ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಜಾವಾ ಬೈಕುಗಳಿಗೆ ಪುನರಾಗಮನಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಅಭೂತಪೂರ್ವವಾದ ಸ್ವಾಗತ ಸಿಕ್ಕಿದ್ದು, ಈ ಬೈಕುಗಳ ಬುಕ್ಕಿಂಗ್ ಸೆಪ್ಟೆಂಬರ್ 2019ರವರೆಗೆ ಪೂರ್ತಿಯಾಗಿದೆ. ಇದು ಈ ಬೈಕುಗಳಿಗಿರುವ ಬೇಡಿಕೆ ಹಾಗೂ ಜಾವಾ ಬೈಕುಗಳ ಪುನರಾಗಮನದ ಯಶಸ್ಸನ್ನು ತೋರಿಸುತ್ತದೆ. ಆದ ಕಾರಣ ವೇಟಿಂಗ್ ಪೀರಿಯಡ್ ಹೆಚ್ಚಿಸಲಾಗಿದೆ.

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಜಾವಾ ಕಂಪನಿಯು ತನ್ನ ಉತ್ಪಾದನಾ ಘಟಕಗಳಲ್ಲಿ ಬೈಕಿನ ತಯಾರಿಕೆಯನ್ನು ಹೆಚ್ಚಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಈ ಬಗ್ಗೆ ವರದಿ ಮಾಡಿರುವ ಬಿಸಿನೆಸ್ ಲೈನ್ ಪತ್ರಿಕೆಯು ಜಾವಾ ಕಂಪನಿಯು ಹೇಗೆ ತಯಾರಿಕೆಯ ವೇಗವನ್ನು ಹೆಚ್ಚುಗೊಳಿಸಿದೆ ಎಂದು ತಿಳಿಸಿದೆ. ಬೇರೆ ಯಾವುದೇ ಬೈಕುಗಳಿಗಿಂತ ಹೆಚ್ಚಾಗಿ ಜಾವಾ ಬೈಕುಗಳು ಭಾರತದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಅದರಲ್ಲೂ ಈ ಬೈಕ್ ಅನ್ನು ಆಗಿನ ಕಾಲದಲ್ಲಿ ನೋಡಿದ ಜನರಿಗಂತೂ ಈ ಬೈಕ್ ಅನ್ನು ಮರೆಯಲು ಸಾಧ್ಯವೇ ಇಲ್ಲ.

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಆಗಿನ ಕಾಲಕ್ಕೆ ಈ ಟೂ ಸ್ಟ್ರೋಕ್ ಬೈಕ್ ಹೊಂದುವುದು ಕೆಲವರಿಗೆ ಪ್ರತಿಷ್ಠೆಯ ವಿಷಯವಾಗಿದ್ದರೆ, ಇನ್ನೂ ಕೆಲವರಿಗೆ ಈ ಬೈಕ್ ಅನ್ನು ಕೊಳ್ಳುವುದು ಕನಸಾಗಿತ್ತು. ಆದರೆ ಕಾಲ ಕಳೆದಂತೆ ಜಾವಾ ಬೈಕುಗಳು ದೇಶಿಯ ಮಾರುಕಟ್ಟೆಯಿಂದ ಹಿಂದೆ ಸರಿದವು.

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಇದು ಹಲವು ದಶಕಗಳ ಹಿಂದಿನ ಮಾತು. 2018ರಲ್ಲಿ ಈ ದಿಗ್ಗಜ ಬೈಕ್ ತಯಾರಕ ಕಂಪನಿಯು ಮತ್ತೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಈ ಬಾರಿ ಕ್ಲಾಸಿಕ್ ಲೆಜೆಂಡ್ ಕಂಪನಿಯು ಈ ಬೈಕಿನ ಹಿಂದೆ ನಿಂತಿದೆ. ಕ್ಲಾಸಿಕ್ ಲೆಜೆಂಡ್ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಂಗಸಂಸ್ಥೆಯಾಗಿದೆ.

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ವಿಶ್ವದ್ಯಾಂತ ತೆರೆಮರೆಗೆ ಸರಿದಿರುವ ದಿಗ್ಗಜ ಮೋಟಾರ್‍‍ಸೈಕಲ್ ಕಂಪನಿಗಳನ್ನು ಪುನರುಜ್ಜೀವನಗೊಳಿಸುವುದು ಕ್ಲಾಸಿಕ್ ಲೆಜೆಂಡ್‍‍ನ ಗುರಿಯಾಗಿದೆ. ಅದರ ಭಾಗವಾಗಿ ಮೊದಲಿಗೆ ಜಾವಾ ಬೈಕ್ ಅನ್ನು ಕೈಗೆತ್ತಿಕೊಂಡಿದೆ. ಕೆಲವೇ ತಿಂಗಳುಗಳಲ್ಲಿ ಜಾವಾ ಮೋಟಾರ್‍‍ಸೈಕಲ್‍‍ಗಳು 100 ಕ್ಕೂ ಹೆಚ್ಚು ಡೀಲರ್‍‍ಶಿಪ್‍‍ಗಳನ್ನು ಹೊಂದಿ, ಬಹು ಬೇಡಿಕೆಯನ್ನು ಪಡೆದಿವೆ. ಆನ್‍‍ಲೈನ್ ಬುಕ್ಕಿಂಗ್‍‍ಗಳು ಡಿಸೆಂಬರ್ 2018ರಲ್ಲಿ ಮುಗಿದುಹೋದವು. ಇದಾದ ನಂತರ ಡೀಲರ್‍‍ಗಳು ಈ ಐತಿಹಾಸಿಕ ಬೈಕಿನ ಬುಕ್ಕಿಂಗ್ ಅನ್ನು ತೆಗೆದುಕೊಳ್ಳಲು ಶುರು ಮಾಡಿದರು. ಆದರೆ ಬೈಕುಗಳ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ.

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಜಾವಾ ಬೈಕುಗಳ ಡೆಲಿವರಿಯನ್ನು ಮಾರ್ಚ್ 2019ರಿಂದ ಶುರು ಮಾಡಲಾಯಿತು. ಈಗ ವೇಟಿಂಗ್ ಪಿರಿಯಡ್ ಅನ್ನು ಹೆಚ್ಚಿಸಲಾಗಿದೆ. ಬೇಡಿಕೆ ಹೆಚ್ಚಿರುವುದರಿಂದ ಜಾವಾ ಬೈಕುಗಳ ತಯಾರಿಕೆಯನ್ನು ಹೆಚ್ಚಿಸಿ, ಶೀಘ್ರವಾಗಿ ಪೂರೈಸುವಂತೆ ಸೂಚಿಸಲಾಗಿದೆ. ಜಾವಾ ಕಂಪನಿಗೂ ಸಹ ಪೂರೈಕೆ ಹಾಗೂ ಬೇಡಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯತ್ಯಾಸವಿರುವುದು ತಿಳಿದಿದೆ.

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಈ ಬಗ್ಗೆ ಮಾತನಾಡಿರುವ ಕ್ಲಾಸಿಕ್ ಲೆಜೆಂಡ್ ಪ್ರೈ ಲಿಮಿಟೆಡ್‍‍‍ನ ಸಿ‍ಇ‍ಒ ಆಶೀಷ್ ಜೋಶಿರವರು, ಉತ್ಪಾದನೆಯನ್ನು ಹೆಚ್ಚಿಸುವಂತೆ ಪೂರೈಕೆದಾರರಿಗೆ ಕೇಳಿಕೊಳ್ಳಲಾಗಿದ್ದು, ಈ ಬಗ್ಗೆ ಪೂರೈಕೆದಾರರೂ ಸಹ ಸ್ಪಂದಿಸಿದ್ದು, ಉತ್ತಮವಾದ ಪ್ರತಿಕ್ರಿಯೆ ಲಭ್ಯವಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೈಕುಗಳು ಲಭ್ಯವಾಗಲಿದ್ದು, ಗ್ರಾಹಕರು ತಮ್ಮ ನೆಚ್ಚಿನ ಬೈಕುಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಆಶೀಷ್ ಜೋಶಿರವರು ಮಾತನಾಡಿ, ಪ್ರತಿಯೊಂದು ಬೈಕಿನಲ್ಲಿ ಸುಮಾರು 2,500 ಕ್ಕೂ ಹೆಚ್ಚು ಬಿಡಿಭಾಗಗಳಿದ್ದು, ಅವುಗಳನ್ನು 700 ಪೂರೈಕೆದಾರರು ತಯಾರಿಸುತ್ತಿದ್ದಾರೆ. ಬೈಕುಗಳನ್ನು ತಯಾರಿಸುವ ಜವಾಬ್ದಾರಿಯು ಜಾವಾ ಕಂಪನಿಯ ಮೇಲೆ ಮಾತ್ರವಲ್ಲದೇ, ಬಿಡಿಭಾಗಗಳನ್ನು ಪೂರೈಸುವ ಪೂರೈಕೆದಾರರ ಮೇಲೆಯೂ ಸಹ ಇದೆ ಎಂದು ತಿಳಿಸಿದರು.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಆಶೀಷ್ ಜೋಶಿರವರು ಮಾತನಾಡಿ, ನಾವು ಪುನರುತ್ಥಾನಗೊಂಡಿರುವ ಬೈಕಿನ ಜೊತೆಗೆ ಕೈಜೋಡಿಸಿದ್ದು, ಈಗ ಅದು ಸಂಪೂರ್ಣವಾಗಿ ಹೊಸ ಬೈಕ್ ಆಗಿದೆ. ಹೊಸ ಪೂರೈಕೆದಾರರು ನಮಗೆ ಬಿಡಿಭಾಗಗಳನ್ನು ಪೂರೈಸುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ತಿಳಿಸಿದರು.

