ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ದಟ್ಸನ್ ಕಂಪನಿಯು ತನ್ನ ಗೊ ಹಾಗೂ ಗೊ ಪ್ಲಸ್ ಕಾರುಗಳ ಸಿವಿಟಿ ಆಟೋಮ್ಯಾಟಿಕ್ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ದೇಶಾದ್ಯಂತವಿರುವ ದಟ್ಸನ್ ಡೀಲರ್‍‍ಗಳು ರೂ.11,000 ಹಣ ಪಡೆದು ಈ ಕಾರುಗಳ ಪ್ರಿ ಬುಕ್ಕಿಂಗ್‍‍ಗಳನ್ನು ಶುರುಮಾಡಿದ್ದಾರೆ.

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಎರಡೂ ಮಾದರಿಗಳಲ್ಲಿನ ಸಿವಿಟಿ ಆಯ್ಕೆಗಳನ್ನು ಟಿ ಹಾಗೂ ಟಿ (ಒ) ಎಂಬ ಎರಡು ಟ್ರಿಮ್‌ಗಳಲ್ಲಿ ಮಾರಾಟ ಮಾಡಲಾಗುವುದು. ಬಿಡುಗಡೆಯಾದಾಗ ಗೊ ಹಾಗೂ ಗೊ ಪ್ಲಸ್ ಆಟೋಮ್ಯಾಟಿಕ್ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಡಿಮೆ ಬೆಲೆಯ ಸಿವಿಟಿ ಕಾರುಗಳು ಎಂಬ ಹೆಗ್ಗಳಿಕೆಯನ್ನು ಹೊಂದಲಿವೆ.

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಎರಡೂ ಮಾದರಿಗಳಲ್ಲಿರುವ ಸಿವಿಟಿ ಟ್ರಾನ್ಸ್ ಮಿಷನ್ ಅನ್ನು ದಟ್ಸನ್‌ನ ಮೂಲ ಕಂಪನಿಯಾದ ನಿಸ್ಸಾನ್‍‍ನ ಮೈಕ್ರಾ ಹ್ಯಾಚ್‌ಬ್ಯಾಕ್‌ನಿಂದ ಪಡೆಯಲಾಗಿದೆ. ಈ ಎರಡೂ ಮಾದರಿ ಕಾರುಗಳನ್ನು 2019ರ ಅಕ್ಟೋಬರ್‍‍ನಿಂದ ಭಾರತದಲ್ಲಿ ಜಾರಿಗೆ ಬರಲಿರುವ ಕ್ರ್ಯಾಶ್ ಪ್ರೊಟೆಕ್ಷನ್ ಮಾನದಂಡಗಳಿಗೆ ಅನುಸಾರವಾಗಿ ಅಭಿವೃದ್ಧಿ ಪಡಿಸಲಾಗಿದೆ.

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಎರಡೂ ಮಾದರಿಯ ಕಾರುಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು, ಸೈಡ್ ಕ್ರ್ಯಾಶ್ ಹಾಗೂ ಪೆಡೆಸ್ಟ್ರಿಯನ್ ಪ್ರೊಟೆಕ್ಷನ್‍‍‍ನಂತಹ ಫೀಚರ್‍‍ಗಳನ್ನು ಸೇರಿಸಲಾಗಿದೆ. ಎರಡೂ ಮಾದರಿಗಳು ಈಗ ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ ಅನ್ನು ಹೊಂದಿವೆ.

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಮ್ಯಾನುವಲ್ ಟ್ರಾನ್ಸ್ ಮಿಷನ್ ಮಾದರಿಗಳಿಗಿಂತ ವಿಭಿನ್ನವಾಗಿರಲು ಗೊ ಹಾಗೂ ಗೊ ಪ್ಲಸ್ ಆಟೋಮ್ಯಾಟಿಕ್ ಕಾರುಗಳ ಟೈಲ್‌ಗೇಟ್‌ನಲ್ಲಿ ಸಿವಿಟಿ ಬ್ಯಾಡ್ಜ್ ಅನ್ನು ಅಳವಡಿಸಲಾಗಿದೆ. ಸಿವಿಟಿ ಮಾದರಿಯ ಕಾರುಗಳು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಕಾರುಗಳಿಗೆ ಹೋಲಿಸಿದರೆ ಯಾವುದೇ ಎಕ್ಸ್ ಟಿರಿಯರ್ ಅಥವಾ ಇಂಟಿರಿಯರ್ ಬದಲಾವಣೆಗಳನ್ನು ಹೊಂದಿಲ್ಲ.

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಸಿವಿಟಿ ಮಾದರಿಯ ಕಾರುಗಳು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ ಕಾರಣಕ್ಕೆ ಮ್ಯಾನುವಲ್ ಟ್ರಾನ್ಸ್ ಮಿಷನ್ ಮಾದರಿಯ ಕಾರುಗಳಿಗಿಂತ 23 ಕೆ.ಜಿ ಹೆಚ್ಚು ತೂಕವನ್ನು ಹೊಂದಿವೆ. ಗೊ ಹಾಗೂ ಗೊ ಪ್ಲಸ್ ಸಿವಿಟಿ ಕಾರುಗಳು, ಮ್ಯಾನುವಲ್ ಟ್ರಾನ್ಸ್ ಮಿಷನ್ ಮಾದರಿಯ ಕಾರುಗಳಲ್ಲಿರುವಂತಹ ಎಂಜಿನ್ ಹೊಂದಿವೆ.

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ಗೆ ಹೊಂದಿಕೆಯಾಗುವಂತೆ ಈ ಎಂಜಿನ್ ಅನ್ನು ರಿ ಟ್ಯೂನ್ ಮಾಡಲಾಗಿದೆ. ಮ್ಯಾನುವಲ್ ಮಾದರಿಯಲ್ಲಿರುವ 1.2 ಲೀಟರಿನ, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ 68 ಬಿಹೆಚ್‌ಪಿ ಪವರ್ ಹಾಗೂ 104 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಆಟೋಮ್ಯಾಟಿಕ್ ಮಾದರಿಯಲ್ಲಿರುವ ಎಂಜಿನ್ 6000 ಆರ್‌ಪಿಎಂನಲ್ಲಿ 77.5 ಬಿಹೆಚ್‌ಪಿ ಪವರ್ ಹಾಗೂ 4400 ಆರ್‌ಪಿಎಂನಲ್ಲಿ 104 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಮಾರುಕಟ್ಟೆಯಲ್ಲಿರುವ ಇತರ ಮಾದರಿಯ ಕಾರುಗಳಲ್ಲಿರುವ ಎಎಂಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ಗಳಿಗೆ ಹೋಲಿಸಿದರೆ ಹೆಚ್ಚಿನ ಪವರ್ ಡೆಲಿವರಿ ಹಾಗೂ ಫ್ಯೂಯಲ್ ಎಫಿಶಿಯನ್ಸಿ ಹೊಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಎರಡೂ ಮಾದರಿಗಳಲ್ಲಿ ಸಿವಿಟಿ ಟ್ರಾನ್ಸ್ ಮಿಷನ್ ಸ್ಮೂಥ್ ಪರ್ಫಾಮೆನ್ಸ್ ನೀಡುವ ಸಾಧ್ಯತೆಗಳಿವೆ. ಆದರೆ ಎಎಂಟಿ ಟ್ರಾನ್ಸ್ ಮಿಷನ್‍‍ಗಳಿಗೆ ಹೋಲಿಸಿದರೆ ಸಿವಿಟಿ ದುಬಾರಿಯಾಗಿದೆ. ಮಾದರಿಗಳು ಇನ್ನೂ ಬಿ‍ಎಸ್ 4 ಎಂಜಿನ್‍‍ಗಳನ್ನು ಹೊಂದಿವೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ದಟ್ಸನ್ ಕಂಪನಿಯು ಬಿಎಸ್ 6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳುವ ಎಂಜಿನ್‍‍ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ. ಹೊಸ ಬಿ‍ಎಸ್ 6 ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಬಿಡುಗಡೆಯಾದ ನಂತರ ದಟ್ಸನ್ ಗೊ ಸಿವಿಟಿ, ಮಾರುತಿ ವ್ಯಾಗನ್ಆರ್, ಹ್ಯುಂಡೈ ಸ್ಯಾಂಟ್ರೊ ಹಾಗೂ ಟಾಟಾ ಟಿಯಾಗೊ ಆಟೋಮ್ಯಾಟಿಕ್ ಮಾದರಿ ಕಾರುಗಳಿಗೆ ಪೈಪೋಟಿ ನೀಡಲಿದೆ.

