Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಗಲಿದೆ ಬಹುನಿರೀಕ್ಷಿತ ಟ್ರಯಂಫ್ ಟ್ರೈಡೆಂಟ್ ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟ್ರಯಂಫ್ ತನ್ನ ಟ್ರೈಡೆಂಟ್ ಮಿಡಲ್ ವೇಟ್ ರೋಡ್‌ಸ್ಟರ್ ಬೈಕನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಹೊಸ ಟ್ರಯಂಫ್ ಟ್ರೈಡೆಂಟ್ ಬೈಕಿನ ಮೂಲಮಾದರಿಯನ್ನು ಒಂದೆರಡು ತಿಂಗಳ ಹಿಂದೆ ಪ್ರದರ್ಶಿಸಲಾಗಿತ್ತು.

ಹೊಸ ಟ್ರಯಂಫ್ ಟ್ರೈಡೆಂಟ್ ಮಿಡಲ್ ವೇಟ್ ರೋಡ್‌ಸ್ಟರ್ ಆಗಿರುತ್ತದೆ. ಈ ಬೈಕ್ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಸರಣಿಯ ಕೆಳಗಿನ ಸ್ಥಾನದಲ್ಲಿರುತ್ತದೆ. ಟ್ರಯಂಫ್ ಟ್ರೈಡೆಂಟ್ ವಿನ್ಯಾಸ ಮೂಲಮಾದರಿಯನ್ನು ಲಂಡನ್ ಡಿಸೈನ್ ಮ್ಯೂಸಿಯಂನಲ್ಲಿ ಇತ್ತೀಚೆಗೆ ಪ್ರದರ್ಶಿಸಲಾಗಿತ್ತು. ಇದೀಗ ಟ್ರಯಂಫ್ ಕಂಫನಿಯು ಹೊಸ ಟ್ರೈಡೆಂಟ್ ಬೈಕಿನ ಅನಾವಣಗೊಳಿಸುವ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಹೊಸ ಟ್ರಯಂಫ್ ಟ್ರೈಡೆಂಟ್ ಬೈಕ್ ಇದೇ ತಿಂಗಳ 30ರಂದು ಅನಾವರಣವಾಗಲಿದೆ.

ಚಿತ್ರದಲ್ಲಿ ಕಂಡುಬಂದಂತೆ, ಉತ್ಪಾದನಾ ಮಾದರಿಯು ಈ ಮೊದಲು ಪ್ರದರ್ಶಿಸಿದ ಬ್ರಿಟಿಷ್ ಬ್ರ್ಯಾಂಡ್ ವಿನ್ಯಾಸದ ಮೂಲಮಾದರಿಯೊಂದಿಗೆ ಸಾಮ್ಯತೆಯನ್ನು ಹೊಂದಿದೆ. 2021ರ ಟ್ರಯಂಫ್ ಟ್ರೈಡೆಂಟ್ ಅನ್ನು ರೊಡಾಲ್ಫೊ ಫ್ರಾಸ್ಕೋಲಿ ವಿನ್ಯಾಸಗೊಳಿಸಿದ್ದಾರೆ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಅವರು ಟ್ರಯಂಫ್ ಟೈಗರ್ 900 ಬೈಕನ್ನು ಕೂಡ ವಿನ್ಯಾಸಗೊಳಿಸಿದ್ದಾರೆ, ಟ್ರೈಡೆಂಟ್ ವಿನ್ಯಾಸದ ಮೂಲಮಾದರಿಯು ಟ್ರಯಂಫ್‌ಗಾಗಿ ಒಂದು ಉತ್ತೇಜಕ ಅಧ್ಯಾಯದ ಆರಂಭವನ್ನು ನೀಡಬಹುದು.

ಟ್ರಯಂಫ್ ಟ್ರೈಡೆಂಟ್ ಬೈಕ್ ವಿಶಾಲ ಹ್ಯಾಂಡಲ್‌ಬಾರ್‌ಗಳೊಂದಿಗೆ ಒಂದು ರೌಂಡ್ ಹೆಡ್‌ಲ್ಯಾಂಪ್ ಕ್ಲಸ್ಟರ್, ಇಂಡೆಂಟ್‌ಗಳನ್ನು ಹೊಂದಿರುವ ಕರ್ವಿ ಫ್ಯೂಯಲ್ ಟ್ಯಾಂಕ್, ಸ್ಟೆಪ್-ಅಪ್ ಸೀಟ್, ಮ್ಯಾಕನಿಕಲ್ ಬಿಟ್‌ಗಳು, ಕಾಂಪ್ಯಾಕ್ಟ್ ಎಕ್ಸಾಸ್ಟ್ ಮತ್ತು ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಟ್ರೈಡೆಂಟ್ ಬೈಕ್ ರೋಮಾಂಚಕಾರಿ ವಿನ್ಯಾಸವನ್ನು ಹೊಂದಿದೆ, ಈ ಹೊಸ ಟ್ರೈಡೆಂಟ್ ಬೈಕ್ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು. ಹೊಸ ಟ್ರಯಂಫ್ ಟ್ರೈಡೆಂಟ್ ಬೈಕಿನಲ್ಲಿ 650 ಸಿಸಿ ಎಂಜಿನ್ ಅನ್ನು ಅಳವಡಿಸಬಹುದು. ಟ್ರಯಂಫ್ ಟ್ರೈಡೆಂಟ್ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಮಾದರಿಗಳ ಅಲ್ಯೂಮಿನಿಯಂ ಫ್ರೇಮ್ ಅನ್ನು ಹೊಂದಿರಬಹುದು.

ಈ ಹೊಸ ಟ್ರಯಂಫ್ ಟ್ರೈಡೆಂಟ್ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಬಿ650ಆರ್, ಕವಾಸಕಿ ಝಡ್650 ಮತ್ತು ಯಮಹಾ ಎಂಟಿ-07 ಬೈಕುಗಳಿಗೆ ಪೈಪೋಟಿಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಟ್ರಯಂಫ್ ಟ್ರೈಡೆಂಟ್ ಬೈಕನ್ನು ಥೈಲ್ಯಾಂಡ್‌ನ ಟ್ರಯಂಫ್‌ನ ಉತ್ಪಾದನಾ ಕೇಂದ್ರದಲ್ಲಿ ತಯಾರಿಸಲಾಗುತ್ತದೆ. ಟ್ರೈಡೆಂಟ್ ಎಂಬ ಹೆಸರಿನ ಹಿಂದೆ ಒಂದು ರೋಚಕ ಇತಿಹಾಸವಿದೆ. 1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು.

ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹಳೆಯ ಟ್ರೈಡೆಂಟ್ ಬೈಕಿನಲ್ಲಿ 740ಸಿಸಿ, ಏರ್-ಕೂಲ್ಡ್, ಓವರ್‌ಹೆಡ್ ವಾಲ್ವ್ ಸ್ಟ್ರೈಟ್-ಥ್ರೀ ಎಂಬ ಎಂಜಿನ್ ಅನ್ನು ಹೊಂದಿತ್ತು. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 58 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತಿತ್ತು.

ಹೊಸ ಟ್ರಯಂಫ್ ಟ್ರೈಡೆಂಟ್ ಬೈಕ್ ಜಪಾನ್ ಮೂಲದ ರೋಡ್‌ಸ್ಟರ್ ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಟ್ರೈಡೆಂಟ್ ಬೈಕನ್ನು ಟ್ರಯಂಫ್ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಿದೆ