ಸ್ಥಗಿತವಾಗಲಿದೆ ಹೋಂಡಾ ಕಂಪನಿಯ ಜನಪ್ರಿಯ ಮಾದರಿಗಳು

ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಿಎಸ್-6 ದ್ವಿಚಕ್ರ ವಾಹನ ಪರಿಚಯಿಸಿದ ಬ್ರ್ಯಾಂಡ್ ಆಗಿದೆ, ಆಕ್ಟಿವಾ 125 ಸ್ಕೂಟರ್ ಅನ್ನು ಬಿಎಸ್-6 ಮಾಲಿನ್ಯ ನಿಯಮದ ಗಡುವಿನ ಆರು ತಿಂಗಳು ಮುಂಚಿತವಾಗಿ ಪರಿಚಯಿಸಿದ್ದರು.

ಸ್ಥಗಿತವಾಗಲಿದೆ ಹೋಂಡಾ ಕಂಪನಿಯ ಜನಪ್ರಿಯ ಮಾದರಿಗಳು

ಹೋಂಡಾ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‍ ನಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬೈಕುಗಳ ಹೆಸರನ್ನು ಪಟ್ಟಿಮಾಡಲಾಗಿದೆ. ಇನ್ನು ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸದ ಬೈಕುಗಳ ಹೆಸರುಗಳನ್ನು ಕೈಬಿಡಲಾಗಿದೆ. ಹೋಂಡಾ ಕಂಪನಿಯು ಸಿಬಿ ಹಾರ್ನೆಟ್ 160 ಆರ್, ಎಕ್ಸ್‌ಬ್ಲೇಡ್ ಮತ್ತು ಸಿಬಿಆರ್ 250 ಆರ್ ಬೈಕುಗಳ ಹೆಸರನ್ನು ವೆಬ್‌ಸೈಟ್‍ ನಿಂದ ತೆಗೆದುಹಾಕಲಾಗಿದೆ.

ಸ್ಥಗಿತವಾಗಲಿದೆ ಹೋಂಡಾ ಕಂಪನಿಯ ಜನಪ್ರಿಯ ಮಾದರಿಗಳು

ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಬಹುದು ಎಂದು ನಿರೀಕ್ಷಿಸುತ್ತೇವೆ. ಉಳಿದ ಎರಡು ಮಾದರಿಗಳನ್ನು ಸ್ಥಗಿತಗೊಳಿಸಬಹುದು. ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಹೋಂಡಾ ಸಿಬಿ ಹಾರ್ನೆಟ್ 160ಆರ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಸ್ಥಗಿತವಾಗಲಿದೆ ಹೋಂಡಾ ಕಂಪನಿಯ ಜನಪ್ರಿಯ ಮಾದರಿಗಳು

ಇತರ ಎರಡು ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ಸನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ. ಇದರಿಂದ ಎಕ್ಸ್‌ಬ್ಲೇಡ್ ಮತ್ತು ಸಿಬಿಆರ್ 250ಆರ್ ಎಂಬ ಈ ಎರಡು ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗುತ್ತದೆ.

ಸ್ಥಗಿತವಾಗಲಿದೆ ಹೋಂಡಾ ಕಂಪನಿಯ ಜನಪ್ರಿಯ ಮಾದರಿಗಳು

ಹೋಂಡಾ ಸಿಬಿಆರ್ 250ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ 2012ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಅಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿದ್ದ ಕವಾಸಕಿ ನಿಂಜಾ 250 ಆರ್ ಬೈಕಿಗೆ ಪೈಪೋಟಿಯನ್ನು ನೀಡಲು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಈ ಬೈಕನ್ನು ಬಿಡುಗಡೆಗೊಳಿಸಿದ್ದರು.

MOST READ: ಹೊಸ ಸುಜುಕಿ ಬರ್ಗ್‍ಮನ್ 200 ಸ್ಕೂಟರ್ ಬಿಡುಗಡೆ

ಸ್ಥಗಿತವಾಗಲಿದೆ ಹೋಂಡಾ ಕಂಪನಿಯ ಜನಪ್ರಿಯ ಮಾದರಿಗಳು

ಹೋಂಡಾ ಸಿಬಿಆರ್ 250ಆರ್ ಬೈಕಿನಲ್ಲಿ 249 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 269 ಬಿಹೆಚ್‌ಪಿ ಪವರ್ ಮತ್ತು 22.9 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಕೂಡ ಅಳವಡಿಸಲಾಗಿದೆ.

ಸ್ಥಗಿತವಾಗಲಿದೆ ಹೋಂಡಾ ಕಂಪನಿಯ ಜನಪ್ರಿಯ ಮಾದರಿಗಳು

ಹೋಂಡಾ ಮೋಟಾರ್‌ಸೈಕಲ್ ಸಹ ಈಗಾಗಲೇ ತನ್ನ ಪ್ರಮುಖ ದ್ವಿಚಕ್ರ ವಾಹನಗಳನ್ನು ಹೊಸ ಎಂಜಿನ್‌ನೊಂದಿಗೆ ಉನ್ನತೀಕರಿಸಿ ಮಾರಾಟಕ್ಕೆ ಚಾಲನೆ ನೀಡಿದ್ದರೂ ಎವಿಯೆಟರ್ ಮತ್ತು ಗ್ರಾಜಿಯಾ ಸ್ಕೂಟರ್‌ಗಳಲ್ಲಿ ಹೊಸ ಎಂಜಿನ್ ಅನ್ನು ಇದುವರೆಗೂ ಪರಿಚಯಿಸಿಲ್ಲ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಸ್ಥಗಿತವಾಗಲಿದೆ ಹೋಂಡಾ ಕಂಪನಿಯ ಜನಪ್ರಿಯ ಮಾದರಿಗಳು

ಜೊತೆಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲೂ ಎವಿಯೆಟರ್ ಮತ್ತು ಗ್ರಾಜಿಯಾ ಮಾಹಿತಿಗಳನ್ನು ತೆಗದುಹಾಕಿರುವ ಹೋಂಡಾ ಕಂಪನಿಯು ಎರಡು ಸ್ಕೂಟರ್‌ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿರಬಹುದು.

ಸ್ಥಗಿತವಾಗಲಿದೆ ಹೋಂಡಾ ಕಂಪನಿಯ ಜನಪ್ರಿಯ ಮಾದರಿಗಳು

ಬಿಎಸ್-6 ಮಾಲಿನ್ಯ ನಿಯಮದ ಪ್ರಕಾರ ಬಿಎಸ್-4 ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಇದರಿಂದ ಹೋಂಡಾ ಕಂಪನಿಯು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸದ ಮಾದರಿಗಳ ಹೆಸರನ್ನು ತಮ್ಮ ವೆಬ್‌ಸೈಟ್‍ ನಿಂದ ತೆಗೆದುಹಾಕಲಾಗಿದೆ.

Most Read Articles

Kannada
English summary
Honda Removes CB Hornet, XBlade & CBR 250R From Website. Read in Kannada.
Story first published: Tuesday, April 14, 2020, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X