ಮೂರು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಟೆಕೊ

ಪುಣೆ ಮೂಲದ ಎಲೆಕ್ಟ್ರಿಕ್ ಸ್ಟಾರ್ಟ್ ಅಪ್ ಕಂಪನಿ ಟೆಕೊ ಎಲೆಕ್ಟ್ರಿಕಾ, - ನಿಯೊ, ರ್‍ಯಾಪ್ಟರ್ ಹಾಗೂ ಎಮರ್ಜ್ ಎಂಬ ಮೂರು ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ನಿಯೊ ಸ್ಕೂಟರ್‍‍ನ ಬೆಲೆಯು ರೂ.43,000 ಗಳಾದರೆ, ರ್‍ಯಾಪ್ಟರ್‍‍ನ ಬೆಲೆ ರೂ.60,771 ಹಾಗೂ ಎಮರ್ಜ್‍ ಸ್ಕೂಟರ್‍‍ನ ಬೆಲೆಯು ರೂ.72,247ಗಳಾಗಿರಲಿದೆ. ಈ ಎಲ್ಲಾ ಬೆಲೆಗಳು ಪುಣೆ ನಗರಕ್ಕೆ ಅನ್ವಯವಾಗುತ್ತವೆ.

ಮೂರು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಟೆಕೊ

ಕಂಪನಿಯ ಪ್ರಮುಖ ಸ್ಕೂಟರ್ ಎಮರ್ಜ್, ಹಳೆ ತಲೆಮಾರಿನ ವೆಸ್ಪಾ ಸ್ಕೂಟರ್ ಅನ್ನು ನೆನಪಿಸುವ ರೆಟ್ರೊ ವಿನ್ಯಾಸವನ್ನು ಹೊಂದಿದೆ. ಟೆಕೊ ಕಂಪನಿಯು ಈ ಸ್ಕೂಟರ್ ಅನ್ನು ಹಳದಿ, ಕೆಂಪು ಹಾಗೂ ಕಪ್ಪು ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಿದೆ. ಈ ಸ್ಕೂಟರ್ ಸೆಂಟ್ರಲ್ ಲಾಕಿಂಗ್, ಎಲ್ಇಡಿ ಹೆಡ್ ಲ್ಯಾಂಪ್ಗಳು, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ರಿವರ್ಸ್ ಅಸಿಸ್ಟ್ ಗಳನ್ನು ಹೊಂದಿದೆ. ಇತರ ಎರಡು ಸ್ಕೂಟರ್‍‍ಗಳಿಗಿಂತ ಭಿನ್ನವಾಗಿರುವ, ಎಮರ್ಜ್ ಸ್ಕೂಟರ್ ಪೋರ್ಟಬಲ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ.

ಮೂರು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಟೆಕೊ

ಈ ಬ್ಯಾಟರಿ ಪ್ಯಾಕ್ ಅನ್ನು ದೂರದಿಂದಲೇ ಬದಲಾಯಿಸಬಹುದು. ಈ ಸ್ಕೂಟರ್‌‍‍ನಲ್ಲಿ 250 ವ್ಯಾಟ್ ವಿದ್ಯುತ್ ಉತ್ಪಾದಿಸುವ, ಬಿಎಲ್‌ಡಿಸಿ ಮೋಟರ್‍ ಅಳವಡಿಸಲಾಗಿದೆ. ಈ ಮೋಟಾರ್‍‍ನಲ್ಲಿರುವ 48ವಿ 28 ಎಎಚ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಒಂದು ಬಾರಿಗೆ ಚಾರ್ಜ್ ಮಾಡಿದರೆ, 70 ಕಿ.ಮೀ ನಿಂದ 80 ಕಿ.ಮೀವರೆಗೆ ಚಲಿಸಬಹುದು. ಈ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು 4 ರಿಂದ 5 ಗಂಟೆಗಳು ಬೇಕಾಗುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

ಮೂರು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಟೆಕೊ

ಸಸ್ಪೆಂಷನ್‍‍ಗಳಿಗಾಗಿ ಈ ಸ್ಕೂಟರ್‍‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್‍‍ಗಳಿವೆ. ಬ್ರೇಕಿಂಗ್‍‍ಗಾಗಿ ಮುಂಭಾಗದಲ್ಲಿ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಯೂನಿಟ್‍‍ಗಳನ್ನು ಹೊಂದಿದೆ. ರ್‍ಯಾಪ್ಟರ್ ಸ್ಕೂಟರ್ ಸಾಂಪ್ರದಾಯಿಕ ಮಾದರಿಯ ವಿನ್ಯಾಸವನ್ನು ಹೊಂದಿದೆ. ಈ ಸ್ಕೂಟರ್ ಹೋಂಡಾ ಗ್ರಾಜಿಯಾ ಸ್ಕೂಟರ್‍‍ನಂತೆಯೇ ಇದೆ. ಎಮರ್ಜ್ ಸ್ಕೂಟರ್‍‍ಗಿಂತ ಕಡಿಮೆ ಬೆಲೆಯನ್ನು ಹೊಂದಿದ್ದರೂ, ಎಮರ್ಜ್‌ ಸ್ಕೂಟರ್‍‍ನಲ್ಲಿರುವಂತಹ ಫೀಚರ್‍‍ಗಳನ್ನೇ ಹೊಂದಿದೆ.

