Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಗೆ ಸಜ್ಜಾದ ಹೋಂಡಾ ಸಿಬಿ ಹಾರ್ನೆಟ್ 200ಆರ್ ಬೈಕ್
ಭಾರತೀಯ ಮಾರುಕಟ್ಟೆಯಲ್ಲಿ 150-200 ಸಿಸಿ ಬೈಕುಗಳು ಉತ್ತಮವಾಗಿ ಬೇಡಿಕೆಯನ್ನು ಹೊಂದಿದೆ. ಇದರಿಂದ ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ಹೊಸ 200ಸಿಸಿಯ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಸಿಬಿ ಹಾರ್ನೆಟ್ 160ಆರ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ. ಇದರರ್ಥ ಜಪಾನಿನ ಕಂಪನಿಯು ಅದನ್ನು ಹೊಸ 200ಸಿಸಿ ಮಾದರಿಯೊಂದಿಗೆ ಬದಲಾಯಿಸಲು ನಿರ್ಧರಿಸಿದೆ. ಈ ಹೊಸ ಬೈಕನ್ನು ಸಿಬಿ ಹಾರ್ನೆಟ್ 200ಆರ್ ಎಂದು ಕರೆಯಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ಬಿಡುಗಡೆಯಾಗಲಿರುವ ಸಿಬಿ ಹಾರ್ನೆಟ್ 200ಆರ್ ಬೈಕಿನ ಬಗ್ಗೆ ಯಾವುದೇ ಅಧಿಕೃತವಾಗಿ ಮಾಹಿತಿ ಬಹಿರಂಗವಾಗಿಲ್ಲ.

ಈ ಹೊಸ ಬೈಕ್ ಹೋಂಡಾ ಸಿಬಿಎಫ್ 190ಆರ್ ಮಾದರಿಯನ್ನು ಆಧರಿಸಿರಬಹುದು. ಹೋಂಡಾ ಕಂಪನಿಯು ಇತ್ತೀಚೆಗೆ ಈ ಹೊಸ ಬೈಕಿನ 15 ಸೆಕೆಂಡುಗಳ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿತು.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇದೀಗ ಮತ್ತೊಮ್ಮೆ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಟೀಸರ್ ಚಿತ್ರದಲ್ಲಿ ಬೈಕಿನ ಮುಂಭಾಗ ಗೋಲ್ಡನ್ ಬಣ್ಣದ ಫೋರ್ಕ್ ಗಳನ್ನು ನೋಡಬಹುದಾಗಿದೆ. ಇನ್ನು ಈ ಚಿತ್ರದಲ್ಲಿ ಅಲಾಯ್ ವ್ಹೀಲ್ ಅನ್ನು ಸಹ ಪ್ರದರ್ಶಿಸಿದೆ.

ಇನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ ಟೀಸರ್ ವೀಡಿಯೋದಲ್ಲಿ ಈ ಹೊಸ ಹೋಂಡಾ ಬೈಕಿನಲ್ಲಿ ಮಸ್ಕ್ಯುಲರ್ ಟ್ಯಾಂಕ್, ಅಗ್ರೇಸಿವ್ ಎಲ್ಇಡಿ ಹೆಡ್‌ಲೈಟ್,ಅಪ್ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಡ್ಯುಯಲ್ ಟೋನ್ ಬಣ್ಣಗಳ ಆಯ್ಜೆಯನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಟೀಸರ್ ವೀಡಿಯೋದಲ್ಲಿ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಸಹ ಪ್ರದರ್ಶಿಸಿದೆ. ಹೋಂಡಾ ಕಂಪನಿಯು ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಸ ಸಿಬಿ ಹಾರ್ನೆಟ್ 160ಆರ್ ಬೈಕನ್ನು ಹೋಂಡಾ ಕಂಪನಿಯು ಬಿಡುಗಡೆಗೊಳಿಸಲಿದೆ.

ಹೋಂಡಾ ಕಂಪನಿಯು ಈಗಾಗಲೇ ಸಿಬಿಎಫ್ 190ಆರ್ ಬೈಕಿನ ಪೇಟೆಂಟ್ ಪಡೆದಿದೆ. ಈ ಹೊಸ ಬೈಕಿನಲ್ಲಿ 184 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 16.86 ಬಿಹೆಚ್‍ಪಿ ಪವರ್ ಮತ್ತು 16.3 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೇ ಎಂಜಿನ್ ಅನ್ನು ಹೊಸ ಬೈಕಿನಲ್ಲಿ ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಹೋಂಡಾ ಸಿಬಿ ಹಾರ್ನೆಟ್ 200ಆರ್ ವಿನ್ಯಾಸಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ವಿನ್ಯಾಸವನ್ನು ಸಿಬಿಎಫ್ 190ಆರ್ ಮಾದರಿಯಿಂದ ಎರವಲು ಪಡೆಯಬಹುದು. ಸಿಬಿ ಹಾರ್ನೆಟ್ 200ಆರ್ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗಧಿಪಡಿಸಬಹುದು.

ಈ ಹೊಸ ಹೋಂಡಾ ಸಿಬಿ ಹಾರ್ನೆಟ್ 200ಆರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ 200 ಡ್ಯೂಕ್, ಬಜಾಜ್ ಪಲ್ಸರ್ ಎನ್ಎಸ್ 200, ಯಮಹಾ ಎಫ್‍ಝಡ್25 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕುಗಳನ್ನು ಪೈಪೋಟಿಯನ್ನು ನೀಡುತ್ತದೆ.