ಎಬಿಎಸ್ ತಂತ್ರಜ್ಞಾನವನ್ನು ಪಡೆದು ಬರಲಿವೆ ಸುಜುಕಿ ಜಿಕ್ಸರ್ ಬೈಕ್..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿಯು 2015ರಲ್ಲಿ ತಮ್ಮ ಜಿಕ್ಸರ್ ಬೈಕ್ ಅನ್ನು ಬಿಡುಗಡೆ ಮಾಡಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿಯು 2015ರಲ್ಲಿ ತಮ್ಮ ಜಿಕ್ಸರ್ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಸಂಸ್ಥೆಯ ಉತ್ತಮವಾಗಿ ಮಾರಾಟಗೊಂಡ ಬೈಕ್‍‍ಗಳಲ್ಲಿ ಒಂದಾಗಿದೆ. ಇದೀಗ ಸರ್ಕಾರದ ಆದೇಶದಂತೆ ಎಲ್ಲಾ 125ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳು ಎಬಿಎಸ್ ಟೆಕ್ನಾಲಜಿಯನ್ನು ಅಳವಡಿಸಲೇಬೇಕಾಗಿದ್ದು, ಸುಜುಕಿ ಸಂಸ್ಥೆಯು ಕೂಡ ತಮ್ಮ ಜಿಕ್ಸರ್ ಬೈಕ್‍‍ಗಳಿಗೆ ಎಬಿಎಸ್ ಟೆಕ್ನಾಲಜಿಯನ್ನು ಅಳವಡಿಸಿದೆ.

ಎಬಿಎಸ್ ತಂತ್ರಜ್ಞಾನವನ್ನು ಪಡೆದು ಬರಲಿವೆ ಸುಜುಕಿ ಜಿಕ್ಸರ್ ಬೈಕ್..

ಹೊಸದಾಗಿ ಎಬಿಎಸ್ ಟೆಕ್ನಾಲಜಿಯನ್ನು ಅಳವಡಿಸಿರುವ ಸುಜುಕಿ ಜಿಕ್ಸರ್ ಬೈಕ್‍‍ಗಳು ಇದೇ ತಿಂಗಳಿನ ಕೊನೆಯಲ್ಲಿ ಅಥವ ಮುಂದಿನ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಇದೀಗ ಈ ಬೈಕಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದೆ.

ಎಬಿಎಸ್ ತಂತ್ರಜ್ಞಾನವನ್ನು ಪಡೆದು ಬರಲಿವೆ ಸುಜುಕಿ ಜಿಕ್ಸರ್ ಬೈಕ್..

ನಾನ್ ಎಬಿಎಸ್ ಸುಜುಕಿ ಜಿಕ್ಸರ್ ಬೈಕ್‍‍ಗಳು ಈಗಾಗಲೆ ಮಾರುಕಟ್ಟೆಯಲ್ಲಿ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 77,015, ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್‍‍ಗಳು ರೂ80,929 ಸಾವಿರಕ್ಕೆ ಮಾರಾಟಗೊಳ್ಳುತ್ತಿದ್ದು, ಎಬಿಎಸ್ ಅನ್ನು ಹೊಂದಿರುವ ಬೈಕ್‍‍ಗಳು ಸಾದರಣ ಬೈಕ್‍ ಮಾದರಿಗಳಿಗಿಂತ ರೂ 6,500 ಹೆಚ್ಚಿರಲಿದೆ ಎನ್ನಲಾಗಿದೆ.

ಎಬಿಎಸ್ ತಂತ್ರಜ್ಞಾನವನ್ನು ಪಡೆದು ಬರಲಿವೆ ಸುಜುಕಿ ಜಿಕ್ಸರ್ ಬೈಕ್..

ಇನ್ನು ಸುಜುಕಿ ಜಿಕ್ಸರ್ ಬೈಕ್‍‍ಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದ್ದು, ಈಗಾಗಲೆ ಸುಜುಕಿ ಸಂಸ್ಥೆಯ ಜಿಕ್ಸರ್ ಎಸ್‍ಎಫ್ ಮತ್ತು ಇಂಟ್ರೂಡರ್ 155 ಬೈಕ್‍‍ಗಳಿಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.

ಎಬಿಎಸ್ ತಂತ್ರಜ್ಞಾನವನ್ನು ಪಡೆದು ಬರಲಿವೆ ಸುಜುಕಿ ಜಿಕ್ಸರ್ ಬೈಕ್..

ಸುಜುಕಿ ಜಿಕ್ಸರ್ ಬೈಕ್‍‍ಗಳು ಹೊಸದಾಗಿ ಸಿಂಗಲ್ ಚಾನಲ್ ಎಬಿಎಸ್ ಅನ್ನು ಹೊಂದಿರುವುದಲ್ಲದೆ, ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಕೂಡ ಪಡೆದುಕೊಂಡಿರಲಿದೆ. ಇವುಗಳನ್ನು ಹೊರತು ಪಡಿಸೆ ಬೇರಾವಾ ಮಾರ್ಪಾಡುಗಳನ್ನು ಪಡೆದಿರುವುದಿಲ್ಲವೆಂದು ಹೇಳಲಾಗಿದೆ.

ಎಬಿಎಸ್ ತಂತ್ರಜ್ಞಾನವನ್ನು ಪಡೆದು ಬರಲಿವೆ ಸುಜುಕಿ ಜಿಕ್ಸರ್ ಬೈಕ್..

ಸಂಸ್ಥೆಯು ತಮ್ಮ ಜಿಕ್ಸರ್ ಬೈಕ್‍‍ಗಳಿಗೆ ಕಾರ್ಬುರೇಟೆಡ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, 155ಸಿಸಿ, ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 14.8 ಬಿಹೆಚ್‍ಪಿ ಮತ್ತು 14ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿವೆ.

ಎಬಿಎಸ್ ತಂತ್ರಜ್ಞಾನವನ್ನು ಪಡೆದು ಬರಲಿವೆ ಸುಜುಕಿ ಜಿಕ್ಸರ್ ಬೈಕ್..

ಇನ್ನು ಮಾರುಕಟ್ಟೆಗೆ ಲಗ್ಗೆಯಿಡುವ ಎಬಿಎಸ್ ಟೆಕ್ನಾಲಜಿ ಹೊಂದಿರುವ ಸುಜುಕಿ ಜಿಕ್ಸರ್ ಬೈಕ್‍‍ಗಳು ಬಜಾಜ್ ಪಲ್ಸರ್ ಎನ್ಎಸ್ 160, ಟಿವಿಎಸ್ ಅಪಾಚೆ ಆರ್‍‍ಟಿಆರ್ 160 4ವಿ ಬೈಕ್‍‍ಗಳಿಗೆ ತೀವ್ರ ಪೈಪೋತಿಯನ್ನು ನೀಡಲಿದೆ.

Source : cartoq

ಎಬಿಎಸ್ ತಂತ್ರಜ್ಞಾನವನ್ನು ಪಡೆದು ಬರಲಿವೆ ಸುಜುಕಿ ಜಿಕ್ಸರ್ ಬೈಕ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...

ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದಲೇ ಲಂಚದ ಆಮೀಷ...

ನಟ ಹೃತಿಕ್ ರೋಷನ್‍ ಖರೀದಿ ಮಾಡಿದ ಹೊಸ ಐಷಾರಾಮಿ ಕಾರು ಯಾವುದು ಗೊತ್ತಾ?

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು...

Most Read Articles

Kannada
Read more on suzuki gixxer
English summary
Suzuki Gixxer with ABS spied; Launching soon in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X