ಕಾರು ಪ್ರಿಯರೇ ಇತ್ತ ಗಮನಿಸಿ- ನಂಬರ್ ಪ್ಲೇಟ್ ಖರೀದಿಯಲ್ಲಿ ಬದಲಾವಣೆ ತರಲಿದೆ ಕೇಂದ್ರ ಸರ್ಕಾರ..

ಕಾರುಗಳ ಸುರಕ್ಷೆತೆಗಾಗಿ ಕೆಲವು ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರವು ಸದ್ಯದಲ್ಲೇ ಹೊಸ ಕಾರುಗಳ ಖರೀದಿ ವೇಳೆ ಕಾರು ಮಾಲೀಕರು ಆಯ್ಕೆ ಮಾಡುವ ನಂಬರ್ ಪ್ಲೇಟ್‌ಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ.

By Praveen Sannamani

ಕೇಂದ್ರ ಸರ್ಕಾರ ಹೊಸ ಸುರಕ್ಷಾ ನೀತಿ ಪ್ರಕಾರ, ಇನ್ಮುಂದೆ ಕಾರು ಮಾಲೀಕರು ಆಯ್ಕೆ ಮಾಡುತ್ತಿದ್ದ ನಂಬರ್ ಪ್ಲೇಟ್‌ಗಳನ್ನು ಕಾರು ಉತ್ಪಾದಕರೇ ಪೂರೈಕೆ ಮಾಡಬೇಕಿದ್ದು, ಈ ಮೂಲಕ ಎಂಟ್ರಿ ಲೆವೆಲ್ ಕಾರುಗಳು ಮತ್ತು ಹೈ ಎಂಡ್ ಕಾರುಗಳಲ್ಲಿ ಏಕರೂಪದ ನಂಬರ್ ಪ್ಲೇಟ್‌ಗಳನ್ನು ಜಾರಿ ಮಾಡುವ ಉದ್ದೇಶ ಹೊಂದಲಾಗಿದೆ.

ಕಾರು ಪ್ರಿಯರೇ ಇತ್ತ ಗಮನಿಸಿ- ನಂಬರ್ ಪ್ಲೇಟ್ ಖರೀದಿಯಲ್ಲಿ ಬದಲಾವಣೆ ತರಲಿದೆ ಕೇಂದ್ರ ಸರ್ಕಾರ..

ಇದರಿಂದಾಗಿ ಕಾರು ಮಾಲೀಕರು ಇನ್ಮುಂದೆ ಕಾರು ಉತ್ಪಾದಕರು ಪೂರೈಸುವ ನಂಬರ್ ಪ್ಲೇಟ್‌ಗಳನ್ನೇ ಉಪಯೋಗಿಸಬೇಕಾದ ಅನಿವಾರ್ಯತೆ ಎದುರಾಗಲಿದ್ದು, ಹೊಸ ಕಾರು ಪೂರೈಕೆ ವೇಳೆಯೇ ಈ ನಂಬರ್ ಪ್ಲೇಟ್‌ಗಳನ್ನು ಸಹ ನೀಡಲಾಗುತ್ತದೆ.

ಕಾರು ಪ್ರಿಯರೇ ಇತ್ತ ಗಮನಿಸಿ- ನಂಬರ್ ಪ್ಲೇಟ್ ಖರೀದಿಯಲ್ಲಿ ಬದಲಾವಣೆ ತರಲಿದೆ ಕೇಂದ್ರ ಸರ್ಕಾರ..

ಇನ್ನೊಂದು ಪ್ರಮಖ ವಿಚಾರ ಅಂದ್ರೆ, ಕಾರು ಉತ್ಪಾದಕರೇ ಪೂರೈಸುವ ನಂಬರ್ ಪ್ಲೇಟ್‌ಗಳು ಹೊಸ ಸುರಕ್ಷಾ ನೀತಿ ಅಡಿಯಲ್ಲೇ ಅಭಿವೃದ್ಧಿಪಡಿಸಿದ ಉತ್ಪನ್ನವಾಗಿದ್ದು, ಇದು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಪ್ರಮಾಣಿಕೃತಗೊಂಡಿರುತ್ತದೆ.

ಕಾರು ಪ್ರಿಯರೇ ಇತ್ತ ಗಮನಿಸಿ- ನಂಬರ್ ಪ್ಲೇಟ್ ಖರೀದಿಯಲ್ಲಿ ಬದಲಾವಣೆ ತರಲಿದೆ ಕೇಂದ್ರ ಸರ್ಕಾರ..

ಹೀಗಾಗಿ ಕಾರುಗಳ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿಗೆ ಬ್ರೇಕ್ ಬೀಳಲಿದ್ದು, ಪೂರ್ಣ ಪ್ರಮಾಣದ ಸುರಕ್ಷೆ ಸಿಗಲಿದೆ ಎನ್ನುವುದು ಕೇಂದ್ರ ಸಾರಿಗೆ ಇಲಾಖೆಯ ಅಭಿಪ್ರಾಯವಾಗಿದೆ. ಜೊತೆಗೆ ಹೊಸ ಕಾರುಗಳಿಗಾಗಿ ನಂಬರ್ ಪ್ಲೇಟ್‌ಗಳನ್ನು ಖರೀದಿಸಲು ಹೆಚ್ಚುವರಿ ಬೆಲೆ ತೆರಬೇಕಾಗಿದ್ದ ಕಾರು ಮಾಲೀಕರಿಗೂ ಇದರಿಂದ ಕೊಂಚ ರಿಲೀಫ್ ಸಿಗಲಿದೆ.

