ಹೊಸ ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಕೆಲವು ವರ್ಷಗಳ ಹಿಂದೆ ಸಿಟಿ ಅಡ್ವೆಂಚರ್ ಎಂಬ ಕಾನ್ಸೆಪ್ಟ್ ಅನ್ನು ಪ್ರಾರಂಭಿಸಿದ್ದರು. ಇದೀಗ ಹೋಂಡಾ ಕಂಪನಿಯು ತನ್ನ ಹೊಸ ಆಫ್-ರೋಡ್ ಆಧಾರಿತ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ.

ಹೊಸ ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಹೊಸ 2021ರ ಎಕ್ಸ್-ಎಡಿವಿ ಸ್ಕೂಟರ್ ನವೀಕರಿಸಿದ ವಿನ್ಯಾಸವನ್ನು ಪಡೆದುಕೊಂಡಿದೆ. 2021ರ ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಅಡ್ವೆಂಚರ್ ಸ್ಕೂಟರ್ ಮುಂಭಾಗ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಇನ್ನು 2021ರ ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ಮುಂಭಾಗ ಫಾಸಿಕ ಪ್ಯಾನೆಲ್ ಅನ್ನು ಹೆಚ್ಚು ಅಗ್ರೇಸಿವ್ ಆಗಿ ಕಾಣುವಂತೆ ನವೀಕರಿಸಲಾಗಿದೆ. ಟೈಲ್ ವಿಭಾಗದ ವಿನ್ಯಾಸವನ್ನು ಕೂಡ ನವೀಕರಿಸಲಾಗಿದೆ.

ಹೊಸ ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ನಲ್ಲಿ 745ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 58 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಗೇರ್ ಬಾಕ್ಸ್ ಅನ್ನು ಕೂಡ ನವೀಕರಿಸಲಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೊಸ ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಈ ಹೊಸ ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ಅನ್ನು ಹೆಚ್ಚಿನ ಮೈಲೇಜ್ ನೀಡುವಂತೆ ಮತ್ತು ಸ್ಪೀಡ್ ಅನ್ನು ಹೆಚ್ಚಿಸುವಂತೆ ನವೀಕರಿಸಲಾಗಿದೆ. ಆಫ್-ರೋಡ್ ಆಧಾರಿತ ಸ್ಕೂಟರ್ ಆದರೂ ಉತ್ತಮ ಮೈಲೇಜ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಈ ದೊಡ್ದ ಹೋಂಡಾ ಎಕ್ಸ್-ಎಡಿವಿ ಆಫ್-ರೋಡ್ ಸ್ಕೂಟರ್ ನಲ್ಲಿ ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸ್ಟ್ರೋರೇಜ್ ಸ್ಪೇಸ್, ಯುಎಸ್‌ಬಿ ಚಾರ್ಜರ್ ಮತ್ತು ಹೊಸ ಗ್ಲೋವ್‌ಬಾಕ್ಸ್ ಅನ್ನು ಸಹ ಪಡೆಯುತ್ತದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಹೊಸ ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ನವೀಕರಿಸಿದ ಎಂಜಿನ್ ನೊಂದಿಗೆ ಎಕ್ಸ್-ಎಡಿವಿ ರೈಡ್-ಬೈ-ವೈರ್ ಟೆಕ್ ಅನ್ನು ಸಹ ಪಡೆಯುತ್ತದೆ, ಇದು ಸ್ಕೂಟರ್‌ಗೆ ರೈಡಿಂಗ್ ಮೋಡ್‌ಗಳನ್ನು ಹೊಂದುವ ಸಾಮರ್ಥ್ಯವನ್ನು ನೀಡುತ್ತದೆ. ಮೊದಲಿಗಿಂತ ಹೆಚ್ಚಿನ ಟ್ರ್ಯಾಕ್ಷನ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ನೀಡುತ್ತದೆ.

ಹೊಸ ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಎಕ್ಸ್-ಎಡಿವಿ ಸ್ಕೂಟರ್ ನಲ್ಲಿ ರೈನ್, ಸ್ಟ್ಯಾಂಡರ್ಡ್, ಸ್ಪೋರ್ಟ್, ಗ್ರ್ಯಾವೆಲ್ ಮತ್ತು ಯೂಸರ್ಸ್ ಎಂಬ ಮೋಡ್ ಗಳ ಆಯ್ಕೆಯನ್ನು ನೀಡಬಹುದು. ಇದರಲ್ಲಿ ಗ್ರ್ಯಾವೆಲ್ ಹೆಚ್ಚು ಅಗ್ರೇಸಿವ್ ಮೋಡ್ ಆಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಈ ಹೊಸ ಆಫ್-ರೋಡ್ ಬೈಕಿನಲ್ಲಿ ಹೋಂಡಾ ಡೈಮಂಡ್ ಸ್ಟೀಲ್ ಟ್ಯೂಬ್ ಫ್ರೇಮ್ ಅನ್ನು ಸುಧಾರಿಸಿದೆ. ಅಂಡರ್ ಸೀಟ್ ಸ್ಟ್ರೋರೇಜ್ 22 ಲೀಟರ್ ನಷ್ಟು ಸ್ಪೇಸ್ ಅನ್ನು ಹೊಂದಿದೆ.

ಹೊಸ ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಹೋಂಡಾ ಕಂಪನಿಯು ಎಕ್ಸ್-ಎಡಿವಿ ಅಡ್ವೆಂಚರ್ ಸ್ಕೂಟರಿನ ಬೆಲೆಯನ್ನು ಇನ್ನೂ ಬಹಿರಂಗಪಡಿಸಬೇಕಾಗಿಲ್ಲ. ಆದರೆ ಈ ಅಡ್ವೆಂಚರ್ ಸ್ಕೂಟರ್ ಬೆಲೆಯು ದುಬಾರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೋಂಡಾ ಅಡ್ವೆಂಚರ್ ಸ್ಕೂಟರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಈ ಹೋಂಡಾ ಅಡ್ವೆಂಚರ್ ಸ್ಕೂಟರ್ ಬಿಡುಗಡೆಯಾಗುವುದಿಲ್ಲ.

Most Read Articles

Kannada
English summary
New Honda X-ADV Scooter Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X