ಬಹಿರಂಗಗೊಂಡ ಸ್ಪ್ಲೆಂಡರ್ ಐಸ್ಮಾರ್ಟ್ ಸ್ಪೆಸಿಫಿಕೇಶನ್ ಮಾಹಿತಿ

ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ ಎಲ್ಲಾ ಬೈಕ್ ಹಾಗೂ ಸ್ಕೂಟರ್‍‍ಗಳನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಪ್‍‍ಡೇಟ್‍‍ಗೊಳಿಸುತ್ತಿದೆ. ಹೀರೋ ಮೋಟೊಕಾರ್ಪ್ ಕಂಪನಿಯ ಸ್ಪ್ಲೆಂಡರ್ ಐಸ್ಮಾರ್ಟ್ 110 ಬೈಕ್, ಇಂಟರ್‍‍ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿಯಿಂದ ಬಿ‍ಎಸ್ 6 ಪ್ರಮಾಣಪತ್ರ ಪಡೆದ ಭಾರತದ ಮೊದಲ ದ್ವಿಚಕ್ರ ವಾಹನವಾಗಿದೆ.

ಬಹಿರಂಗಗೊಂಡ ಸ್ಪ್ಲೆಂಡರ್ ಐಸ್ಮಾರ್ಟ್ ಸ್ಪೆಸಿಫಿಕೇಶನ್ ಮಾಹಿತಿ

ಬಿ‍ಎಸ್ 6 ಎಂಜಿನ್ ಹೊಂದಿರುವ ಹೀರೋ ಸ್ಪ್ಲೆಂಡರ್ ಅನ್ನು ರಾಜಸ್ತಾನದ ಜೈಪುರದಲ್ಲಿರುವ ಕಂಪನಿಯ ಆರ್ ಅಂಡ್ ಡಿ ಘಟಕದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಹೀರೋ ಮೋಟೊಕಾರ್ಪ್ ಈ ಬಿ‍ಎಸ್6 ಬೈಕ್ ಅನ್ನು ತರಬೇತಿಗಾಗಿ ಹಾಗೂ ಡೀಲರ್‍‍ಗಳಿಗೆ ಹೆಚ್ಚು ಪರಿಚಿತವಾಗಲಿ ಎಂಬ ಕಾರಣಕ್ಕಾಗಿ ಮಾರಾಟಗಾರರಿಗೆ ಕಳುಹಿಸುತ್ತಿದೆ.

ಬಹಿರಂಗಗೊಂಡ ಸ್ಪ್ಲೆಂಡರ್ ಐಸ್ಮಾರ್ಟ್ ಸ್ಪೆಸಿಫಿಕೇಶನ್ ಮಾಹಿತಿ

ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿರುವ ಹೀರೋ ಸ್ಪ್ಲೆಂಡರ್ ಬಿ‍ಎಸ್ 6 ಬೈಕಿನ ಸ್ಪೆಸಿಫಿಕೇಶನ್‍‍ಗಳ ಬಗ್ಗೆ ಮಾಹಿತಿಯಿರುವ ದಾಖಲೆಯೊಂದು ಬಹಿರಂಗಗೊಂಡಿದೆ. ಈ ದಾಖಲೆಯಲ್ಲಿ ಈ ಬೈಕಿನ ಪರ್ಫಾಮೆನ್ಸ್ ಬಗೆಯೂ ಮಾಹಿತಿ ನೀಡಲಾಗಿದೆ.

ಬಹಿರಂಗಗೊಂಡ ಸ್ಪ್ಲೆಂಡರ್ ಐಸ್ಮಾರ್ಟ್ ಸ್ಪೆಸಿಫಿಕೇಶನ್ ಮಾಹಿತಿ

ಹೊಸ ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬಿ‍ಎಸ್ 6 ಬೈಕ್ ಅನ್ನು ಈ ತಿಂಗಳ ಕೊನೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಬೈಕ್ ಅನ್ನು ಡ್ರಮ್ ಮತ್ತು ಡಿಸ್ಕ್ ಬ್ರೇಕ್‌ನ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಅಪ್‍‍ಡೇಟೆಡ್ ಮಾದರಿಯು ಒಂದೇ ರೀತಿಯ ಆಯಾಮಗಳನ್ನು ಹೊಂದಿರಲಿದೆ.

