ಬಿಎಸ್-6 ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆ ಹೆಚ್ಚಳ ಮಾಡಿದ ಹೋಂಡಾ

ಕಳೆದ ಡಿಸೆಂಬರ್ ಕೊನೆಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡಿದ್ದ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಇದೀಗ ಹೊಸ ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಳ ಮಾಡಿದೆ.

ಬಿಎಸ್-6 ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆ ಹೆಚ್ಚಳ ಮಾಡಿದ ಹೋಂಡಾ

ಬಿಎಸ್-6 ಎಂಜಿನ್ ಜೊತೆ ಉನ್ನತೀಕರಿಸಲು ಸಾಧ್ಯವಿಲ್ಲ ಕೆಲವು ಸ್ಕೂಟರ್ ಮಾದರಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ತೆಗೆದುಹಾಕಿರುವ ಹೋಂಡಾ ಕಂಪನಿಯು ಇದೇ ಸಂದರ್ಭ ಪ್ರಸ್ತುತ ಮಾರುಕಟ್ಟೆಯಲ್ಲಿನ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆಯನ್ನು ಹೆಚ್ಚಳ ಮಾಡಿದೆ. ಈ ಹಿಂದೆ ಬಿಎಸ್-4 ನಿಂದ ಬಿಎಸ್-6 ಎಂಜಿನ್‌ಗೆ ಉನ್ನತೀಕರಿಸುವಾಗ ರೂ.5 ಸಾವಿರದಿಂದ ರೂ.8 ಸಾವಿರದಷ್ಟು ಬೆಲೆ ಹೆಚ್ಚಳ ಮಾಡಿದ್ದ ಹೋಂಡಾ ಕಂಪನಿಯು ಇದೀಗ ಮತ್ತೆ ಪ್ರತಿ ಮಾಡೆಲ್‌ಗಳ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 552 ಹೆಚ್ಚಳ ಮಾಡಿದೆ.

ಬಿಎಸ್-6 ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆ ಹೆಚ್ಚಳ ಮಾಡಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಈಗಾಗಲೇ ತನ್ನ ಬಹುತೇಕ ದ್ವಿಚಕ್ರ ವಾಹನಗಳನ್ನು ಬಿಎಸ್-6 ನಿಯಮ ಅನುಸಾರವಾಗಿ ಉನ್ನತೀಕರಿಸಿ ಬಿಡುಗಡೆಗೊಳಿಸಿದ್ದು, ಹೊಸ ನಿಯಮದೊಂದಿಗೆ ಉನ್ನತೀಕರಿಸಲು ಸಾಧ್ಯವಿಲ್ಲದ ಎವಿಯೆಟರ್ ಮತ್ತು ಗ್ರಾಜಿಯಾ ಸ್ಕೂಟರ್‌ಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ.

MOST READ: ಕರೋನಾ ವಿರುದ್ಧದ ಹೋರಾಟಕ್ಕಾಗಿ 60 ಬೈಕ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಹೀರೋ

ಬಿಎಸ್-6 ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆ ಹೆಚ್ಚಳ ಮಾಡಿದ ಹೋಂಡಾ

ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವಾ 6ಜಿ, ಆಕ್ಟಿವಾ 125 ಎಫ್ಐ, ಡಿಯೋ, ಎಸ್‌ಪಿ 125 ಮತ್ತು ಶೈನ್ ಬೈಕ್ ಮಾದರಿಗಳು ಬಿಎಸ್-6 ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಎಮಿಷನ್ ಜಾರಿಗೆ ಮುನ್ನವೇ ಬಿಡುಗಡೆಯಾಗಿದ್ದ ಹೊಸ ದ್ವಿಚಕ್ರ ವಾಹನಗಳಿಗೆ ದಾಖಲೆ ಪ್ರಮಾಣದ ಬೇಡಿಕೆ ಹರಿದು ಬಂದಿದೆ.

ಬಿಎಸ್-6 ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆ ಹೆಚ್ಚಳ ಮಾಡಿದ ಹೋಂಡಾ

ಕಳೆದ ಮಾರ್ಚ್ ಅವಧಿಯಲ್ಲಿ ಕರೋನಾ ಭೀತಿ ನಡುವೆಯೂ 2.60 ಲಕ್ಷ ಬಿಎಸ್-6 ಎಂಜಿನ್ ಪ್ರೇರಿತ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದ ಹೋಂಡಾ ಕಂಪನಿಯು ಇದೀಗ ಹೊಸ ವಾಹನಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ್ದು, ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆಯಲ್ಲಿ ಮಾತ್ರವೇ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗಿಂತ ರೂ.552 ಹೆಚ್ಚಿಸಲಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಬಿಎಸ್-6 ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆ ಹೆಚ್ಚಳ ಮಾಡಿದ ಹೋಂಡಾ

