪ್ರಿಯರೇ ಇತ್ತ ಗಮನಿಸಿ- ನಂಬರ್ ಪ್ಲೇಟ್ ಖರೀದಿಯಲ್ಲಿ ಬದಲಾವಣೆ ತರಲಿದೆ ಕೇಂದ್ರ ಸರ್ಕಾರ..
4. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..
5. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark