ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಬೈಕ್ ಯಾವುದು ಗೊತ್ತಾ?

2018ರ ಅವಧಿಯಲ್ಲಿ ಭಾರತದ ಇಂಟರ್‌ನೆಟ್ ಬಳಕೆದಾರರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ಬೈಕ್ ಮಾಹಿತಿಗೆ ಸಂಬಂಧಿಸಿದಂತೆ ಆಟೋ ಟ್ರೆಂಡಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಟಾಪ್ 10ರ ಪಟ್ಟಿಯಲ್ಲಿ ಅಚ್ಚರಿ ಹೆಸರುಗಳು ಕೇಳಿಬಂದಿವೆ.

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

10. ಬಿಎಂಡಬ್ಲ್ಯು ಜಿ 310 ಜಿಎಸ್ ಮತ್ತು ಜಿ 310

ಬಿಎಂಡಬ್ಲ್ಯು ಸಂಸ್ಥೆಯ ಬೈಕ್ ಉತ್ಪಾದನಾ ವಿಭಾಗವಾದ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಭಾರತದಲ್ಲಿ ವಿವಿಧ ಮಾದರಿಯ ಪ್ರೀಮಿಯಂ ಬೈಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ಜುಲೈ ತಿಂಗಳಿನಲ್ಲಿ ಬಿಡುಗಡೆ ಮಾಡಿರುವ ಅಗ್ಗದ ಬೆಲೆಯ ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳು ಗೂಗಲ್ ಸರ್ಚ್‌ನಲ್ಲಿ 10ನೇ ಸ್ಥಾನದಲ್ಲಿವೆ.

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

09. ಹೀರೋ ಎಕ್ಸ್‌ಪಲ್ಸ್ 200

ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ತನ್ನ ಮೊದಲ ಅಡ್ವೆಂಚರ್ ಬೈಕ್ ಮಾದರಿಯಾದ ಎಕ್ಸ್‌ಪಲ್ಸ್ 200 ಬೈಕ್ ಅನ್ನು 2019ರ ಆರಂಭದಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಇದಕ್ಕೂ ಮುನ್ನ ಗೂಗಲ್‌ ಟ್ರೆಂಡಿಂಗ್‌ನಲ್ಲಿ 9ನೇ ಸ್ಥಾನದಲ್ಲಿದೆ.

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

08. ಹೀರೋ ಡೆಸ್ಟಿನಿ 125

ಹೀರೋ ಸಂಸ್ಥೆಯು ತನ್ನ ಈ ಹಿಂದಿನ ಜನಪ್ರಿಯ ಡ್ಯುಯೆಟ್ ಸ್ಕೂಟರ್ ಮಾದರಿಯ ಮುಂದುವರಿದ ಭಾಗವಾಗಿ ಡೆಸ್ಟಿನಿ 125 ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, 125ಸಿಸಿ ಸ್ಕೂಟರ್‌ ವಿಭಾಗದಲ್ಲೇ ಈ ಹೊಸ ಸ್ಕೂಟರ್ ವಿಶೇಷ ಸೌಲಭ್ಯಗಳನ್ನು ಹೊತ್ತು ಬಂದಿದೆ. ಪ್ರೀಮಿಯಂ ಸೌಲಭ್ಯಗಳೊಂದಿಗೆ ಉತ್ತಮ ಬೇಡಿಕೆ ಹೊಂದಿರುವ ಡೆಸ್ಟಿನಿ 125 ಸ್ಕೂಟರ್ ಈ ವರ್ಷ ಗೂಗಲ್‌ ಸರ್ಚ್‌ನಲ್ಲಿ 8ನೇ ಸ್ಥಾನ ಪಡೆದಿದೆ.

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

07. ಟಿವಿಎಸ್ ರೆಡಿಯಾನ್

ದೇಶಿಯ ಮಾರುಕಟ್ಟೆಯಲ್ಲಿ ಕಮ್ಯೂಟರ್ ಬೈಕ್ ವಿಭಾಗವು ಯಶಸ್ವಿಯತ್ತ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಬೈಕ್ ಉತ್ಪನ್ನವನ್ನ ಹೊರತಂದಿರುವ ಟಿವಿಎಸ್ ಸಂಸ್ಥೆಯು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯಬಲ್ಲ ವಿನೂತನ ಮಾದರಿಯ ರೆಡಿಯನ್ ಬೈಕ್ ಅನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಪ್ರತಿ ಲೀಟರ್‌ಗೆ 69 ಕಿ.ಮಿ ಮೈಲೇಜ್ ಹೊಂದಿರುವ ರೆಡಿಯಾನ್ ಗೂಗಲ್ ಸರ್ಚ್‌ನಲ್ಲೂ ಕಮಾಲ್ ಮಾಡಿದೆ.

