390 ಅಡ್ವೆಂಚರ್ ನಂತರ 250 ಅಡ್ವೆಂಚರ್ ಬಿಡುಗಡೆಗೆ ಸಿದ್ದವಾದ ಕೆಟಿಎಂ

390 ಅಡ್ವೆಂಚರ್ ಮೂಲಕ ಅಫ್ ರೋಡ್ ಬೈಕ್ ಮಾದರಿಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಕೆಟಿಎಂ ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ 250 ಅಡ್ವೆಂಚರ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಇರಾದೆಯಲ್ಲಿದ್ದು, ಹೊಸ ಬೈಕ್ ಬಿಡುಗಡೆಗಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಕೈಗೊಂಡಿದೆ.

390 ಅಡ್ವೆಂಚರ್ ನಂತರ 250 ಅಡ್ವೆಂಚರ್ ಬಿಡುಗಡೆಗೆ ಸಿದ್ದವಾದ ಕೆಟಿಎಂ

ಭಾರತದಲ್ಲಿ ತನ್ನ ಸರಣಿ ಬೈಕ್ ಮಾರಾಟವನ್ನು ಹೆಚ್ಚಿಸುತ್ತಿರುವ ಕೆಟಿಎಂ ಕಂಪನಿಯು ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಮುಂಬರುವ ಇನ್ನಷ್ಟು ಹೊಸ ಬೈಕ್‌ಗಳ ಬಿಡುಗಡೆಗೆ ಸಿದ್ದವಾಗಿದೆ. ಇದರಲ್ಲಿ 250 ಅಡ್ವೆಂಚರ್ ಸಹ ಪ್ರಮುಖ ಆಕರ್ಷಣೆಯಾಗಿದ್ದು, 390 ಅಡ್ವೆಂಚರ್ ಮಾದರಿಯಲ್ಲೇ ಕೆಲವು ಬದಲಾವಣೆಗಳೊಂದಿಗೆ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

390 ಅಡ್ವೆಂಚರ್ ನಂತರ 250 ಅಡ್ವೆಂಚರ್ ಬಿಡುಗಡೆಗೆ ಸಿದ್ದವಾದ ಕೆಟಿಎಂ

390 ಅಡ್ವೆಂಚರ್ ಮಾದರಿಗಿಂತ ಕೆಳದರ್ಜೆಯಲ್ಲಿ ಮಾರಾಟವಾಗಲಿರುವ ಹೊಸ 250 ಅಡ್ವೆಂಚರ್ ಮಾದರಿಯು 390 ಅಡ್ವೆಂಚರ್ ಬೈಕಿನಲ್ಲಿರುವಂತಹ ಪ್ರಮುಖ ಅಂಶಗಳಾದ ವಿನ್ಯಾಸ, ಚಾಸೀಸ್ ಹಾಗೂ ಫ್ರೇಂಗಳನ್ನು ಹೊಂದಿರಲಿದೆ.

390 ಅಡ್ವೆಂಚರ್ ನಂತರ 250 ಅಡ್ವೆಂಚರ್ ಬಿಡುಗಡೆಗೆ ಸಿದ್ದವಾದ ಕೆಟಿಎಂ

250 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಬೈಕಿನಲ್ಲಿ ಕೆಲವು ತಾಂತ್ರಿಕ ಅಂಶಗಳ ಬದಲಾವಣೆಯನ್ನು ಹೊರತುಪಡಿಸಿ ಬಾಡಿ ಪ್ಯಾನೆಲ್, ಬೆಲ್ಲಿ ಪ್ಯಾನ್, ಫ್ಯೂಯಲ್ ಟ್ಯಾಂಕ್ ಎಕ್ಸ್ ಟೆಂಷನ್, ರೇಡಿಯೇಟರ್ ಶ್ರೌಡ್ ಹಾಗೂ ಟೇಲ್ ಸೆಕ್ಷನ್‍ ಸಮನಾಂತರವಾಗಿರಲಿವೆ.

