ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಬಹುನಿರೀಕ್ಷಿತ 2021ರ ಜಿ 310 ಜಿಎಸ್ ಬೈಕನ್ನು ಅನಾವರಣಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಕಂಪನಿಯು ತನ್ನ ಹೊಸೂರಿನಲ್ಲಿರುವ ಘಟಕದಲ್ಲಿ ಜಿ 310 ಜಿಎಸ್ ಬೈಕಿನ ಉತ್ಪಾದನೆಯನ್ನು ಪ್ರಾರಂಭಿಸಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್

ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನಲ್ಲಿ ನವೀಕರಿಸಿದ ಹೆಡ್‌ಲ್ಯಾಂಪ್ ವಿನ್ಯಾಸದೊಂದಿಗೆ ಎಲ್ಲ ಹೊಸ ಮುಂಭಾಗದ ಫಾಸಿಕ ಹೊಂದಿದೆ. ಈ ಬೈಕ್ ಹೊಸ ಬ್ಲ್ಯೂ, ಬ್ಲ್ಯಾಕ್ ಮತ್ತು ರೆಡ್ ಅನ್ನು ಬಣ್ಣಗಳನ್ನು ಹೊಂದಿದ್ದು, ಈ ಬಣ್ಣಗಳ ಆಯ್ಕೆಯಲ್ಲಿ ಹೆಚ್ಚು ಆಕರ್ಷಕವಾಗಿದೆ. ಈ ಬೈಕಿನ ಟ್ರೆಲ್ಸಿ ಫ್ರೇಮ್ ರೆಡ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್

ಚಿತ್ರಗಳಲ್ಲಿ ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನ ಮುಂಭಾಗ ಸ್ಪೋರ್ಟ್ಸ್ ರ್ಯಾಲಿ ಡೆಕಾಲ್ ಅನ್ನು ಹೊಂದಿದೆ. ಇದು ಕಂಪನಿಯು ನೀಡುವ ಅಡ್ವೆಜರ್ ಬೈಕಿನ ಸ್ಪೆಷಲ್ ಎಡಿಷನ್ ಆವೃತ್ತಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್

ಈ ಬದಲಾವಣೆಗಳ ಹೊರತಾಗಿ, ಹಿಂದಿನ ಮಾದರಿ ಬಿಎಸ್ 4 ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನಲ್ಲಿ ಕಂಡುಬರುವ ಅದೇ ಎಂಜಿನ್‌ನ ನವೀಕರಿಸುವ ಸಾಧ್ಯತೆಗಳಿದೆ. ಕೆಲವು ವರದಿಗಳ ಪ್ರಕಾರ ಬಿಎಸ್ 6 ಅಪಾಚೆ ಆರ್ಆರ್ 310 ಎಂಜಿನ್ ಅನ್ನು ಬಳಸುವ ಸಾಧ್ಯತೆಗಳಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್

ಆರ್‌ಆರ್‌ 310 ನಲ್ಲಿನ 312 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 34 ಬಿಹೆಚ್ಪಿ ಮತ್ತು 7,700 ಆರ್‌ಪಿಎಂನಲ್ಲಿ 28 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದಾಗ ಇದು ಯಾವುದೇ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್

ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ. ಮುಂಭಾಗ ಗೋಲ್ಡ್ ಬಣ್ಣದ ಫಿನಿಶಿಂಗ್ ಹೊಂದಿರುವ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್

ಇನ್ನು ಈ ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಡ್ಯುಯಲ್-ಚಾನೆಲ್ ಎಬಿಎಸ್ ಜೊತೆಗೆ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕಿಂಗ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗುತ್ತದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್

ಈ ಹೊಸ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕಿನಲ್ಲಿ ಸ್ಪೋರ್ಟಿಯರ್ ನಿಲುವನ್ನು ಹೊಂದಲು ಬಿಎಂಡಬ್ಲ್ಯು ವಿನ್ಯಾಸಕರು ಟೂರರ್‌ನ ಸೆಮಿ-ಫೇರಿಂಗ್ ಅನ್ನು ಹೆಚ್ಚಿಸಿದ್ದಾರೆ. ಈ ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ 390 ಅಡ್ವೆಂಚರ್ ಬೈಕಿಗೆ ಪೈಪೋಟಿ ನೀಡುತ್ತದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್

ಹೊಸ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕ್ ಗಾಗಿ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಈ ಹೊಸ ಜಿ310 ಜಿಎಸ್ ಬೈಕನ್ನು ಖರೀದಿಸಲು ಬಯಸುವವರು ಟೋಕನ್ ಮೊತ್ತ ರೂ.50,000 ಗಳವರೆಗೆ ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
BMW G 310 GS BS6 Revealed Ahead Of India Launch. Read In Kannada.
Story first published: Saturday, October 3, 2020, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X