ಕೈಗೆಟಕುವ ಬೆಲೆಗಳಲ್ಲಿ ಎವೊಲೆಟ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳ ಬಿಡುಗಡೆ

ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ ಅಪ್ ಕಂಪನಿಯಾದ ರಿಸಾಲಾ ಎಲೆಕ್ಟ್ರಿಕ್ ಮೋಟಾರ್ಸ್ ಪ್ರೈ ಲಿ. ತನ್ನ ಮೊದಲ ಇ-ಸ್ಕೂಟರ್‍‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ಪೊಲೊ, ಡರ್ಬಿ ಹಾಗೂ ಪೊಲೊ ಪೊನಿ ಎಂಬ ಮೂರು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆ ಮಾಡಿದೆ. ಪೊಲೊ ಹಾಗೂ ಪೊಲೊ ಪೋನಿಗಳನ್ನು ತಲಾ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕೈಗೆಟಕುವ ಬೆಲೆಗಳಲ್ಲಿ ಎವೊಲೆಟ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳ ಬಿಡುಗಡೆ

ಪೊಲೊ ಸ್ಕೂಟರ್ ಅನ್ನು ಪೊಲೊ ಇ‍‍ಝಡ್ ಹಾಗೂ ಪೊಲೊ ಕ್ಲಾಸಿಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಪೊಲೊ ಇಝಡ್ ಇ-ಸ್ಕೂಟರಿನ ಬೆಲೆಯು ರೂ.34,499ಗಳಾಗಿದ್ದು, 48 ವಿ 24 ಎಹೆಚ್ ವಿಆರ್‍ಎಲ್ಎ ಬ್ಯಾಟರಿ ಪ್ಯಾಕ್ ಹೊಂದಿದೆ. 48 ವಿ 24 ಎಹೆಚ್ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿರುವ ಪೊಲೊ ಕ್ಲಾಸಿಕ್ ಇ-ಸ್ಕೂಟರಿನ ಬೆಲೆ ರೂ.54,499ಗಳಾಗಿದೆ. ಎವೊಲೆಟ್ ಡರ್ಬಿ ಹಾಗೂ ಪೊಲೊ ಪೋನಿ ಸ್ಕೂಟರ್‍‍ಗಳು ಡರ್ಬಿ ಇಝಡ್, ಪೊಲೊ ಪೋನಿ ಇಝಡ್, ಡರ್ಬಿ ಕ್ಲಾಸಿಕ್ ಹಾಗೂ ಪೊಲೊ ಪೋನಿ ಕ್ಲಾಸಿಕ್ ಎಂಬ ಮಾದರಿಗಳನ್ನು ಹೊಂದಿವೆ.

ಕೈಗೆಟಕುವ ಬೆಲೆಗಳಲ್ಲಿ ಎವೊಲೆಟ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳ ಬಿಡುಗಡೆ

ಪೊಲೊ ಪೋನಿ, ಎವೊಲೆಟ್ ಪೋಲೊನಲ್ಲಿರುವಂತಹ ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ ಪೋಲೊ ಪೋನಿ ಇಝಡ್‌‍‍ನಲ್ಲಿ 48 ವಿ 24 ಎಹೆಚ್ ವಿಆರ್‌ಎಲ್‌ಎ ಬ್ಯಾಟರಿ ಹಾಗೂ ಪೊಲೊ ಪೋನಿ ಕ್ಲಾಸಿಕ್‌ನಲ್ಲಿರುವ 48 ವಿ 24 ಎಹೆಚ್ ಲಿಥಿಯಂ ಐಯಾನ್ ಬ್ಯಾಟರಿಗಳಿರಲಿವೆ. ಪೊಲೊ ಪೋನಿ ಇಝಡ್ ಇ-ಸ್ಕೂಟರಿನ ಬೆಲೆ ರೂ.39,499ಗಳಾದರೆ, ಪೊಲೊ ಪೋನಿ ಕ್ಲಾಸಿಕ್ ಇ-ಸ್ಕೂಟರಿನ ಬೆಲೆ ರೂ.49,499ಗಳಾಗಿದೆ. ಎವೊಲೆಟ್ ಡರ್ಬಿ ಸ್ವಲ್ಪ ಹೆಚ್ಚು ಬಲಶಾಲಿಯಾದ ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ ಡರ್ಬಿ ಇಝಡ್‌ನಲ್ಲಿರುವಂತಹ 60 ವಿ 30 ಎಹೆಚ್ ವಿಆರ್‌ಎಲ್‌ಎ ಬ್ಯಾಟರಿ ಇರಲಿದೆ.

