TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಭಾರತಕ್ಕೂ ಬರಲಿದೆ ಡುಕಾಟಿ ಮೊನಾಸ್ಟರ್ 821 ಬೈಕ್..
ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಹೊಸ ಮೊನಾಸ್ಟರ್ 821 ಬೈಕ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದ್ದು, ಇದೇ ವರ್ಷದ ಎರಡನೆ ತ್ರೈಮಾಸಿಕ ಅವಧಿಯಲ್ಲಿ ಲಗ್ಗೆಯಿಡಲಿದೆ ಎನ್ನಲಾಗಿದೆ.
ಇನ್ನು ಹೊಸ ಡುಕಾಟಿ 821 ಬೈಕ್‍ಗಳು, ತಮ್ಮ ಹಳೆಯ ಬೈಕ್‍ಗಳಿಗಿಂತ ಹೊಸ ವಿನ್ಯಾಸ ಹಾಗು ತಾಂತ್ರಿಕತೆಯಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಹೊಸದಾಗಿ ಬಿಎಸ್ 4 ಎಂಜಿನ್ ಮತ್ತು ಇನ್ನಿತರೆ ಗುರುತರ ಬದಲಾವಣೆಗಳನ್ನು ಪಡೆದಿರಲಿವೆ.
ಇನ್ನು ಹೊಸ ಡುಕಾಟಿ 821 ಬೈಕ್‍ಗಳು, ತಮ್ಮ ಹಳೆಯ ಬೈಕ್‍ಗಳಿಗಿಂತ ಹೊಸ ವಿನ್ಯಾಸ ಹಾಗು ತಾಂತ್ರಿಕತೆಯಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಹೊಸದಾಗಿ ಬಿಎಸ್ 4 ಎಂಜಿನ್ ಮತ್ತು ಇನ್ನಿತರೆ ಗುರುತರ ಬದಲಾವಣೆಗಳನ್ನು ಪಡೆದಿರಲಿವೆ.
ಹೊಸ ಡುಕಾಟಿ ಮೊನಾಸ್ಟರ್ 821 ಈಗ ಹೊಸತನವನ್ನು ಪಡೆದುಕೊಂಡಿದ್ದು, ಮತ್ತು ಹೊಸ ಮಾನ್ಸ್ಟರ್ ಶ್ರೇಣಿಯ ವಿನ್ಯಾಸದಿಂದ ಸ್ಲಿಮ್ಮರ್ ಟೈಲ್ ವಿಭಾಗದೊಂದಿಗೆ ಹೆಚ್ಚು ಮಸ್ಕ್ಯುಲರ್ ಲೈನ್ ಅನ್ನು ಹೊಂದಿದೆ.
ಇದಲ್ಲದೆ ಡುಕಾಟಿ ಸಂಸ್ಥೆಯ ಮೊನಾಸ್ಟರ್ 1200 ಬೈಕ್‍ನಿಂದ ಹೆಡ್‍ಲೈಟ್ ಅನ್ನು ಪಡೆದುಕೊಂಡಿದ್ದು, ಜೊತೆಗೆ ಮಾನ್ಸ್ಟರ್ 821 ಬೈಕ್‍ಗಳು ಫುಲ್ ಕಲರ್ ಟಿಎಫ್‍ಟಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿವೆ.
ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಮನ್ಸ್ಟರ್ 821 ಬೈಕ್‍ನಲ್ಲಿ ಮೂರು ಲೆವೆಲ್ ಎಬಿಎಸ್, 8 ಲೆವೆಲ್ ಟ್ರಾಕ್ಷನ್, ಡ್ಯುಯಲ್ ಬ್ಯಾರೆಲ್ ಎಕ್ಸಾಸ್ಟ್, ಕ್ವಿಕ್ ಶಿಫ್ಟರ್ ಮತ್ತು ಸ್ಲಿಪ್ಪರ್ ಕ್ಲಚ್‍ನಂತಹ ಡುಕಾಟಿಯ ಸೇಫ್ಟಿ ಪ್ಯಾಕೇಜ್ ಹಾಗು ಅರ್ಬನ್, ಟೂರಿಂಗ್ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‍ಗಳನ್ನು ಅಳವಡಿಸಲಾಗಿದೆ.
ಎಂಜಿನ್ ಸಾಮರ್ಥ್ಯ
2018ರ ಹೊಸ ಡುಕಾಟಿ ಮೊನಾಸ್ಟರ್ 821 ಬೈಕ್ 821ಸಿಸಿ, 90 ಡಿಗ್ರಿ, ವಿ ಟ್ರಿಮ್ ಎಂಜಿನ್ ಸಹಾಯದಿಂದ 108ಬಿಹೆಚ್‍ಪಿ ಮತ್ತು 86ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಇನ್ನು ಮೊನಾಸ್ಟರ್ 821 ಬೈಕಿನ ಸಸ್ಪೆಂಷನ್ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಅಪ್‍ಸೈಡ್ ಡೌನ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಅಡ್ಜಸ್ಟ್ ಮಾಡಬಹುದಾದ ಮೊನೊ ಶಾಕ್ ಅನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಸೆಟಪ್‍ನೊಂಡಿಗೆ ಬ್ರೆಂಬೊ ಎಮ್4-32 ಕ್ಯಾಲಿಪರ್‍ಗಳನ್ನು ಪಡೆದುಕೊಂಡಿದೆ.
ಹೊಸ ಡುಕಾಟಿ ಮೊನಾಸ್ಟರ್ 821 ಬೈಕ್‍ಗಳ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ 10 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಒಮ್ಮೆ ಈ ಬೈಕ್ ಮಾರುಕಟ್ಟೆಗೆ ಲಗ್ಗೆಯಿಟ್ಟಲಿ ಟ್ರಿಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಮತ್ತು ಟಾಪ್ ಎಂಡ್ ಕವಾಸಕಿ ಜೆಡ್900 ಬೈಕುಗಳಿಗೆ ಪೈಪೋಟಿಯನ್ನು ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?
ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...
ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...