Just In
Don't Miss!
- Lifestyle
ಶನಿವಾರದ ದಿನ ಭವಿಷ್ಯ 07-12-2019
- News
Jharkhand Assembly Elections 2019 Polling LIVE : 2ನೇ ಹಂತದ ಮತದಾನ ಅಪ್ಡೇಟ್ಸ್
- Sports
ಭಾರತ vs ವೆಸ್ಟ್ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ
- Finance
ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Technology
ಡಿಲೀಟ್ ಆಗಿರುವ ವಾಟ್ಸ್ ಆಪ್ ಮೆಸೇಜ್ ನ್ನು ರಿಕವರ್ ಮಾಡುವುದು ಹೇಗೆ?
- Movies
Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
2020ರಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಬ್ಲಾಕ್‍ಸ್ಮಿತ್ ಬಿ3 ಎಲೆಕ್ಟ್ರಿಕ್ ಸ್ಕೂಟರ್
ಬ್ಲಾಕ್‍ಸ್ಮಿತ್ ಎಲೆಕ್ಟ್ರಿಕ್ ಮೋಟರ್ ಕಂಪನಿಯ ನೂತನ ಬಿ3 ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿಯು ಬಹಿರಂಗವಾಗಿದೆ. ಮುಂದಿನ ವರ್ಷ 2020ರಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದ್ದು, ಬಿ2 ಸ್ಕೂಟರ್ ಅನ್ನು ಆಧರಿಸಿ ತಯಾರಿಸುವ ಬಿ3 ಸ್ಖೂಟರ್ ಮಾಹಿತಿಯನ್ನು ಅಧಿಕೃತವಾಗಿ ಈ ವರ್ಷದ ಅಂತ್ಯದೊಳಗೆ ಬಹಿರಂಗಪಡಿಸುತ್ತಾರೆ.

ಬ್ಲಾಕ್‍ಸ್ಮಿತ್ ಚೆನ್ನೈ ಮೂಲದ ಎಲೆಕ್ಟ್ರಿಕ್ ವಾಹನಗಳ ಸಂಸ್ಥೆಯಾಗಿದ್ದು, ಈ ಸಂಸ್ಥೆಯು 2003 ರಿಂದ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆ ಹೇಳುವ ಪ್ರಕಾರ ಸುದೀರ್ಘ 15 ವರ್ಷಗಳ ಕಾಲ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸಂಶೋಧನೆಯನ್ನು ನಡೆಸಿದೆ. ಬ್ಲಾಕ್‍ಸ್ಮಿತ್ ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ಸಂಸ್ಥೆ, ಆದರೆ ಎಲೆಕ್ಟಿಕ್ ವಾಹನಗಳನ್ನು ಇಲ್ಲಿವರೆಗೂ ಬಿಡುಗಡೆಗೊಳಿಸಿಲ್ಲ.

ಬ್ಲಾಕ್‍ಸ್ಮಿತ್ ಸಂಸ್ಥೆಯು ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ, ಬಿ2 ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಜುಲೈ 1 ರಂದು ಮಾಹಿತಿಯನ್ನು ಬಹಿರಂಗಪಡಿಸಿದ್ದರು, ಅಷ್ಟರಲ್ಲೇ ಸಂಸ್ಥೆಯ ಇನ್ನೋಂದು ಸ್ಕೂಟರ್ ಮಾಹಿತಿ ಕೂಡ ಬಹಿರಂಗವಾಗುತ್ತಿದೆ.

ರೆಟ್ರೂ ಲುಕ್ ಅನ್ನು ಹೊಂದಿರುವ ಬಿ3 ಸ್ಕೂಟರ್ ಆಕರ್ಷಕವಾಗಿದ್ದು, ಸ್ಕೂಟರ್ ವಿನ್ಯಾಸವು ಯುರೋಪಿನಲ್ಲಿ ಮಾರಾಟವಾಗುತ್ತಿರುವ ವೆಸ್ಪಾ ಸ್ಕೂಟರ್ ಶೈಲಿಯಲ್ಲಿದೆ. ಮುಂಭಾಗದಲ್ಲಿ ವಿಂಡ್ ಸ್ಕ್ರೀನ್ ಮತ್ತು ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಹೊಂದಿದೆ.

ಸ್ಕೂಟರ್ ಕೆಳ ಭಾಗದಲ್ಲಿ ಎರಡು ಕಡೆ ಟರ್ನ್ ಸಿಗ್ನಲ್ ಹೊಂದಿದ್ದು, ಹಳೇ ಕಾಲದ ಲೆಜೆಂಡ್ ಸ್ಕೂಟರ್ ಶೈಲಿಯಲ್ಲಿ ಅಫ್ ಫ್ರಂಟ್ ಮಡ್ಗಾಡ್ ಹೊಂದಿದೆ. ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಎಲ್ಇಡಿ ಇಂಡಿಕೇಟರ್ ಅಳವಡಿಸಿದೆ.

ಸ್ಕೂಟರ್ ಪ್ರೀಮಿಯಂ ಲುಕ್ ತಕ್ಕಂತೆ ಉತ್ತಮ ಕ್ಷಮತೆಯನ್ನು ಹೊಂದಿದೆ. 5 ಕೆಡಬ್ಲ್ಯು ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ 6.7 ಬಿಎಚ್‍ಪಿ ಪವರ್ ಉತ್ಪಾದಿಸುತ್ತದೆ, ಪೀಕ್ ಪವರ್ 14.5 ಕೆಡಬ್ಲ್ಯು ಮತ್ತು 19.4 ಬಿಎಚ್‍ಪಿ ಟಾರ್ಕ್ ಉತ್ಪಾದಿಸುವ ಗುಣ ಹೊಂದಿದೆ. ಸಂಸ್ಥೆ ಹೇಳುವಂತೆ ಬಿ3 ಸ್ಕೂಟರ್ ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ವೇಗವನ್ನು ವಿಭಿನ್ನ ಮೂಡ್ ಗಳ ಮೂಲಕ ಸೀಮಿತಗೊಳಿಸುವ ಸಾಧ್ಯತೆಗಳಿವೆ.

ಸ್ಕೂಟರ್ ಬ್ಯಾಟರಿ ಸಾಮರ್ಥ್ಯದ ಕುರಿತು ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಒಂದು ಬಾರಿ ಸಂಪೂರ್ಣ ಜಾರ್ಜ್ ಮಾಡಿದರೆ 120 ಕಿ.ಮೀ ಮೈಲೇಜ್ ನಿಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದರಲ್ಲಿ ಜಿಪಿಎಸ್ ಹಾಗೂ ಟ್ರಾಫಿಕ್ ಇಂಡಿಕೇಟರ್ ಹೊಂದಿದ್ದು, ಇದು ಟ್ರಾಫಿಕ್ ಸೂಚನೆಗಳನ್ನು ನೀಡುತ್ತದೆ. ಬ್ಯಾಟರಿ ಸ್ವಾಪ್ ಫೀಚರ್ ಸಹ ಬ್ಲಾಕ್‍ಸ್ಮಿತ್ ಸ್ಕೂಟರ್ ನೀಡಲಿದೆ.

ಬ್ಲಾಕ್ ಸ್ಮಿತ್ ಸಂಸ್ಥೆಯು ದೀರ್ಘಕಾಲದವರೆಗೆ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿದ್ದು, ಇಲ್ಲಿಯವರೆಗೂ ಯಾವುದೇ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸಿಲ್ಲ. ಎಷ್ಟು ವರ್ಷಗಳ ಕಾಲ ಸಂಸ್ಥೆಯು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಹೊಸ ಬಿ2 ಮತ್ತು ಬಿ3 ಎಲೆಕ್ಟ್ರಿಕ್ ವಾಹನಗಳ ಬಿಡುಗಡೆ ಮಾಡುವ ಮೂಲಕ ಸಂಶೋಧನೆಗೆ ಫಲ ಸಿಕ್ಕಂತೆ ಆಗುತ್ತದೆ. ವರದಿಯ ಪ್ರಕಾರ 2020ರಲ್ಲಿ ಬಿಡುಗಡೆಯಾಗಲಿದ್ದು, ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ಸಂಸ್ಥೆಯ ಸ್ಕೂಟರ್ ಬಗ್ಗೆ ಎಲೆಕ್ಟ್ರಿಕ್ ಸ್ಕೂಟರ್ ಪ್ರಿಯರಿಗೆ ಕುತೂಹಲ ಮೂಡಿಸಿದೆ.