ಕೈಗೆಟಕುವ ಬೆಲೆಗಳಲ್ಲಿ ಎವೊಲೆಟ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳ ಬಿಡುಗಡೆ

ಡರ್ಬಿ ಕ್ಲಾಸಿಕ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಡರ್ಬಿ ಇಝಡ್ ಬೆಲೆಯು ರೂ.46,499ಗಳಾದರೆ, ಡರ್ಬಿ ಕ್ಲಾಸಿಕ್ ಬೆಲೆ ರೂ.59,999ಗಳಾಗುತ್ತದೆ. ಈ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳ ಎಲ್ಲಾ ಮಾದರಿಗಳು ಒಂದೇ ರೇಂಜ್ ಹಾಗೂ ಟಾಪ್ ಸ್ಪೀಡ್ ಹೊಂದಿರಲಿವೆ. ಎಲ್ಲಾ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ 25 ಕಿ.ಮೀ ವೇಗದಲ್ಲಿ, 60 ಕಿ.ಮೀ ದೂರದವರೆಗೂ ಚಲಿಸುತ್ತವೆ. ಮೂರು ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಜೊತೆಗೆ, ಎವೊಲೆಟ್ ತನ್ನ ಮೊದಲ ಎಲೆಕ್ಟ್ರಿಕ್ ಕ್ವಾಡ್ ಬೈಕ್ ಅನ್ನು ಸಹ ಬಿಡುಗಡೆಗೊಳಿಸಿದೆ.

ಕೈಗೆಟಕುವ ಬೆಲೆಗಳಲ್ಲಿ ಎವೊಲೆಟ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳ ಬಿಡುಗಡೆ

ಎವೊಲೆಟ್ ವಾರಿಯರ್ ಕ್ವಾಡ್ ಬೈಕಿನ ಬೆಲೆ ರೂ.1.40 ಲಕ್ಷಗಳಾಗಿದೆ. ಈ ಬೈಕ್ 72 ವಿ 40 ಎಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಹಾಗೂ 3 ಕಿ.ವ್ಯಾಟಿನ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಇವುಗಳನ್ನು ಹೊಂದಿರುವ ವಾರಿಯರ್ ಕ್ವಾಡ್ ಬೈಕ್‌ ಪ್ರತಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 50 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಕ್ವಾಡ್ ಬೈಕ್ ರಿವರ್ಸ್ ಗೇರ್ ಅನ್ನು ಸಹ ಹೊಂದಿದ್ದು, ಪ್ರತಿ ಗಂಟೆಗೆ 20 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ಕೈಗೆಟಕುವ ಬೆಲೆಗಳಲ್ಲಿ ಎವೊಲೆಟ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳ ಬಿಡುಗಡೆ

ಈ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿರವರು ಮಾತನಾಡಿ, ವಾಯು ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ನವೀಕರಿಸಬಹುದಾದ ಸಂಪನ್ಮೂಲ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಇಂಧನ ಆಧಾರಿತ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

ಪರಿಸರ ಹಾಗೂ ಮಾನವರ ಮೇಲೆ ಇಂಧನಗಳಿಂದ ಹಾನಿಯಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಂದಾಗುವ ಪ್ರಯೋಜನಗಳ ಬಗ್ಗೆ ಜನರು ತಿಳಿದಿರುವುದರಿಂದ ಇವುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಕೈಗೆಟಕುವ ಬೆಲೆಗಳಲ್ಲಿ ಎವೊಲೆಟ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳ ಬಿಡುಗಡೆ

ಶೀಘ್ರದಲ್ಲೇ ಭಾರತದಲ್ಲಿನ ವಾಯು ಮಾಲಿನ್ಯವು ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದರು. ರಿಸಾಲಾ ಎಲೆಕ್ಟ್ರಿಕ್ ಮೋಟಾರ್ಸ್ ಪ್ರೈ. ಲಿ ವಕ್ತಾರರಾದ ಪ್ರೇರಣಾ ಚತುರ್ವೇದಿರವರು ಮಾತನಾಡಿ, ನಾವು ಯಾವುದೇ ಅಧಿಕ ವೆಚ್ಚವಿಲ್ಲದ ಹಾಗೂ ಮಾರಾಟದ ನಂತರದ ಸೌಲಭ್ಯದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತೇವೆ. ಜನ ಸಾಮಾನ್ಯರಿಗೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಅರಿವು ಮೂಡಿಸಿ ಈ ವಾಹನಗಳ ಅಗತ್ಯವನ್ನು ತಿಳಿಸುತ್ತೇವೆ ಎಂದು ಹೇಳಿದರು.

