ಕರೋನಾ ಸಂಕಷ್ಟದ ನಡುವೆಯೂ ಉತ್ತಮ ಬೇಡಿಕೆ ಕಾಯ್ದುಕೊಂಡ ಪಲ್ಸರ್ ಸರಣಿ ಬೈಕ್‌ಗಳು

ಕರೋನಾ ವೈರಸ್‌ನಿಂದಾಗಿ ಆಟೋ ಉದ್ಯಮವು ತೀವ್ರವಾಗಿ ಕುಸಿತಕಂಡಿದ್ದು, ಬಹುತೇಕ ಆಟೋ ಕಂಪನಿಗಳು ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ. ಆದರೆ ಸಂಕಷ್ಟ ಪರಿಸ್ಥಿತಿಯಲ್ಲೂ ಬಜಾಜ್ ನಿರ್ಮಾಣದ ಪಲ್ಸರ್ ಸರಣಿ ಬೈಕ್‌ಗಳು ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಕಳೆದ ವರ್ಷದ ಮಾರಾಟ ಪ್ರಮಾಣಕ್ಕಿಂತಲೂ ತುಸು ಹಿನ್ನಡೆ ಅನುಭವಿಸಿವೆ.

ಪಲ್ಸರ್ ಬೈಕ್‌ಗಳಿಗೆ ಕರೋನಾ ಸಂಕಷ್ಟದಲ್ಲೂ ಉತ್ತಮ ಬೇಡಿಕೆ

2020ರ ಜೂನ್ ಅವಧಿಯಲ್ಲಿ ಒಟ್ಟು 80,822 ಯುನಿಟ್ ಪಲ್ಸರ್ ಸರಣಿ ಬೈಕ್‌ಗಳನ್ನು ಮಾರಾಟ ಮಾಡಿರುವ ಬಜಾಜ್ ಆಟೋ ಕಂಪನಿಯು 2019ರ ಜೂನ್ ಅವಧಿಯಲ್ಲಿ 83,008 ಯುನಿಟ್ ಪಲ್ಸರ್ ಸರಣಿ ಬೈಕ್‌ಗಳನ್ನು ಮಾರಾಟ ಮಾಡಿತ್ತು. ಹೀಗಾಗಿ ಕಳೆದ ವರ್ಷದ ಬೈಕ್ ಮಾರಾಟಕ್ಕಿಂತಲೂ ಶೇ. 2.63ರಷ್ಟು ಬೇಡಿಕೆ ಕುಸಿತ ಕಂಡರೂ 80,822 ಯುನಿಟ್ ಮಾರಾಟವು ಸಂಕಷ್ಟ ಪರಿಸ್ಥಿತಿಯಲ್ಲೂ ಉತ್ತಮ ಸಂಖ್ಯೆಯಾಗಿದೆ ಎನ್ನಬಹುದು.

ಪಲ್ಸರ್ ಬೈಕ್‌ಗಳಿಗೆ ಕರೋನಾ ಸಂಕಷ್ಟದಲ್ಲೂ ಉತ್ತಮ ಬೇಡಿಕೆ

ಹಲವು ಆಟೋ ಕಂಪನಿಗಳು ಕಳೆದ ವರ್ಷದ ಮೇ ಮತ್ತು ಜೂನ್ ಅವಧಿಯಲ್ಲಿ ವಾಹನ ಮಾರಾಟಕ್ಕೂ ಮತ್ತು ಈ ವರ್ಷದ ವಾಹನ ಮಾರಾಟಕ್ಕೂ ಹೋಲಿಕೆ ಮಾಡಿದ್ದಲ್ಲಿ ಶೇ.30ರಿಂದ ಶೇ.60 ರಷ್ಟು ಕುಸಿತ ಕಂಡಿದ್ದು, ಬಜಾಜ್ ಕಂಪನಿಗೆ ಪಲ್ಸರ್ ಸರಣಿ ಬೈಕ್‌ಗಳ ಮಾರಾಟವು ಸಂಕಷ್ಟ ಕೈಹಿಡಿದಿವೆ.

ಪಲ್ಸರ್ ಬೈಕ್‌ಗಳಿಗೆ ಕರೋನಾ ಸಂಕಷ್ಟದಲ್ಲೂ ಉತ್ತಮ ಬೇಡಿಕೆ

2001ರಿಂದಲೇ ಪಲ್ಸರ್ ಸರಣಿ ಬೈಕ್‌ಗಳ ಮಾರಾಟವನ್ನು ಹೊಂದಿರುವ ಬಜಾಜ್ ಕಂಪನಿಯು ಕಳೆದ ಎರಡು ದಶಕಗಳಿಂದಲೂ ಮಾರಾಟದಲ್ಲಿ ಜನಪ್ರಿಯತೆಯನ್ನು ಮುಂದುವರಿಸಿಕೊಂಡು ಬಂದಿದ್ದು, ಗ್ರಾಹಕರ ಬೇಡಿಕೆ ಅನ್ವಯ ಪಲ್ಸರ್ ಸರಣಿಯ ಶ್ರೇಣಿಯನ್ನು ಗಣನೀಯವಾಗಿ ವಿಸ್ತರಿಸಿದೆ.