ಬಹಿರಂಗಗೊಂಡ ಸ್ಪ್ಲೆಂಡರ್ ಐಸ್ಮಾರ್ಟ್ ಸ್ಪೆಸಿಫಿಕೇಶನ್ ಮಾಹಿತಿ

ಡಿಸ್ಕ್ ಬ್ರೇಕ್ ಮಾದರಿಯು 1 ಕೆ.ಜಿ ಹೆಚ್ಚು ತೂಕವನ್ನು ಹೊಂದಿರಲಿದೆ ಹಾಗೂ 10 ಎಂಎಂ ಅಗಲವಾಗಿರಲಿದೆ. ಬೆಲೆಯ ಬಗ್ಗೆ ಹೇಳುವುದಾದರೆ, ಬಿಎಸ್ 4 ಸ್ಪ್ಲೆಂಡರ್ ಬೈಕಿಗೆ ಹೋಲಿಸಿದರೆ, ಬಿಎಸ್ 6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕಿನ ಬೆಲೆಯು ಸುಮಾರು 10%ನಿಂದ 15%ನಷ್ಟು ಹೆಚ್ಚಿರಲಿದೆ.

ಬಹಿರಂಗಗೊಂಡ ಸ್ಪ್ಲೆಂಡರ್ ಐಸ್ಮಾರ್ಟ್ ಸ್ಪೆಸಿಫಿಕೇಶನ್ ಮಾಹಿತಿ

ಸ್ಪ್ಲೆಂಡರ್ ಬೈಕಿನ ಬೆಲೆಯು ರೂ.56,280ಗಳಾಗಿದೆ. ಸ್ಪ್ಲೆಂಡರ್ ಐಸ್ಮಾರ್ಟ್ ಬೈಕಿನ ಬೆಲೆ ರೂ.66,000ಗಳಾಗಲಿದೆ. ಬಿಎಸ್ 6 ಸ್ಪ್ಲೆಂಡರ್ ಬೈಕಿನಲ್ಲಿ 113.2 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಇರಲಿದ್ದು, ಈ ಎಂಜಿನ್ 7,500 ಆರ್‌ಪಿಎಂನಲ್ಲಿ 9.15 ಬಿ‍‍‍‍ಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಬಹಿರಂಗಗೊಂಡ ಸ್ಪ್ಲೆಂಡರ್ ಐಸ್ಮಾರ್ಟ್ ಸ್ಪೆಸಿಫಿಕೇಶನ್ ಮಾಹಿತಿ

ಬಿ‍ಎಸ್ 4 ಸ್ಪ್ಲೆಂಡರ್‍‍ನಲ್ಲಿ ಅಳವಡಿಸಲಾಗಿದ್ದ 109.15 ಸಿಸಿ ಎಂಜಿನ್‌ 9.5 ಬಿ‍‍‍ಹೆಚ್‌ಪಿ ಪವರ್ ಉತ್ಪಾದಿಸುತ್ತಿತ್ತು. ಪವರ್ ಸ್ವಲ್ಪ ಮಾತ್ರವೇ ಹೆಚ್ಚಾಗಿದ್ದರೂ, ಹೊಸ ಬಿ‍ಎಸ್6 ಎಂಜಿನ್ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ನೀಡಲಿದೆ. ಈ ಟೆಕ್ನಾಲಜಿಯೊಂದಿಗೆ ಐ3 ಎಸ್ ಇರಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಹಿರಂಗಗೊಂಡ ಸ್ಪ್ಲೆಂಡರ್ ಐಸ್ಮಾರ್ಟ್ ಸ್ಪೆಸಿಫಿಕೇಶನ್ ಮಾಹಿತಿ

