ಅವೆಂಜರ್ 160 ಬೈಕ್ ಅನ್ನು ಬಿಡುಗಡೆ ಮಾಡಲಿರುವ ಬಜಾಜ್ ಆಟೋ

ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ತಮ್ಮ ಅವೆಂಜರ್ 160 ಬೈಕ್ ಅನ್ನು ಬಿಡುಗಡೆಗೊಳಿಸುವುದಾಗಿ ಈಗಾಗಲೆ ಮಾಹಿತಿಯನ್ನು ನೀಡಿದೆ. ಪಡೆದುಕೊಳ್ಳಲಿದ್ದು, ಅವೆಂಜರ್ 180 ಬೈಕಿನ ಸ್ಥಾನವನ್ನು ಪಡೆದುಕೊಳ್ಳಲಿದೆ.

ಅವೆಂಜರ್ 160 ಬೈಕ್ ಅನ್ನು ಬಿಡುಗಡೆ ಮಾಡಲಿರುವ ಬಜಾಜ್ ಆಟೋ

ಬಿಡುಗಡೆಗೊಳ್ಳಲಿರುವ ಹೊಸ ಅವೆಂಜರ್ 160 ಬೈಕ್ ಜಾರಿಯಾಗಲಿರುವ ಹೊಸ ಬಿಎಸ್-VI ಎಮಿಷನ್ ಹೊರಸೂಸುವಿಕೆಯ ನಿಯಮಗಳಿಗೆ ಸರಿ ತೂಗಲಿದ್ದು, ಪ್ರಸ್ಥುತ ಮಾರುಕಟ್ಟೆಯಲಿರುವ ಬಜಾಜ್ ಅವೆಂಜರ್ ಬೈಕ್‍ಗಳು 180 ಮತ್ತು 220ಸಿಸಿ ಎಂಜಿನ್ ಮಾದರಿಗಳಲ್ಲಿ ದೊರೆಯುತ್ತಿದೆ. ಇವುಗಳು ಮುಂಬರಲಿರುವ ಬಿಎಸ್-VI ಎಮಿಷನ್ ಟೆಸ್ಟ್ ಗಾಗಿ ಸರೀಹೋಗಲಾದ ಕಾರಣ ಬಜಾಜ್ ಸಂಸ್ಥೆಯು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಅವೆಂಜರ್ 160 ಬೈಕ್ ಅನ್ನು ಬಿಡುಗಡೆ ಮಾಡಲಿರುವ ಬಜಾಜ್ ಆಟೋ

ಹೊಸ ಬಜಾಜ್ ಅವೆಂಜರ್ 160 ಬೈಕಿನಲ್ಲಿ ಪಲ್ಸರ್ 160 ಬೈಕಿನ 4 ವೇಲ್ವ್ ಕ್ರೂಸರ್ ಎಂಜಿನ್ ಅನ್ನು ನೀಡಲಾಗುತ್ತಿದ್ದು, ಅಧಿಕ ಸಾಮರ್ಥ್ಯವನ್ನು ಹಾಗು ಕೈಗಟ್ಟುವ ಬೆಲೆಯನ್ನು ಬಿಡುಗಡೆ ಮಾಡಲು ಸಂಸ್ಥೆಯು ಆಲೋಚನೆಯಲ್ಲಿದೆ.

ಅವೆಂಜರ್ 160 ಬೈಕ್ ಅನ್ನು ಬಿಡುಗಡೆ ಮಾಡಲಿರುವ ಬಜಾಜ್ ಆಟೋ

ಪ್ರಸ್ಥುತ ತಲೆಮಾರಿನ ಬಜಾಜ್ ಪಲ್ಸರ್ ಎನ್ಎಸ್160 ಬೈಕಿನಲ್ಲಿರುವ ಎಂಜಿನ್ 160.3ಸಿಸಿ ಟ್ವಿನ್ ಸ್ಪಾರ್ಕ್, ಡಿಟಿಎಸ್ಐ ಎಂಜಿನ್ ಸಹಾಯದಿಂದ 15.2 ಬಿಹೆಚ್‍ಪಿ ಮತ್ತು 14.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ತನ್ನ ಸೆಗ್ಮೆಂಟ್‍ನಲ್ಲಿನ ಬೈಕ್‍ಗಳನ್ನು ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಂಡಿದೆ.

ಅವೆಂಜರ್ 160 ಬೈಕ್ ಅನ್ನು ಬಿಡುಗಡೆ ಮಾಡಲಿರುವ ಬಜಾಜ್ ಆಟೋ

ಇನ್ನು ಪ್ರಸ್ಥುತ ತಲೆಮಾರಿನ ಬಜಾಜ್ ಅವೆಂಜರ್ 180 ಬೈಕ್‍ಗಳು 180ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 15.38ಬಿಹೆಚ್‍ಪಿ ಮತ್ತು 13.7ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಎಂಜಿನ್ ಕೆಪಾಸಿಟಿಯಲ್ಲಿ ಕಡಿಮೆ ಇದ್ದರೂ ಸಹ ಪರ್ಫಾರ್ಮೆನ್ಸ್ ಪರವಾಗಿ ಸಮನಾದ ಸ್ಥಾನವನ್ನು ನೀಡಲಗುತ್ತದೆ.

