Just In
Don't Miss!
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್?
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ವಿನ್ಯಾಸದೊಂದಿಗೆ 2021ರ ಡ್ಯೂಕ್ 125 ಬೈಕ್ ಬಿಡುಗಡೆ ಮಾಡಿದ ಕೆಟಿಎಂ
ಕೆಟಿಎಂ ಇಂಡಿಯಾ ಕಂಪನಿಯು ತನ್ನ ಎಂಟ್ರಿ ಲೆವಲ್ ಬೈಕ್ ಡ್ಯೂಕ್ 125 ಮಾದರಿಯ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಹಲವಾರು ಹೊಸ ವಿನ್ಯಾಸದೊಂದಿಗೆ ಪ್ರಮುಖ ತಾಂತ್ರಿಕ ಸೌಲಭ್ಯಗಳಲ್ಲಿ ಉನ್ನತೀಕರಣಗೊಂಡಿದೆ.

ಡ್ಯೂಕ್ 125 ಬೈಕ್ ಮಾದರಿಯನ್ನು ಈ ವರ್ಷದ ಮಧ್ಯಂತರದಲ್ಲಿ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದ ಕೆಟಿಎಂ ಕಂಪನಿಯು ಇದೀಗ 2021ರ ಆವೃತ್ತಿಯನ್ನು ಪರಿಚಯಿಸಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.50 ಲಕ್ಷ ಬೆಲೆ ಹೊಂದಿದೆ. ಹೊಸ ತಾಂತ್ರಿಕ ಅಂಶಗಳೊಂದಿಗೆ ಉನ್ನತೀಕರಣಗೊಂಡಿರುವ 2021ರ ಡ್ಯೂಕ್ 125 ಮಾದರಿಯು 200, 250 ಮತ್ತು 390 ಡ್ಯೂಕ್ ಮಾದರಿಗಳಲ್ಲೇ ಹೊರ ವಿನ್ಯಾಸ ಪಡೆದುಕೊಂಡಿದೆ.

ಹೊಸ ಬೈಕ್ ಮಾದರಿಯು ಬಿಎಸ್-6 ಎಂಜಿನ್ ಮಾದರಿಗಿಂತಲೂ ರೂ.8 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಬಿಎಸ್-4 ಮಾದರಿಯಿಂದ ಬಿಎಸ್-6 ಎಂಜಿನ್‌ಗೆ ಉನ್ನತೀಕರಣಗೊಂಡ ಸಮಯದಲ್ಲಿ ರೂ. 7 ಸಾವಿರದಷ್ಟು ದುಬಾರಿಯಾಗಿತ್ತು.

ಇದೀಗ 2021ರ ಮಾದರಿಯ ನಂತರ ಒಂದೇ ವರ್ಷದಲ್ಲಿ ಡ್ಯೂಕ್ 125 ಬೈಕ್ ಮಾದರಿಯು ಸುಮಾರು ರೂ.15 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಂತಾಗಿದ್ದು, ಹೊಸ ಬೈಕ್ ಮಾದರಿಯಲ್ಲಿ ತಾಂತ್ರಿಕ ಅಂಶಗಳು ಮತ್ತು ಕೆಲವು ವಿನ್ಯಾಸಗಳ ಬದಲಾವಣೆ ಹೊರತುಪಡಿಸಿ ಬಿಎಸ್-6 ಮಾದರಿಯಲ್ಲಿನ ಎಂಜಿನ್ ಆಯ್ಕೆಯನ್ನೇ 2021ರ ಆವೃತ್ತಿಯಲ್ಲೂ ಮುಂದುವರಿಸಲಾಗಿದೆ.