ಕೈಗೆಟಕುವ ಬೆಲೆಗಳಲ್ಲಿ ಎವೊಲೆಟ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳ ಬಿಡುಗಡೆ

ಈ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಫೀಚರ್‍‍ಗಳ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಟಾಪ್ ಮಾದರಿಗಳು ಐಒಟಿ ಆಧಾರಿತವಾಗಿವೆ. ಇವು ಎವೊಲೆಟ್ ಅಪ್ಲಿಕೇಶನ್‌ ಮೂಲಕ ಸವಾರರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತವೆ. ಈ ಫೀಚರ್‍‍ಗಳಲ್ಲಿ ವಾಹನ, ಬ್ಯಾಟರಿಯ ಸ್ಥಿತಿ, ಜಿಪಿಎಸ್ ಹಾಗೂ ಸೆಕ್ಯೂರಿಟಿ ಟ್ರ್ಯಾಕಿಂಗ್‍‍ಗಳು ಸೇರಿವೆ. ಸ್ಕೂಟರ್‌ಗಳಿಗೆ ಸರ್ವಿಸ್ ಯಾವಾಗ ಮಾಡಿಸಬೇಕು ಎಂಬುದನ್ನು ಪರಿಶೀಲಿಸಲು ಅಪ್ಲಿಕೇಶನ್ ಬಳಸಬಹುದು. ಅದಕ್ಕಾಗಿ ಅಪಾಯಿಂಟ್‍‍ಮೆಂಟ್ ತೆಗೆದುಕೊಳ್ಳಬಹುದಾಗಿದೆ.

ಕೈಗೆಟಕುವ ಬೆಲೆಗಳಲ್ಲಿ ಎವೊಲೆಟ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳ ಬಿಡುಗಡೆ

ಕಂಪನಿಯು 3 ಗಂಟೆಗಳ ಒಳಗೆ ಬ್ಯಾಟರಿಗಳನ್ನು ಚಾರ್ಜ್ ಮಾಡುವ ಫಾಸ್ಟ್ ಚಾರ್ಜರ್‌ಗಳನ್ನು ಈ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ನೀಡಲಿದೆ. ಕಂಪನಿಯು ಸದ್ಯಕ್ಕೆ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೆಹಲಿ-ಎನ್‌ಸಿಆರ್, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಹರಿಯಾಣಗಳಲ್ಲಿ ಮಾತ್ರ ಮಾರಾಟ ಮಾಡಲಿದೆ. ಮುಂದಿನ ಎರಡು ತಿಂಗಳಲ್ಲಿ ದೇಶಾದ್ಯಂತ ಈ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯು ರೂ.39,000ಗಳಿಂದ ಆರಂಭವಾಗುತ್ತದೆ. ಟಾಪ್ ಎಂಡ್ ಸ್ಕೂಟರಿನ ಬೆಲೆಯು ರೂ.59,999ಗಳಾಗುತ್ತದೆ.

ಕೈಗೆಟಕುವ ಬೆಲೆಗಳಲ್ಲಿ ಎವೊಲೆಟ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳ ಬಿಡುಗಡೆ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎವೊಲೆಟ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಇವಿ ಕಂಪನಿಯು ಬಿಡುಗಡೆಗೊಳಿಸುತ್ತಿರುವ ಕಡಿಮೆ ವೇಗದ ಸ್ಕೂಟರ್‍‍ಗಳಾಗಿವೆ. ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ರೇಂಜಿನ, ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್‌ಗಳು ನಗರ ಪ್ರದೇಶಗಳಿಗೆ ಹೇಳಿ ಮಾಡಿಸಿದಂತಿವೆ.

Most Read Articles

Kannada
English summary
Evolet Electric Scooters Launched In India: Four New EVs With A Starting Price of Rs 39,000. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X