ಬಿಡುಗಡೆಗೊಂಡ ಜೆಮೊಪಾಯ್ ಎಲೆಕ್ಟ್ರಿಕ್ ಸ್ಕೂಟರ್

ದೆಹಲಿ ಮೂಲದ ಗೋರಿನ್ ಇ-ಮೊಬಿಲಿಟಿ ಹಾಗೂ ಚೀನಾ ಮೂಲದ ಒಪೈ ಜಂಟಿ ಸಹಭಾಗಿತ್ವದ ಜೆಮೊಪಾಯ್ ಎಲೆಕ್ಟ್ರಿಕ್ ಆಸ್ಟ್ರಿಡ್ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತ ಹಾಗೂ ನೇಪಾಳದಲ್ಲಿ ಬಿಡುಗಡೆಗೊಳಿಸಿದೆ. ದೇಶಾದ್ಯಂತವಿರುವ 50ಕ್ಕೂ ಹೆಚ್ಚು ಕಂಪನಿಯ ಡೀಲರ್‍‍ಗಳ ಬಳಿ ಈ ಸ್ಕೂಟರ್ ಅನ್ನು ಅಕ್ಟೋಬರ್ ಮೊದಲ ವಾರದಿಂದ ಮಾರಾಟ ಮಾಡಲಾಗುವುದು.

ಈ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆಯು ರೂ.79,999ಗಳಾಗಿದೆ. ಜೆಮೊಪಾಯ್ ಆಸ್ಟ್ರಿಡ್ ಲೈಟ್ ಬೈಕ್ ಅನ್ನು ಎಕ್ಲೆಕ್ಟಿಕ್ ನಿಯಾನ್, ಡೀಪ್ ಇಂಡಿಗೊ, ಬರ್ನ್ಟ್ ಚಾರ್ಕೊಲ್, ಫಿಯರಿ ರೆಡ್ ಹಾಗೂ ಫೈರ್‌ಬಾಲ್ ಆರೇಂಜ್ ಎಂಬ ಐದು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಸ್ಕೂಟರ್ ಸ್ಪೋರ್ಟ್, ಸಿಟಿ ಹಾಗೂ ಎಕಾನಮಿ ಎಂಬ ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿದೆ.

ಬಿಡುಗಡೆಗೊಂಡ ಜೆಮೊಪಾಯ್ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರಿನಲ್ಲಿರುವ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ, 75ರಿಂದ 90 ಕಿ.ಮೀವರೆಗೆ ಚಲಿಸಬಹುದು. ಹೆಚ್ಚುವರಿ ಬ್ಯಾಟರಿಯನ್ನು ಹೊಂದಿದ್ದರೆ, 150ರಿಂದ 180 ಕಿ.ಮೀವರೆಗೂ ಚಲಿಸಬಹುದು.

ಸ್ಪೋರ್ಟ್ಸ್ ಮೋಡ್‌ನಲ್ಲಿ, ಆಸ್ಟ್ರಿಡ್ ಲೈಟ್ ಸ್ಕೂಟರ್‌ 75 ಕಿ.ಮೀ ವೇಗದಲ್ಲಿ ಹಾಗೂ 18 ಡಿಗ್ರಿಗಳಷ್ಟು ಕ್ಲೈಂಬಿಂಗ್ ಡಿಗ್ರಿಯಲ್ಲಿ ಚಲಿಸುತ್ತದೆ. ಹೆಸರೇ ಸೂಚಿಸುವಂತೆ, ಸಿಟಿ ಮೋಡ್‍‍ನಲ್ಲಿ, ಪ್ರತಿದಿನದ ನಗರ ಪ್ರಯಾಣಕ್ಕಾಗಿ, ನಗರದ ರಸ್ತೆಗಳ ಮೂಲಕ ಹಾಗೂ ನಗರಗಳ ಟ್ರಾಫಿಕ್‍‍ನಲ್ಲಿ ಚಲಿಸಬಹುದಾಗಿದೆ.

ಎಕಾನಮಿ ಮೋಡ್‌ನಲ್ಲಿ, ಆಸ್ಟ್ರಿಡ್ ಲೈಟ್ ಉತ್ತಮವಾದ ದಕ್ಷತೆಯನ್ನು ನೀಡುತ್ತದೆ. ಪ್ರತಿ ಚಾರ್ಜ್‌ಗೆ ಗರಿಷ್ಠ 90 ಕಿ.ಮೀ ದೂರ ಚಲಿಸುತ್ತದೆ. ಆಕರ್ಷಕ ಬಣ್ಣವನ್ನು ಹೊಂದಿರುವುದರ ಜೊತೆಗೆ, ಆನ್ ಬೋರ್ಡ್ ಫೀಚರ್‍‍ಗಳು ಎಲ್ಇಡಿ ಕಲರ್ ಡಿಸ್‍‍ಪ್ಲೇ, ಎಲ್ಇಡಿ ಹೆಡ್‍‍ಲ್ಯಾಂಪ್ ಹಾಗೂ ಡಿಆರ್‍ಎಲ್‍‍ಗಳನ್ನು ಹೊಂದಿವೆ. ಸ್ಕೂಟರ್‌ನಲ್ಲಿ ಸುರಕ್ಷತಾ ಗ್ರಿಲ್ ಹಾಗೂ ಯುಎಸ್‌ಬಿ ಪೋರ್ಟ್ ಅಳವಡಿಸಲಾಗಿದೆ.