ಪಲ್ಸರ್ ಬೈಕ್‌ಗಳಿಗೆ ಕರೋನಾ ಸಂಕಷ್ಟದಲ್ಲೂ ಉತ್ತಮ ಬೇಡಿಕೆ

ಆರಂಭದಲ್ಲಿ 150 ಮತ್ತು 180 ಸಿಸಿ ಸಾಮಾರ್ಥ್ಯದ ಪಲ್ಸರ್ ಸರಣಿಗಳನ್ನು ಮಾತ್ರವೇ ಹೊಂದಿದ್ದ ಬಜಾಜ್ ಕಂಪನಿಯು ಇದೀಗ 125, 150, ಎನ್ಎಸ್ 160, 180 ಎಫ್, 220 ಎಫ್, ಎನ್ಎಸ್200, ಆರ್‌ಎಸ್ 200 ಸರಣಿ ಬೈಕ್ ಮಾರಾಟ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 70,995 ದಿಂದ ರೂ.1,49,466 ತನಕ ಬೆಲೆ ಹೊಂದಿವೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಪಲ್ಸರ್ ಬೈಕ್‌ಗಳಿಗೆ ಕರೋನಾ ಸಂಕಷ್ಟದಲ್ಲೂ ಉತ್ತಮ ಬೇಡಿಕೆ

ಇನ್ನು ಬಜಾಜ್ ಆಟೋ ಕಂಪನಿಯು ತನ್ನ ಎಲ್ಲಾ ದ್ವಿಚಕ್ರ ವಾಹನ ಮಾದರಿಗಳನ್ನು ಹೊಸ ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿ ಬಿಡುಗಡೆಗೊಳಿಸಿದ್ದು, ಹೊಸ ಬೈಕ್‌ಗಳ ಎಂಜಿನ್ ಉನ್ನತೀಕರಣದ ನಂತರವೇ ಬೆಲೆಯಲ್ಲಿ ಎರಡನೇ ಬಾರಿಗೆ ಏರಿಕೆ ಮಾಡಿದೆ.

ಪಲ್ಸರ್ ಬೈಕ್‌ಗಳಿಗೆ ಕರೋನಾ ಸಂಕಷ್ಟದಲ್ಲೂ ಉತ್ತಮ ಬೇಡಿಕೆ

ಬಜಾಜ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ದರ ಪಟ್ಟಿಯಲ್ಲಿ ಬಹುತೇಕ ದ್ವಿಚಕ್ರ ವಾಹನಗಳು ರೂ.800 ರಿಂದ ರೂ.1,200 ಬೆಲೆ ಏರಿಕೆ ಪಡೆದುಕೊಂಡಿದ್ದು, ಹೊಸ ಬೈಕ್‌ಗಳ ಬೆಲೆಯಲ್ಲಿ ಇದು ಎರಡನೇ ಬಾರಿಗೆ ಹೆಚ್ಚಳ ಮಾಡಲಾದ ಬೆಲೆಯಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಪಲ್ಸರ್ ಬೈಕ್‌ಗಳಿಗೆ ಕರೋನಾ ಸಂಕಷ್ಟದಲ್ಲೂ ಉತ್ತಮ ಬೇಡಿಕೆ

ಹೊಸ ಬೈಕ್ ಬೆಲೆ ಏರಿಕೆಗೆ ಯಾವುದೇ ಕಾರಣ ನೀಡಿಲ್ಲವಾದರೂ ಸದ್ಯದ ಪರಿಸ್ಥಿತಿಯಲ್ಲಿ ಉತ್ಪಾದನಾ ಪ್ರಕ್ರಿಯೆಯ ವೆಚ್ಚವು ಅಧಿಕವಾಗಿರುವುದೇ ಬೆಲೆ ಏರಿಕೆ ಹೆಚ್ಚಳವು ಅನಿವಾರ್ಯವಾಗಿದೆ.

Most Read Articles

Kannada
English summary
Bajaj Pulsar Sales Decline By 2.6 Percentage In June 2020. Read in Kannada.
Story first published: Friday, July 31, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X