ಬೈಕ್ ಮಾರಾಟದಲ್ಲಿ ಸೊನ್ನೆ ಸುತ್ತಿದ ಸುಜುಕಿ ಇನ್‌ಟ್ರುಡರ್

ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಜಿಕ್ಸರ್ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಹೊರತಂದ ನಂತರ ಜಪಾನ್ ದೈತ್ಯ ದ್ವಿಚಕ್ರ ವಾಹನ ಸಂಸ್ಧೆ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಸಂಸ್ಥೆಯು ಎಂಟ್ರಿ ಲೆವೆಲ್ ಕ್ರೂಸರ್ ಬೈಕ್ ವಿಭಾಗದಲ್ಲೂ ಸಹ ಹೊಸ ನಮೂನೆಯ ಇನ್‌ಟ್ರುಡರ್ ಪರಿಚಯಿಸುವ ಮೂಲಕ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.

ಬೈಕ್ ಮಾರಾಟದಲ್ಲಿ ಸೊನ್ನೆ ಸುತ್ತಿದ ಸುಜುಕಿ ಇನ್‌ಟ್ರುಡರ್

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಇನ್‌ಟ್ರುಡರ್ 150ಸಿಸಿ ಕ್ರೂಸರ್ ಬೈಕ್ ಮಾದರಿಯು ಸುಜುಕಿ ನಿರ್ಮಾಣದ ಮತ್ತೊಂದು ಕ್ರೂಸರ್ ಬೈಕ್ ಎಂ1800ಆರ್ ಬೈಕಿನ ಡಿಸೈನ್ ಪ್ರೇರಣೆ ಪಡೆದುಕೊಂಡಿದ್ದು, ಸಾಂಪ್ರದಾಯಿಕ ಕ್ರೂಸರ್ ಮತ್ತು ಸ್ಟ್ರೀಟ್ ಫೈಟರ್ ವಿನ್ಯಾಸದ ಸಮ್ಮಿಶ್ರಣದೊಂದಿಗೆ ಆರಂಭದಲ್ಲೇ ಭಾರೀ ಪ್ರಮಾಣದ ಬೇಡಿಕೆಯನ್ನು ಪಡೆದುಕೊಂಡಿತ್ತು. ಆದ್ರೆ ಇದೀಗ ಬೈಕ್ ಮಾದರಿಯನ್ನು ಯಾವೊಬ್ಬ ಗ್ರಾಹಕನು ಕೂಡಾ ತಿರುಗಿಯೂ ನೋಡುತ್ತಿಲ್ಲ.

ಬೈಕ್ ಮಾರಾಟದಲ್ಲಿ ಸೊನ್ನೆ ಸುತ್ತಿದ ಸುಜುಕಿ ಇನ್‌ಟ್ರುಡರ್

2017ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ನಂತರ ಪ್ರತಿ ತಿಂಗಳು ಸರಾಸರಿಯಾಗಿ 3 ಸಾವಿರ ಬೈಕ್‌ಗಳು ಮಾರಾಟವಾಗಿದ್ದು, ಕಳೆದ ನಾಲ್ಕೈದು ತಿಂಗಳಿನಿಂದ ಬೇಡಿಕೆ ಸಂಪೂರ್ಣ ತಗ್ಗಿರುವುದು ಇನ್‍ಟ್ರುಟರ್ ಉತ್ಪಾದನೆಯು ಸುಜುಕಿ ಸಂಸ್ಥೆಗೆ ಹೊರೆಯಾಗಿ ಪರಿಣಮಿಸಿದೆ.

