Just In
Don't Miss!
- News
ಎಂಇಎಸ್, ಉದ್ಧಟವ್ ಠಾಕ್ರೆ ಇಷ್ಟು ಬೆಳೆಯಲು ಕಾರಣ ಬಿಜೆಪಿಯ ಸಲುಗೆ
- Sports
ಅಡಿಲೇಡ್ ಸೋಲಿನ ನಂತರ ಗೆಲುವಿನ ಹಾದಿ ಹಿಡಿದ ರೋಚಕ ಸಂಗತಿ ವಿವರಿಸಿದ ಹನುಮ ವಿಹಾರಿ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನವೆಂಬರ್ ಅವಧಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಹೋಂಡಾ
ದ್ವಿಚಕ್ರಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ನವೆಂಬರ್ ಅವಧಿಯ ವಾಹನಗಳ ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ದೀಪಾವಳಿ ಸಂಭ್ರಮದ ನಡುವೆ ಒಟ್ಟು 4,33,206 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಅಕ್ಟೋಬರ್ ಅವಧಿಯಲ್ಲೂ ದಸರಾ ಸಂಭ್ರಮಾಚರಣೆಗಾಗಿ ಭಾರೀ ಪ್ರಮಾಣದಲ್ಲಿ ಹೊಸ ವಾಹನಗಳನ್ನು ಮಾರಾಟ ಮಾಡಿದ್ದು, ಇದೀಗ ದೀಪಾವಳಿ ಸಂಭ್ರಮದಲ್ಲೂ ದಾಖಲೆ ಪ್ರಮಾಣದ ಹೊಸ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2019ರ ನವೆಂಬರ್ ಅವಧಿಯಲ್ಲಿ ವಾಹನ ಮಾರಾಟಕ್ಕಿಂತಲೂ ಶೇ.11 ರಷ್ಟು ಬೆಳವಣಿಗೆ ಸಾಧಿಸಿರುವ ಹೋಂಡಾ ಕಂಪನಿಯು 20,565 ಯುನಿಟ್ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲಿ 3,73,283 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಇದೀಗ 412,641 ಮಾರಾಟ ಮಾಡಿದ್ದು, 20,565 ಯುನಿಟ್ ರಫ್ತುಗೊಂಡಿವೆ.

ಕರೋನಾ ವೈರಸ್ ಪರಿಣಾಮ ಸ್ವಂತ ವಾಹನಗಳ ಬಳಕೆಯು ಹೆಚ್ಚುತ್ತಿರುವುದೇ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಹೊಂದಿರುವ ಹೋಂಡಾ ಕಂಪನಿಯು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದೆ.

ಜೊತೆಗೆ ಇತ್ತೀಚೆಗೆ ಬಿಡುಗಡೆ ಮಾಡಲಾದ ಹೊಸ ವಾಹನ ಮಾದರಿಯಾದ ಹೈನೆಸ್ ಸಿಬಿ350, ಹಾರ್ನೆಟ್ 2.0 ಮತ್ತು ರೆಪ್ಸೊಲ್ ಎಡಿಷನ್ ಮಾದರಿಗಳಾದ ಡಿಯೋ, ಹಾರ್ನೆಟ್ 2.0 ಆವೃತ್ತಿಗಳು ಕೂಡಾ ಗ್ರಾಹಕರ ಬೇಡಿಕೆ ಹೆಚ್ಚಿಸಿದ್ದು, ವಿವಿಧ ಆಫರ್‌ಗಳು ಕೂಡಾ ಗ್ರಾಹಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿವೆ. ಹೀಗಾಗಿ ಕಳೆದ ನಾಲ್ಕು ತಿಂಗಳಿನಿಂದ ವಾಹನ ಮಾರಾಟದಲ್ಲಿ ಸತತವಾಗಿ ಬೆಳವಣಿಗೆ ಸಾಧಿಸಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದಸರಾ ಮತ್ತು ದೀಪಾವಳಿ ಹಿನ್ನಲೆ ಅತ್ಯಧಿಕ ಮಟ್ಟದ ಬೇಡಿಕೆ ಪಡೆದುಕೊಂಡಿದೆ.

ಕರೋನಾ ವೈರಸ್ ಪರಿಣಾಮದಿಂದಾಗಿ ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಬಳಕೆ ಮಾಡಲು ಹಿಂದೇಟು ಹಾಕುತ್ತಿರುವ ಬಹುತೇಕ ಸ್ವಂತ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಆಟೋ ಕಂಪನಿಗಳಿಗೆ ವರವಾಗಿ ಪರಿಣಮಿಸಿದ್ದು, ಮುಂಬರುವ ದಿನಗಳಲ್ಲಿ ಹೊಸ ವಾಹನ ಮಾರಾಟ ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಇನ್ನು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಹೊಚ್ಟ ಹೊಸ ಹೈನೆಸ್ ಸಿಬಿ350 ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಹೈನೆಸ್ ಸಿಬಿ350 ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಡಿಲಕ್ಸ್ ಮಾದರಿಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.85 ಲಕ್ಷ ಮತ್ತು ಡಿಲಕ್ಸ್ ಪ್ರೋ ಮಾದರಿಯು ರೂ. 1.90 ಲಕ್ಷ ಬೆಲೆ ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಸದ್ಯ ಹೋಂಡಾ ಪ್ರೀಮಿಯಂ ಬೈಕ್ ಮಾರಾಟ ವಿಭಾಗವಾದ ಬಿಗ್‌ವಿಂಗ್ ಮಾರಾಟ ಮಳಿಗೆಗಳಲ್ಲಿ ಮಾತ್ರ ಮಾರಾಟಗೊಳ್ಳುತ್ತಿರುವ ಹೊಸ ಬೈಕ್ ಮಾದರಿಯು 5-ಸ್ಪೀಡ್ ಗೇರ್‌ಬಾಕ್ಸ್ ಪ್ರೇರಣೆಯ 348.36 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 20.8-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.