ಹತ್ತನೇ ಬಾರಿ ಪ್ರಶಸ್ತಿ ಬಾಚಿಕೊಂಡ ಡುಕಾಟಿ

2019ರ ಇಐಸಿಎಂಎನಲ್ಲಿ ಡುಕಾಟಿ ಸ್ಟ್ರೀಟ್‍‍ಫೈಟರ್ ವಿ4 ಬೈಕ್ ಪ್ರತಿಷ್ಠಿತ 'ಮೋಸ್ಟ್ ಬ್ಯೂಟಿಫೂಲ್ ಬೈಕ್ ಆಫ್ ದಿ ಶೋ' ಎಂಬ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಂತರರಾಷ್ಟ್ರೀಯ ಮೋಟಾರು ಶೋವನ್ನು ವೀಕ್ಷಿಸಲು ಬಂದ ಸಾಮಾನ್ಯ ಜನರು ಮತ ಚಲಾಯಿಸಿದ್ದಾರೆ. ಡುಕಾಟಿ ಸಂಸ್ಥೆಯು ಹತ್ತನೇ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಹತ್ತನೇ ಬಾರಿ ಪ್ರಶಸ್ತಿ ಬಾಚಿಕೊಂಡ ಡುಕಾಟಿ

ಇಟಾಲಿಯನ್ ಮೋಟಾರ್‍‍ಸೈಕಲ್ ಮ್ಯಾಗಜಿನ್ ಮೊಟೊಸಿಕ್ಲಿಸ್ಮೊ ಮತ್ತು ಇಐಸಿಎಂಎ ಸಹಯೋಗದೊಂದಿಗೆ ಒಟ್ಟುಗೂಡಿಸಿದ ವೋಟ್ ಅಂಡ್ ವಿನ್ ದಿ ಮೋಸ್ಟ್ ಬ್ಯುಟಿ‍‍ಫುಲ್ ಬೈಕ್ ಅಫ್ ದಿ ಶೋ ಸ್ಪರ್ಧೆಯು ಈ ವರ್ಷ ತನ್ನ ಹದಿನೈದನೇ ಆವೃತ್ತಿಯನ್ನು ಆಚರಿಸಿತು.

ಹತ್ತನೇ ಬಾರಿ ಪ್ರಶಸ್ತಿ ಬಾಚಿಕೊಂಡ ಡುಕಾಟಿ

14,500ಕ್ಕೂ ಹೆಚ್ಚು ಬೈಕು ಪ್ರಿಯರು ಡುಕಾಟಿ ಸ್ಟ್ರೀಟ್‍‍ಫೈಟರ್ ವಿ4 ಬೈಕಿಗೆ ಮತ ಚಲಾಯಿಸಿದರು. ಮೋಟಾರು ಶೋನ ಸಂದರ್ಶಕರು ಮತ್ತು ಮೊಟೊಸಿಕ್ಲಿಸ್ಮೊ ವೆಬ್‍‍ಸೈಟ್‍‍ನ ಬಳಕೆದಾರರು ಕೂಡ ಮತ ಚಲಾಯಿಸಿದರು. ಹೊಸ ಡುಕಾಟಿ ಸ್ಟ್ರೀಟ್‍‍ಫೈಟರ್ ಶೇ.36.7 ಮತಗಳೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದೆ.

ಹತ್ತನೇ ಬಾರಿ ಪ್ರಶಸ್ತಿ ಬಾಚಿಕೊಂಡ ಡುಕಾಟಿ

ಪ್ರದರ್ಶನದ ಕೊನೆಯ ದಿನವಾದ ನವೆಂಬರ್ 10ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ನಂತರ ಅಧಿಕೃತ ಸಮಾರಂಭಗಳು ನಡೆಯಿತು. ಸಮಾರಂಭದಲ್ಲಿ ಇ‍ಐಸಿಎಂಎನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಜಿಯಾಕೊಮೊ ಕಾಸಾರ್ಟಿನಲ್ಲಿ ಮತ್ತು ಮೊಟೊಕ್ಲಿಸ್ಮೊದ ಪ್ರಧಾನ ಸಂಪಾದಕ ಫೆಡರಿಕೊ ಅಲಿವರ್ಟಿರವರು ಭಾಗವಹಿಸಿದ್ದರು.

ಹತ್ತನೇ ಬಾರಿ ಪ್ರಶಸ್ತಿ ಬಾಚಿಕೊಂಡ ಡುಕಾಟಿ

ಡುಕಾಟಿಯ ಡಿಸೈನ್ ಸೆಂಟರ್ ಡೈರಕ ಅಂರಾದ ಆಂಡ್ರಿಯಾ ಫೆರಾರೆಸಿರವರು ಮಾತನಾಡಿ ಎಲ್ಲಾ ತಯಾರಕರು ತಮ್ಮ ಪ್ರಮುಖ ಮಾದರಿಗಳೊಂದಿಗೆ ಭಾಗವಹಿಸಿದ್ದರು, ಸ್ಪರ್ಧೆಯಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ನಾವು ಹೆಮ್ಮೆಪಡುತ್ತೇವೆ ಮತ್ತು ವಿಶ್ವದ ಪ್ರಮುಖ ದ್ವಿಚಕ್ರ ಮೇಳವಾದ ಇಐ‍ಸಿಎಂಎ ಸಾರ್ವಜನಿಕರು ಸ್ಟ್ರೀಟ್‍‍ಫೈಟರ್ ವಿ4 ಬೈಕ್ ಅನ್ನು ಆಯ್ಕೆ ಮಾಡಿದ್ದಾರೆ.