ಬೈಕ್ ಮಾರಾಟದಲ್ಲಿ ಸೊನ್ನೆ ಸುತ್ತಿದ ಸುಜುಕಿ ಇನ್‌ಟ್ರುಡರ್

2018ರ ಫೆಬ್ರುವರಿಯಲ್ಲಿ ಗರಿಷ್ಠವಾಗಿ 4,800 ಇನ್‌ಟ್ರುಡರ್ ಬೈಕ್‌ಗಳನ್ನು ಮಾರಾಟ ಮಾಡಿದ್ದ ಸುಜುಕಿ ಸಂಸ್ಥೆಯು 2019ರಲ್ಲಿ ಎರಡಂಕಿಯನ್ನು ದಾಟಲು ಪರದಾಟುತ್ತಿದ್ದು, ಜನವರಿ ಅವಧಿಯಲ್ಲಿ 2 ಬೈಕ್‌ಗಳು ಮಾರಾಟವಾಗಿದ್ದಲ್ಲಿ ಫೆಬ್ರುವರಿ ತಿಂಗಳಿನಲ್ಲಿ ಒಂದೇ ಒಂದು ಬೈಕ್ ಕೂಡಾ ಮಾರಾಟವಾಗಿಲ್ಲ.

ಬೈಕ್ ಮಾರಾಟದಲ್ಲಿ ಸೊನ್ನೆ ಸುತ್ತಿದ ಸುಜುಕಿ ಇನ್‌ಟ್ರುಡರ್

ಸುಜುಕಿ ಇನ್‌ಟ್ರುಡರ್ ಬೈಕ್ ಮಾದರಿಯು ಜಾಗತಿಕ ಕ್ರೂಸರ್ ಬೈಕ್‌ಗಳಿಗೆ ಹೊಸ ಆಯಾಮವನ್ನು ತುಂಬಿದ್ದು, ತನ್ನದೇ ಆದ ವಿಶಿಷ್ಟ ವಿನ್ಯಾಸದೊಂದಿಗೆ ಭಾರತದಲ್ಲಿ ಬಿಡುಗೊಂಡಿದ್ದರೂ ಸಹ ಗರಿಷ್ಠ ಮಟ್ಟದ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿರುವುದು ಇನ್‌ಟ್ರುಡರ್ ಸ್ಥಗಿತವಾಗುವ ಲಕ್ಷಣಗಳು ಗೋಚರವಾಗಿದೆ. ಆದ್ರೆ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಸುಜುಕಿ ಸಂಸ್ಥೆಯು ಮುಂಬರುವ ಮೇ ಹೊತ್ತಿಗೆ ಬಿಡುಗಡೆಯಾಗಲಿರುವ ಹೊಸ ಇನ್‌ಟ್ರುಡರ್ ಮೂಲಕ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ಬೈಕ್ ಮಾರಾಟದಲ್ಲಿ ಸೊನ್ನೆ ಸುತ್ತಿದ ಸುಜುಕಿ ಇನ್‌ಟ್ರುಡರ್

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್)ಗಳಂತಹ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಇನ್‌ಟ್ರುಡರ್ 150 ಬೈಕ್ ಮಾದರಿಯು ದೈನಂದಿನ ಸೇರಿದಂತೆ ವಾರಂತ್ಯದ ಪ್ರಯಾಣಕ್ಕೂ ಸೂಕ್ತವೆನಿಸಲಿದೆ. ಹಾಗೆಯೇ ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯಗಳಿಂದಲೂ ಕೂಡಿದೆ.

ಬೈಕ್ ಮಾರಾಟದಲ್ಲಿ ಸೊನ್ನೆ ಸುತ್ತಿದ ಸುಜುಕಿ ಇನ್‌ಟ್ರುಡರ್

ಟ್ರಯಾಂಗಲ್ ಹೆಡ್‌ಲ್ಯಾಂಪ್ ಮತ್ತು ಇಂಧನ ಟ್ಯಾಂಕ್ ವಿಸ್ತರಣೆಗಳನ್ನು ಒಳಗೊಂಡಂತೆ ಎಂ1800ಆರ್ ಮೋಟಾರ್ ಸೈಕಲ್‌ನ ಎಲ್ಲಾ ಪ್ರಮುಖ ಡಿಸೈನ್‌ಗಳು ಹೊಸ ಇನ್‌ಟ್ರುಡರ್ 150 ಬೈಕ್ ಹೊಂದಿದ್ದು, ಮುಂಭಾಗದ ಇಂಡಿಕೇಟರ್‌ಗಳು ಚೂಪಾದ ವಿನ್ಯಾಸದೊಂದಿಗೆ ಹಿಂಬದಿಯ ನೋಟದ ಕನ್ನಡಿಗಳು ಕ್ರೋಮ್ ಲೇಪನ ಹೊಂದಿರುತ್ತವೆ.

