2018ರ ಡುಕಾಟಿ ಡಯಾವೆಲ್ ಖರೀದಿ ಮೇಲೆ ಬರೋಬ್ಬರಿ ರೂ.6.61 ಲಕ್ಷ ಡಿಸ್ಕೌಂಟ್

ಇಟಲಿ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ಡುಕಾಟಿಯು ತನ್ನ ಜನಪ್ರಿಯ ಐಷಾರಾಮಿ ಕ್ರೂಸರ್ ಬೈಕ್ ಡಯಾವೆಲ್ 2018ರ ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಸಿಮೀತ ಅವಧಿಗೆ ಲಭ್ಯವಿರುವ 2018ರ ಡಯಾವೆಲ್ ಮಾದರಿಗಳ ಮೇಲೆ ಬರೋಬ್ಬರಿ ರೂ. 6.61 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.

2018ರ ಡುಕಾಟಿ ಡಯಾವೆಲ್ ಖರೀದಿ ಮೇಲೆ ಬರೋಬ್ಬರಿ ರೂ.6.61 ಲಕ್ಷ ಡಿಸ್ಕೌಂಟ್

ಡುಕಾಟಿ ಡಯಾವೆಲ್ ಬೈಕ್‌ಗಳು ಸದ್ಯ ಆನ್ ರೋಡ್ ಬೆಲೆಗಳ ಪ್ರಕಾರ ರೂ. 18.06 ಲಕ್ಷ ಬೆಲೆ ಹೊಂದಿದ್ದು, ಡೀಲರ್ಸ್ ಮಟ್ಟದಲ್ಲಿ ಖರೀದಿಯಾಗದೆ ಉಳಿದಿರುವ 2018ರ ಡಯಾವೆಲ್ ಮಾದರಿಗಳು ಇದೀಗ ಆನ್ ರೋಡ್ ಬೆಲೆಗಳ ಪ್ರಕಾರ ರೂ.11.99 ಲಕ್ಷಕ್ಕೆ ಖರೀದಿಗೆ ಲಭ್ಯವಾಗಿವೆ. ಹೀಗಾಗಿ ಹೊಸ ಬೈಕ್ ಖರೀದಿಸುವ ಗ್ರಾಹಕರು ರೂ.6.61 ಲಕ್ಷ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದ್ದು, ಸೀಮಿತ ಅವಧಿಗೆ ಮಾತ್ರವೇ ಈ ಆಫರ್ ನೀಡಲಾಗುತ್ತಿದೆ.

2018ರ ಡುಕಾಟಿ ಡಯಾವೆಲ್ ಖರೀದಿ ಮೇಲೆ ಬರೋಬ್ಬರಿ ರೂ.6.61 ಲಕ್ಷ ಡಿಸ್ಕೌಂಟ್

ಡುಕಾಟಿ ಸಂಸ್ಥೆಯು ಈ ಹಿಂದೆ 2018ರ ಡಯಾವೆಲ್ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗಾಗಿ 666 ಯುನಿಟ್‌ಗಳನ್ನು ಉತ್ಪಾದನೆ ಮಾಡಿತ್ತು. ಆದ್ರೆ ಕಾಯುವಿಕೆ ಅವಧಿ ಹೆಚ್ಚಿದ್ದರಿಂದ 20ಕ್ಕೂ ಹೆಚ್ಚು ಬೈಕ್‌ಗಳು ಮಾರಾಟವಾಗದೆ ಹಾಗೆಯೇ ಉಳಿದ್ದು, ಇದೀಗ ಭಾರೀ ಮೊತ್ತದ ಡಿಸ್ಕೌಂಟ್ ನೀಡಲಾಗಿದೆ.

2018ರ ಡುಕಾಟಿ ಡಯಾವೆಲ್ ಖರೀದಿ ಮೇಲೆ ಬರೋಬ್ಬರಿ ರೂ.6.61 ಲಕ್ಷ ಡಿಸ್ಕೌಂಟ್

ಆದರೂ ಕೂಡಾ ಭಾರೀ ಮೊತ್ತದ ಡಿಸ್ಕೌಂಟ್ ನೀಡಲಾಗುತ್ತಿದ್ದರೂ ಹೊಸ ಬೈಕ್ ಮಾಲೀಕತ್ವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ನಿಗದಿತ ಅವಧಿಯೊಳಗೆ ಮಾರಾಟವಾಗದೇ ಹಾಗೆಯೇ ಉಳಿದ ಹೊಸ ಬೈಕ್‌ಗಳನ್ನು ತನ್ನ ಹೆಸರಿನಲ್ಲೇ ನೋಂದಣಿ ಮಾಡಿಕೊಂಡು ಇದೀಗ ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಮಾರಾಟ ಮಾಡುತ್ತಿದೆ.

2018ರ ಡುಕಾಟಿ ಡಯಾವೆಲ್ ಖರೀದಿ ಮೇಲೆ ಬರೋಬ್ಬರಿ ರೂ.6.61 ಲಕ್ಷ ಡಿಸ್ಕೌಂಟ್

ಯಾಕೆಂದ್ರೆ ಹೊಸ ನಿಯಮಗಳ ಪ್ರಕಾರ, 2018ರ ಆವೃತ್ತಿಗೆ ಇದೀಗ ಮಾರಾಟ ಮಾಡಲು ಅವಕಾಶ ಇಲ್ಲದಿರುವುದರಿಂದ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ನೀತಿ ಅಡಿ ಮಾರಾಟ ಮಾಡುತ್ತಿದ್ದು, ಇದು ಬೈಕ್ ಮಾಲೀಕರಿಗೆ ಮುಂಬರುವ ದಿನಗಳಲ್ಲಿ ಬೈಕ್ ಮರುಮಾರಾಟ ಬೇಕಿದ್ದಲ್ಲಿ ಬೈಕ್ ಮೂಲ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

