390 ಅಡ್ವೆಂಚರ್ ಬಿಡುಗಡೆಯ ನಂತರವೇ 790 ಅಡ್ವೆಂಚರ್ ರಸ್ತೆಗಿಳಿಸಲಿದೆ ಕೆಟಿಎಂ

ಪ್ರೀಮಿಯಂ ಬೈಕ್‌ಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿರುವ ಕೆಟಿಎಂ ಸಂಸ್ಥೆಯು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಿವಿಧ ನಮೂನೆಯ ಹಲವು ಬೈಕ್ ಮಾದರಿಗಳನ್ನು ಭಾರತದಲ್ಲೂ ಬಿಡುಗಡೆಗೊಳಿಸುತ್ತಿದ್ದು, ಡ್ಯೂಕ್ 790 ಬಿಡುಗಡೆಯ ನಂತರ 790 ಅಡ್ವೆಂಚರ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

390 ಅಡ್ವೆಂಚರ್ ಬಿಡುಗಡೆಯ ನಂತರವೇ 790 ಅಡ್ವೆಂಚರ್ ರಸ್ತೆಗಿಳಿಸಲಿದೆ ಕೆಟಿಎಂ

ಕಳೆದ ತಿಂಗಳ ಹಿಂದಷ್ಟೇ ಡ್ಯೂಕ್ 790 ಸೂಪರ್ ಪರ್ಫಾಮೆನ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಕೆಟಿಎಂ ಸಂಸ್ಥೆಯು ಸದ್ಯ 390 ಅಡ್ವೆಂಚರ್ ಬಿಡುಗಡೆಯ ಸಿದ್ದತೆಯಲ್ಲಿದ್ದು, ತದನಂತರವಷ್ಟೇ 790 ಅಡ್ವೆಂಚರ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ಆಮದು ನೀತಿಯಲ್ಲಿ ನೀಡಲಾದ ಕೆಲವು ವಿನಾಯ್ತಿಗಳು ಆಟೋ ಉತ್ಪಾದನಾ ಸಂಸ್ಥೆಗಳಿಗೆ ವರದಾನವಾಗಿದ್ದು, ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಲವು ಜನಪ್ರಿಯ ವಾಹನ ಉತ್ಪನ್ನಗಳು ಇದೀಗ ಭಾರತದಲ್ಲೂ ಸದ್ದು ಮಾಡಲಿವೆ.

390 ಅಡ್ವೆಂಚರ್ ಬಿಡುಗಡೆಯ ನಂತರವೇ 790 ಅಡ್ವೆಂಚರ್ ರಸ್ತೆಗಿಳಿಸಲಿದೆ ಕೆಟಿಎಂ

ಹೊಸ ಆಮದು ನೀತಿಯಲ್ಲಿ ವಿದೇಶಿ ಮೂಲದ ವಾಹನ ಉತ್ಪಾದನಾ ಸಂಸ್ಥೆಗಳು ಪ್ರತಿ ವರ್ಷ ತಮ್ಮದೇ ನಿರ್ಮಾಣದ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ 2,500 ವಾಹನಗಳನ್ನು ಭಾರತಕ್ಕೆ ಯಾವುದೇ ಹೆಚ್ಚುವರಿ ಆಮದು ಶುಲ್ಕವಿಲ್ಲದೇ ಆಮದುಕೊಂಡಿಕೊಂಡು ಮಾರಾಟ ಮಾಡುವ ಅವಕಾಶ ನೀಡಲಾಗಿದೆ.

390 ಅಡ್ವೆಂಚರ್ ಬಿಡುಗಡೆಯ ನಂತರವೇ 790 ಅಡ್ವೆಂಚರ್ ರಸ್ತೆಗಿಳಿಸಲಿದೆ ಕೆಟಿಎಂ

2500 ವಾಹನಗಳಿಂತಲೂ ಹೆಚ್ಚು ವಾಹನಗಳನ್ನು ಆಮದು ಮಾಡಿಕೊಂಡಲ್ಲಿ ಹೆಚ್ಚುವರಿ ಶುಂಕ ಪಾವತಿಸಿ ಆಮದು ಮಾಡಿಕೊಳ್ಳಬೇಕಿದ್ದು, ಈ ಹಿನ್ನಲೆಯಲ್ಲಿ ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ವಾಹನಗಳನ್ನು ಹೊಸ ಆಮದು ನೀತಿ ಅಡಿಯಲ್ಲಿ ಆಮದು ಮಾಡಿಕೊಂಡು ಮಾರಾಟ ಮಾಡಲು ಸಿದ್ದವಾಗಿವೆ.

390 ಅಡ್ವೆಂಚರ್ ಬಿಡುಗಡೆಯ ನಂತರವೇ 790 ಅಡ್ವೆಂಚರ್ ರಸ್ತೆಗಿಳಿಸಲಿದೆ ಕೆಟಿಎಂ

ಇದರಲ್ಲಿ ಕೆಟಿಎಂ ಕೂಡಾ ತಮ್ಮ ಸೂಪರ್ ಬೈಕ್ ಮಾದರಿಗಳಾದ ಡ್ಯೂಕ್ 790 ಮತ್ತು ಬಿಡುಗಡೆಯಾಗಲಿರುವ 790 ಅಡ್ವೆಂಚರ್ ಮಾದರಿಗಳನ್ನು ಸಿಕೆಡಿ ನಿಯಮದಡಿ ಆಮದು ಮಾಡಿಕೊಂಡು ಮಾರಾಟ ಮಾಡುವ ಯೋಜನೆಯಿದ್ದು, ಇದೇ ವರ್ಷಾಂತ್ಯಕ್ಕೆ 390 ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ತದನಂತರ 2020ರ ಆರಂಭದಲ್ಲಿ 790 ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಬೈಕ್ ಮಾದರಿಯು ಡ್ಯೂಕ್ 790 ಬೈಕ್‌ಗಿಂತಲೂ ಹೆಚ್ಚು ದುಬಾರಿಯಾಗಿರಲಿದೆ.

390 ಅಡ್ವೆಂಚರ್ ಬಿಡುಗಡೆಯ ನಂತರವೇ 790 ಅಡ್ವೆಂಚರ್ ರಸ್ತೆಗಿಳಿಸಲಿದೆ ಕೆಟಿಎಂ

790 ಅಡ್ವೆಂಚರ್ ಬೈಕ್ ಎಂಜಿನ್ ಮತ್ತು ಡ್ಯೂಕ್ 790 ಬೈಕ್‌ಗಳ ಎಂಜಿನ್‌ ಎರಡು ಒಂದೇ ರೀತಿಯಾಗಿದ್ದರೂ ಪರ್ಫಾಮೆನ್ಸ್‌ನಲ್ಲಿ ತುಸು ಬದಲಾವಣೆ ಹೊಂದಿರಲ್ಲಿದ್ದು, ಅಡ್ವೆಂಚರ್ ಬೈಕಿನಲ್ಲಿ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಸೇರಿಸಲಾಗಿದೆ.

390 ಅಡ್ವೆಂಚರ್ ಬಿಡುಗಡೆಯ ನಂತರವೇ 790 ಅಡ್ವೆಂಚರ್ ರಸ್ತೆಗಿಳಿಸಲಿದೆ ಕೆಟಿಎಂ

ಡ್ಯೂಕ್ 790 ಬೈಕ್ ಮಾದರಿಯು 799ಸಿಸಿ ಲಿಕ್ವಿಡ್ ಕೂಲ್ ಪ್ಯಾರೆಲೆಲ್ ಟ್ವಿನ್ ಎಂಜಿನ್‌ನೊಂದಿಗೆ 103-ಬಿಹೆಚ್‌ಪಿ ಮತ್ತು 86-ಎನ್ಎಂ ಉತ್ಪಾದನೆ ಮಾಡಿದ್ದಲ್ಲಿ, 790 ಅಡ್ವೆಂಚರ್ ಮಾದರಿಯು 799ಸಿಸಿ ಪ್ಯಾರೆಲೆಲ್ ಟ್ವಿನ್ ಎಂಜಿನ್‌ನೊಂದಿಗೆ 94-ಬಿಎಚ್‌ಪಿ ಮತ್ತು 88-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