ಮೂರು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಟೆಕೊ

ಆದರೆ, ಈ ಸ್ಕೂಟರ್ ಪೋರ್ಟಬಲ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿಲ್ಲ. ಬದಲಿಗೆ 12ವಿ 32ಎಎಚ್ ಎಕ್ಸ್ 4 ಲೀಡ್-ಆಸಿಡ್ ಬ್ಯಾಟರಿಯನ್ನು ಹೊಂದಿದ್ದು, 5-7 ಗಂಟೆಗಳ ಕಾಲ ಚಾರ್ಜ್ ಮಾಡಿದರೆ 75 ಕಿ.ಮೀ ನಿಂದ 80 ಕಿ.ಮೀ ವ್ಯಾಪ್ತಿಯವರೆಗೆ ಚಲಿಸಬಹುದು. ರಾಪ್ಟರ್ ಹಾಗೂ ನಿಯೋ ಎರಡೂ ಸ್ಕೂಟರ್‍‍ಗಳು ಒಂದೇ ಬಿಎಲ್‌ಡಿಸಿ ಮೋಟರ್ ಪ್ಯಾಕ್ ಅನ್ನು ಹೊಂದಿವೆ. ಎಮರ್ಜ್‌ ಸ್ಕೂಟರ್ ಉತ್ಪಾದಿಸುವಷ್ಟೇ ಪವರ್ ಉತ್ಪಾದಿಸುತ್ತವೆ.

ಮೂರು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಟೆಕೊ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಎಮರ್ಜ್ ಹಾಗೂ ರ್‍ಯಾಪ್ಟರ್ ಸ್ಕೂಟರ್‍‍ಗಳಲ್ಲಿ ನೀಡಲಾಗುವ ರಿವರ್ಸ್ ಅಸಿಸ್ಟ್ ಅನ್ನು ನಿಯೋದಲ್ಲಿ ಅಳವಡಿಸಲಾಗಿಲ್ಲ. ಈ ಸ್ಕೂಟರ್ ಚಿಕ್ಕದಾದ 12 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸ್ಪೇಸ್ ಹಾಗೂ ತೆಳುವಾದ ಟಯರ್‍‍ಗಳಿಂದ ಸುತ್ತಿರುವ 10 ಇಂಚಿನ ವ್ಹೀಲ್‍‍ಗಳನ್ನು ಹೊಂದಿದೆ. ಆದರೆ, ರ್‍ಯಾಪ್ಟರ್ ಸ್ಕೂಟರ್‍‍ನಲ್ಲಿರುವಂತಹ ಲೆಡ್ ಆಸಿಡ್ ಬ್ಯಾಟರಿ ಹಾಗೂ ಅದೇ ರೀತಿಯ ಆಧಾರಗಳನ್ನು ಪಡೆಯುತ್ತದೆ. ಈ ಸ್ಕೂಟರ್‍‍ಗಳು 250 ವ್ಯಾಟ್‌ಗಳ ಒಳಗಿರುವ ಕಾರಣ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ರಸ್ತೆಯಲ್ಲಿ ಓಡಿಸಲು ಲೈಸೆನ್ಸ್ ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ.

ಮೂರು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಟೆಕೊ

ಜೊತೆಗೆ ಈ ಸ್ಕೂಟರ್‍‍ಗಳನ್ನು ಸ್ಥಳೀಯ ಆರ್‌ಟಿಒನಲ್ಲಿ ನೋಂದಾಯಿಸುವ ಅಗತ್ಯವೂ ಇಲ್ಲ. ಸರ್ವಿಸ್ ಹಾಗೂ ಡೀಲರ್‍‍‍ಗಳ ಬಗ್ಗೆ ಹೇಳುವುದಾದರೆ, ಕಂಪನಿಯು ದೇಶಾದ್ಯಂತ 50 ಶೋರೂಂಗಳನ್ನು ಹೊಂದಿದೆ. ಶೀಘ್ರದಲ್ಲೇ ಎಲ್ಲಾ ಮೂರು ಇ-ಸ್ಕೂಟರ್‌ಗಳನ್ನು ಚಲಾಯಿಸಿ, ಇವುಗಳ ಬಗ್ಗೆ ರಿವ್ಯೂ ನೀಡಲಾಗುವುದು. ನಿರೀಕ್ಷಿಸಿ.

Most Read Articles

Kannada
English summary
Techo Electra Launches Three New Electric Scooters - Read in kannada
Story first published: Thursday, July 18, 2019, 11:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X