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಬೈಕನ್ನು ಇಷ್ಟ ಪಟ್ಟು ಖರೀದಿಸಬಯಸುವವರು, ಬೈಕಿನ ಡೆಲಿವರಿ ಆದಷ್ಟು ಶೀಘ್ರವಾಗಿ ಆಗಲಿ ಎಂದು ಬಯಸುವುದು ಸಹಜ. ನಾವು ಗ್ರಾಹಕರ ಇಚ್ಛೆಯನ್ನು ಹಗುರವಾಗಿ ಪರಿಗಣಿಸಿಲ್ಲ, ಆದ ಕಾರಣ ಹೆಚ್ಚು ಪರಿಶ್ರಮದಿಂದ ಈ ಬೈಕನ್ನು ತಯಾರಿಸುತ್ತಿದ್ದೇವೆ ಎಂದು ತಿಳಿಸಿದರು.

MOST READ: ಮುಖೇಶ್ ಅಂಬಾನಿ ಬಳಿಯಿರುವ ದುಬಾರಿ ಕಾರುಗಳಿವು

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಕಂಪನಿಯು ದೇಶಾದ್ಯಂತವಿರುವ ಡೀಲರ್‍‍‍ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಬಯಸಿದೆ. ಈಗ 82 ನಗರಗಳಲ್ಲಿ ಒಟ್ಟು 105 ಡೀಲರ್‍‍ಗಳಿದ್ದಾರೆ. ಆದರೆ ಕಂಪನಿಯು ಡೀಲರ್‍ ಶಿಪ್‍ಗಳನ್ನು ಇತರ ನಗರಗಳಿಗೂ ವಿಸ್ತರಿಸಿ, ಈ ಸಂಖ್ಯೆಯನ್ನು 120ಕ್ಕೆ ಹೆಚ್ಚಿಸಲು ಬಯಸಿದೆ.

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ನವೆಂಬರ್ 2018ರಲ್ಲಿ ಜಾವಾ ಕಂಪನಿಯು ಜಾವಾ ಹಾಗೂ ಜಾವಾ42 ಎಂಬ ಎರಡು ಬೈಕುಗಳನ್ನು ಬಿಡುಗಡೆಗೊಳಿಸಿತು. ಈ ಮೋಟಾರ್‍‍ಸೈಕಲ್‍‍ಗಳ ಬೆಲೆಯು ಕ್ರಮವಾಗಿ ರೂ.1.64 ಲಕ್ಷ ಹಾಗೂ ರೂ.1.55 ಲಕ್ಷಗಳಾಗಿತ್ತು. ಜಾವಾ ಬೈಕ್ ಹಳೆಯ ಟೂ ಸ್ಟ್ರೋಕ್ ಜಾವಾ ಬೈಕಿನಂತೆಯೇ ಇದೆ. ಜಾವಾ 42 ಬೈಕ್ ಆಧುನಿಕ ಆವೃತ್ತಿಯಾಗಿದ್ದರೂ ರೆಟ್ರೋ ವಿನ್ಯಾಸವನ್ನು ಹೊಂದಿದೆ.

MOST READ: ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಈ ಬೈಕುಗಳಲ್ಲಿ ಲಿಕ್ವಿಡ್ ಕೂಲ್‍‍ನ 293 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‍‍ಯಿದ್ದು, 27 ಬಿ‍‍ಹೆಚ್‍‍ಪಿ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿರುವ 6 ಸ್ಪೀಡಿನ ಗೇರ್‍‍ಬಾಕ್ಸ್ ಹಿಂಬದಿಯ ವ್ಹೀಲ್‍‍ಅನ್ನು ಚಲಾಯಿಸುತ್ತದೆ.

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಜಾವಾ ಹಿಂದೆ ಮಾರಾಟವಾಗುತ್ತಿದ್ದ ಕಾಲದಲ್ಲೂ ಜನಪ್ರಿಯತೆಯನ್ನು ಹೊಂದಿತ್ತು. ಈಗಲೂ ಸಹ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗದೇ ಗ್ರಾಹಕರು ರೋಸಿ ಹೋಗಿದ್ದರು. ಈಗ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡು ಉತ್ಪಾದನೆಯನ್ನು ಹೆಚ್ಚಿಸಿ ಗ್ರಾಹಕರಿಗೆ ಪೂರೈಸಲು ಅಣಿಯಾಗಿದೆ.

Most Read Articles

Kannada
English summary
Jawa Motorcycles Asks Suppliers To Increase Production To Meet Demand - Read in kannada
Story first published: Monday, June 3, 2019, 17:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X