ಹತ್ತನೇ ಬಾರಿ ಪ್ರಶಸ್ತಿ ಬಾಚಿಕೊಂಡ ಡುಕಾಟಿ

"ಮೋಸ್ಟ್ ಬ್ಯೂಟಿಫುಲ್ ಬೈಕ್ ಆಫ್ ದಿ ಶೋ" ಎಂಬ ಮೇಳಕ್ಕೆ 5 ಲಕ್ಷಕ್ಕೂ ಹೆಚ್ಚು ಸಂದರ್ಶಕರು ಆಗಮಿಸಿದ್ದಾರೆ. ಒಂದು ವಾರದವರೆಗೆ ಈ ಮೋಟಾರ್ ಶೋ ನಡೆದಿದೆ. ಕಳೆದ ಬಾರಿಯ ಮೋಟಾರ್ ಶೋಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂದರ್ಶಕರು ಆಗಮಿಸಿದ್ದಾರೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹತ್ತನೇ ಬಾರಿ ಪ್ರಶಸ್ತಿ ಬಾಚಿಕೊಂಡ ಡುಕಾಟಿ

ಸ್ಟ್ರೀಟ್‌ಫೈಟರ್ ವಿ4ನ ಬೈಕಿನಲ್ಲಿ ಪ್ಯಾನಿಗಲ್ ವಿ4 ಬೈಕಿನಲ್ಲಿರುವಂತಹ 1,103 ಸಿಸಿ ಡೆಸ್ಮೋಸೆಡಿಸಿ ಸ್ಟ್ರಾಡೇಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 12,750 ಆರ್‌ಪಿಎಂನಲ್ಲಿ 208 ಬಿಹೆಚ್‌ಪಿ ಪವರ್ ಹಾಗೂ 11,500 ಆರ್‌ಪಿಎಂನಲ್ಲಿ 123 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹತ್ತನೇ ಬಾರಿ ಪ್ರಶಸ್ತಿ ಬಾಚಿಕೊಂಡ ಡುಕಾಟಿ

ಡುಕಾಟಿ ಪ್ಯಾನಿಗಲೆ ವಿ 2, 2020ರ ಪ್ಯಾನಿಗಲೆ ವಿ 4, ಮಲ್ಟಿಸ್ಟ್ರಾಡಾ 1260 ಎಸ್ ಗ್ರ್ಯಾಂಡ್ ಟೂರ್, ಡಯಾವೆಲ್ 1260 ಮತ್ತು ಡುಕಾಟಿ ಕೆಂಪು ಬಣ್ಣದ ಡಯಾವೆಲ್ 1260 ಎಸ್ ಬೈಕುಗಳನ್ನು ಇಐಸಿಎಂಎ ಮೋಟಾರ್ ಶೋನಲ್ಲಿ ಅನಾವರಣಗೊಳಿಸಲಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹತ್ತನೇ ಬಾರಿ ಪ್ರಶಸ್ತಿ ಬಾಚಿಕೊಂಡ ಡುಕಾಟಿ

ಹೊಸ ಸ್ಟ್ರೀಟ್‍‍ಫೈಟರ್ ವಿ4 ಬೈಕು ಆಕರ್ಷಕ ಲುಕ್ ಅನ್ನು ಹೊಂದಿದೆ. ಇಐಸಿಎಂಎನಲ್ಲಿ ಡುಕಾಟಿ ಸ್ಟ್ರೀಟ್ ಫೈಟರ್ ವಿ4 ಪ್ರತಿಷ್ಠಿತ 'ಮೋಸ್ಟ್ ಬ್ಯೂಟಿಫೂಲ್ ಬೈಕ್ ಆಫ್ ದಿ ಶೋ' ಎಂಬ ಪ್ರಶಸ್ತಿಯನ್ನು ಹತ್ತನೇ ಬಾರಿ ಗೆದ್ದುಗೊಂಡಿದೆ. ಡುಕಾಟಿ ಈ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಹೊಸ ಡುಕಾಟಿ ಸ್ಟ್ರೀಟ್ ಫೈಟರ್ ವಿ4 ಬೈಕ್ ಜನರ ಗಮನಸೆಳೆಯುವಲ್ಲಿ ಯಶ್ವಸಿಯಾಗಿದೆ.

Most Read Articles

Kannada
Read more on ಡುಕಾಟಿ ducati
English summary
Ducati Streetfighter V4 Wins Beauty Contest At EICMA 2019 - Read in Kannada
Story first published: Wednesday, November 13, 2019, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X