ಓಲಾ ನಂತರ ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಟಾರ್ಗೆಟ್ ಮಾಡಿದ ಸಾರಿಗೆ ಇಲಾಖೆ..

ಬೈಕ್ ಟ್ಯಾಕ್ಸಿ ಆಪ್‍ಗಳ ಮೇಲೆ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಅಸಮಧಾನವಾಗಿದ್ದು, ಇವುಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂಬ ಹೇಳಿಕೆಗಳು ಕೆಲ ದಿನಗಳ ಹಿಂದಷ್ಟೆ ಮೈಸೂರಿನಲ್ಲಿ ನಡೆದಿತ್ತು. ಆದ್ರೆ ಕಳೆದ ತಿಂಗಳು ಕರ್ನಾಟಕ ಸಾರಿಗೆ ಇಲಾಖೆಯು ಓಲಾ ಸಂಸ್ಥೆಯು ಮಾಡಿದ ತಪ್ಪಿಗೆ ನೀಡಿದ ಭಾರೀ ಮೊತ್ತದ ದಂಡವು ರಾಜ್ಯದಲ್ಲಿ ಅಷ್ಟೆ ಸುದ್ದಿ ಮಾಡಿತ್ತು.

ಒಲಾ ನಂತರ ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಟಾರ್ಗೆಟ್ ಮಾಡಿದ ಕರ್ನಾಟಕ ಸಾರಿಗೆ ಇಲಾಖೆ..

ಇದೀಗ ಕರ್ನಾಟಕ ಸಾರಿಗೆ ಇಲಾಖೆಯು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಆಪ್ ಆಧಾರಿತ ಬೈಕ್-ಟ್ಯಾಕ್ಸಿ ಸರ್ವೀಸ್ ಸಂಸ್ಥೆಯಾದ ರ್‍ಯಾಪಿಡೋ ಮೇಲೆ ಕೂಡಾ ಕಾನೂನುಬಾಹಿರವಾಗಿ ಸೇವೆಯಲ್ಲಿ ನಡೆಸುತ್ತಿದೆ ಎಂದು ಹೇಳಿಕೊಂಡಿದೆ. ಈ ಕಾರಣದಿಂದಾಗಿ ಕಂಪೆನಿಯ ವಿರುದ್ಧ ಪೊಲೀಸ್ ದೂರು ಸಲ್ಲಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಲಾ ನಂತರ ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಟಾರ್ಗೆಟ್ ಮಾಡಿದ ಕರ್ನಾಟಕ ಸಾರಿಗೆ ಇಲಾಖೆ..

ಕಳೆದ ಎರಡು ವಾರಗಳ ಹಿಂದಷ್ಟೆ ಸಾರಿಗೆ ಇಲಾಖೆಯು ಓಲಾ ಸಂಸ್ಥೆಗೆ ತಾವು ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸಲ್ಲಿಸುತ್ತಿರುವುದಾಗಿ ರೂ. 15 ಲಕ್ಷದ ದಂಡವನ್ನು ವಿದಿಸಲಾಗಿದ್ದು, ಓಲಾ ಈ ಸೇವೆಯನ್ನು ನಿಲ್ಲಿಸಿದರೂ ದ್ವಿಚಕ್ರ ಟ್ಯಾಕ್ಸಿಗಳನ್ನು ಕಾರ್ಯಗತಗೊಳಿಸಲು ಪರವಾನಗಿ ನೀಡುವಿಕೆಗೆ ರಾಜ್ಯ ಸಾರಿಗೆ ಇಲಾಖೆಯ ವಿರುದ್ಧ ಕರ್ನಾಟಕ ಹೈಕೋರ್ಟ್‍‍ಗೆ ಮನವಿ ಸಲ್ಲಿಸಿದೆ.

ಒಲಾ ನಂತರ ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಟಾರ್ಗೆಟ್ ಮಾಡಿದ ಕರ್ನಾಟಕ ಸಾರಿಗೆ ಇಲಾಖೆ..

ಬೈಕ್ ಟ್ಯಾಕ್ಸಿ ಸೇವೆಗಳನ್ನು ತಕ್ಷಣವೇ ಅಮಾನತುಗೊಳಿಸಲು ರ್‍ಯಾಪಿಡೋ ಸಂಸ್ಥೆಗೆ ನಾವು ನೊಟೀಸ್ ಅನ್ನು ಕಳುಹಿಸಲಾಗಿದೆ. ಸಾರಿಗೆ ಇಲಾಖೆಯು ತಮ್ಮ ರ್‍ಯಾಪಿಡೋ ಸಂಸ್ಥೆಯ ಪ್ರತಿಕ್ರಿಯೆಯೊಂದಿಗೆ ತೃಪ್ತಿ ಹೊಂದಿಲ್ಲ ಮತ್ತು ಕಾರ್ಯಾಚರಣೆಗಳನ್ನು ನಿಲ್ಲಿಸಲು ಅವರು ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೆಚ್ಚುವರಿ ಸಾರಿಗೆ ಆಯುಕ್ತರು ನರೇಂದ್ರ ಹೋಲ್ಕರ್ ಹೇಳಿದ್ದಾರೆ.

ಒಲಾ ನಂತರ ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಟಾರ್ಗೆಟ್ ಮಾಡಿದ ಕರ್ನಾಟಕ ಸಾರಿಗೆ ಇಲಾಖೆ..