ಕಾರು ಪ್ರಿಯರೇ ಇತ್ತ ಗಮನಿಸಿ- ನಂಬರ್ ಪ್ಲೇಟ್ ಖರೀದಿಯಲ್ಲಿ ಬದಲಾವಣೆ ತರಲಿದೆ ಕೇಂದ್ರ ಸರ್ಕಾರ..

ಜೊತೆಗೆ ಕಾರಿನ ಮೂಲ ಬೆಲೆಯಲ್ಲೇ ನಂಬರ್ ಪ್ಲೇಟ್ ಬೆಲೆಯು ಒಳಗೊಂಡಿರುತ್ತವೆ. ಹೀಗಾಗಿ ಕಾರು ಖರೀದಿಸುವ ಗ್ರಾಹಕರು ನಂಬರ್ ಪ್ಲೇಟ್‌ಗಾಗಿ ಹೆಚ್ಚುವರಿ ಹಣ ತೆರಬೇಕಾದ ಅವಶ್ಯಕತೆ ಇಲ್ಲಾ ಎನ್ನಬುಹುದು.

ಕಾರು ಪ್ರಿಯರೇ ಇತ್ತ ಗಮನಿಸಿ- ನಂಬರ್ ಪ್ಲೇಟ್ ಖರೀದಿಯಲ್ಲಿ ಬದಲಾವಣೆ ತರಲಿದೆ ಕೇಂದ್ರ ಸರ್ಕಾರ..

ಈ ಬಗ್ಗೆ ಮಾತನಾಡಿರುವ ಸಚಿವ ನಿತಿನ್ ಗಡ್ಕರಿ, ಹೊಸ ತಂತ್ರಜ್ಞಾನದ ನಂಬರ್ ಪ್ಲೇಟ್ ನಿಂದಾಗಿ ಗ್ರಾಹಕರಿಗೆ ರಿಲೀಫ್ ಸಿಗುವುದಷ್ಟೇ ಅಲ್ಲದೇ ಎಲ್ಲಾ ರಾಜ್ಯಗಳಲ್ಲೂ ಒಂದೇ ಮಾದರಿಯ ನಂಬರ್ ಪ್ಲೇಟ್ ಗಳು ಲಭ್ಯವಾಗಲಿವೆ ಎಂದಿದ್ದಾರೆ.

ಕಾರು ಪ್ರಿಯರೇ ಇತ್ತ ಗಮನಿಸಿ- ನಂಬರ್ ಪ್ಲೇಟ್ ಖರೀದಿಯಲ್ಲಿ ಬದಲಾವಣೆ ತರಲಿದೆ ಕೇಂದ್ರ ಸರ್ಕಾರ..

ಇದಲ್ಲದೇ ಸದ್ಯದ ಮಾರುಕಟ್ಟೆಯಲ್ಲಿ ನಂಬರ್ ಪ್ಲೇಟ್ ಒಂದಕ್ಕೆ ರೂ.900ರಿಂದ ರೂ.40 ಸಾವಿರ ತನಕ ಬೆಲೆಯಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಕಾರು ಮಾಲೀಕರನ್ನು ಸುಲಿಗೆ ಮಾಡುತ್ತಿರುವ ಏಜೆನ್ಸಿಗಳಿಗೂ ಇದರಿಂದ ಹೊಡೆತ ಬೀಳಲಿದೆ.

ಕಾರು ಪ್ರಿಯರೇ ಇತ್ತ ಗಮನಿಸಿ- ನಂಬರ್ ಪ್ಲೇಟ್ ಖರೀದಿಯಲ್ಲಿ ಬದಲಾವಣೆ ತರಲಿದೆ ಕೇಂದ್ರ ಸರ್ಕಾರ..

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕೇಂದ್ರ ಸರ್ಕಾರ ಜಾರಿಗೆ ಮಾಡುತ್ತಿರುವ ಹೊಸ ಸುರಕ್ಷಾ ನೀತಿಯಿಂದ ಮೊದಲನೆಯದಾಗಿ ಫ್ಯಾನ್ಸಿ ನಂಬರ್ ಪ್ಲೇಟ್‌ಗಳಿಗೆ ಬ್ರೇಕ್ ಬೀಳಲಿದ್ದು, ತದನಂತರ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿಯನ್ನು ಸಹ ಪರಿಣಾಮಕಾರಿಯಾಗಿ ತಗ್ಗಿಸಬಹುದಾಗಿದೆ. ಇದರಿಂದಾಗಿ ಪ್ರಸ್ತುತ ದಿನಗಳಲ್ಲಿ ಈ ಹೊಸ ಸುರಕ್ಷಾ ನೀತಿಯು ಅತ್ಯಗತ್ಯವಾಗಿ ಜಾರಿಯಾಗಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

02. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

03. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

04. ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಟಾಟಾ ಹೆಚ್5ಎಕ್ಸ್ ಎಸ್‍ಯುವಿ ಕಾರು..

05. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

Most Read Articles

Kannada
Read more on auto news number plate
English summary
Soon Automakers Will Deliver Cars Fitted With Number Plates.
Story first published: Monday, April 2, 2018, 14:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X