ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್‌‌ಗಿಂತಲೂ ಉತ್ತಮ ಮೈಲೇಜ್ ನೀಡುತ್ತೆ ಬೆನ್ಲಿಂಗ್ ಔರಾ

2025ರಿಂದ 150 ಕೆಳಮಟ್ಟದ ಎಲ್ಲಾ ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ನಿಷೇಧಗೊಳಿಸುವ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರವು ಸುಳಿವು ನೀಡಿದ್ದು, ಈ ಹಿನ್ನಲೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಉತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅಭಿವೃದ್ಧಿಗೊಳಿಸಿ ಮಾರಾಟ ಮಾಡುತ್ತಿವೆ.

ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್‌‌ಗಿಂತಲೂ ಉತ್ತಮ ಮೈಲೇಜ್ ನೀಡುತ್ತೆ ಬೆನ್ಲಿಂಗ್ ಔರಾ

ಸದ್ಯ ದೇಶಿಯ ಮಾರುಕಟ್ಟೆಯಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಉತ್ತಮ ಬೇಡಿಕೆ ಹರಿದುಬರುತ್ತಿದ್ದು, ಅಥೆರ್, ಒಕಿನವಾ ಮತ್ತು ಹೀರೋ ಸಂಸ್ಥೆಗಳು ಈಗಾಗಲೇ ತಮ್ಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಚೀನಿ ಎಲೆಕ್ಟ್ರಿಕ್ ಬೈಕ್ ಉತ್ಪಾದನಾ ಸಂಸ್ಥೆಯಾದ ಬೆನ್ಲಿಂಗ್ ಕೂಡಾ ಹಲವು ಎಲೆಕ್ಟ್ರಿಕ್ ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸುತ್ತಿದ್ದು, ಇದರಲ್ಲಿ ಅತ್ಯುತ್ತಮ ಮೈಲೇಜ್ ಪ್ರೇರಿತ ಔರಾ ಸ್ಕೂಟರ್ ಅಥೆರ್ 450 ಸ್ಕೂಟರ್‌ಗೆ ಪೈಪೋಟಿಯಾಗುವ ನೀರಿಕ್ಷೆಯಲ್ಲಿದೆ.

ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್‌‌ಗಿಂತಲೂ ಉತ್ತಮ ಮೈಲೇಜ್ ನೀಡುತ್ತೆ ಬೆನ್ಲಿಂಗ್ ಔರಾ

ಭಾರತೀಯ ಮಾರುಕಟ್ಟೆಗೆ ಈಗಾಗಲೇ ಅಧಿಕೃತವಾಗಿ ಕಾಲಿಟ್ಟಿರುವ ಬೆನ್ಲಿಂಗ್ ಸಂಸ್ಥೆಯು ಮೂರು ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ್ದು, ಸದ್ಯ ಖರೀದಿಗೆ ಲಭ್ಯವಿರುವ ಸ್ಕೂಟರ್‌ಗಳು ರೂ.40 ಸಾವಿರ ರೂ.50 ಸಾವಿರ ಆಸುಪಾಸಿನಲ್ಲಿ ಖರೀದಿ ಲಭ್ಯವಿವೆ.

ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್‌‌ಗಿಂತಲೂ ಉತ್ತಮ ಮೈಲೇಜ್ ನೀಡುತ್ತೆ ಬೆನ್ಲಿಂಗ್ ಔರಾ

ಇದೀಗ ಬೆನ್ಲಿಂಗ್ ಸಂಸ್ಥೆಯು ಹೈ ಸ್ಪೀಡ್ ಪ್ರೇರಣೆಯೊಂದಿಗೆ ಉತ್ತಮ ಮೈಲೇಜ್ ಸಾಮರ್ಥ್ಯ ಹೊಂದಿರುವ ಔರಾ ಎನ್ನುವ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿ ಗಂಟೆಗೆ 60 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ 120 ಕಿ.ಮಿ ಮೈಲೇಜ್ ನೀಡುವ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್‌‌ಗಿಂತಲೂ ಉತ್ತಮ ಮೈಲೇಜ್ ನೀಡುತ್ತೆ ಬೆನ್ಲಿಂಗ್ ಔರಾ

ಬೆನ್ಲಿಂಗ್ ಔರಾ ಸ್ಕೂಟರ್ ಮಾದರಿಯು 2500 ವ್ಯಾಟ್‌ನೊಂದಿಗೆ 72 ವೊಲ್ಟ್ ಪ್ರೇರಿತ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯವನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ 72 ವೊಲ್ಟೊ ಪ್ರೇರಿತ 40ಎಹೆಚ್ ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರಲಿದೆ ಎನ್ನಲಾಗಿದೆ. ಈ ಮೂಲಕ ಮೂರು ಗಂಟೆಗಳಲ್ಲಿ ಶೇ.100ರಷ್ಟು ಚಾರ್ಜ್‌ಗೊಳ್ಳಲಿದ್ದು, ವೆಸ್ಪಾ ಸ್ಕೂಟರ್ ಮಾದರಿಯಲ್ಲಿ ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ.

ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್‌‌ಗಿಂತಲೂ ಉತ್ತಮ ಮೈಲೇಜ್ ನೀಡುತ್ತೆ ಬೆನ್ಲಿಂಗ್ ಔರಾ

ಇದರೊಂದಿಗೆ ಹೊಸ ಔರಾ ಸ್ಕೂಟರ್ ಪ್ರೀಮಿಯಂ ಫೀಚರ್ಸ್‌ಗಳಾದ ಸ್ಮಾರ್ಟ್ ಬ್ರೇಕ್ ಡೌನ್ ಅಸಿಸ್ಟ್, ಜಿಪಿಎಸ್, ಕೀ ಲೆಸ್ ಆಕ್ಸೆಸ್, ಆ್ಯಂಟಿ ಥೆಪ್ಟ್ ಅಲಾರಾಂ, ಫುಟ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿವರ್ಸ್ ಪಾರ್ಕ್ ಅಸಿಸ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಈ ಸ್ಕೂಟರ್ ಖರೀದಿಗೆ ಲಭ್ಯವಿರಲಿದೆ.

ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್‌‌ಗಿಂತಲೂ ಉತ್ತಮ ಮೈಲೇಜ್ ನೀಡುತ್ತೆ ಬೆನ್ಲಿಂಗ್ ಔರಾ

ಸದ್ಯ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ.1.05 ಲಕ್ಷದಿಂದ ರೂ.1.17 ಲಕ್ಷ ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, ಇದೀಗ ಬಿಡುಗಡೆಗೆ ಸಿದ್ದವಾಗಿರುವ ಬೆನ್ಲಿಂಗ್ ಔರಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ರೂ.90 ಸಾವಿರ ಬೆಲೆಯೊಂದಿಗೆ ರಸ್ತೆಗಿಳಿಯುವುದು ಬಹುತೇಕ ಖಚಿತವಾಗಿದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್‌‌ಗಿಂತಲೂ ಉತ್ತಮ ಮೈಲೇಜ್ ನೀಡುತ್ತೆ ಬೆನ್ಲಿಂಗ್ ಔರಾ

ಇನ್ನು ಬೆನ್ಲಿಂಗ್ ಸಂಸ್ಥೆಯು ಸದ್ಯ ಪುಣೆ ಬಳಿಯ ಚಾಕನ್‌ನಲ್ಲಿ ಎಲೆಕ್ಟ್ರಿಕ್ ಬೈಕ್ ಉತ್ಪಾದನಾ ಘಟಕವನ್ನು ತೆರೆದಿದ್ದು, ಬೆಂಗಳೂರು, ಹೈದ್ರಾಬಾದ್, ಮುಂಬೈ, ಪುಣೆ, ದೆಹಲಿ, ಚೆನ್ನೈ ಸೇರಿದಂತೆ ದೇಶದ ಪ್ರಮುಖ 25 ನಗರಗಳಲ್ಲಿ ತನ್ನ ಹೊಸ ಬೈಕ್ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದೆ.

MOST READ: ನಮ್ಮ ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಕಿಯಾ ಸೆಲ್ಟೊಸ್

ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್‌‌ಗಿಂತಲೂ ಉತ್ತಮ ಮೈಲೇಜ್ ನೀಡುತ್ತೆ ಬೆನ್ಲಿಂಗ್ ಔರಾ

ಇದರ ಜೊತೆಗೆ ಚೀನಿ ಮಾರುಕಟ್ಟೆಗಳಲ್ಲಿ ಶೇ. 60 ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಪ್ರಮಾಣವನ್ನು ಹೊಂದಿದ್ದು, ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಬೆನ್ಲಿಂಗ್‌ ಕಂಪನಿಯು ಕೃತಿ, ಫಾಲ್ಕನ್ ಹಾಗೂ ಐಕಾನ್ ಎಂಬ 3 ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮಾರಾಟಕ್ಕೆ ಚಾಲನೆ ನೀಡಿದೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್‌‌ಗಿಂತಲೂ ಉತ್ತಮ ಮೈಲೇಜ್ ನೀಡುತ್ತೆ ಬೆನ್ಲಿಂಗ್ ಔರಾ

ಹೀಗಾಗಿ ಬೆನ್ಲಿಂಗ್ ಭಾರತದಲ್ಲಿ ಮೂರು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಯೋಜಿಸಿರುವ ಬೆನ್ಲಿಂಗ್ ಸಂಸ್ಥೆಯ ವ್ಯಾಪಕ ಶ್ರೇಣಿಯೊಂದಿಗೆ ಅಧಿಕ ಸಂಖ್ಯೆಯ ಗ್ರಾಹಕರನ್ನು ಹೊಂದಿದ್ದು, ಸದ್ಯಕ್ಕೆ ಅಸೆಂಬ್ಲಿ ಬಿಡಿ ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಂಡು ಇಲ್ಲಿ ಮಾರಾಟ ಮಾಡುತ್ತಿದೆ.

ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್‌‌ಗಿಂತಲೂ ಉತ್ತಮ ಮೈಲೇಜ್ ನೀಡುತ್ತೆ ಬೆನ್ಲಿಂಗ್ ಔರಾ

ಒಂದು ವೇಳೆ ಸ್ಥಳೀಯವಾಗಿ ಬೀಡಿಭಾಗಗಳ ಬಳಕೆಯೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಉತ್ಪನ್ನಗಳನ್ನು ಮಾರಾಟ ಮಾಡಿದ್ದಲ್ಲಿ ಸ್ಕೂಟರ್ ಬೆಲೆ ಇಳಿಕೆ ಸಹಕಾರಿಯಾಗಲಿದ್ದು, ಆಕರ್ಷಕ ಬೆಲೆಗಳಲ್ಲಿ ಅಧಿಕ ಸಂಖ್ಯೆಯ ಗ್ರಾಹಕರನ್ನು ಸೆಳೆಯಲಿದೆ.

Most Read Articles

Kannada
English summary
Benling Aura Electric Scooter Launching In September: Will Rival The Ather 450 In India.
Story first published: Sunday, August 25, 2019, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X