ಆಕ್ಟಿವಾ 6ಜಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.63,912ಕ್ಕೆ(ಸ್ಟ್ಯಾಂಡರ್ಡ್) ಮತ್ತು ಟಾಪ್ ವೆರಿಯೆಂಟ್ ಡಿಲಕ್ಸ್ ರೂ.65,412 ಬೆಲೆ ಪಡೆದುಕೊಂಡಿದ್ದು, ಬೆಲೆ ಹೆಚ್ಚಳ ನಂತರ ಅನುಕ್ರಮವಾಗಿ ರೂ. 64,464ಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆ ರೂ. 65,964 ಕ್ಕೆ ನಿಗದಿಪಡಿಸಲಾಗಿದೆ.

ಬಿಎಸ್-6 ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆ ಹೆಚ್ಚಳ ಮಾಡಿದ ಹೋಂಡಾ

ಹಾಗೆಯೇ ಬಿಎಸ್-4 ವೈಶಿಷ್ಟ್ಯತೆಯ ಎಂಜಿನ್‌ಗಿಂತಲೂ ಸಾಕಷ್ಟು ಸುಧಾರಣೆ ಹೊಂದಿರುವ ಬಿಎಸ್-6 ಎಂಜಿನ್ ಪ್ರೇರಿತ ಆಕ್ಟಿವಾ 125 ಮಾದರಿಯು ಈ ಬಾರಿ ಫ್ಯೂಲ್ ಇಂಜೆಕ್ಷಡ್ ಯುನಿಟ್ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 67,490ಕ್ಕೆ ನಿಗದಿಪಡಿಸಲಾಗಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಬಿಎಸ್-6 ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆ ಹೆಚ್ಚಳ ಮಾಡಿದ ಹೋಂಡಾ

ಇದೀಗ ಹೊಸ ಆಕ್ಟಿವಾ 125 ಎಫ್ಐ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸ್ಟ್ಯಾಂಡರ್ಡ್ ಮಾದರಿಗೆ ರೂ.68,042 ನಿಗದಿ ಮಾಡಲಾಗಿದ್ದು, ಇದರಲ್ಲಿ ಅಲಾಯ್ ಆವೃತ್ತಿಯು 71,542ಕ್ಕೆ ಮತ್ತು ಡಿಲಕ್ಸ್ ಆವೃತ್ತಿಯು ರೂ. 75,042ಕ್ಕೆ ನಿಗದಿಪಡಿಸಲಾಗಿದೆ.

ಬಿಎಸ್-6 ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆ ಹೆಚ್ಚಳ ಮಾಡಿದ ಹೋಂಡಾ

ಇನ್ನು ಬಿಎಸ್-4 ವೈಶಿಷ್ಟ್ಯತೆಯ ಎಂಜಿನ್‌ಗಿಂತಲೂ ಸಾಕಷ್ಟು ಸುಧಾರಣೆ ಹೊಂದಿರುವ ಬಿಎಸ್-6 ಎಂಜಿನ್ ಪ್ರೇರಿತ ಆಕ್ಟಿವಾ 6ಜಿ, ಡಿಯೋ, ಆಕ್ಟಿವಾ 125, ಎಸ್‌ಪಿ 125, ಶೈನ್ ಬೈಕ್ ಮಾದರಿಯು ದುಬಾರಿ ಬೆಲೆ ಹೊಂದಿದ್ದರೂ ಗ್ರಾಹಕರನ್ನು ಸೆಳೆಯುತ್ತಿದ್ದು, ಮೈಲೇಜ್ ವಿಚಾರದಲ್ಲಿ ಹೊಸ ಎಂಜಿನ್ ಪ್ರೇರಿತ ವಾಹನಗಳು ಆಕರ್ಷಣೆಗೆ ಕಾರಣವಾಗಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಬಿಎಸ್-6 ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆ ಹೆಚ್ಚಳ ಮಾಡಿದ ಹೋಂಡಾ

2019ರ ಡಿಸೆಂಬರ್‌ನಿಂದ ಇದುವರೆಗೆ ಸುಮಾರು 8 ಲಕ್ಷ ಯುನಿಟ್ ಬಿಎಸ್-6 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, 10 ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದೆ. ಆದರೆ ಕರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ಹೊಸ ಸ್ಕೂಟರ್ ವಿತರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಲಾಕ್‌ಡೌನ್ ಮುಗಿದ ನಂತರ ಸ್ಕೂಟರ್ ಮಾರಾಟವು ಮತ್ತೆ ಗದಿಗೆದರಲಿದೆ.

Most Read Articles

Kannada
English summary
BS6 Honda Activa 125 and Activa 6G Price Increased. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X