Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಕೆಟಿಎಂನಿಂದ ಹೊಸ ಅಭಿಯಾನ ಆರಂಭ
ದೇಶಿಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕ್ ಮಾರಾಟವು ಸಾಕಷ್ಟು ಬೆಳವಣಿಗೆ ಸಾಧಿಸಿದ್ದು, ಹಲವಾರು ವಿದೇಶಿ ಬೈಕ್ ಮಾರಾಟ ಕಂಪನಿಗಳು ತಮ್ಮ ಜನಪ್ರಿಯ ಅಡ್ವೆಂಚರ್ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿವೆ. ಹಾಗೆಯೇ ಕೆಟಿಎಂ ಕೂಡಾ ವಿವಿಧ ಅಡ್ವೆಂಚರ್ ಬೈಕ್ ಮಾರಾಟದಲ್ಲಿ ಗ್ರಾಹಕರ ಗಮನಸೆಳೆಯುತ್ತಿದ್ದು, ಅಡ್ವೆಂಚರ್ ಬೈಕ್ ಪ್ರಿಯರನ್ನು ಸೆಳೆಯಲು ಹೊಸ ಅಭಿಯಾನವೊಂದನ್ನು ಆರಂಭಿಸಿದೆ.

ಭಾರತದಲ್ಲಿ ತನ್ನ ಸರಣಿ ಬೈಕ್‌ಗಳ ಮಾರಾಟವನ್ನು ಹೆಚ್ಚಿಸುತ್ತಿರುವ ಕೆಟಿಎಂ ಕಂಪನಿಯು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಐದು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಹೊಸದಾಗಿ ಬಿಡುಗಡೆಯಾಗಿರುವ 250 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಬೈಕ್ ಮಾದರಿಗಳು ಕಂಪನಿಯ ಜನಪ್ರಿಯತೆಯನ್ನು ಹೆಚ್ಚಿಸುತ್ತಿವೆ. ಇದಕ್ಕೆ ಪೂರಕವಾಗಿ ಕೆಟಿಎಂ ಕಂಪನಿಯು ಅಡ್ವೆಂಚರ್ ಡೇ ಆರಂಭಿಸಿದ್ದು, ಹೊಸ ಅಭಿಯಾನದ ಮೂಲಕ ಅಡ್ವೆಂಚರ್ ಮಾಲೀಕರಿಗೆ ಉತ್ತೇಜನ ನೀಡುತ್ತಿದೆ.

ಭಾರತದಲ್ಲಿ ಮೊದಲ ಅಡ್ವೆಂಚರ್ ಡೇ ಆರಂಭಿಸಿರುವ ಕೆಟಿಎಂ ಕಂಪನಿಯು 250 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಬೈಕ್ ಮಾಲೀಕರಿಗೆ ಅಡ್ವೆಂಚರ್ ಬೈಕ್ ಚಾಲನಾ ಕೌಶಲ್ಯತೆ ಕುರಿತಾಗಿ ತರಬೇತಿ ನೀಡುತ್ತಿದ್ದು, ನುರಿತ ರೈಡರ್‌ಗಳಿಂದ ವಿವಿಧ ಹಂತದ ರೈಡಿಂಗ್ ಕೌಶಲ್ಯ ಪ್ರದರ್ಶನಗಳನ್ನು ಕೈಗೊಳ್ಳಲಾಗಿತ್ತು.

ಮೊದಲ ಅಡ್ವೆಂಚರ್ ಡೇ ಕಾರ್ಯಗಾರವನ್ನು ಪುಣೆಯ ಕತ್ರಾಜ್‌ನಲ್ಲಿರುವ 21 ಎನ್ಡೊರ್ ಪಾರ್ಕ್‌ನಲ್ಲಿ ಆಯೋಜಿಸಿದ್ದ ಕೆಟಿಎಂ ಕಂಪನಿಯು ಆಫ್ ರೋಡ್ ಟ್ರೈನರ್ ವರದಾ ಸೇರಿದಂತೆ ಹಲವು ನುರಿತ ರೈಡರ್ಸ್ ತಂಡದೊಂದಿಗೆ ಮುಂಬೈ ಮತ್ತು ಪುಣೆಯಲ್ಲಿರುವ 250 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಬೈಕ್ ಮಾಲೀಕರಿಗೆ ಆಫ್ ರೋಡ್ ಕೌಶಲ್ಯ ತರಬೇತಿ ನೀಡಿತು.

