ಒಕಿನಾವಾದಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಒಕಿನಾವಾ ಆಟೊಟೆಕ್, ಹಬ್ಬದ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್‍‍ಗಳನ್ನು ಘೋಷಿಸಿದೆ. ಈ ವಿಶೇಷ ಆಫರ್‍‍ಗಳು, ದೇಶದ್ಯಾಂತವಿರುವ ಒಕಿನಾವಾ ಡೀಲರ್‍‍ಗಳ ಬಳಿ ಆಗಸ್ಟ್ 12ರಿಂದ ಅಕ್ಟೋಬರ್ 31ರವರೆಗೆ ಲಭ್ಯವಿರಲಿದೆ.

ಒಕಿನಾವಾದಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಹಬ್ಬದ ವೇಳೆಯಲ್ಲಿ ನೀಡುತ್ತಿರುವ ಆಫರ್‍‍ಗಳಲ್ಲಿ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ ರೂ.1,000ಗಳ ನಗದು ರಿಯಾಯಿತಿಯನ್ನು ಖಚಿತವಾಗಿ ನೀಡಲಾಗುವುದು. ಇದರ ಜೊತೆಗೆ ಇಪ್ಪತ್ತು ಅದೃಷ್ಟಗಳು ಏರ್ ಕಂಡೀಷನರ್, ಎಲ್ಇಡಿ ಟೆಲಿವಿಷನ್, ಮೈಕ್ರೊವೇವ್ ಹಾಗೂ ಇತರ ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧ ಬಗೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಗೆಲ್ಲುವ ಅವಕಾಶವನ್ನು ಹೊಂದಲಿದ್ದಾರೆ.

ಒಕಿನಾವಾದಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಒಬ್ಬರು ಅದೃಷ್ಟಶಾಲಿ ಗ್ರಾಹಕರಿಗೆ ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಲಿದೆ. ವಿಜೇತರ ಹೆಸರುಗಳನ್ನು ಕೊಡುಗೆ ಮುಗಿದ ನಂತರ 2019ರ ನವೆಂಬರ್‌ ತಿಂಗಳಿನಲ್ಲಿ ಪ್ರಕಟಿಸಲಾಗುವುದು. ವಾಹನಗಳ ಮಾರಾಟವನ್ನು ಹೆಚ್ಚಿಸುವ ಸಲುವಾಗಿ, ಒಕಿನಾವಾ ಈ ರೀತಿಯಾದ ವಿಶೇಷ ಆಫರ್‍‍ಗಳನ್ನು ನೀಡುತ್ತಿದೆ.

ಒಕಿನಾವಾದಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಒಕಿನಾವಾ ಆಟೊಟೆಕ್ ಪ್ರೈ. ಲಿಮಿಟೆಡ್‍‍ನ ಸ್ಥಾಪಕರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್‍‍‍ರವರಾದ ಜಿತೆಂದರ್ ಶರ್ಮಾರವರು ಮಾತನಾಡಿ, ಸಾಲು ಸಾಲುಗಳು ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನ್, ನವರಾತ್ರಿ, ದಸರಾ ಹಾಗೂ ದೀಪಾವಳಿ ಹಬ್ಬಗಳ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಖರೀದಿಸ ಬಯಸುವ ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವಂತೆ ಈ ರೀತಿಯಾಗಿ ಪ್ರೋತ್ಸಾಹಿಸಲಿದ್ದೇವೆ.

ಒಕಿನಾವಾದಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಈ ಆಫರ್‍‍ಗಳ ಮೂಲಕ ಗ್ರಾಹಕರನ್ನು ಪರಿಸರ ಸ್ನೇಹಿ ವಾಹನಗಳನ್ನು ಖರೀದಿಸುವಂತೆ ಮಾಡುವ ಗುರಿ ಹೊಂದಿದ್ದೇವೆ. ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಸೆಗ್‍‍ಮೆಂಟಿನಲ್ಲಿ ನಮ್ಮದೇ ಆದ ಕೊಡುಗೆಯನ್ನು ನೀಡಲಿದ್ದೇವೆ.

ಒಕಿನಾವಾದಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಪ್ರತಿಯೊಬ್ಬ ಗ್ರಾಹಕರು ಹೊಸ ಒಕಿನಾವಾ ಸ್ಕೂಟರ್ ಖರೀದಿಯೊಂದಿಗೆ ಖಚಿತವಾದ ರಿಯಾಯಿತಿಯನ್ನು ಪಡೆಯುತ್ತಾರೆ. ಈ ಆಫರ್‍‍ಗಳಿಂದಾಗಿ ನಮ್ಮ ಡೀಲರ್‍‍ಗಳು ಹೆಚ್ಚಿನ ಪ್ರಮಾಣದ ಗ್ರಾಹಕರನ್ನು ಆಕರ್ಷಿಸಲು ಅನುಕೂಲವಾಗಲಿದೆ.

ಒಕಿನಾವಾದಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಜಿಎಸ್‍‍ಟಿ ದರವು ಸಹ ಕಡಿಮೆಯಾಗಿರುವುದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಇ ಸ್ಕೂಟರ್‍‍ಗಳನ್ನು ಖರೀದಿಸಬಹುದಾಗಿದೆ ಎಂದು ಹೇಳಿದರು. ಒಕಿನಾವಾ ಆಟೊಟೆಕ್, ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಜಿಎಸ್‍‍ಟಿ ದರಗಳನ್ನು 12% ರಿಂದ 5% ಇಳಿಸಿದ ನಂತರ ತನ್ನ ವಾಹನಗಳ ಬೆಲೆಯನ್ನು ಕಡಿಮೆಗೊಳಿಸಿದೆ.

MOST READ: ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಒಕಿನಾವಾದಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಸರ್ಕಾರವು, ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ನೀಡುವ ಸಲುವಾಗಿ ಫೇಮ್ 2 ಯೋಜನೆಯಡಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಇದರ ಜೊತೆಗೆ, ಖರೀದಿದಾರರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ತೆಗೆದುಕೊಂಡ ಸಾಲಗಳ ಮೇಲಿನ ತೆರಿಗೆಯಿಂದ ರಿಯಾಯಿತಿ ಪಡೆಯಲಿದ್ದಾರೆ.

MOST READ: ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಒಕಿನಾವಾದಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಒಕಿನಾವಾ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉದ್ಯಮದಲ್ಲಿರುವ ಕೆಲವು ಅಗ್ರಗಣ್ಯ ಕಂಪನಿಗಳಲ್ಲಿ ಒಂದಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಒಕಿನಾವಾ ನೀಡುತ್ತಿರುವ ಆಫರ್‍‍ಗಳಿಂದಾಗಿ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಸಾಧ್ಯತೆಗಳಿವೆ.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಒಕಿನಾವಾದಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಒಕಿನಾವಾ ಹಬ್ಬದ ಹಿನ್ನೆಲೆಯಲ್ಲಿ ನೀಡುತ್ತಿರುವ ಆಫರ್‍‍ಗಳು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಭಾರತೀಯ ಸ್ಕೂಟರ್ ಪ್ರಿಯರು ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಖರೀದಿಸಬಹುದಾಗಿದೆ.

Most Read Articles

Kannada
English summary
Okinawa Offers Special Discounts On Their Electric Scooter Range This Festive Season - Read in kannada
Story first published: Monday, August 19, 2019, 10:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X