ಇದು ಐಡಲ್ ಸ್ಟಾರ್ಟ್ ಹಾಗೂ ಸ್ಟಾಪ್ ಸಿಸ್ಟಂ ಆಗಿದ್ದು, ಹೆಚ್ಚು ಅವಧಿಯವರೆಗೆ ಬೈಕ್ ಅನ್ನು ಆಫ್ ಮಾಡದೇ ನಿಲ್ಲಿಸಿದ್ದರೆ ಈ ಸಿಸ್ಟಂ ಎಂಜಿನ್ ಅನ್ನು ಆಫ್ ಮಾಡುತ್ತದೆ. ಕ್ಲಚ್ ಅನ್ನು ಬಿಟ್ಟ ನಂತರ ಮತ್ತೆ ಸ್ಟಾರ್ಟ್ ಮಾಡಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಹಿರಂಗಗೊಂಡ ಸ್ಪ್ಲೆಂಡರ್ ಐಸ್ಮಾರ್ಟ್ ಸ್ಪೆಸಿಫಿಕೇಶನ್ ಮಾಹಿತಿ

ಹೀರೋ ಮೋಟೊಕಾರ್ಪ್ 2018ರ ಸೆಪ್ಟೆಂಬರ್‌ ತಿಂಗಳಿಗೆ ಹೋಲಿಸಿದರೆ, 2019ರ ಸೆಪ್ಟೆಂಬರ್‌ನಲ್ಲಿ ಮಾರಾಟದಲ್ಲಿ 20.40%ನಷ್ಟು ಕುಸಿತವನ್ನು ಅನುಭವಿಸಿದೆ. 2018ರ ಸೆಪ್ಟೆಂಬರ್‍‍ನಲ್ಲಿ 7,69,138 ಯುನಿಟ್‌ಗಳ ಮಾರಾಟವಾಗಿದ್ದರೆ, ಈ ವರ್ಷದ ಸೆಪ್ಟೆಂಬರ್‍‍ನಲ್ಲಿ 6,12,204 ಯುನಿಟ್‌ಗಳು ಮಾರಾಟವಾಗಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬಹಿರಂಗಗೊಂಡ ಸ್ಪ್ಲೆಂಡರ್ ಐಸ್ಮಾರ್ಟ್ ಸ್ಪೆಸಿಫಿಕೇಶನ್ ಮಾಹಿತಿ

ಹೀರೋ ಮೊಟೊಕಾರ್ಪ್, ಈ ಹಬ್ಬದ ಸಮಯದಲ್ಲಿ ಮಾರಾಟವನ್ನು 10%ನಷ್ಟು ಹೆಚ್ಚಿಸಿ ಕೊಳ್ಳುವ ಗುರಿಯನ್ನು ಹೊಂದಿದೆ. ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿತಗೊಳಿಸಿದ ನಂತರ ಹೀರೋ ಮೋಟೊಕಾರ್ಪ್ ಹಬ್ಬಗಳಿಗಾಗಿ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ.

ಬಹಿರಂಗಗೊಂಡ ಸ್ಪ್ಲೆಂಡರ್ ಐಸ್ಮಾರ್ಟ್ ಸ್ಪೆಸಿಫಿಕೇಶನ್ ಮಾಹಿತಿ

ಇದರ ಜೊತೆಗೆ ಬಿಎಸ್ 4 ವಾಹನಗಳನ್ನು ಬಿ‍ಎಸ್ 4 ನಿಯಮವು ಜಾರಿಯಾಗುವ ಮುನ್ನ ಮಾರಾಟ ಮಾಡಬೇಕಾಗಿದೆ. ಹೀರೋ ಮೊಟೊಕಾರ್ಪ್ ಡೀಲರ್‍‍ಗಳಿಗೆ ತಮ್ಮ ಸಾಲದ ಮಿತಿಯನ್ನು ಹೆಚ್ಚಿಸುವುದರ ಜೊತೆಗೆ, ಹಬ್ಬದ ಸಮಯದಲ್ಲಿ ಬೆಂಬಲವನ್ನು ನೀಡುವ ಮೂಲಕ ಮಾರಾಟವನ್ನು ಹೆಚ್ಚಿಸಲು ಮುಂದಾಗಿದೆ.

Source: Rushlane

Most Read Articles

Kannada
English summary
Hero Splendor BS6 specs leak ahead of launch - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X