ಅವೆಂಜರ್ 160 ಬೈಕ್ ಅನ್ನು ಬಿಡುಗಡೆ ಮಾಡಲಿರುವ ಬಜಾಜ್ ಆಟೋ

ಬಜಾಜ್ ಎವೆಂಜರ್ 180ನಂತೆಯೆ ಬಜಾಜ್ ಅವೆಂಜರ್ 160 ಸಹ ಸ್ಟ್ರೀಟ್ ಮಾಡಲ್ ಅವತಾರವನ್ನು ತಾಳಲಿದ್ದು, ಈ ಬೈಕಿನಲ್ಲಿ ಸ್ಟ್ರೀಟ್ ಕಂಟ್ರೋಲ್ ಹ್ಯಾಂಡಲ್‍ಬಾರ್ ಹಾಗು ಅಪ್ ಫ್ರಂಟ್ ಪ್ಲೈಸ್ಕ್ರೀನ್ ಅನ್ನು ನೀಡಲಾಗುತ್ತಿದೆ. ಮಾಹಿತಿಗಳ ಪ್ರಕಾರ ಬಜಾಜ್ ಸಂಸ್ಥೆಯು ತಮ್ಮ ಅವೆಂಜರ್ 160 ಬೈಕ್ ಅನ್ನು ಇದೇ ಏಪ್ರಿಲ್ ತಿಂಗಳಿನಲ್ಲಿ ಬಿಡಗಡೆಗೊಳಿಸಲಿದೆ ಎನ್ನಲಾಗಿದೆ.

ಅವೆಂಜರ್ 160 ಬೈಕ್ ಅನ್ನು ಬಿಡುಗಡೆ ಮಾಡಲಿರುವ ಬಜಾಜ್ ಆಟೋ

ಮಾರುಕಟ್ಟೆಯಲ್ಲಿರುವ ಡಿಮ್ಯಾಂಡ್ ಪ್ರಕಾರ ನೋಡಿದರೆ ಬಜಾಜ್ ಅವೆಂಜರ್ 180 ಬೈಕ್‍ಗಳು ಆಷ್ಟು ಜನಪ್ರೀಯತೆಯನ್ನು ಪಡೆದುಕೊಂಡಿಲ್ಲ. ಕೇವಲ ಬಜಾಜ್ ಅವೆಂಜರ್ 160 ಬೈಕ್ ಅನ್ನು ಮಾತ್ರವಲ್ಲದೆ ಬಜಾಜ್ ಸಂಸ್ಥೆಯು ತಮ್ಮ ಜನಪ್ರಿಯ ಡಾಮಿನಾರ್ ಬೈಕ್ ಅನ್ನು ಸಹ ಶೀಘ್ರವೇ ಬಿಡುಗಡೆಗೊಳಿಸಲಿದೆ ಮತ್ತು ಈ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದೆ.

ಅವೆಂಜರ್ 160 ಬೈಕ್ ಅನ್ನು ಬಿಡುಗಡೆ ಮಾಡಲಿರುವ ಬಜಾಜ್ ಆಟೋ

ಕೇಂದ್ರ ಸರ್ಕಾರದ ಆದೇಶದಂತೆ 2020ರ ಏಪ್ರಿಲ್ 1ರ ನಂತರ ಬಿಡುಗಡೆಯಾಗಲಿರುವ ಎಲ್ಲಾ ವಾಹನಗಳು ಬಿಎಸ್-VI ಎಂಜಿನ್ ಅನ್ನು ಹೊಂದಿರಬೇಕಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಬಿಡಗಡೆಯಾಲಗಿರುವ ಡಾಮಿನಾರ್ ಬೈಕಿನಲ್ಲಿ ಬಿಎಸ್-VI ಎಂಜಿನ್ ಅಳವಡಿಕೆಯು ಬಹುಮುಖ್ಯ ಬದಲಾವಣೆ ಎಂದೇ ಹೇಳಬಹುದು.

ಅವೆಂಜರ್ 160 ಬೈಕ್ ಅನ್ನು ಬಿಡುಗಡೆ ಮಾಡಲಿರುವ ಬಜಾಜ್ ಆಟೋ

ಹೀಗಾಗಿ ಹೊಸ ಎಮಿಷನ್ ಅನ್ನು ಪಡೆದುಕೊಂಡಿರುವ ಬಜಾಜ್ ಡಾಮಿನಾರ್ 400 ಬೈಕ್‍ಗಳು ಈ ಬಾರಿ ಹೆಚ್ಚು ಸಾಮರ್ಥ್ಯವನ್ನು ಹೊರಹಾಕಲಿದ್ದು, ಬಿಡುಗಡೆಯಾಗುವ ವರೆಗು ಎಷ್ಟು ಪವರ್ ಔಟ್‍‍ಪುಟ್ ನೀಡಲಿದೆ ಎಂದು ತಿಳಿಯಬೇಕಿದೆ.

Source: Zigwheels

Most Read Articles

Kannada
English summary
Bajaj Avenger 160 To Be Launched In India As Replacement For Avenger 180. Read In Kannada
Story first published: Tuesday, March 5, 2019, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X