Subscribe to DriveSpark

ಸ್ಪಾಟ್ ಟೆಸ್ಟಿಂಗ್‌ನಲ್ಲೇ ಸ್ಕೂಟರ್ ಪ್ರಿಯರನ್ನು ಸೆಳೆದ ಟಿವಿಎಸ್ ಗ್ರಾಫೈಟ್..!

Written By:

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಕೂಟರ್ ಮಾದರಿಗಳಲ್ಲೇ ಅತಿಹೆಚ್ಚು ನೀರಿಕ್ಷೆ ಹೊಂದಿರುವ ಟಿವಿಎಸ್ ಗ್ರಾಫೈಟ್ ಸ್ಕೂಟರ್ ಹಲವು ವಿಶೇಷತೆಗಳನ್ನು ಹೊತ್ತು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಇದೀಗ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಕೈಗೊಳ್ಳುವ ಮೂಲಕ ಸ್ಕೂಟರ್ ಪ್ರಿಯರ ಗಮನಸೆಳೆಯುತ್ತಿದೆ.

To Follow DriveSpark On Facebook, Click The Like Button
ಸ್ಪಾಟ್ ಟೆಸ್ಟಿಂಗ್‌ನಲ್ಲೇ ಸ್ಕೂಟರ್ ಪ್ರಿಯರನ್ನು ಸೆಳೆದ ಟಿವಿಎಸ್ ಗ್ರಾಫೈಟ್..!

ಈ ಹಿಂದೆ 2014ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಗ್ರಾಫೈಟ್ ಸ್ಪೋರ್ಟಿ ಸ್ಕೂಟರ್ ಕಾನ್ಸೆಪ್ಟ್ ಪ್ರದರ್ಶನ ಮಾಡಿದ್ದ ಟಿವಿಎಸ್ ಸಂಸ್ಥೆಯು ಇದೀಗ ಅದೇ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಅದಕ್ಕೂ ಮುನ್ನ ಹೊಸ ಸ್ಕೂಟರ್ ಕಾರ್ಯಕ್ಷಮತೆ ಕುರಿತು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲೇ ಸ್ಕೂಟರ್ ಪ್ರಿಯರನ್ನು ಸೆಳೆದ ಟಿವಿಎಸ್ ಗ್ರಾಫೈಟ್..!

ಹೆಸರಲ್ಲೇ ಸೂಚಿಸಿರುವ ಟಿವಿಎಸ್ ಗ್ರಾಫೈಟ್, ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದೆ. ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.

Recommended Video - Watch Now!
Cause Of Indian Road Accidents - DriveSpark
ಸ್ಪಾಟ್ ಟೆಸ್ಟಿಂಗ್‌ನಲ್ಲೇ ಸ್ಕೂಟರ್ ಪ್ರಿಯರನ್ನು ಸೆಳೆದ ಟಿವಿಎಸ್ ಗ್ರಾಫೈಟ್..!

ಟಿವಿಎಸ್ ಗ್ರಾಫೈಟ್ ಸ್ಕೂಟರಿನ ಪ್ರಮುಖ ಆಕರ್ಷಣೆಯೆಂದರೆ ಇದರ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ (ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್). ಇದು ಪ್ಯಾಡಲ್ ಶಿಫ್ಟರ್‌ನಿಂದ ನಿರ್ವಹಿಸಲಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲೇ ಸ್ಕೂಟರ್ ಪ್ರಿಯರನ್ನು ಸೆಳೆದ ಟಿವಿಎಸ್ ಗ್ರಾಫೈಟ್..!

ಇನ್ನು ಮುಂದುಗಡೆ 30 ಎಂಎಂ ಟೆಲಿಸ್ಕಾಪಿಕ್ ಸಸ್ಷೆಷನ್ ಹಾಗೆಯೇ ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಡ್ಯಾಂಪರ್ ಇರಲಿದೆ. ಅಂದ ಹಾಗೆ ಟಿವಿಎಸ್ ಗ್ರಾಫೈಟ್‌ನಲ್ಲಿ 150 ಸಿಸಿ ಫೋರ್ ವಾಲ್ವೆ, ಎಸ್‌ಒಎಚ್‌ಸಿ ಎಂಜಿನ್ ಜತೆ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಆಳವಡಿಸಲಾಗಿದೆ.

ತಪ್ಪದೇ ಓದಿ-ಹಾಫ್ ಹೆಲ್ಮೆಟ್ ವಿರುದ್ಧ ಭರ್ಜರಿ ಕಾರ್ಯಚರಣೆ- ಬೈಕ್ ಸವಾರರಿಗೆ ಬಿಗ್ ಶಾಕ್...

ಸ್ಪಾಟ್ ಟೆಸ್ಟಿಂಗ್‌ನಲ್ಲೇ ಸ್ಕೂಟರ್ ಪ್ರಿಯರನ್ನು ಸೆಳೆದ ಟಿವಿಎಸ್ ಗ್ರಾಫೈಟ್..!

ಈ ಕ್ರೀಡಾ ಸ್ಕೂಟರ್ ಮುಂದುವರಿದ ಪೋರ್ಸ್ಡ್ ಏರ್ ಕೂಲಿಂಗ್ ಸಿಸ್ಟಂ ಕೂಡಾ ಹೊಂದಿರಲಿದ್ದು, ಇನ್ನುಳಿದಂತೆ ಡ್ಯುಯಲ್ ಚಾನೆಲ್ ಡೈನಾಮಿಕ್ ಎಬಿಎಸ್ ಸಿಸ್ಟಂ, ಎಂಜಿನ್ ಇಮೊಬಿಲೈಜರ್ ಮತ್ತು ಎಲೆಕ್ಟ್ರಾನಿಕ್ ಸ್ಮಾರ್ಟ್ ಸ್ಟಾರ್ಟ್ ಇಗ್ನಿಷನ್ ಕೀ ಸಹ ಹೊಂದಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲೇ ಸ್ಕೂಟರ್ ಪ್ರಿಯರನ್ನು ಸೆಳೆದ ಟಿವಿಎಸ್ ಗ್ರಾಫೈಟ್..!

ಇದಲ್ಲದೆ ಮುಂದುವರಿದ ಎಲ್‌ಇಡಿ ಪರದೆ ಕೂಡಾ ಹೊಂದಿದ್ದು, ಇದು ವಾಹನ, ಎಂಜಿನ್ ಹಾಗೂ ಚಾಲನೆ ಬಗ್ಗೆ ತಾಜಾ ಮಾಹಿತಿ ನೀಡಲಿದೆ. ಪ್ರಸ್ತುತ ಎಲ್‌ಇಡಿ ವ್ಯವಸ್ಥೆಯು ಇತರ ಡಿವೈಸ್‌ಗಳಿಗೆ ಸಂಪರ್ಕ ಸೇವೆಯನ್ನು ಒದಗಿಸಲಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲೇ ಸ್ಕೂಟರ್ ಪ್ರಿಯರನ್ನು ಸೆಳೆದ ಟಿವಿಎಸ್ ಗ್ರಾಫೈಟ್..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಹೊಸ ಹೊಸ ಬೈಕ್ ಆವೃತ್ತಿಗಳು ಪ್ರದರ್ಶನಗೊಳ್ಳುತ್ತಿದ್ದು, ಈ ಹಿನ್ನೆಲೆ ಜನಪ್ರಿಯ ಸ್ಕೂಟರ್ ಮಾದರಿಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಟಿವಿಎಸ್ ಕೂಡಾ ಗ್ರಾಫೈಟ್ ಹೊಸ ಆವೃತ್ತಿಯನ್ನು ಪರಿಚಯಿಸಲು ಸಿದ್ಧವಾಗುತ್ತಿದೆ.

ತಪ್ಪದೇ ಓದಿ-ವೇಗದಲ್ಲಿದ್ದ ಕಾರಿಗೆ ಅಡ್ಡ ಬಂದ ಬಾಲಕಿ- ಬಚಾವ್ ಮಾಡಲು ಹೋಗಿ ಒಂದೇ ಕುಟುಂಬದ ಐವರು ದುರ್ಮರಣ

ರಿವರ್ಸ್ ಗೇರ್ ಇರೋ ಬುಲೆಟ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

English summary
TVS 125cc (Graphite) Scooter Spotted Testing In India Again.
Story first published: Wednesday, January 3, 2018, 18:51 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark