ಏಪ್ರಿಲ್ ಅವಧಿಯ ವಾಹನಗಳ ರಫ್ತು ಪ್ರಮಾಣದಲ್ಲಿ ಬಜಾಜ್ ಆಟೋ ಇದೀಗ ನಂ.1

ಲಾಕ್‌ಡೌನ್‌ನಿಂದಾಗಿ ಹೊಸ ವಾಹನಗಳ ಮಾರಾಟವು ಸಂಪೂರ್ಣವಾಗಿ ನೆಲಕಚ್ಚಿದ್ದು, ಬಹುತೇಕ ಆಟೋ ಕಂಪನಿಗಳು ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿವೆ. ಮಾರ್ಚ್ 15ರಿಂದ ಇದುವರೆಗೂ ಯಾವುದೊಂದು ಕಂಪನಿಯು ಒಂದೇ ಒಂದು ವಾಹನವನ್ನು ಕೂಡಾ ಮಾರಾಟ ಮಾಡಿಲ್ಲ.

ಏಪ್ರಿಲ್ ಅವಧಿಯ ವಾಹನಗಳ ರಫ್ತು ಪ್ರಮಾಣದಲ್ಲಿ ಬಜಾಜ್ ಆಟೋ ಇದೀಗ ನಂ.1

ಕರೋನಾ ವೈರಸ್ ಅನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಉದ್ದೇಶದಿಂದ ಲಾಕ್‌ಡೌನ್ ಅನ್ನು ಇದೀಗ ಮೂರನೇ ಬಾರಿ ವಿಸ್ತರಣೆ ಮಾಡಲಾಗಿದ್ದು, ಕೆಲವೇ ಕೆಲವು ಅಗತ್ಯ ಸೇವೆಗಳನ್ನು ಹೊರತಪಡಿಸಿ ಬಹುತೇಕ ವಾಣಿಜ್ಯ ವ್ಯವಹಾರಗಳನ್ನು ಬಂದ್ ಮಾಡಲಾಗಿದೆ. ಇದರಲ್ಲಿ ವಾಹನ ಮಾರಾಟವು ಒಂದಾಗಿದ್ದು, ಹಸಿರು ವಲಯದಲ್ಲಿ ವಾಹನ ಉತ್ಪಾದನಾ ಪ್ರಕ್ರಿಯೆಗೆ ಅವಕಾಶ ನೀಡಲಾಗಿದೆಯಾದರೂ ಮಾರಾಟಕ್ಕೆ ಅವಕಾಶ ಸಿಕ್ಕಿಲ್ಲ.

ಏಪ್ರಿಲ್ ಅವಧಿಯ ವಾಹನಗಳ ರಫ್ತು ಪ್ರಮಾಣದಲ್ಲಿ ಬಜಾಜ್ ಆಟೋ ಇದೀಗ ನಂ.1

ಹೀಗಾಗಿ ಕಳೆದ ಒಂದೂವರೆ ತಿಂಗಳಿನಿಂದ ಬಹುತೇಕ ಆಟೋ ಕಂಪನಿಗಳ ವಾಹನಗಳ ಮಾರಾಟ ಸಂಖ್ಯೆಯೂ ದೇಶಿಯ ಮಾರುಕಟ್ಟೆಯಲ್ಲಿ ಸೊನ್ನೆ ಸುತ್ತಿದ್ದು, ರಫ್ತು ಪ್ರಮಾಣವು ಮಾತ್ರ ಕೆಲವು ಕಂಪನಿಗಳು ಮುನ್ನಡೆ ಸಾಧಿಸಿವೆ.

MOST READ: ಲಾಕ್‌ಡೌನ್ ಎಫೆಕ್ಟ್: ನಿಯಮ ಉಲ್ಲಂಘಿಸಿದ ಜಿಲ್ಲಾಧಿಕಾರಿ ಕಾರನ್ನೇ ತಡೆದ ಕಾನ್ಸ್‌ಸ್ಟೆಬಲ್..!

ಏಪ್ರಿಲ್ ಅವಧಿಯ ವಾಹನಗಳ ರಫ್ತು ಪ್ರಮಾಣದಲ್ಲಿ ಬಜಾಜ್ ಆಟೋ ಇದೀಗ ನಂ.1

ದೇಶದ ಜನಪ್ರಿಯ ಆಟೋ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಆಟೋ ಕೂಡಾ ದೇಶಿಯ ಮಾರುಕಟ್ಟೆಯಲ್ಲಿ ವಾಹನ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿದರೂ ರಫ್ತು ಪ್ರಮಾಣದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.

ಏಪ್ರಿಲ್ ಅವಧಿಯ ವಾಹನಗಳ ರಫ್ತು ಪ್ರಮಾಣದಲ್ಲಿ ಬಜಾಜ್ ಆಟೋ ಇದೀಗ ನಂ.1

ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳನ್ನು ಉತ್ಪಾದನೆ ಮಾಡುವ ಬಜಾಜ್ ಆಟೋ ಕಂಪನಿಯು ಏಪ್ರಿಲ್ ಅವಧಿಯಲ್ಲಿ ಒಟ್ಟು 32,009 ಯುನಿಟ್ ವಾಹನಗಳನ್ನು ರಫ್ತು ಮಾಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿನ ರಫ್ತು ಪ್ರಮಾಣಕ್ಕಿಂತಲೂ ಇದು ಶೇ.5ರಷ್ಟು ಹೆಚ್ಚಳವಾಗಿದೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಏಪ್ರಿಲ್ ಅವಧಿಯ ವಾಹನಗಳ ರಫ್ತು ಪ್ರಮಾಣದಲ್ಲಿ ಬಜಾಜ್ ಆಟೋ ಇದೀಗ ನಂ.1

ಆದರೆ ದೇಶಿಯ ಮಾರುಕಟ್ಟೆಯಲ್ಲಿ ವಾಹನ ಮಾರಾಟಕ್ಕೆ ಅವಕಾಶ ಸಿಗದಿರುವುದು ಆಟೋ ಕಂಪನಿಗಳಿಗೆ ಭಾರೀ ಪ್ರಮಾಣದ ಆರ್ಥಿಕ ಸಂಕಷ್ಟ ಶುರುವಾಗಿದ್ದು, ರಫ್ತು ಪ್ರಮಾಣ ಮಾತ್ರ ಕಳೆದ ತಿಂಗಳಿನಲ್ಲಿ ತುಸು ಆದಾಯ ತಂದುಕೊಟ್ಟಿದೆ.

ಏಪ್ರಿಲ್ ಅವಧಿಯ ವಾಹನಗಳ ರಫ್ತು ಪ್ರಮಾಣದಲ್ಲಿ ಬಜಾಜ್ ಆಟೋ ಇದೀಗ ನಂ.1

ಇನ್ನು ಹಸಿರು ವಲಯಗಳಲ್ಲಿ ಲಾಕ್‌ಡೌನ್ ಸಡಿಲಿಕೆ ನಂತರ ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಕಳೆದ ಒಂದೂವರೆ ತಿಂಗಳ ನಂತರ ವಾಹನ ಉತ್ಪಾದನೆಯನ್ನು ಪುನಾರಂಭಿಸಿದ್ದು, ಬಜಾಜ್ ಆಟೋ ಕಂಪನಿಯು ಕೂಡಾ ಎರಡು ಉತ್ಪಾದನಾ ಘಟಕಗಳನ್ನು ತೆರೆದಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಏಪ್ರಿಲ್ ಅವಧಿಯ ವಾಹನಗಳ ರಫ್ತು ಪ್ರಮಾಣದಲ್ಲಿ ಬಜಾಜ್ ಆಟೋ ಇದೀಗ ನಂ.1

ಹಸಿರು ವಲಯದಲ್ಲಿರುವ ಔರಂಗಾಬಾದ್ ಮತ್ತು ರುದ್ರಪುರ್ ಘಟಕಗಳಿಗೆ ಮಾತ್ರವೇ ಅವಕಾಶ ಸಿಕ್ಕಿದ್ದು, ಇನ್ನೊಂದು ಪ್ರಮುಖ ಘಟಕವಾದ ಪುಣೆಯ ಚಾಕನ್ ಘಟಕವು ಕೆಂಪು ವಲಯದಲ್ಲಿರುವುದರಿಂದ ಆಟೋ ಉತ್ಪಾದನೆಗೆ ಅವಕಾಶ ಸಿಕ್ಕಿಲ್ಲ.

ಏಪ್ರಿಲ್ ಅವಧಿಯ ವಾಹನಗಳ ರಫ್ತು ಪ್ರಮಾಣದಲ್ಲಿ ಬಜಾಜ್ ಆಟೋ ಇದೀಗ ನಂ.1

ಕೇಂದ್ರ ಸರ್ಕಾರ ನೀಡಿರುವ ಗೈಡ್‌ಲೆನ್ಸ್ ಪ್ರಕಾರ, ಹಸಿರು ವಲಯದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸಾಧನಗಳನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಏಪ್ರಿಲ್ ಅವಧಿಯ ವಾಹನಗಳ ರಫ್ತು ಪ್ರಮಾಣದಲ್ಲಿ ಬಜಾಜ್ ಆಟೋ ಇದೀಗ ನಂ.1

ಹೀಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಾಹನಗಳ ಉತ್ಪಾದನೆಯನ್ನು ಕೈಗೊಳ್ಳುತ್ತಿರುವ ಆಟೋ ಕಂಪನಿಗಳು ಆರ್ಥಿಕ ಸಂಕಷ್ಟದಿಂದ ಹೊರಬರಲು ಯತ್ನಿಸುತ್ತಿದ್ದು, ಸಂಕಷ್ಟದ ನಡುವೆಯೂ ಸರ್ಕಾರದ ಮನವಿ ಮೇರೆಗೆ ವೈದ್ಯಕೀಯ ಉಪಕರಣಗಳ ಉತ್ಪಾದನೆ ಜೊತೆಗೆ ಹಣಕಾಸಿನ ನೆರವು ಸಹ ನೀಡಿವೆ.

Most Read Articles

Kannada
English summary
Bajaj Auto has revealed that didn't sell any two-wheelers or commercial vehicles in the domestic market in April. However, The company has shipped 32,009 two-wheeler units to overseas markets last month, Bajai Auto said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X