MOST READ: ಆನೆ ನಡೆದಿದ್ದೇ ದಾರಿ ಎಂದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ

ಬೈಕ್ ಮಾರಾಟದಲ್ಲಿ ಸೊನ್ನೆ ಸುತ್ತಿದ ಸುಜುಕಿ ಇನ್‌ಟ್ರುಡರ್

ಇದಲ್ಲದೇ ಶಕ್ತಿಯುತವಾದ ವಿನ್ಯಾಸ, ಇಂಧನ ಟ್ಯಾಂಕ್, ಕಡಿಮೆ ಎತ್ತರದ ಸೀಟು, ಹ್ಯಾಂಡಲ್‌ಬಾರ್, ಫೂಟ್ ಪೆಗ್, ಆರಾಮದಾಯಕ ಸೀಟು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಹೆಡ್‌ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿರಲಿದೆ. ಹೀಗಿದ್ದರೂ ಇನ್‌ಟ್ರುಡರ್ ವಿನ್ಯಾಸವು ಕೆಲವು ಬೈಕ್ ಪ್ರಿಯರಿಗೆ ಇಷ್ಟವಾಗಿಲ್ಲ ಎನ್ನುವುದು ಅದರ ಮಾರಾಟದ ಪ್ರಮಾಣವೇ ಸೂಚಿಸುತ್ತೆ.

ಬೈಕ್ ಮಾರಾಟದಲ್ಲಿ ಸೊನ್ನೆ ಸುತ್ತಿದ ಸುಜುಕಿ ಇನ್‌ಟ್ರುಡರ್

ಇನ್ನು 154.9ಸಿಸಿ ಏರ್ ಕೂಲ್ಡ್, ಫ್ಯೂಲ್-ಇಂಜೆಕ್ಷ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಇನ್‌ಟ್ರುಡರ್ ಬೈಕ್‌, 5-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 14.5 ಬಿಎಚ್‌ಪಿ ಮತ್ತು 14 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

MOST READ: ಮಾಡಿಫೈ ಬೈಕ್ ಸವಾರರಿಗೆ ಭಿಕ್ಷರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು.. !

ಬೈಕ್ ಮಾರಾಟದಲ್ಲಿ ಸೊನ್ನೆ ಸುತ್ತಿದ ಸುಜುಕಿ ಇನ್‌ಟ್ರುಡರ್

ಇದರಲ್ಲಿ ಇನ್ನೊಂದು ಪ್ರಮುಖ ಆಕರ್ಷಣೆ ಅಂದ್ರೆ, ನಗರಪ್ರದೇಶಗಳ ಪರಿಸ್ಥಿತಿಗೆ ಅನುಗುಣವಾಗಿ ಡಿಸೈನ್ ಹೊಂದಿರುವ ಇನ್‌ಟ್ರುಡರ್ 150 ಬೈಕ್ ಮಾದರಿಯಲ್ಲಿ ಎಸ್‌ಇಪಿ(ಸುಜುಕಿ ಇಕೋ ಪರ್ಫಾಮೆನ್ಸ್) ತಂತ್ರಜ್ಞಾನ ಹೊಂದಿರುವುದು ಬೈಕಿನ ಪರ್ಫಾಮನ್ಸ್ ಹೆಚ್ಚಿಸಿರುವುದಲ್ಲದೇ ಇಂಧನ ದಕ್ಷತೆಯನ್ನು ಸಹ ಹೆಚ್ಚಿಸಿದೆ.

Most Read Articles

Kannada
Read more on ಸುಜುಕಿ suzuki
English summary
Suzuki Intruder Sales Down To Zero Units In 2019. Read in Kannada.
Story first published: Saturday, March 23, 2019, 16:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X