ಇದರಿಂದ ಈ ಸ್ಕೂಟರ್‍‍ನಲ್ಲಿ ಚಲಿಸುವವರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡಬಹುದು. ಆಸ್ಟ್ರಿಡ್ ಲೈಟ್ ಸ್ಕೂಟರಿನಲ್ಲಿ 10 ಇಂಚಿನ ಟ್ಯೂಬ್‌ಲೆಸ್ ಟಯರ್‌ಗಳನ್ನು ಅಳವಡಿಸಲಾಗಿದೆ. ಸೈಡ್ ಸ್ಟ್ಯಾಂಡ್ ಸೆನ್ಸಾರ್, ಆಂಟಿ ಥೆಫ್ಟ್ ಸೆನ್ಸಾರ್ ಹಾಗೂ ಎಲೆಕ್ಟ್ರಾನಿಕ್ ಅಸಿಸ್ಟ್ ಬ್ರೇಕ್ ಸಿಸ್ಟಂ ಈ ಸ್ಕೂಟರಿನಲ್ಲಿರುವ ಸುರಕ್ಷಾ ಫೀಚರ್‍‍ಗಳಾಗಿವೆ.

ಆಸ್ಟ್ರಿಡ್ ಲೈಟ್ ಸ್ಕೂಟರಿನಲ್ಲಿ 1.7 ಕಿ.ವ್ಯಾ.ನ ಹೊರ ತೆಗೆಯಬಹುದಾದ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಸ್ಕೂಟರ್ 2,400ವ್ಯಾಟ್‍‍ನ ಮೋಟಾರ್ ಹೊಂದಿದ್ದು, 4000ವ್ಯಾಟ್‍‍ನ ಗರಿಷ್ಠ ಪರ್ಫಾಮೆನ್ಸ್ ನೀಡುತ್ತದೆ.

8.5 ಕಿ.ಗ್ರಾಂ ತೂಕವನ್ನು ಹೊಂದಿರುವ ಬ್ಯಾಟರಿಯನ್ನು ಮನೆ ಹಾಗೂ ಕಚೇರಿಯಲ್ಲಿರುವ ಸಾಕೆಟ್‍‍ಗಳಲ್ಲಿ ಸುಲಭವಾಗಿ ಅಳವಡಿಸಿ ತೆಗೆಯಬಹುದು ಹಾಗೂ ಸುಲಭವಾಗಿ ಚಾರ್ಜ್ ಮಾಡಬಹುದು. ಬ್ರೇಕಿಂಗ್ ಕಾರ್ಯಗಳಿಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್‍‍ಗಳಿವೆ. ಸಸ್ಪೆಂಷನ್‍‍ಗಳಿಗಾಗಿ ಹೈಡ್ರಾಲಿಕ್ ಸಸ್ಪೆಂಷನ್‍‍ಗಳಿವೆ.

ಸಿಟಿ ಸ್ಕೂಟರ್‌ನಂತಿರುವ ಆಸ್ಟ್ರಿಡ್ ಲೈಟ್ ತನ್ನ ಆಕರ್ಷಕ ಬಣ್ಣದಿಂದ ಗಮನ ಸೆಳೆಯುತ್ತದೆ. ಹೊಸ ಬಗೆಯ ಫೀಚರ್‍‍ಗಳನ್ನು ಹೊಂದಿದ್ದು, ಅತ್ಯುತ್ತಮವಾದ ಪರ್ಫಾಮೆನ್ಸ್ ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‍‍ಗಾಗಿ ಸೆಪ್ಟೆಂಬರ್ 9ರಿಂದ ಬುಕ್ಕಿಂಗ್ ಆರಂಭಿಸಲಾಗಿದೆ.

ಭಾರತ ಹಾಗೂ ನೇಪಾಳದಲ್ಲಿರುವ ಡೀಲರ್‍‍‍ಗಳ ಬಳಿ ಜೆಮೊಪಾಯ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟ ಮಾಡಲಾಗುತ್ತದೆ. ಮಾರಾಟದ ನಂತರದ ಸರ್ವಿಸ್ ಅನ್ನು ಸಹ ನೀಡಲಾಗುತ್ತದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಎಲೆಕ್ಟ್ರಿಕ್, ಒಕಿನಾವಾ ಮುಂತಾದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Gemopai Astrid electric scooter launched in India - Read in kannada
Story first published: Tuesday, September 10, 2019, 18:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X