2018ರ ಡುಕಾಟಿ ಡಯಾವೆಲ್ ಖರೀದಿ ಮೇಲೆ ಬರೋಬ್ಬರಿ ರೂ.6.61 ಲಕ್ಷ ಡಿಸ್ಕೌಂಟ್

ಒಟ್ಟಿನಲ್ಲಿ ದುಬಾರಿ ಬೈಕ್ ಖರೀದಿ ಮಾಡಲೇಬೇಕೆಂಬ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶವೆಂದು ಹೇಳಬಹುದಾಗಿದ್ದು, ಖರೀದಿಯಾಗದೇ ಉಳಿದಿರುವ 20 ಯುನಿಟ್‌ಗಳಲ್ಲಿ 4 ಯನಿಟ್‌‌ಗಳು ಡಯಾವೆಲ್ ಹೈ ಎಂಡ್ ಮಾದರಿಯಾದ ಡೀಸೆಲ್ ವೆರಿಯೆಂಟ್ ಕೂಡಾ ಖರೀದಿಗೆ ಲಭ್ಯವಿವೆ.

2018ರ ಡುಕಾಟಿ ಡಯಾವೆಲ್ ಖರೀದಿ ಮೇಲೆ ಬರೋಬ್ಬರಿ ರೂ.6.61 ಲಕ್ಷ ಡಿಸ್ಕೌಂಟ್

ಎಂಜಿನ್ ಸಾಮರ್ಥ್ಯ

ಡಯಾವೆಲ್ 1200 ಬೈಕ್ ಮಾದರಿಯು ಟೆಸ್ಟಾಸ್ಟ್ರೆಟ್ಟಾ 11° ಎಲ್ ಟ್ವಿನ್ 1198.4 ಸಿಸಿ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಸ್ಲಿಪರ್ ಕ್ಲಚ್ ಟ್ರಾನ್ಸ್‌ಮಿಷನ್ ಸೌಲಭ್ಯದೊಂದಿಗೆ 159.5-ಬಿಎಚ್‌ಪಿ ಮತ್ತು 130.5-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಟೊಯೊಟಾ ಕಾರು ಮಾಲೀಕನ ಕಥೆ ಹರೋಹರ

2018ರ ಡುಕಾಟಿ ಡಯಾವೆಲ್ ಖರೀದಿ ಮೇಲೆ ಬರೋಬ್ಬರಿ ರೂ.6.61 ಲಕ್ಷ ಡಿಸ್ಕೌಂಟ್

ಜೊತೆಗೆ ಅಕ್ರಮಣಕಾರಿ ನೋಟವೇ ಡಯಾವೆಲ್ ಬೈಕಿನ ಶಕ್ತಿಗೆ ಮತ್ತಷ್ಟು ಪುಷ್ಠಿ ನೀಡುವಂತಿದ್ದು, ಎಕ್ಸಾಸ್ಟ್ ವಿನ್ಯಾಸ, ಅಗಲವಾದ ಸೀಟುಗಳು, ಫ್ಯೂಲ್ ಟ್ಯಾಂಕ್ ವಿನ್ಯಾಸ ಮತ್ತು ರೆಟ್ರೊ ಶೈಲಿಯ ಹೆಡ್‌ಲ್ಯಾಂಪ್ ಸಖತ್ ಸ್ಟೈಲಿಶ್ ಆಗಿವೆ.

2018ರ ಡುಕಾಟಿ ಡಯಾವೆಲ್ ಖರೀದಿ ಮೇಲೆ ಬರೋಬ್ಬರಿ ರೂ.6.61 ಲಕ್ಷ ಡಿಸ್ಕೌಂಟ್

ಇದರೊಂದಿಗೆ ಸುರಕ್ಷಾ ವಿಧಾನಗಳಿಗೂ ಹೆಚ್ಚಿನ ಗಮನಹರಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್, ಟ್ರಾಕ್ಷನ್ ಕಂಟ್ರೊಲರ್ ಮತ್ತು ಪ್ರದೇಶಗಳಿಗೆ ಅನುಗುಣವಾಗಿ ಬೈಕ್ ಚಾಲನೆಗಾಗಿ ವಿವಿಧ ರೈಡಿಂಗ್ ಮೂಡ್‌ಗಳನ್ನು ಕೂಡಾ ಒದಗಿಸಲಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

2018ರ ಡುಕಾಟಿ ಡಯಾವೆಲ್ ಖರೀದಿ ಮೇಲೆ ಬರೋಬ್ಬರಿ ರೂ.6.61 ಲಕ್ಷ ಡಿಸ್ಕೌಂಟ್

ಇದರ ಜೊತೆಗೆ 2019ರ ಡಯಾವೆಲ್ ಆವೃತ್ತಿಯಲ್ಲಿ ಹೊಸ ನಿಯಮಗಳಿಗೆ ಅನುಗುಣವಾಗಿ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಿ ಮುಂದಿನ ತಿಂಗಳು ಬಿಡುಗಡೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ 2018ರ ಆವೃತ್ತಿಗಳ ಸ್ಟಾಕ್ ಕ್ಲಿಯೆರೆನ್ಸ್ ಮಾಡುವ ಉದ್ದೇಶದಿಂದ ಭರ್ಜರಿ ಡಿಸ್ಕೌಂಟ್ ನೀಡಲಾಗಿದೆ.

Most Read Articles

Kannada
Read more on ಡುಕಾಟಿ ducati
English summary
2018 Ducati Diavel Available At Rs 6.61 Lakh Discount. Read in Kannada.
Story first published: Friday, May 17, 2019, 20:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X