ಅಡ್ವೆಂಚರ್ ಡೇ ಕಾರ್ಯಾಗಾರದಲ್ಲಿ ಆಫ್ ರೋಡ್ ರೈಡಿಂಗ್ ವೇಳೆ ಬೈಕ್ ಸೆಟಪ್ ಮಾಡುವುದುದು ಹೇಗೆ? ನಿಯಂತ್ರಣದ ಹಂತಗಳು ಯಾವವು? ಬೈಕ್ ಲಿಫ್ಟಿಂಗ್, ಧೀರ್ಘ ಕಾಲದ ಟೂರ್ ಆಯೋಜಿಸುವುದು ಹೇಗೆ ಎಂಬ ಹಲವಾರು ಪ್ರಶ್ನೆಗಳಿಗೆ ಅತಿ ಸರವಾಗಿ ಬೈಕ್ ರೈಡರ್‌ಗಳಿಗೆ ತಿಳಿ ಹೇಳಲಾಯಿತು. ಬೈಕ್ ರೈಡಿಂಗ್ ಅಂದರೆ ಕೇವಲ ವೇಗವಾಗಿ ಮಾತ್ರ ಸವಾರಿ ಮಾಡುವುದಲ್ಲ ಕಠಿಣ ಸಂದರ್ಭಗಳಲ್ಲೂ ಸುರಕ್ಷಿತವಾಗಿ ಪ್ರಯಾಣ ಕೈಗೊಳ್ಳುವುದು ಹೇಗೆ ಎಂಬ ಸವಾರಿ ಕೌಶಲ್ಯಗಳನ್ನು ಹೇಳಿಕೊಡಲಾಯಿತು.

ಸದ್ಯ ಪುಣೆ ಮತ್ತು ಮುಂಬೈ ಗ್ರಾಹಕರಿಗೆ ಮಾತ್ರವೇ ಅಡ್ವೆಂಚರ್ ಡೇ ಆಯೋಜಿಸಿದ್ದ ಕೆಟಿಎಂ ಕಂಪನಿಯು ಶೀಘ್ರದಲ್ಲೇ ದೇಶದ ಪ್ರಮುಖ ಏಳು ನಗರಗಳಲ್ಲಿ ಅಡ್ವೆಂಚರ್ ಡೇ ನಡೆಸುವ ಯೋಜನೆಯಲ್ಲಿದ್ದು, ಅಡ್ವೆಂಚರ್ ಡೇ ರೈಡಿಂಗ್‌ನಲ್ಲಿ ಭಾಗಿಯಾದ ಬೈಕ್ ಮಾಲೀಕರಿಗೆ ಅಭಿನಂದನಾ ಪ್ರಮಾಣ ಪತ್ರ ಸಹ ವಿತರಣೆ ಮಾಡಲಾಯ್ತು.

ಅಡ್ವೆಂಚರ್ ಡೇ ಆಯೋಜನೆ ಮುಖ್ಯ ಉದ್ದೇಶ ಏನೆಂದರೆ ಆಫ್ ರೋಡ್ ಸವಾರಿಯನ್ನು ಸುರಕ್ಷಿತ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಸಂಬಂಧ ಹೊಸ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ವಿವಿಧ ನಗರಗಳಲ್ಲಿ ಅಡ್ವೆಂಚರ್ ಡೇ ಆಯೋಜನೆಗೊಳ್ಳಲಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಕೆಟಿಎಂ ಅಡ್ವೆಂಚರ್ ಡೇ ಆಯೋಜನೆಯು ಕೇವಲ 250 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಬೈಕ್ ಮಾಲೀಕರಿಗಾಗಿ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಅಡ್ವೆಂಚರ್ ಬೈಕ್ ಮಾಲೀಕರಿಗೆ ನುರಿತ ಆಫ್ ರೋಡ್ ರೈಡರ್‌ಗಳಿಂದ ಸರಿಯಾದ ಮಾರ್ಗದರ್ಶನ ನೀಡುತ್ತಿರುವುದು ಉತ್ತಮ ಯೋಜನೆಯಾಗಿದೆ.

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಟಿಎಂ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ 125 ಡ್ಯೂಕ್, 200 ಡ್ಯೂಕ್, ಡ್ಯೂಕ್ 250, ಡ್ಯೂಕ್ 390, ಆರ್‌ಸಿ 125 ಆರ್‌ಸಿ 200, ಆರ್‌ಸಿ 390, 250 ಅಡ್ವೆಂಚರ್, 390 ಅಡ್ವೆಂಚರ್ ಮತ್ತು 790 ಡ್ಯೂಕ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ 790 ಅಡ್ವೆಂಚರ್ ಮತ್ತು 890 ಡ್ಯೂಕ್ ಆರ್ ಸೂಪರ್ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಅಡ್ವೆಂಚರ್ ಟೂರರ್ ಬೈಕ್ ಮಾದರಿಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಆಫ್ ರೋಡ್ ಜೊತೆಗೆ ದಿನನಿತ್ಯದ ಸವಾರಿಗೂ ಈ ಬೈಕ್‌ಗಳು ಉತ್ತಮವಾಗಿರುವುದೇ ಬೇಡಿಕೆ ಹೆಚ್ಚಕ್ಕೆ ಪ್ರಮುಖ ಕಾರಣವಾಗಿದೆ.