ಹೊಸ ಬೈಕ್ ಮಾದರಿಯಲ್ಲಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದ್ದು, 1290 ಸೂಪರ್ ಡ್ಯೂಕ್ ಮಾದರಿಯಿಂದ ಕೆಲವು ವಿನ್ಯಾಸಗಳನ್ನು ಎರವಲು ಪಡೆದುಕೊಳ್ಳುವ ಮೂಲಕ ಮತ್ತಷ್ಟು ಸ್ಪೋರ್ಟಿಯಾಗಿ ವಿನ್ಯಾಸಗೊಳಿಸಲಾಗಿದೆ. ಹೊಸ ವಿನ್ಯಾಸದ ನಂತರ ಚಾರ್ಸಿ ಕೂಡಾ ತುಸು ಬದಲಾವಣಗೆಯೊಂದಿಗೆ ಪರ್ಫಾಮೆನ್ಸ್‌ಗೆ ಪೂರಕವಾಗಿ ಬೋಲ್ಟ್ ಆನ್ ಸಬ್‌ಫ್ರೆಮ್ ಫೀಚರ್ಸ್ ಹೊಂದಿದ್ದು, ಫ್ಯೂಲ್ ಟ್ಯಾಂಕ್ ಕೂಡಾ ಈ ಬಾರಿ ಮರುವಿನ್ಯಾಸಗೊಂಡಿದೆ.

ಡ್ಯೂಕ್ 125 ಬೈಕ್ ಮಾದರಿಯಲ್ಲಿ ಈ ಬಾರಿ 13.5 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ನೀಡಲಾಗಿದ್ದು, ಅತ್ಯುತ್ತಮ ಹಿಡಿತ ಹೊಂದಿರುವ ಎಂಆರ್‌ಎಫ್ ಟೈರ್‌ನೊಂದಿಗೆ ಹೊಸ ಬೈಕ್ ಒಟ್ಟು 159 ಕೆ.ಜಿ ತೂಕ ಪಡೆದುಕೊಂಡಿದೆ.

ಹೊಸ ಚಾರ್ಸಿಯಿಂದಾಗಿ ಸವಾರನ ಸ್ಥಾನವು ಕೂಡಾ 818ಎಂಎಂ ನಿಂದ 822 ಎಂಎಂ ಗೆ ಹೆಚ್ಚಳವಾಗಿದ್ದು, ಬಿಎಸ್-6 ಮಾದರಿಗಿಂತಲೂ ಒಟ್ಟು 7 ಕೆ.ಜಿ ತೂಕ ಹೆಚ್ಚಿದೆ. ಇನ್ನು ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಬದಿಯಲ್ಲಿ ಮೊನೊ ಶಾರ್ಕ್ ಸಸ್ಪೆಷನ್ ನೀಡಲಾಗಿದ್ದು, ಅತ್ಯುತ್ತಮ ರೈಡಿಂಗ್ ಪೊಸಿಷನ್ ಒದಗಿಸಲಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್
ಬಿಎಸ್-6 ಮಾದರಿಯಲ್ಲಿರುವಂತೆ 2021ರ ಡ್ಯೂಕ್ 125 ಮಾದರಿಯಲ್ಲಿ 125 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನೀಡಲಾಗಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.3-ಬಿಎಚ್‌ಪಿ, 12-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಇದರೊಂದಿಗೆ ಹೊಸ ಡ್ಯೂಕ್ 125 ಮಾದರಿಯಲ್ಲಿ ಹೊಸದಾಗಿ ಎಲೆಕ್ಟ್ರಾನಿಕ್ ಆರೇಂಜ್ ಮತ್ತು ಸೆರಾಮಿಕ್ ವೈಟ್ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಎಂಟ್ರಿ ಲೆವಲ್ ಪರ್ಫಾಮೆನ್ಸ್ ಮಾದರಿಗೆ ಭಾರತದಲ್ಲಿ ಯಾವುದೇ ಬೈಕ್ ಮಾದರಿಯು ನೇರ ಸ್ಪರ್ಧಿಗಳಿಲ್ಲ. ಆದರೆ ಬೆಲೆ ಮತ್ತು ಪರ್ಫಾಮೆನ್ಸ್ ಆಧಾರದ ಮೇಲೆ ಡ್ಯೂಕ್ 125 ಬೈಕ್ ಮಾದರಿಯು ಹೋಂಡಾ ಹಾರ್ನೆಟ್ 2.0, ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ, ಬಜಾಜ್ ಎನ್ಎಸ್200 ಮತ್ತು ಯಮಹಾ ಎಂಟಿ-15 ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.