390 ಅಡ್ವೆಂಚರ್ ನಂತರ 250 ಅಡ್ವೆಂಚರ್ ಬಿಡುಗಡೆಗೆ ಸಿದ್ದವಾದ ಕೆಟಿಎಂ

250 ಅಡ್ವೆಂಚರ್ ಬೈಕಿನಲ್ಲಿ 390 ಅಡ್ವೆಂಚರ್ ಬೈಕಿಗಿಂತಲೂ ವಿಭಿನ್ನವಾದ ಬಾಡಿ ಗ್ರಾಫಿಕ್ಸ್ ಹಾಗೂ ಹಾಲೊಜೆನ್ ಹೆಡ್‍‍ಲ್ಯಾಂಪ್ ಯುನಿಟ್ ಹೊಂದಿದ್ದು, ಪ್ರೀಮಿಯಂ ಮಾದರಿಯಾದ 390 ಅಡ್ವೆಂಚರ್ ಬೈಕಿನಲ್ಲಿ ಪೂರ್ಣ ಪ್ರಮಾಣದ ಎಲ್‍ಇ‍‍ಡಿ ಯುನಿಟ್ ನೀಡಲಾಗಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

390 ಅಡ್ವೆಂಚರ್ ನಂತರ 250 ಅಡ್ವೆಂಚರ್ ಬಿಡುಗಡೆಗೆ ಸಿದ್ದವಾದ ಕೆಟಿಎಂ

ವರದಿಗಳ ಪ್ರಕಾರ, ಕೆಟಿಎಂ 250 ಅಡ್ವೆಂಚರ್ ಬೈಕ್ ಮಾದರಿಯು 390 ಬೈಕಿನಲ್ಲಿರುವಂತಹ ಅಲಾಯ್ ವ್ಹೀಲ್ ಹಾಗೂ ಟಯರ್‍ ಮಾದರಿಗಳನ್ನೆ ಹೊಂದಿರಲಿದ್ದು, ಮುಂಭಾಗದಲ್ಲಿ 19 ಇಂಚಿನ ವ್ಹೀಲ್ ಹಾಗೂ ಹಿಂಭಾಗದಲ್ಲಿರುವ 17 ಇಂಚಿನ ವ್ಹೀಲ್‍ಗಳು ಸೇರಿಸಲಾಗಿದೆ.

390 ಅಡ್ವೆಂಚರ್ ನಂತರ 250 ಅಡ್ವೆಂಚರ್ ಬಿಡುಗಡೆಗೆ ಸಿದ್ದವಾದ ಕೆಟಿಎಂ

ಬೆಲೆ ಕಾರಣಕ್ಕೆ 390 ಅಡ್ವೆಂಚರ್ ಬೈಕಿನಲ್ಲಿರುವ ಹಲವು ಪ್ರೀಮಿಯಂ ಫೀಚರ್ಸ್‌ಗಳು 250 ಅಡ್ವೆಂಚರ್ ಬೈಕಿನಲ್ಲಿರುದಿಲ್ಲ ಎನ್ನಲಾಗಿದ್ದು, 250 ಅಡ್ವೆಂಚರ್ ಬೈಕಿನಲ್ಲಿ 249ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ ಬಿ‍ಎಸ್ 6 ಎಂಜಿನ್ ಅಳವಡಿಸಲಾಗುತ್ತಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

390 ಅಡ್ವೆಂಚರ್ ನಂತರ 250 ಅಡ್ವೆಂಚರ್ ಬಿಡುಗಡೆಗೆ ಸಿದ್ದವಾದ ಕೆಟಿಎಂ

ಹೊಸ ಎಂಜಿನ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 30-ಬಿ‍‍ಹೆಚ್‍‍ಪಿ ಮತ್ತು 24-ಎನ್‍ಎಂ ಟಾರ್ಕ್ ಉತ್ಪಾದಿಸಲಿದ್ದು, ಆಫ್-ರೋಡ್ ಕೌಶಲ್ಯಕ್ಕೆ ಬೇಕಾದ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳಿವೆ. ಇನ್ನು ಹೊಸ ಬೈಕಿನ ಬೆಲೆಯು ಸಾಮಾನ್ಯ ಡ್ಯೂಕ್ 250 ಮಾದರಿಯ ಬೆಲೆಗಿಂತ ತುಸು ಹೆಚ್ಚಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.20 ಲಕ್ಷದಿಂದ ರೂ. 2.40 ಲಕ್ಷದ ತನಕ ಬೆಲೆ ಪಡೆದುಕೊಳ್ಳಬಹುದಾಗಿದೆ.

Most Read Articles

Kannada
Read more on ಕೆಟಿಎಂ ktm
English summary
KTM 250 Adventure Spotted Testing Ahead Of Launch. Read in Kannada.
Story first published: Friday, August 7, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X