ಭಾರತದಲ್ಲಿ 30ನೇ ಶೋರೂಂ ತೆರೆದ ಬೆನೆಲ್ಲಿ ಇಂಡಿಯಾ
ಬೆನೆಲ್ಲಿ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ 30ನೇ ಶೋರೂಂ ಅನ್ನು ಚಂಡೀಗಢದಲ್ಲಿ ತೆರೆದಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಶೋರೂಂ ಚಂಡೀಗಢದ ಕೈಗಾರಿಕಾ ಪ್ರದೇಶದ 1ನೇ ಹಂತದ 9ನೇ ಪ್ಲಾಟ್ ನಲ್ಲಿದೆ.

ಬೆನೆಲ್ಲಿ ಇಂಡಿಯಾ ಕಂಪನಿಯು ಅಥರ್ವಾ ಆಟೊಸ್ಪೇಸ್ ಸಹಯೋಗದೊಂದಿಗೆ ಈ ಶೋರೂಂ ಅನ್ನು ತೆರೆದಿದೆ. ಈ ಶೋರೂಂನಲ್ಲಿ ಬೆನೆಲ್ಲಿ ಇಂಪೀರಿಯಲ್ 400 ಹಾಗೂ ಹೊಸ ಬೆನೆಲ್ಲಿ ಬೈಕ್ ಸೇರಿದಂತೆ ಹಲವು ಹೊಸ ಬೈಕುಗಳನ್ನು ಪ್ರದರ್ಶಿಸಲಾಗುತ್ತದೆ. ಬೆನೆಲ್ಲಿ ಕಂಪನಿಯ ಈ ಶೋರೂಂನಲ್ಲಿ ತರಬೇತಿ ಪಡೆದ ಸಿಬ್ಬಂದಿಗಳಿದ್ದಾರೆ.

ಈ ಸಿಬ್ಬಂದಿ, ಗ್ರಾಹಕರು ಪ್ರತಿ ಬೈಕುಗಳಿಗೆ ಸಂಬಂಧಪಟ್ಟಂತೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಗ್ರಾಹಕರಿಗೆ ಉತ್ತಮವಾದ ಖರೀದಿ ಅನುಭವವನ್ನು ನೀಡಲಿದ್ದಾರೆ. ಈ ಶೋರೂಂನಲ್ಲಿ ಬೆನೆಲ್ಲಿಯ ಬೈಕುಗಳನ್ನು ಮಾರಾಟ ಮಾಡುವುದು ಮಾತ್ರವಲ್ಲದೇ ಅವುಗಳಿಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರವನ್ನೂ ಸಹ ನೀಡಲಾಗುತ್ತದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬೈಕ್‌ಗಳ ಮಾರಾಟದ ಜೊತೆಗೆ ಈ ಶೋರೂಂನಲ್ಲಿ ಕಂಪನಿಯ ಜಿನಿಯನ್ ಆಕ್ಸೆಸರಿಸ್ ಗಳನ್ನು ಸಹ ಮಾರಾಟ ಮಾಡಲಾಗುತ್ತದೆ. ಬೆನೆಲ್ಲಿ ಕಂಪನಿಯು ಈ ಶೋರೂಂನಲ್ಲಿ ಬೈಕುಗಳನ್ನು ಕಸ್ಟಮೈಸ್ ಮಾಡಲು ಆಕ್ಸೆಸರಿಸ್ ಗಳನ್ನು ಸಹ ಒದಗಿಸುತ್ತದೆ.

ಬೈಕುಗಳನ್ನು ಕಸ್ಟಮೈಸ್ ಮಾಡಲು ಎಲ್ಲಾ ಶೋರೂಂಗಳಲ್ಲಿ ಆಕ್ಸೆಸರಿಸ್ ಗಳನ್ನು ನೀಡುತ್ತಿಲ್ಲ. ಬದಲಿಗೆ ಹಂತ ಹಂತವಾಗಿ ತನ್ನ ಬೈಕುಗಳ ಕಸ್ಟಮೈಸ್ ಮಾಡಲು ಬೇಕಾದ ಪರಿಕರಗಳನ್ನು ನೀಡಲಿದೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಬೆನೆಲ್ಲಿ ಕಂಪನಿಯು ಜುಲೈ ತಿಂಗಳಿನಲ್ಲಿ ತನ್ನ ಇಂಪೀರಿಯಲ್ 400 ಬಿಎಸ್ 6 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.99 ಲಕ್ಷಗಳಾಗಿದೆ. ರೂ.6000 ಪಾವತಿಸಿ ಈ ಬೈಕ್ ಅನ್ನು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಬಹುದು.

ಬೆನೆಲ್ಲಿ ಇಂಪೀರಿಯಲ್ 400 ಬೈಕಿನಲ್ಲಿ 374 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 21 ಬಿಹೆಚ್‌ಪಿ ಪವರ್ ಹಾಗೂ 29 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕ್ಲಾಸಿಕ್ ಸೆಗ್ ಮೆಂಟಿನಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕಿಗೆ ಪೈಪೋಟಿ ನೀಡಲು ಈ ಬೈಕನ್ನು ಬಿಡುಗಡೆಗೊಳಿಸಲಾಗಿದೆ.


Click it and Unblock the Notifications








