ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಹೊಸ ಆಫರ್ ಘೋಷಣೆ ಮಾಡಿದ ಇವೆ(EeVe) ಕಂಪನಿ

ಒಡಿಶಾ ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯಾದ ಇವೆ ಕಳೆದ ವರ್ಷವೇ ಭಾರತದಲ್ಲಿ ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಎಲೆಕ್ಟ್ರಿಕ್ ಖರೀದಿಯ ಮೇಲೆ ಆಕರ್ಷಕ ಆಫರ್ ನೀಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಹೊಸ ಆಫರ್ ಘೋಷಣೆ ಮಾಡಿದ ಇವೆ(EeVe)

ಕರೋನಾ ವೈರಸ್ ಪರಿಣಾಮ ಸ್ವಂತ ವಾಹನ ಬಳಕೆಗೆ ಆದ್ಯತೆ ನೀಡುತ್ತಿರುವ ವಾಹನ ಖರೀದಿದಾರರನ್ನು ಸೆಳೆಯಲು ಯೋಜನೆ ರೂಪಿಸಿರುವ ಇವೆ ಕಂಪನಿಯು ಅತಿ ಸರಳ ಸಾಲ ಸೌಲಭ್ಯಗಳ ಜೊತೆಗೆ ಸಾಲ ಮರುಪಾವತಿಗೆ ಹೆಚ್ಚುವರಿ ಕಾಲಾವಕಾಶ ನೀಡುತ್ತಿದೆ. ಇದು ಕರೋನಾ ಸಂಕಷ್ಟದಲ್ಲಿ ಹೊಸ ವಾಹನ ಖರೀದಿ ಮಾಡುವ ಯೋಜನೆಯಿದ್ದರೂ ಆರ್ಥಿಕ ಸಂಕಷ್ಟದಿಂದ ಮುಂದೂಡಿರುವ ಗ್ರಾಹಕರಿಗೆ ಅನುಕೂಲಕರವಾಗಲಿದ್ದು, ಆಕರ್ಷಕ ಇಎಂಐ ಲಭ್ಯವಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಹೊಸ ಆಫರ್ ಘೋಷಣೆ ಮಾಡಿದ ಇವೆ(EeVe)

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಸರಳ ಸಾಲ ಸೌಲಭ್ಯ ಒದಗಿಸಲಿರುವ ಇವೆ ಜೆಸ್ಟ್ ಮನಿ ಎನ್ನುವ ಫೈನಾನ್ಸ್ ಕಂಪನಿಯೊಂದಿಗೆ ಜೊತೆಗೂಡಿ ಸೌಲಸೌಲಭ್ಯ ನೀಡುತ್ತಿದ್ದು, ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ವಿವಿಧ ಇಎಂಐ ಸೌಲಭ್ಯಗಳನ್ನು ಆಫರ್ ಮಾಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಹೊಸ ಆಫರ್ ಘೋಷಣೆ ಮಾಡಿದ ಇವೆ(EeVe)

ಇವೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಸಾಲ ಮರುಪಾವತಿಗಾಗಿ 3, 6 ಮತ್ತು 12 ತಿಂಗಳ ಕಾಲಾವಕಾಶದೊಂದಿಗೆ ಸರಳ ಇಎಂಐ ಆಯ್ಕೆ ನೀಡುತ್ತಿದ್ದು, ಬೈ ನೌವ್ ಪೇ ಲೇಟರ್ ಆಯ್ಕೆ ಕೂಡಾ ಲಭ್ಯವಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಹೊಸ ಆಫರ್ ಘೋಷಣೆ ಮಾಡಿದ ಇವೆ(EeVe)

ಬೈ ನೌವ್ ಪೇ ಲೇಟರ್ ಆಯ್ಕೆ ಮಾಡುವ ಗ್ರಾಹಕರಿಗೆ ಹೆಚ್ಚುವರಿ ಮೊತ್ತದೊಂದಿಗೆ ಒಂದರಿಂದ ಮೂರು ತಿಂಗಳ ಕಾಲ ಹೆಚ್ಚುವರಿಯಾಗಿ ಸಾಲಮರುಪಾವತಿಗೆ ಕಾಲಾವಕಾಶ ಸಿಗಲಿದ್ದು, ಇವೆ ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಕ್ಸೇನಿಯಾ, ಯುಆರ್, ವಿಂಡ್, 4ಯು ಎನ್ನುವ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಹೊಸ ಆಫರ್ ಘೋಷಣೆ ಮಾಡಿದ ಇವೆ(EeVe)

ಕ್ಸೇನಿಯಾ, ಯುಆರ್, ವಿಂಡ್, 4ಯು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳು ಬ್ಯಾಟರಿ ಸೌಲಭ್ಯ ಮತ್ತು ಫೀಚರ್ಸ್‌ಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 51,900 ಮತ್ತು ಟಾಪ್ ಎಂಡ್ ಮಾದರಿಯು ರೂ.73,900 ಬೆಲೆ ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಹೊಸ ಆಫರ್ ಘೋಷಣೆ ಮಾಡಿದ ಇವೆ(EeVe)

ಇವೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ 60ವೊಲ್ಟ್ 20 ಎಹೆಚ್ ಲಿಥೀಯಂ ಐಯಾನ್ ಬ್ಯಾಟರಿ ಬಳಕೆಮಾಡಲಾಗಿದ್ದು, 250 ವ್ಯಾಟ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಒಂದು ಬಾರಿ ಚಾರ್ಜ್ ಮಾಡಿದ್ದಲ್ಲಿ 60 ಕಿ.ಮೀನಿಂದ 70 ಕಿ.ಮೀ ನಷ್ಟು ಮೈಲೇಜ್ ರೇಂಜ್ ಹೊಂದಿವೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಹೊಸ ಆಫರ್ ಘೋಷಣೆ ಮಾಡಿದ ಇವೆ(EeVe)

ಇನ್ನು ಇವೆ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯು ಸದ್ಯ ದೇಶದ ಪ್ರಮುಖ ಮಾಹಾನಗರಗಳಲ್ಲಿ 63 ಅಧಿಕೃತ ಶೋರೂಂಗಳ ಮೂಲಕ ಮಾರಾಟ ಜಾಲ ಹೊಂದಿದ್ದು, ಶೀಘ್ರದಲ್ಲೇ ಕಂಪನಿಯು ವರ್ಷಾಂತ್ಯದೊಳಗೆ ಹೊಸದಾಗಿ 200 ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯಲ್ಲಿದೆ.

Most Read Articles

Kannada
English summary
EeVe India Announces New Finance Schemes For Electric Scooters. Read in Kannada.
Story first published: Friday, September 11, 2020, 22:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X