ಶುಕ್ರವಾರ, ಇಲಾಖೆ ಕನಿಷ್ಠ 170 ರ್‍ಯಾಪಿಡೊ ಬೈಕ್-ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿದೆ. ಬುಧವಾರ 24 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಇನ್ನೂ 18 ವಾಹನಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ ಎಂದು ಜಾಯಿಂಟ್ ಕಮೀಷನರ್ ಜ್ಞಾನೇಂದ್ರ ಕುಮಾರ್ ತಿಳಿಸಿದ್ದಾರೆ. "ನಾವು ಈ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಅನ್ನು ಸಲ್ಲಿಸುತ್ತೇವೆ ಮತ್ತು ದ್ವಿಚಕ್ರ ನೋಂದಣಿ ಪ್ರಮಾಣಪತ್ರವನ್ನು ಸಹ ವಶಪಡಿಸಿಕೊಳ್ಳಲಾಗುವುದು" ಎಂದು ಅವರು ಹೇಳಿದರು.

MOST READ: ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ಒಲಾ ನಂತರ ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಟಾರ್ಗೆಟ್ ಮಾಡಿದ ಕರ್ನಾಟಕ ಸಾರಿಗೆ ಇಲಾಖೆ..

ಪೊಲೀಸ್ ಪ್ರಕರಣವನ್ನು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಬುಕ್ ಮಾಡಲಾಗುತ್ತದೆ ಎಂದು ಅವರು ಹೇಳಲಾಗಿದ್ದು, ಮುಂದೇ ಮತ್ತಷ್ಟು ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗುವುದು. ಏಕೆಂದರೆ ಸಧ್ಯಕ್ಕೆ ರ್‍ಯಾಪಿಡೋ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬೈಕ್ ಟ್ಯಾಕಿಗಳು ವೈತ್ ಬೋರ್ಡ್ ಅನ್ನು ಹೊಂದಿದ್ದು, ಇವುಗಳನ್ನು ಟ್ಯಾಕ್ಸಿ ಸೇವೆಗಳಿಗೆ ಬಳಸಲಾಗುವುದಿಲ್ಲ.

ಒಲಾ ನಂತರ ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಟಾರ್ಗೆಟ್ ಮಾಡಿದ ಕರ್ನಾಟಕ ಸಾರಿಗೆ ಇಲಾಖೆ..

ಆದುದರಿಂದ ವೈಟ್ ಬೋರ್ಡ್ ಹೊಂದಿರುವ ರ್‍ಯಾಪಿಡೋ ಬೈಕ್ ಟ್ಯಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಮೋಟಾರ್ ವಾಹನ ಕಾಯಿದೆಯ ವಿರುದ್ದವಾಗಿರುವುದರಿಂದ ಇವುಗಳ ಮೇಲೆ ಮತ್ತಷ್ಟು ಕಾರ್ಯಾಚರಣೆಯನ್ನು ಮಾಡಲಾಗುವುದು ಮತ್ತು ಚಾಲಕರು ತಮ್ಮ ಈ ವೇದಿಕೆಗಳಲ್ಲಿ ಕಾರ್ಯ ನಿರ್ವಹಿಸದಂತೆ ತಡೆಯಬೇಕು. ಎಂದು ಹೇಳಿದ್ದಾರೆ.

MOST READ: ಮಾರುತಿ ಸುಜುಕಿ ಜಿಮ್ನಿ ಭಾರತದಲ್ಲಿ ಬಿಡುಗಡೆಯಾಗುತ್ತಾ ಇಲ್ವಾ ..?

ಒಲಾ ನಂತರ ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಟಾರ್ಗೆಟ್ ಮಾಡಿದ ಕರ್ನಾಟಕ ಸಾರಿಗೆ ಇಲಾಖೆ..

ಒಟ್ಟಾರೆಯಾಗಿ ಕರ್ನಾಟಕ ಸಾರಿಗೆ ಇಲಾಖೆಯು ತಾವು ಸೀಜ್ ಮಾಡಲಾಗಿರುವ 170 ಬೈಕ್‍ಗಳನ್ನು ಬಿಡುವ ಮೊದಲಿಗೆ ಒಂದೊಂದು ಬೈಕಿಗೆ ರೂ.6000 ದಂಡ ಸೇರಿಂದಂತೆ ಒಟ್ಟುರೂ. 10.2 ಲಕ್ಷ ದಂಡವನ್ನು ನೀಡಬೇಕಾಗಿದೆ. ರ್‍ಯಾಪಿಡೋ ಒಂದು ಸ್ಮಾರ್ಟ್‍ಫೋನ್ ಆಪ್ ಆಧಾರಿತ ಸೇವೆಯಾಗಿದ್ದು, ಇದು ಒಲಾ ಮತ್ತು ಓಬರ್‍‍ನಂತೆಯೆ ಸೇವೆಯನ್ನು ಸಲ್ಲಿಸುತ್ತದೆ. ಸಧ್ಯ ಈ ಸಾರಿಗೆ ಇಲಾಖೆಯು ಈ ಸಂಸ್ಥೆಯ ಮೇಲೆ ತೆಗೆದುಕೊಂಡಿರುವ ಕ್ರಮಕ್ಕೆ ಸಂಸ್ಥೆಯು ಯಾವ ರೀತಿ ಉತ್ತರ ನೀಡಲಿದೆ ಎಂದು ಕಾಯ್ದುನೋಡಬೇಕಿದೆ.

Source: ETAuto

Most Read Articles

Kannada
English summary
After Ola, Karnataka transport dept goes after Rapido bike-taxis. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X