Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಹೋಂಡಾ ಆಕ್ಟಿವಾ 6ಜಿ ಮತ್ತು ಹಾರ್ನೆಟ್ 2.0 ಮಾದರಿಗಳ ಮೇಲೆ ಬಂಪರ್ ಕ್ಯಾಶ್‌ಬ್ಯಾಕ್ ಆಫರ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಕಂಪನಿಯು ವರ್ಷಾಂತ್ಯದಲ್ಲಿ ತನ್ನ ಗ್ರಾಹಕರಿಗಾಗಿ ಬಂಪರ್ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಘೋಷಿಸಿದೆ. ಹೋಂಡಾ ಕಂಪನಿಯ ಜನಪ್ರಿಯ ಮಾದರಿಗಳಾದ ಆಕ್ಟಿವಾ 6ಜಿ ಮತ್ತು ಹಾರ್ನೆಟ್ 2.0 ಮಾದರಿಗಳ ಮೇಲೆ ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಿದೆ.

ಹೋಂಡಾ ಕಂಪನಿಯ ಆಕ್ಟಿವಾ ಮತ್ತು ಹಾರ್ನೆಟ್ 2.0 ಮಾದರಿಗಳನ್ನು ಖರೀದಿಸುವಾಗ ಗ್ರಾಹಕರು ವಿಶೇಷ ಆಫರ್ ಅನ್ನು ಪಡೆಯಬಹುದು. ಹೊಸ ಹೋಂಡಾ ಆಕ್ಟಿವಾ 6ಜಿ ಅಥವಾ ಹಾರ್ನೆಟ್ 2.0 ಮಾದರಿಗಳನ್ನು ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಇಎಂಐನಲ್ಲಿ ಖರೀದಿಸುವಾಗ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಲಭಿಸುತ್ತದೆ. ಇದರಲ್ಲಿ ಗ್ರಾಹಕರು ರೂ.5,000 ಗಳವರೆಗೆ ಕ್ಯಾಶ್‌ಬ್ಯಾಕ್ ಅನ್ನು ಪಡೆಯುವ ಅವಕಾಶವಿದೆ. ಆದರೆ ನೀವು ಹೋಂಡಾ ಆಕ್ಟಿವಾ 6ಜಿ ಅಥವಾ ಹಾರ್ನೆಟ್ 2.0 ಮಾದರಿಗಳ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಇಎಂಐನಲ್ಲಿ ಖರೀದಿಸಿದರೆ ಮಾತ್ರ ಈ ಆಫರ್ ಲಭಿಸುತ್ತದೆ.

ಹೋಂಡಾ ಆಕ್ಟಿವಾ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದೆ. ಈ ಜನಪ್ರಿಯ ಮತ್ತು ಹೆಚ್ಚು ಯಶಸ್ವಿಗಳಿಸಿದ ಆಕ್ಟಿವಾ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಎರಡು ದಶಕಗಳನ್ನು ಪೂರೈಸಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಆಕ್ಟಿವಾ ಸ್ಕೂಟರ್ ಆರನೇ ತಲೆಮಾರಿನ ಮಾದರಿ ಮಾರಾಟವಾಗುತ್ತಿದೆ. ಹೋಂಡಾ ಆಕ್ಟಿವಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 20 ವರ್ಷಗಳ ಯಶ್ವಸಿ ಓಟವನ್ನು ಪೂರೈಸಿದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರಿನಲ್ಲಿ 109 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7.79 ಬಿಹೆಚ್‍ಪಿ ಪವರ್ ಮತ್ತು 8.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇನ್ನು ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಬಗ್ಗೆ ಹೇಳುವುದಾದರೆ, ಇದರ ಬೆಲೆಯು ಎಕ್ಸ್ ಶೋರೂಂ(ಗುರುಗ್ರಾಮ್) ಪ್ರಕಾರ ರೂ.1.26 ಲಕ್ಷಗಳಾಗಿದೆ. ಹೋಂಡಾ ಕಂಪನಿಯು ತನ್ನ ಹಳೆಯ ಸಿಬಿ ಹಾರ್ನೆಟ್ 160ಆರ್ ಬೈಕನ್ನು ಬದಲಾಯಿಸಿ ಆ ಸ್ಥಾನಕ್ಕೆ ಹೊಸ ಹೋಂಡಾ ಹಾರ್ನೆಟ್ 2.0 ಮಾದರಿಯನ್ನು ಬಿಡುಗಡೆಗೊಳಿಸಿತು.

ಈ ಹೊಸ ಹಾರ್ನೆಟ್ 2.0 ಬೈಕನ್ನು ಬಿಡುಗಡೆಗೊಳಿಸುವ ಮೂಲಕ ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 180-200 ಸಿಸಿ ವಿಭಾಗಕ್ಕೆ ಪ್ರವೇಶವನ್ನು ಮಾಡಿತು. ಹೋಂಡಾ ಹಾರ್ನೆಟ್ 2.0 ಬೈಕ್ ಪಿಜಿಎಂ-ಫೈ ತಂತ್ರಜ್ಞಾನದೊಂದಿಗೆ ಬ್ರಾಂಡ್‌ನ ಹೊಸ ಬಿಎಸ್-6 ಪ್ರೇರಿತ 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಎಂಜಿನ್ 8500 ಆರ್‌ಪಿಎಂನಲ್ಲಿ 17 ಬಿಹೆಚ್‌ಪಿ ಮತ್ತು 6000 ಆರ್‌ಪಿಎಂನಲ್ಲಿ 16.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಹೋಂಡಾ ಹಾರ್ನೆಟ್ 2.0 ಭಾರತೀಯ ಮಾರುಕಟ್ಟೆಯ 180-200 ಸಿಸಿ ವಿಭಾಗದಲ್ಲಿ ಹೋಂಡಾ ಕಂಪನಿಯ ಮೊದಲ ಬೈಕ್ ಆಗಿದೆ. ಉತ್ತಮ ಫೀಚರ್‍ಗಳೊಂದಿಗೆ ಸ್ಪೋರ್ಟಿ ಲುಕ್ ಹೊಂದಿರುವ ಈ ಹೋಂಡಾ ಹಾರ್ನೆಟ್ 2.0 ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 180 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 200 ಬೈಕುಗಳಿಗೆ ಪೈಪೋಟಿ ನೀಡುತ್ತದೆ.