ಎಲೆಕ್ಟ್ರಿಕ್ ಬೈಕುಗಳ ವಿತರಣೆ ಆರಂಭಿಸಿದ ರಿವೋಲ್ಟ್

ರಿವೋಲ್ಟ್ ಮೋಟಾರ್ಸ್ ಕಂಪನಿಯು ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಿತ್ತು. ರಿವೋಲ್ಟ್ ಕಂಪನಿಯು ಬಿಡುಗಡೆಗೊಳಿಸಿದ ಆರ್‌ವಿ300 ಮತ್ತು ಆರ್‌ವಿ400 ಎಂಬ ಎರಡು ಎಲೆಕ್ಟ್ರಿಕ್ ಬೈಕುಗಳು ಭಾರತದಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿತ್ತು.

ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳ ವಿತರಣೆ ಆರಂಭಿಸಿದ ರಿವೋಲ್ಟ್

ಕರೋನಾ ಭೀತಿಯಿಂದ ದೇಶಾದ್ಯಂತ ಕೇಂದ್ರ ಲಾಕ್ ಡೌನ್ ಘೋಷಿಸಿದ ಸಮಯದಲ್ಲಿ ರಿವೋಲ್ಟ್ ಕಂಪನಿಯು ಆರ್‌ವಿ300 ಮತ್ತು ಆರ್‌ವಿ400 ಎಂಬ ಎರಡು ಎಲೆಕ್ಟ್ರಿಕ್ ಬೈಕುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ನಂತರದಲ್ಲಿ ಸರ್ಕಾರವು ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆಗೊಳಿಸಿದಾಗ ರಿವೋಲ್ಟ್ ಈ ಎರಡು ಎಲೆಕ್ಟ್ರಿಕ್ ಬೈಕುಗಳ ಉತ್ಪಾದನೆಯನ್ನು ಪುನಾರಂಭಿಸಿದ್ದರು. ಇತ್ತೀಚೆಗೆ ಆರ್‌ವಿ300 ಮತ್ತು ಆರ್‌ವಿ400 ಎಂಬ ಎರಡು ಬೈಕುಗಳ ಯುನಿಟ್ ಗಳು ಚೆನ್ನೈ ಮತ್ತು ಅಹಮದಾಬಾದ್‌ ನಗರಗಳಲ್ಲಿರುವ ಡೀಲರುಗಳ ಬಳಿ ತಲುಪಿತು.

ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳ ವಿತರಣೆ ಆರಂಭಿಸಿದ ರಿವೋಲ್ಟ್

ಇದೀಗ ಈ ಎರಡು ಎಲೆಕ್ಟ್ರಿಕ್ ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದೆ. ಕಳೆದ ವರ್ಷ ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳು ದೆಹಲಿ ಮತ್ತು ಪುಣೆಯಲ್ಲಿ ಮಾತ್ರ ಲಭ್ಯವಿತ್ತು. ಆದರೆ ಇದೀಗ ಚೆನ್ನೈ ಮತ್ತು ಅಹಮದಾಬಾದ್‌ ನಗರಗಳಲ್ಲಿ ಕೂಡ ಈ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳು ಲಭ್ಯವಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳ ವಿತರಣೆ ಆರಂಭಿಸಿದ ರಿವೋಲ್ಟ್

ಈ ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳಲ್ಲಿ 300 ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ಸ್, ಫುಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ಫೀಚರುಗಳನ್ನು ಹೊಂದಿದೆ.

ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳ ವಿತರಣೆ ಆರಂಭಿಸಿದ ರಿವೋಲ್ಟ್

ಈ ಎರಡು ಎಲೆಕ್ಟ್ರಿಕ್ ಬೈಕುಗಳಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಇನ್ವರ್ಟಡ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಿದೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ನೀಡಿದೆ. ಇನ್ನು ಎರಡು ಎಲೆಕ್ಟ್ರಿಕ್ ಬೈಕುಗಳಲ್ಲಿ ಎಐ ತಂತ್ರಜ್ಞಾನವನ್ನು ಸಹ ಹೊಂದಿವೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳ ವಿತರಣೆ ಆರಂಭಿಸಿದ ರಿವೋಲ್ಟ್

ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಅನ್ನು ಅಳವಡಿಸಿದೆ. ಆರ್‌ವಿ300 ಎಲೆಕ್ಟ್ರಿಕ್ ಬೈಕಿನಲ್ಲಿ 60ವಿ 2.7 ಕಿವ್ಯಾಟ್ ಬ್ಯಾಟರಿಯನ್ನು ಅಳವಡಿಸಿದೆ.

ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳ ವಿತರಣೆ ಆರಂಭಿಸಿದ ರಿವೋಲ್ಟ್

ಈ ರಿವೋಲ್ಟ್ ಆರ್‌ವಿ300 ಒಂದು ಬಾರಿ ಚಾರ್ಜ್ ಮಾಡಿದರೆ 180 ಕಿ.ಮೀ ಚಲಿಸುತ್ತದೆ. ಇದರಲ್ಲಿ ಇಕೋ, ನೊರ್ಮಲ್, ಸೋರ್ಟ್ಸ್ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಬೈಕ್ ಸ್ಪೋಟ್ಸ್ ಮೋಡ್‌ನಲ್ಲಿ ಗಂಟೆಗೆ 85 ಕಿ.ಮೀ ಸ್ಪೀಡ್ ಅನ್ನು ಹೊಂದಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳ ವಿತರಣೆ ಆರಂಭಿಸಿದ ರಿವೋಲ್ಟ್

ರಿವೋಲ್ಟ್ ಆರ್‌ವಿ400 ಎಲೆಕ್ಟ್ರಿಕ್ ಬೈಕಿನಲ್ಲಿ 72ವಿ 3.24 ಕಿವ್ಯಾಟ್ ಪ್ಯಾಕ್ ಅನ್ನು ಹೊಂದಿದೆ. ಈ ಎಲೆಕ್ಟ್ರಿ ಬೈಕ್ ಒಂದು ಬಾರಿ ಪೂರ್ಣ ಪ್ರಮಾಣದ ಚಾರ್ಜ್ ಮಾಡಿದರೆ ಗರಿಷ್ಠ 150 ಕಿ.ಮೀ ಚಲಿಸಬಹುದು. ಈ ಬೈಕಿನಲ್ಲಿಯು ಕೂಡ ಅದೇ ರೀತಿಯ ಮೂರು ರೈಡಿಂಗ್ ಮೋಡ್ ಅನ್ನು ಹೊಂದಿದೆ.

ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳ ವಿತರಣೆ ಆರಂಭಿಸಿದ ರಿವೋಲ್ಟ್

ರಿವೋಲ್ಟ್ ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳು ಹೆಚ್ಚಾಗಿ ಯುವ ಗ್ರಾಹಕರನ್ನು ಆಕರ್ಷಿಸಿದೆ. ಈ ಎರಡು ಬೈಕುಗಳಲ್ಲಿ ಅತ್ಯಾಧುನಿಕ ಫೀಚರುಗಳೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

Most Read Articles

Kannada
English summary
Revolt Starts Deliveries Of The RV300 & RV400 In Chennai And Ahmedabad. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X