ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ಹೋಂಡಾ ಆಕ್ಟಿವಾ ಸ್ಕೂಟರಿನಲ್ಲಿ ಹೋಗುವಾಗ ಮೊಬೈಲ್‍‍ನಲ್ಲಿ ಮಾತನಾಡುತ್ತಿದ್ದ ಪಂಜಾಬಿನ ಪೊಲೀಸ್ ಅಧಿಕಾರಿಯೊಬ್ಬರು ಹೊಸ ಮೋಟಾರ್ ವಾಹನ ಕಾಯ್ದೆಯಡಿ ಭಾರೀ ಪ್ರಮಾಣದ ದಂಡವನ್ನು ತೆತ್ತಿದ್ದಾರೆ.

ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ಟ್ವಿಟರ್‍‍ನಲ್ಲಿ ಅಪ್‍‍ಲೋಡ್ ಮಾಡಿರುವ ವೀಡಿಯೊದಲ್ಲಿ ಕಾಣಿಸುವಂತೆ, ಚಂಡೀಗಢದ ಮಟ್ಕಾ ಚೌಕ್ ಬಳಿ ಹೋಂಡಾ ಆಕ್ಟಿವಾ ಸ್ಕೂಟರಿನಲ್ಲಿ ಹೋಗುವಾಗ ಈ ಪೊಲೀಸ್ ಅಧಿಕಾರಿಯು ನಿಯಮ ಉಲ್ಲಂಘಿಸಿ ಮೊಬೈಲ್‍‍ನಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು. ತಕ್ಷಣವೇ ಕಾರ್ಯಪ್ರವೃತ್ತರಾದ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಪೊಲೀಸರು, ಈ ತಪ್ಪಿತಸ್ಥ ಪೊಲೀಸ್ ಅಧಿಕಾರಿಗೆ ರೂ.10,000 ದಂಡ ವಿಧಿಸಿದ್ದಾರೆ.

ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ಜನ ಸಾಮಾನ್ಯರು ಸವಾರಿ/ಚಾಲನೆ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡಿದರೆ, ರೂ.5,000ಗಳ ದಂಡ ವಿಧಿಸಲಾಗುವುದು. ಆದರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಗಳು ಈ ನಿಯಮ ಉಲ್ಲಂಘಿಸಿದರೆ, ದುಪ್ಪಟ್ಟು ದಂಡವನ್ನು ವಿಧಿಸಲಾಗುತ್ತದೆ.

ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ಆದ ಕಾರಣ ಈ ಪೊಲೀಸ್ ಅಧಿಕಾರಿಗೆ ರೂ.10,000 ದಂಡ ವಿಧಿಸಲಾಗಿದೆ. ಈ ಪೊಲೀಸ್ ಅಧಿಕಾರಿ ಸವಾರಿ ಮಾಡುತ್ತಿದ್ದ ಹೋಂಡಾ ಆಕ್ಟಿವಾ ಸ್ಕೂಟರಿನ ವಿಮಾ ಅವಧಿ ಮೀರಿದೆ ಎಂದು ಟ್ವಿಟರ್ ಬಳಕೆದಾರರು ದೂರಿದ್ದಾರೆ. ಆದರೆ ಚಂಡೀಗಢ ಪೊಲೀಸರು ವಿಮೆಯ ಅವಧಿ ಮುಗಿದಿರುವ ಕಾರಣಕ್ಕೆ ಈ ಪೊಲೀಸ್ ಅಧಿಕಾರಿಗೆ ದಂಡ ವಿಧಿಸಿಲ್ಲ.

ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ವಾಹನ ಚಾಲನೆಯ ಸಮಯದಲ್ಲಿ ಸರಿಯಾದ ವಿಮೆಯನ್ನು ಹೊಂದಿರದಿದ್ದಲ್ಲಿ ಜನ ಸಾಮಾನ್ಯರಿಗೆ ರೂ.2,000 ದಂಡ ವಿಧಿಸಲಾಗುತ್ತದೆ. ಪೊಲೀಸ್ ಅಧಿಕಾರಿಗಳಿಗಾದರೆ ರೂ.4,000 ದಂಡ ವಿಧಿಸಲಾಗುವುದು.

ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ಚಂಡೀಗಢ ಪೊಲೀಸರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ವೀಡಿಯೊದಲ್ಲಿರುವ ಪೊಲೀಸ್ ಅಧಿಕಾರಿ ಸರಿಯಾದ ವಿಮೆಯನ್ನು ಹೊಂದಿರುವ ಸಾಧ್ಯತೆಗಳಿವೆ. ಆದ್ದರಿಂದ ದಂಡವನ್ನು ವಿಧಿಸಲಾಗಿಲ್ಲ. ಚಂಡೀಗಢದ ಮೂಲಕ ಹಾದುಹೋಗುವ ಇತರ ರಾಜ್ಯಗಳ ವಾಹನಗಳನ್ನು ತೀವ್ರವಾಗಿ ತಪಾಸಣೆ ಮಾಡಲಾಗುತ್ತದೆ.

ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ತಮ್ಮದೇ ಅಧಿಕಾರಿಗೆ ದಂಡ ವಿಧಿಸಲು ಸಹ ಚಂಡೀಗಢ ಪೊಲೀಸರು ಹಿಂದೆ ಮುಂದೆ ನೋಡುವುದಿಲ್ಲ. ತಲೆಯ ಮೇಲೆ ಟರ್ಬನ್ ಹೊಂದಿರುವ ಸಿಖ್ಖರಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಆದ ಕಾರಣ ಈ ಚಿತ್ರದಲ್ಲಿರುವ ಪೊಲೀಸ್ ಅಧಿಕಾರಿಯೂ ಹೆಲ್ಮೆಟ್ ಧರಿಸದೇ ಇದ್ದರೂ ದಂಡ ವಿಧಿಸಲಾಗಿಲ್ಲ.

MOST READ: ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದರೆ, ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ. ಈ ಹಿಂದೆಯೂ ಸಹ, ಚಂಡೀಗಢ ಪೊಲೀಸರು ಮಾಡಿಫೈ ಮಾಡಲಾದ ವಾಹನಗಳ ವಿರುದ್ಧ ವಿಶೇಷವಾದ ಕಾರ್ಯಾಚರಣೆಯನ್ನು ನಡೆಸಿದ್ದರು. ಮಾಡಿಫೈಗೊಂಡ ಎಕ್ಸಾಸ್ಟ್ ಹೊಂದಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಹಾಗೂ ಕಾರುಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು.

MOST READ: ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ಜಾರ್ಖಂಡಿನ ರಾಂಚಿಯಲ್ಲಿರುವ ಟ್ರಾಫಿಕ್ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರಿಗೆ ಮೋಟಾರು ವಾಹನ ಕಾಯ್ದೆಯಡಿ ದೊಡ್ಡ ಮೊತ್ತದ ದಂಡವನ್ನು ವಿಧಿಸಲಾಗಿದೆ. ಅವರಿಗೆ ರೂ.34,000 ದಂಡ ವಿಧಿಸಲಾಗಿದೆ. ಇದು ಹೊಸ ನಿಯಮಗಳ ಅಡಿಯಲ್ಲಿ ಯಾವುದೇ ಪೊಲೀಸರಿಗೆ ವಿಧಿಸಲಾದ ಭಾರೀ ಪ್ರಮಾಣದ ದಂಡವಾಗಿದೆ.

MOST READ: ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ರಾಕೇಶ್ ಕುಮಾರ್ ಎಂಬ ಪೊಲೀಸ್ ಕಾನ್ಸ್ ಸ್ಟೇಬಲ್, ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುವಾಗ, ಅವರನ್ನು ರಾಂಚಿ ಪೊಲೀಸರು ತಡೆದಿದ್ದಾರೆ. ಅವರ ಹಿಂಬದಿಯಲ್ಲಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪರಮೇಶ್ವರ್ ರೈ ಕೂಡ ಹೆಲ್ಮೆಟ್ ಧರಿಸಿರಲಿಲ್ಲ.

ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ಹೊಸ ಮೋಟಾರು ವಾಹನ ಕಾಯ್ದೆಯ ಪ್ರಕಾರ, ಸವಾರ ಹಾಗೂ ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸಿರಬೇಕು. ಇದರ ಜೊತೆಗೆ, ಕಾನ್‌ಸ್ಟೆಬಲ್ ರಾಕೇಶ್ ಕುಮಾರ್ ಅವರು ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಹಾಗೂ ಬೇರೆ ದಾಖಲೆಗಳನ್ನು ಹೊಂದಿಲ್ಲದೇ ಇರುವುದು ಕಂಡು ಬಂದಿದೆ.

ರೂಲ್ಸ್ ಬ್ರೇಕ್ ಮಾಡಿದ ಪೊಲೀಸಪ್ಪನಿಗೂ ಬಿತ್ತು ಭಾರೀ ದಂಡ..!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಂಚಿ ಸಂಚಾರಿ ವಿಭಾಗದ ಪೊಲೀಸ್ ಸೂಪರಿಂಟೆಂಡ್ ಅಜಿತ್ ಪೀಟರ್ ಡಂಗ್‍‍ಡಂಗ್‍‍ರವರು, ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದ ಪೊಲೀಸ್ ಕಾನ್ಸ್ ಸ್ಟೇಬಲ್ ಅವರನ್ನು ತಡೆದು ಡ್ರೈವಿಂಗ್ ಲೈಸೆನ್ಸ್, ಎಮಿಷನ್ ಸರ್ಟಿಫಿಕೇಟ್ ಹಾಗೂ ವಾಹನಕ್ಕೆ ಸಂಬಂಧಪಟ್ಟ ಇತರ ದಾಖಲೆಗಳನ್ನು ಕೇಳಿದಾಗ, ಅವುಗಳ ಪೈಕಿ ಯಾವ ದಾಖಲೆಯನ್ನು ಅವರು ನೀಡಲಿಲ್ಲವಾದ ಕಾರಣ ದಂಡ ವಿಧಿಸಲಾಯಿತು ಎಂದು ಹೇಳಿದ್ದಾರೆ.

Source: Meena Chaudhary/Twitter

Most Read Articles

Kannada
English summary
Cop fine Rs. 10,000 for talking on mobile phone while riding a Honda Activa - Read in kannada
Story first published: Monday, September 9, 2019, 16:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X