ಜಾವಾ ಬೈಕ್ ಪಡೆಯಲು ಇಷ್ಟು ದಿನ ಕಾಯಲೇ ಬೇಕು
ಜಾವಾ ಮೋಟರ್ ಸೈಕಲ್ಸ್ ಕಂಪನಿಯ ಬೈಕುಗಳನ್ನು ಪಡೆಯಲು ಕಾಯುವ ಅವಧಿ ಐದು ತಿಂಗಳುಗಳಾಗಿದೆ ಎಂದು ಕಂಪನಿಯು ತಿಳಿಸಿದೆ. ಇತ್ತೀಚಿಗೆ ಜಾವಾ ಬೈಕುಗಳನ್ನು ಪಡೆಯುವ ಕಾಯುವ ಅವಧಿಯನ್ನು ಕೇವಲ 10-15 ದಿನಗಳಿಗೆ ಇಳಿಸಲಾಗಿದೆ ಎಂದು ವರದಿಗಳಾಗಿದ್ದವು.

ಜಾವಾ ಕಂಪನಿಯು ಇದರ ಬಗ್ಗೆ ಸ್ಪಷ್ಟನೆ ನೀಡಿ, ಊಹಾಪೋಹಗಳನ್ನು ತಳ್ಳಿ ಹಾಕಿದೆ. ಕೆಲವು ಗ್ರಾಹಕರ ಸಾಮಾಜಿಕ ಜಾಲತಾಣಗಳಲ್ಲಿ ಜಾವಾ ಹಾಗೂ ಜಾವಾ 42 ಬೈಕುಗಳ ಕಾಯುವ ಅವಧಿಯನ್ನು ಕಡಿಮೆಗೊಳಿಸಲಾಗಿದೆ ಎಂದು ವರದಿಗಳಾಗಿದ್ದವು. ಈ ಸುದ್ದಿಯನ್ನು ಸುಳ್ಳು ಎಂದು ಜಾವಾ ಕಂಪನಿಯು ತಿಳಿಸಿದೆ.

ಕಳೆದ ತಿಂಗಳು ಪೆರಾಕ್ ಬೈಕಿನ ಬಿಡುಗಡೆಯ ಸಮಯದಲ್ಲಿ ಜಾವಾ ಕಂಪನಿಯು ಈ ಬೈಕಿನ ವಿತರಣೆಯನ್ನು 2020ರ ಏಪ್ರಿಲ್‌ನಲ್ಲಿ ನೀಡಲಾಗುವುದೆಂದು ತಿಳಿಸಿತ್ತು. ಕಳೆದ ನವೆಂಬರ್ 15ರಂದು ಜಾವಾ ಪೆರಾಕ್ ಬೈಕ್ ಅನ್ನು ಹೆಚ್ಚಿನ ಜನಸಾಗರದ ನಡುವೆ ಬಿಡುಗಡೆಗೊಳಿಸಲಾಗಿತ್ತು.

ಈ ಬೈಕಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯುಂಟಾಗಿದೆ. ಇದರಿಂದಾಗಿ ಬೇಡಿಕೆಯು ಬೈಕಿನ ಉತ್ಪಾದನೆಗಿಂತ ಅಧಿಕವಾಗಿದೆ. ಇದಕ್ಕಾಗಿ ಕಂಪನಿಯು ಹೆಚ್ಚಿನ ಪ್ರಮಾಣದಲ್ಲಿ ಬೈಕುಗಳನ್ನು ಪೂರೈಸಲು ಉತ್ಪಾದನೆಯನ್ನು ಹೆಚ್ಚಿಸಿದೆ.

ಈ ವರ್ಷದ ಆರಂಭದಲ್ಲಿ ಸಂವಾದವೊಂದರಲ್ಲಿ ಮಾತನಾಡಿದ್ದ, ಜಾವಾ ಕಂಪನಿಯ ಸಹ ಸಂಸ್ಥಾಪಕರಾದ ಅನುಪಮ್ ತಾರೆಜಾರವರು ಕಂಪನಿಯು ತನ್ನ ಬೈಕುಗಳ ಉತ್ಪಾದನೆಯನ್ನು 3000ಕ್ಕೂ ಹೆಚ್ಚು ಮಾರಾಟಗಾರರೊಂದಿಗೆ ಹೆಚ್ಚಿಸಿದೆ ಎಂದು ತಿಳಿಸಿದ್ದರು.

ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ಉತ್ಪಾದನಾ ಘಟಕದಲ್ಲಿ ಎರಡನೇ ಶಿಫ್ಟ್ ಅನ್ನು ಕೂಡ ಆರಂಭಿಸಲಾಗಿದೆ. ಜಾವಾ ಹಾಗೂ ಜಾವಾ 42 ಬೈಕುಗಳ ಬುಕ್ಕಿಂಗ್ ಅನ್ನು ಆರಂಭಿಸಿದ್ದು, ಬುಕ್ಕಿಂಗ್ ಮಾಡಿದ ಐದು ತಿಂಗಳ ನಂತರ ಈ ಬೈಕುಗಳ ವಿತರಣೆಯನ್ನು ನೀಡಲಾಗುವುದು.

ಜಾವಾ ಪೆರಾಕ್ ಬೈಕಿನ ಬುಕ್ಕಿಂಗ್‍ಗಳನ್ನು 2020ರ ಜನವರಿಯಿಂದ ಆರಂಭಿಸಲಾಗುವುದು. ಈ ಬೈಕಿನ ವಿತರಣೆಯು 2020ರ ಏಪ್ರಿಲ್‍ನಿಂದ ಆರಂಭವಾಗಲಿದೆ. ಈ ಬೈಕಿನ ಬಿಡುಗಡೆಯ ವೇಳೆ ಮಾತನಾಡಿದ್ದ ತಾರೆಜಾರವರು ಜಾವಾ ಕಂಪನಿಯು ಪೆರಾಕ್ ಬೈಕಿನ ವಿತರಣೆಗೆ ಬೇರೆ ಮಾನದಂಡವನ್ನು ಅನುಸರಿಸಲಿದೆ.

ಇದರಿಂದಾಗಿ ಈ ಬೈಕಿನ ವಿತರಣೆಗೆ ಸಮಸ್ಯೆ ಉಂಟಾಗುವುದಿಲ್ಲವೆಂದು ತಿಳಿಸಿದ್ದರು. ಜಾವಾ ಕಂಪನಿಯು ಬುಕ್ಕಿಂಗ್‍ಗಳು ಪೂರ್ತಿಯಾದ ನಂತರ ಪ್ರತಿ ಮೂರು ತಿಂಗಳಿಗೊಮ್ಮೆ ಬುಕ್ಕಿಂಗ್‍ಗಳನ್ನು ಮುಚ್ಚಲಿದೆ. ಅದಾದ ನಂತರ ಗ್ರಾಹಕರಿಗೆ ಬೈಕುಗಳನ್ನು ವಿತರಿಸಲಿದೆ.

ಜಾವಾ ಕಂಪನಿಯು ಜಾವಾ ಹಾಗೂ ಜಾವಾ 42 ಬೈಕ್‍ಗಳನ್ನು ಒಂದೇ ಉತ್ಪಾದನಾ ಘಟಕದಲ್ಲಿ ಉತ್ಪಾದಿಸುತ್ತದೆ. ಆದರೆ ಪೆರಾಕ್ ಬೈಕ್ ಅನ್ನು ಮಧ್ಯ ಪ್ರದೇಶದ ಪಿತಾಂಪುರದಲ್ಲಿರುವ ಉತ್ಪಾದನಾ ಘಟಕದಲ್ಲಿ ಉತ್ಪಾದಿಸುತ್ತದೆ.

ಪೆರಾಕ್ ಬೈಕ್ ಅನ್ನು ಬಿಎಸ್ 6 ಎಂಜಿನ್‍ನೊಂದಿಗೆ ಮಾರಾಟ ಮಾಡಲಾಗುತ್ತದೆ. ಆದರೆ ಉಳಿದ ಎರಡು ಬೈಕ್‍ಗಳಾದ ಜಾವಾ ಹಾಗೂ ಜಾವಾ 42 ಬೈಕ್‍ಗಳನ್ನು ಮುಂದಿನ ವರ್ಷ ಹೊಸ ಬಿಎಸ್ 6 ಎಂಜಿನ್‍ನೊಂದಿಗೆ ಅಪ್‍ಗ್ರೇಡ್‍ಗೊಳಿಸಲಿದೆ.

ಪೆರಾಕ್ ಬೈಕಿನಲ್ಲಿ ದೊಡ್ಡ ಗಾತ್ರದ 334 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದರೆ, ಜಾವಾ ಹಾಗೂ ಜಾವಾ 42 ಬೈಕ್‍ಗಳಲ್ಲಿ 293 ಸಿಸಿಯ ಎಂಜಿನ್ ಅಳವಡಿಸಲಾಗಿದೆ. ಜಾವಾ ಕಂಪನಿಯ ಪ್ರತಿಸ್ಪರ್ಧಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಸರಣಿಯ ಬೈಕ್‍ಗಳನ್ನು ಬಿಎಸ್ 6 ಎಂಜಿನ್‍ನೊಂದಿಗೆ ಅಪ್‍ಗ್ರೇಡ್‍ಗೊಳಿಸುತ್ತಿದೆ.


Click it and Unblock the Notifications