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

06. ಹೀರೋ ಎಕ್ಸ್‌ಟ್ರಿಮ್ 200ಆರ್

ಹೀರೋ ಮೋಟೋಕಾರ್ಪ್ ಸಂಸ್ಥೆಯು ಕಳೆದ ಜನವರಿಯಲ್ಲಿ ಅನಾವರಣಗೊಳಿಸಿದ್ದ ತನ್ನ ಹೊಚ್ಚ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್‌ನ್ನು ಜುಲೈನಲ್ಲಿ ಬಿಡುಗಡೆ ಮಾಡಿದ್ದು, 200ಸಿಸಿ ವಿಭಾಗದಲ್ಲೇ ಇದು ಅತಿ ಕಡಿಮೆ ಬೆಲೆಗೆ ಲಭ್ಯವಾಗುವ ಮೂಲಕ ಗೂಗಲ್ ಸರ್ಚ್‌ನಲ್ಲೂ ಆಕರ್ಷಣೆಯಾಗಿತ್ತು.

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

05. ಸುಜುಕಿ ಬರ್ಗಮನ್ ಸ್ಟ್ರೀಟ್

ಫೆಬ್ರುವರಿಯಲ್ಲಿ ನಡೆದಿದ್ದ 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸ್ಕೂಟರ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಸುಜುಕಿ ಹೊಸ ಪ್ರೀಮಿಯಂ ಸ್ಕೂಟರ್ ಬರ್ಗಮನ್ ಸ್ಟ್ರೀಟ್ ಜುಲೈನಲ್ಲಿ ಬಿಡುಗಡೆಗೊಂಡಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.68 ಸಾವಿರ ಬೆಲೆ ಹೊಂದಿರುವ ಈ ಸ್ಕೂಟರ್ ಗೂಗಲ್ ಸರ್ಚ್‌ನಲ್ಲೂ ಹೆಚ್ಚು ಸದ್ದು ಮಾಡಿದೆ.

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

04. ಟಿವಿಎಸ್ ಎನ್‌ಟಾರ್ಕ್ 125

ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಟಿವಿಎಸ್ ಹೊಚ್ಚ ಹೊಸ ಎನ್‌ಟಾರ್ಕ್ 125 ಸ್ಕೂಟರ್‌ಗಳು ಯುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದಾಖಲೆ ಪ್ರಮಾಣದ ಸ್ಕೂಟರ್‌ಗಳು ಮಾರಾಟವಾಗುವ ಮೂಲಕ ಟಿವಿಎಸ್ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಜೊತೆಗೆ ಗೂಗಲ್ ಸರ್ಚ್‌ನ ಆಟೋ ಟ್ರೆಂಡಿಂಗ್‌ನಲ್ಲೂ 4ನೇ ಸ್ಥಾನ ಪಡೆದಿದೆ.

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

ಸದ್ಯ ದೆಹಲಿ ಎಕ್ಸ್‌ಶೋರಂ ಪ್ರಕಾರ ಎನ್‌ಟಾರ್ಕ್ 125 ಸ್ಕೂಟರ್‌ಗಳು ರೂ. 63,385 ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, ಬಿಡುಗಡೆಯ ನಂತರ ಹೊಸ ಸ್ಕೂಟರ್‌ನಲ್ಲಿ ಕೆಲವು ವಿನೂತನ ಬಣ್ಣದ ಆಯ್ಕೆಗಳನ್ನು ಹೆಚ್ಚಿಸುತ್ತಿರುವುದು ಮತ್ತಷ್ಟು ಬೇಡಿಕೆಗೆ ಕಾರಣವಾಗಿದೆ.

