Subscribe to DriveSpark

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್ ಬಿಡುಗಡೆ

Written By:
Recommended Video - Watch Now!
Bangalore Bike Accident At Chikkaballapur Near Nandi Upachar - DriveSpark

ಕ್ಲಾಸಿಕ್ ಬೈಕ್‌ಗಳ ನಿರ್ಮಾಣ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಹಿಮಾಲಯನ್ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್‌ ಮಾದರಿಯನ್ನು ಪರಿಚಯಿಸಿದ್ದು, ಹೊಸ ಬೈಕಿನ ಬೆಲೆಯನ್ನು ಚೆನ್ನೈ ಎಕ್ಸ್‌ಶೋರಂ ಪ್ರಕಾರ ರೂ. 2.12 ಲಕ್ಷಕ್ಕೆ ನಿಗದಿಗೊಳಿಸಿದೆ.

To Follow DriveSpark On Facebook, Click The Like Button
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್ ಬಿಡುಗಡೆ

ಆಪ್ ರೋಡಿಂಗ್ ವಿಭಾಗದಲ್ಲಿ ಹಿಮಾಲಯನ್ ಆವೃತ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಗ್ರಾಹಕರ ಆದ್ಯತೆ ಮೇರೆಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್ ಅನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊರತಂದಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್ ಬಿಡುಗಡೆ

ಮೊದಲೇ ಹೇಳಿದಂತೆ ಸ್ಲಿಟ್ ಬೈಕ್‌ಗಳು ಲಿಮಿಟೆಡ್ ಆವೃತ್ತಿಯಾಗಿರುವ ಹಿನ್ನೆಲೆ ಕೇವಲ 500 ಬೈಕ್‌ಗಳನ್ನು ಮಾತ್ರ ಉತ್ಪಾದನೆ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ನಿಗದಿತ ಅವಧಿಯಲ್ಲಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ಹೊಸ ಬೈಕ್ ವಿತರಣೆ ಮಾಡಲಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್ ಬಿಡುಗಡೆ

ಹೀಗಾಗಿ ಸ್ಲಿಟ್ ಬೈಕ್ ಖರೀದಿ ಮಾಡಬೇಕೆನ್ನುವ ಗ್ರಾಹಕರು ಈ ಕೂಡಲೇ ಅಧಿಕೃತ ಡೀಲರ್ಸ್ ಬಳಿ ರೂ.5 ಸಾವಿರ ಮುಂಗಡ ಪಾವತಿಸಿ ಬುಕ್ಕಿಂಗ್ ಮಾಡಬೇಕಿದ್ದು, ಆಪ್ ರೋಡಿಂಗ್ ಪ್ರಿಯರಿಗಾಗಿಯೇ ವಿಶೇಷ ವಿನ್ಯಾಸಗಳನ್ನು ಜೋಡಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್ ಬಿಡುಗಡೆ

ಹಿಮಾಲಯನ್ ಸ್ಲಿಟ್ ಬೈಕ್‌ಗಳು ಸಾಮಾನ್ಯ ಮಾದರಿಯ ಹಿಮಾಲಯನ್ ಆವೃತ್ತಿಗಿಂತಲೂ ಭಿನ್ನವಾಗಿದ್ದು, ದೂರದ ಪ್ರಯಾಣಗಳಿಗೆ ಅನುಕೂಲವಾಗುವ ಉದ್ದೇಶದಿಂದ 26 ಲೀಟರ್ ಸಾಮರ್ಥ್ಯದ ಅಲ್ಯುಮಿನಿಯಂ ಪ್ಯಾನಿರ್ಸ್ ಕಿಟ್ ಹೊಂದಿರುವುದು ಮತ್ತೊಂದು ವಿಶೇಷ.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್ ಬಿಡುಗಡೆ

ಇದೇ ಕಾರಣಕ್ಕೆ ಸಾಮಾನ್ಯ ಹಿಮಾಲಯನ್ ಮಾದರಿಗಿಂತ ಸ್ಲಿಟ್ ಬೈಕಿಗೆ ಹೆಚ್ಚುವರಿ ರೂ. 26 ಸಾವಿರ ಪಾವತಿಸಬೇಕಾಗಿದ್ದು, ಅಲ್ಯಮಿನಿಯಂ ಹ್ಯಾಂಡಲ್ ಬಾರ್, ಎಂಜಿನ್ ಗಾರ್ಡ್ ಮತ್ತು ಕ್ರಾಸ್ ಬ್ರೆಸ್‌ಗಳನ್ನು ಒದಗಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಹಿಮಾಲಯನ್ ಸ್ಲಿಟ್ ಮಾದರಿಯು 411 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 24-ಬಿಎಚ್‌ಪಿ ಮತ್ತು 32-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್ ಬಿಡುಗಡೆ

ಈ ಬಗ್ಗೆ ಮಾತನಾಡಿರುವ ರಾಯಲ್ ಎನ್‌ಫೀಲ್ಡ್ ಇಂಡಿಯಾ ಹೆಡ್ ರುದ್ರಜಿತ್ ಸಿಂಗ್ ಅವರು 'ಹಿಮಾಲಯನ್ ಸ್ಲಿಟ್ ಆವೃತ್ತಿಗಳನ್ನು ಆಪ್ ರೋಡ್ ಪ್ರಿಯರಿಗಾಗಿಯೇ ಸಿದ್ದಗೊಳಿಸಲಾಗಿದ್ದು, ಹೊಸ ವಿನ್ಯಾಸಗಳು ಆಪ್ ರೋಡ್ ಕೌಶಲ್ಯಕ್ಕೆ ನೆರವಾಗಬಲ್ಲವು ಎಂಬ ವಿಶ್ವಾಸವಿದೆ' ಎಂದಿದ್ದಾರೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್ ಬಿಡುಗಡೆ

ಒಟ್ಟಿನಲ್ಲಿ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶ ಪಡೆದಿರುವ ಸ್ಲಿಟ್ ಬೈಕ್‌ಗಳು ನಿಗದಿತ ಅವಧಿಗೆ ಮಾತ್ರ ಮಾರಾಟಕ್ಕೆ ಲಭ್ಯವಿರಲಿದ್ದು, ಆಸಕ್ತ ಬೈಕ್ ಪ್ರಿಯರು ಈ ಕೂಡಲೇ ನಿಮ್ಮ ಹತ್ತಿರದ ರಾಯಲ್ ಎನ್‌ಫೀಲ್ಡ್ ಡೀಲರ್ಸ್‌ಗಳ ಬಳಿ ಬುಕ್ಕಿಂಗ್ ಮಾಡಬಹುದು.

Trending On DriveSpark Kannada:

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಮೊದಲ ಚಿತ್ರ ಇದು..

English summary
Royal Enfield Himalayan Sleet Launched In India; Priced At Rs 2.12 Lakh.
Story first published: Friday, January 12, 2018, 15:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark