ಆಟೊ ಎಕ್ಸ್ ಪೋ 2018 : ಹೊಸ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶನಗೊಳಿಸಿದ ವೆಸ್ಪಾ
ಇಟಲಿ ಮೂಲದ ದ್ವಿಚಕ್ರ ಉತ್ಪಾದನಾ ಸಂಸ್ಥೆಯಾದ ಪಿಯಾಜಿಯೊ ತನ್ನ ಹೊಸ ವೆಸ್ಪಾ ಎಲೆಕ್ಟ್ರಿಕಾ ಸ್ಕೂಟರ್ ಅನ್ನು ಪ್ರದರ್ಶನಗೊಳಿಸಿದ್ದು, ಮೊದಲಿಗೆ ಈ ಸ್ಕೂಟರನ್ನು ಇಟಲಿಯಲ್ಲಿ ನಡೆದ 2017 ಇಐಸಿಎಂಎ ಮೋಟಾರ್ ಸೈಕಲ್ ಶೋನಲ್ಲಿ ಅನಾವರಣಗೊಳಿಸಲಾಗಿತ್ತು.
ಇಟಲಿ ಮೂಲದ ದ್ವಿಚಕ್ರ ಉತ್ಪಾದನಾ ಸಂಸ್ಥೆಯಾದ ಪಿಯಾಜಿಯೊ ತನ್ನ ಹೊಸ ವೆಸ್ಪಾ ಎಲೆಕ್ಟ್ರಿಕಾ ಸ್ಕೂಟರ್ ಅನ್ನು ಪ್ರದರ್ಶನಗೊಳಿಸಿದ್ದು, ಮೊದಲಿಗೆ ಈ ಸ್ಕೂಟರನ್ನು ಇಟಲಿಯಲ್ಲಿ ನಡೆದ 2017 ಇಐಸಿಎಂಎ ಮೋಟಾರ್ ಸೈಕಲ್ ಶೋನಲ್ಲಿ ಅನಾವರಣಗೊಳಿಸಲಾಗಿತ್ತು.

ಇದೀಗ ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲು ಪಿಯಾಜಿಯೊ ಸಂಸ್ಥೆಯು ಮುಂದಾಗಿದ್ದು, ದೆಹಲಿ ಆಟೋ ಎಕ್ಸ್ ಪೋದಲ್ಲಿ ಹೊಸ ಸ್ಕೂಟರ್ ಪ್ರದರ್ಶನಗೊಳಿಸುವ ಮೂಲಕ ಸ್ಕೂಟರ್ ಆವೃತ್ತಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.

ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಧೀರ್ಘಕಾಲದ 2.6- ಬಿಹೆಚ್‌ಪಿ ಪವರ್ ಔಟ್ ಪುಟ್ ಮತ್ತು 5.2-ಬಿಹೆಚ್ ಪಿ ಪೀಕ್ ಪವರ್ ಹೊಂದಿದ್ದು, 4.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿರಲಿದೆ.

ಇನ್ನು ಈ ಬೈಕ್ ಎರಡು ಆವೃತ್ತಿಗಳಲ್ಲಿ ವಿನ್ಯಾಸಗೊಳಿಸಲಾಗಿದ್ದು, ಸ್ಟಾಂಡರ್ಡ್ ಆವೃತ್ತಿಯು 100 ಕಿಲೋ ಮೀಟರ್ ರೈಡಿಂಗ್ ರೇಂಜ್ ಮತ್ತು ಎಲೆಕ್ಟ್ರಿಕ್ ಎಕ್ಸ್ 200 ಕಿಲೋಮೀಟರ್ ರೈಡಿಂಗ್ ರೇಂಜ್‌ನ್ನು ಹೊಂದಿದ್ದು, 30km/h ಇಕೊ ಮೋಡ್ ನಲ್ಲಿ ಟಾಪ್ ಸ್ಪೀಡ್ 30km/h ವರೆಗು ಚಲಾಯಿಸಬಹುದಾಗಿದೆ.

ವೆಸ್ಪಾ ಎಲೆಕ್ಟ್ರಿಕ್ ಫುಲ್ ಆಕ್ಸಿಲಾರೇಟರ್ ಆಯ್ಕೆ ಮತ್ತು ರಿವರ್ಸ್ ಮೋಡ್ ಅನ್ನು ಪಡೆದಿದ್ದು, ಸ್ಕೂಟರಿನ ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಆಧುನಿಕ ಉಪಕರಣಗಳಿಂದ ವಿನ್ಯಾಸಗೊಂಡಿದೆ.

ಈ ಹೊಸ ಸ್ಕೂಟರ್ 4.3 ಇಂಚಿನ ಕನೆಕ್ಟಿವಿಟಿ ಟಿಎಫ್ ಟಿ ಇಂಸ್ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್ ಲೈಟ್, ಅಂಡರ್ ಸೀಟ್ ಸ್ಟೋರೇಜ್, 12 ಇಂಚಿನ ಮುಂದಿನ ಹಾಗು 11 ಇಂಚಿನ ಹಿಂದಿನ ಚಕ್ರಗಳನ್ನು ಹೊಂದಿದೆ. ಈ ಸ್ಕೂಟಾರ್ ಇಟಲಿಯಲ್ಲಿ ತಯಾರಾಗಲಿದ್ದು ಮೊದಲಿಗೆ ಯುರೋಪಿಯನ್ ದೇಶಗಳಲ್ಲಿ ಮಾರಾಟಗೊಳಿಸಲಾಗುತ್ತದೆ.

ಹೀಗಾಗಿ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರನ್ನು ಪ್ರದರ್ಶನಗೊಳಿಸುವ ಜೊತೆ ಜೊತೆಗೆ ಎಪ್ರಿಲಿಯಾ ಎಸ್ಆರ್ 125 ಅನ್ನು ಕೂಡಾ ಪಿಯಾಜಿಯೊ ಸಂಸ್ಥೆಯು ಬಿಡುಗಡೆಗೊಳಿಸಿದೆ.

ವೆಸ್ಪಾ ಎಲೆಕ್ಟ್ರಿಕ್ ಕ್ಲಾಸಿಕ್ ರೆಟ್ರೊ ಶೈಲಿಯ ವಿನ್ಯಾಸ ಮತ್ತು ಮುಂದುವರಿದ ತಂತ್ರಜ್ಞಾನದ ಪರಿಪೂರ್ಣ ಮಿಶ್ರಣವಾಗಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಅದರ ಪರಿಕಲ್ಪನೆಯ ರೂಪದಲ್ಲಿ, ಶೀಘ್ರದಲ್ಲೇ ಇಟಲಿಯನ್ನು ಪ್ರವೇಶಿಸುತ್ತದೆ.

ತದನಂತರವಷ್ಟೇ ಭಾರತದಲ್ಲಿ 2019 ಅಥವಾ 2020 ರ ವೇಳೆಗೆ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸುವ ಸಾಧ್ಯತೆಗಳಿದ್ದು, ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