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

03. ಸುಜುಕಿ ಇನ್‌ಟ್ರುಡರ್ 150

ಇನ್‌ಟ್ರುಡರ್ 150 ಕ್ರೂಸರ್ ಬೈಕ್ ಮಾದರಿಯು ಕಳೆದ 2017ರ ನವೆಂಬರ್‌ನಲ್ಲಿ ಬಿಡುಗಡೆಯಾಗಿದ್ದು, ಗೂಗಲ್‌ನಲ್ಲಿ ಇದುವರೆಗೆ ಟಾಪ್ 3 ಟ್ರೆಂಡಿಂಗ್‌ನಲ್ಲಿ ಮುಂದುವರಿದೆ. ಇನ್‌ಟ್ರುಡರ್ ಬೈಕ್ ಮಾದರಿಯು ಜಾಗತಿಕ ಕ್ರೂಸರ್ ಬೈಕ್‌ಗಳಿಗೆ ಹೊಸ ಆಯಾಮವನ್ನು ತುಂಬಿದ್ದು, ಈಗ ತನ್ನದೇ ಆದ ವಿಶಿಷ್ಟ ವಿನ್ಯಾಸದೊಂದಿಗೆ ಭಾರತದಲ್ಲೂ ಗಮನ ಸೆಳೆಯುತ್ತಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿದೆ.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ..!

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

02. ಟಿವಿಎಸ್ ಅಪಾಚೆ

ಟಿವಿಎಸ್ ಸಂಸ್ಥೆಯು ಭಾರತದಲ್ಲಿ ವಿವಿಧ ಮಾದರಿಯ ಬೈಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಅದರಲ್ಲೂ ಅಪಾಚೆ ಸರಣಿ ಬೈಕ್‌ಗಳು ಯುವ ಗ್ರಾಹಕರ ಅಚ್ಚುಮೆಚ್ಚಿನ ಆಯ್ಕೆಗಳಾಗಿವೆ. ಅಪಾಚೆ ಸರಣಿಯಲ್ಲಿ ಸದ್ಯ ಅತಿ ಹೆಚ್ಚು ಮಾರಾಟ ಹೊಂದಿರುವ ಆರ್‌ಟಿಆರ್ 160 ಮತ್ತು ಆರ್‌ಟಿಆರ್ 180 ಬೈಕ್‌ಗಳ ಜೊತೆ ಆರ್‌ಆರ್310 ಬೈಕ್‌ಗಳು ಗೂಗಲ್ ಸರ್ಚ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿವೆ.

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

01.ಜಾವಾ ಮೋಟಾರ್‌ಸೈಕಲ್

ಹೌದು, ಇದು ಅಚ್ಚರಿಯಾದ್ರು ಸತ್ಯ. ಸದ್ಯ ಗೂಗಲ್ ಸರ್ಚ್‌ನ ಟಾಪ್ 1 ಆಟೋ ಟ್ರೆಂಡಿಂಗ್‌ನಲ್ಲಿರುವುದು ಒಂದಾನೊಂದು ಕಾಲದಲ್ಲಿ ಅಬ್ಬರಿಸಿ ಮರೆಯಾಗಿದ್ದ ಜಾವಾ ಬೈಕ್ ಅಂದ್ರೆ ನಂಬಲೇಬೇಕು. ವರ್ಷದ ಆರಂಭದಲ್ಲಿ ಜಾವಾ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದ ಮಹೀಂದ್ರಾ ಸಂಸ್ಥೆಯು ಗ್ರಾಹಕರ ನೀರಿಕ್ಷೆಗೂ ಮೀರಿ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಸದ್ದು ಬೈಕ್ ಯಾವುದು ಗೊತ್ತಾ?

ಜೊತೆಗೆ ರಾಯಲ್ ಎನ್‌ಫೀಲ್ಡ್ ಖರೀದಿಸುವ ಗ್ರಾಹಕರನ್ನ ತನ್ನತ್ತ ಸೆಳೆಯುವ ಉದ್ದೇಶ ಮತ್ತೊಂದು ಯೋಜನೆ ಆರಂಭಿಸಿರುವ ಜಾವಾ ಸಂಸ್ಥೆಯು, ದೇಶದ ವಿವಿಧ ನಗರಗಳಲ್ಲಿ ನೆಲೆಗೊಂಡಿರುವ ರಾಯಲ್ ಎನ್‌ಫೀಲ್ಡ್ ಶೋರೂಂಗಳ ಎದುರಲ್ಲೇ ಹೊಸ ಜಾವಾ ಬೈಕ್ ಡೀಲರ್ಸ್ ತೆರೆಯುವುದಾಗಿ ಹೇಳಿಕೊಂಡಿರುವುದು ಮಾರಾಟದಲ್ಲಿ ಮತ್ತಷ್ಟು ಜಿದ್ದಾಜಿದ್ದಿಗೆ ಕಾರಣವಾಗಿದೆ.

Most Read Articles

Kannada
English summary
Most Searched Bikes And Scooters In India 2018. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X