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಎಎಂಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಒಳಗೊಂಡಿರುವ ಬೇರೆ ಕಂಪನಿಯ ಕಾರುಗಳಿಗೆ ಹೋಲಿಸಿದರೆ, ದಟ್ಸನ್ ಗೊ ಉತ್ತಮವಾದ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಈ ಸೆಗ್‍‍ಮೆಂಟಿನ ಏಕೈಕ ಪ್ರತಿಸ್ಪರ್ಧಿಯಾದ ರೆನಾಲ್ಟ್ ಟ್ರೈಬರ್ ಕಾರಿಗೆ ಡಾಟ್ಸನ್ ಗೊ ಪ್ಲಸ್ ಪೈಪೋಟಿ ನೀಡುತ್ತದೆ.

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಟ್ರೈಬರ್ ಎಂಪಿವಿ ಯನ್ನು ಸದ್ಯಕ್ಕೆ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ. ರೆನಾಲ್ಟ್ ಕಂಪನಿಯು ಶೀಘ್ರದಲ್ಲೇ ಟ್ರೈಬರ್‌ ಕಾರಿನಲ್ಲಿ ಎಎಂಟಿ ಟ್ರಾನ್ಸ್ ಮಿಷನ್ ಅಳವಡಿಸಿ ಬಿಡುಗಡೆಗೊಳಿಸಲಿದೆ. ಎರಡೂ ಮಾದರಿಗಳ ಸಿವಿಟಿ ಮಾದರಿಯ ಕಾರುಗಳ ಬೆಲೆಗಳು, ಮಾರುಕಟ್ಟೆಯಲ್ಲಿರುವ ಟಾಪ್ ಮಾದರಿಯ ಕಾರಿನ ಬೆಲೆಗಿಂತ ರೂ.60,000 ಹೆಚ್ಚಾಗುವ ಸಾಧ್ಯತೆಗಳಿವೆ.

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಟ್ಸನ್ ಎರಡೂ ಮಾದರಿಯ ಕಾರುಗಳನ್ನು ಸಿವಿಟಿ ಮಾದರಿಯಲ್ಲಿ ಬಿಡುಗಡೆಗೊಳಿಸುತ್ತಿದೆ.

ಶುರುವಾಯ್ತು ದಟ್ಸನ್ ಸಿವಿಟಿ ಕಾರುಗಳ ಬುಕ್ಕಿಂಗ್

ಎರಡೂ ಮಾದರಿಗಳಲ್ಲಿ ಸಿವಿಟಿ ಟ್ರಾನ್ಸ್ ಮಿಷನ್ ನೀಡುವ ಮೂಲಕ ಕಂಪನಿಯು ತನ್ನ ಪ್ರತಿಸ್ಪರ್ಧಿ ಕಂಪನಿಗಳಿಗಿಂತ ಮುಂದಿದೆ. ಈ ಸೆಗ್‍‍ಮೆಂಟಿನಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ ಗೊ ಹಾಗೂ ಗೊ ಪ್ಲಸ್ ಕಾರುಗಳನ್ನು ಬಿಡುಗಡೆಗೊಳಿಸುವ ಮೂಲಕ ಕಂಪನಿಯು ಮೇಲುಗೈ ಸಾಧಿಸಿದೆ.

Most Read Articles

Kannada
Read more on ದಟ್ಸನ್ datsun
English summary
Datsun GO and GO+ CVT Bookings Started: Launch Expected Soon - Read in Kannada
Story first published: Saturday, September 28, 2019, 17:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X