390 ಅಡ್ವೆಂಚರ್ ಬಿಡುಗಡೆಯ ನಂತರವೇ 790 ಅಡ್ವೆಂಚರ್ ರಸ್ತೆಗಿಳಿಸಲಿದೆ ಕೆಟಿಎಂ

ಇದರೊಂದಿಗೆ ಹಾರ್ಸ್ ಪವರ್ ಉತ್ಪಾದನೆಯಲ್ಲಿ 790 ಅಡ್ವೆಂಚೆರ್ ಆವೃತ್ತಿಗಿಂತಲೂ ಹೆಚ್ಚಿನ ಪರ್ಫಾಮೆನ್ಸ್ ಹೊಂದಿರುವ ಡ್ಯೂಕ್ 790 ಮಾದರಿಯು ಟ್ರ್ಯಾಕ್‌ಗಳಲ್ಲಿ ಸದ್ದು ಮಾಡಿದ್ದಲ್ಲಿ ಹೆಚ್ಚಿನ ಗ್ರೌಂಡ್‌ಕ್ಲಿಯೆರೆನ್ಸ್ ಮತ್ತು ವಿವಿಧ ಹಂತಗಳಲ್ಲಿ ಮ್ಯಾನುವಲ್ ಹೊಂದಾಣಿಕೆಯ ಸಸ್ಪೆಷನ್ ಹೊಂದಿರುವ 790 ಅಡ್ವೆಂಚರ್ ಮಾದರಿಯು ಗುಡ್ಡಗಾಡು ಪ್ರದೇಶಗಳಲ್ಲೂ ಸಲೀಸಾಗಿ ನುಗ್ಗುಬಲ್ಲ ವಿಶೇಷತೆ ಹೊಂದಿದೆ.

MOST READ: ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

390 ಅಡ್ವೆಂಚರ್ ಬಿಡುಗಡೆಯ ನಂತರವೇ 790 ಅಡ್ವೆಂಚರ್ ರಸ್ತೆಗಿಳಿಸಲಿದೆ ಕೆಟಿಎಂ

790 ಅಡ್ವೆಂಚರ್ ಬೈಕಿನಲ್ಲಿ 48-ಎಂಎಂ ಡಬ್ಲ್ಯುಪಿ ಎಕ್ಸ್‌ಪ್ಲೊರರ್ ಫ್ರಂಟ್ ಫೋರ್ಕ್, 240-ಎಂಎಂ ಟ್ರಾವೆಲ್ ಸಸ್ಪೆಷನ್, 43-ಎಂಎಂ ಯುಎಸ್‌ಡಿ ಫೋರ್ಕ್, 20-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, ಫೋರ್ ಪಿಸ್ಟನ್ 320-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 260-ಎಂಎಂ ರಿಯರ್ ಡಿಸ್ಕ್ ಜೋಡಣೆ ಮಾಡಲಾಗಿದ್ದು, ಸ್ಟ್ಯಾಂಡರ್ಡ್ ಬೈಕಿಗಿಂತಲೂ ತುಸು ಹೆಚ್ಚು ಭಾರವಾಗಿರುವ ಹೊಸ ಬೈಕ್ ಒಟ್ಟು 189 ಕೆ.ಜಿ ತೂಕ ಪಡೆದುಕೊಂಡಿದೆ.

MOST READ: ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

390 ಅಡ್ವೆಂಚರ್ ಬಿಡುಗಡೆಯ ನಂತರವೇ 790 ಅಡ್ವೆಂಚರ್ ರಸ್ತೆಗಿಳಿಸಲಿದೆ ಕೆಟಿಎಂ

ಇದೇ ಕಾರಣಕ್ಕೆ ಕಾರಣಕ್ಕೆ ಬೆಲೆ ತುಸು ದುಬಾರಿ ಎನ್ನಿಸಲಿರುವ 790 ಅಡ್ವೆಂಚರ್ ಮಾದರಿಯು ವಿದೇಶಿ ಮಾರುಕಟ್ಟೆಗಳಲ್ಲಿ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ರೂ.9.72 ಲಕ್ಷ ಬೆಲೆ ಹೊಂದಿದ್ದು, ಭಾರತದಲ್ಲಿ ಇದು ಆಮದು ಬೈಕ್ ಮಾದರಿಯಾಗಿ ಮಾರಾಟವಾಗುವುದರಿಂದ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.10.50 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

Most Read Articles

Kannada
Read more on ಕೆಟಿಎಂ ktm
English summary
Austrian premium bike manufacturer, KTM is planning to launch the 790 Adventure in India by next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X