Just In
Don't Miss!
- News
ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ತೃತೀಯಲಿಂಗಿ ನಾಮನಿರ್ದೇಶನ ಮಾಡಿದ ಬೈಡನ್
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Finance
ಬಜೆಟ್ 2021: ಆದಾಯ ತೆರಿಗೆ ಇಳಿಕೆ ಅನುಮಾನ; ವಿನಾಯಿತಿಗಳ ಕಡೆಗೆ ಗಮನ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹಿಳಾ ಸವಾರರಿಗಾಗಿಯೇ ವಿಶೇಷ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್‌ಬರ್ಡ್
ಖ್ಯಾತ ಹೆಲ್ಮೆಟ್ ತಯಾರಕ ಕಂಪನಿಯಾದ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್ ಸರಣಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಮಾಹಿತಿಯ ಪ್ರಕಾರ ಕಂಪನಿಯು ಈ ಹೆಲ್ಮೆಟ್ ಸರಣಿಯನ್ನು ಮಹಿಳಾ ಸವಾರರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದೆ.

ಈ ಹೆಲ್ಮೆಟ್ ಸರಣಿಯನ್ನು ಇಟಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಹೆಲ್ಮೆಟ್‌ನ ಸಂಪೂರ್ಣ ಸರಣಿಯನ್ನು ಐಎಸ್‌ಐ ಹಾಗೂ ಯುರೋಪಿಯನ್ ಮಾನದಂಡಗಳಿಗೆ ಅನುಸಾರವಾಗಿ ತಯಾರಿಸಲಾಗಿದೆ. ಹೊಸ ಸರಣಿಯ ಮಹಿಳಾ ಹೆಲ್ಮೆಟ್‌ಗಳ ಆರಂಭಿಕ ಬೆಲೆ ರೂ.1,149 ಗಳಾಗಿದ್ದು, ಹಲವು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಇವುಗಳಲ್ಲಿ ಕೆಂಪು, ಬಿಳಿ, ನೀಲಿ, ನೇರಳೆ, ಗುಲಾಬಿ ಬಣ್ಣಗಳು ಸೇರಿವೆ. ಕಂಪನಿಯು ಈ ಹೆಲ್ಮೆಟ್ ಸರಣಿಯನ್ನು ಅನೇಕ ಡೆಕಲ್‌ಗಳೊಂದಿಗೆಬಿಡುಗಡೆಗೊಳಿಸಿದೆ. ಈ ಹೆಲ್ಮೆಟ್ ಅನ್ನು ಹಲವು ಗಾತ್ರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಹೆಲ್ಮೆಟ್'ಗಳನ್ನು 520 ಎಂಎಂ (ಎಕ್ಸ್‌ಎಕ್ಸ್‌ಎಸ್), 540 ಎಂಎಂ (ಎಕ್ಸ್‌ಎಸ್), 560 ಎಂಎಂ (ಎಸ್), 580 ಎಂಎಂ (ಎಂ) ಹಾಗೂ 600 ಎಂಎಂ (ಎಲ್) ಗಾತ್ರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹೆಲ್ಮೆಟ್‌ಗಳ ಏರ್ ವೆಂಟ್ ಬಳಿ ಕಂಪನಿಯು ಎಂಬ್ರಾಯಿಡರಿಗಳನ್ನು ಮಾಡಿದೆ.

ಮಹಿಳೆಯರು ಸೀರೆಗಳಲ್ಲಿ ಎಂಬ್ರಾಯಿಡರಿಗಳನ್ನು ಇಷ್ಟಪಡುತ್ತಾರೆ. ಈ ಕಾರಣಕ್ಕೆ ಈ ಹೆಲ್ಮೆಟ್‌ಗಳಲ್ಲೂ ಎಂಬ್ರಾಯಿಡರಿಗಳನ್ನು ನೀಡಲಾಗಿದೆ ಎಂದು ಕಂಪನಿ ಹೇಳಿದೆ. ಏರ್ ವೆಂಟ್'ಗಳನ್ನು ಎಲೆ ಹಾಗೂ ಹೂಗಳ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಇತರ ಯುನಿಸೆಕ್ಸ್ ಆವೃತ್ತಿಯ ಹೆಲ್ಮೆಟ್'ಗಳಿಗಿಂತ ಈ ಹೆಲ್ಮೆಟ್ ವಿಭಿನ್ನ ಗಾತ್ರ ಹಾಗೂ ಫಿಟ್‌ಗಳನ್ನು ಹೊಂದಿದೆ ಎಂದು ಸ್ಟೀಲ್‌ಬರ್ಡ್ ಕಂಪನಿ ಹೇಳಿಕೊಂಡಿದೆ. ಈ ಹೆಲ್ಮೆಟ್‌ನ ಆಕಾರವನ್ನು ಮಹಿಳಾ ಸವಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಹೊಸ ಹೆಲ್ಮೆಟ್ ಬಿಡುಗಡೆಯ ಬಗ್ಗೆ ಮಾತನಾಡಿರುವ ಸ್ಟೀಲ್‌ಬರ್ಡ್‌ನ ಎಂಡಿ ರಾಜೀವ್ ಕಪೂರ್, ಕಾರಣವೇನೆ ಇರಲಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಹೆಲ್ಮೆಟ್ ದ್ವಿಚಕ್ರ ವಾಹನ ಸವಾರರಿಗೆ ರಕ್ಷಣೆ ನೀಡುವಂತಿರಬೇಕು ಎಂದು ಹೇಳಿದ್ದಾರೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನಮ್ಮ ಹೊಸ ಮಹಿಳಾ ಹೆಲ್ಮೆಟ್ ಮಾದರಿಯು ತನ್ನ ವಿನ್ಯಾಸ, ಅಲಂಕಾರ, ಹೆಚ್ಚುವರಿ ಫೀಚರ್, ಸುರಕ್ಷತೆ ಹಾಗೂ ದೃಢವಾದ ನಿರ್ಮಾಣದಿಂದಾಗಿ ಯಶಸ್ವಿಯಾಗುವುದು ಖಚಿತ ಎಂದು ಅವರು ಹೇಳಿದ್ದಾರೆ.

ಮಹಿಳೆಯರ ಈ ಹೆಲ್ಮೆಟ್‌ಗಳು ಅವರ ನೋಟಕ್ಕೆ ಅನುಗುಣವಾಗಿ ಭಿನ್ನವಾಗಿದ್ದು, ಅವರ ನೋಟವನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ. ಅಲ್ಲದೆ, ಈ ಹೆಲ್ಮೆಟ್‌ನಲ್ಲಿ ಪುರುಷರಿಗೂ ಸರಿ ಹೊಂದುವ ವಿನ್ಯಾಸ ಹಾಗೂ ವೈಶಿಷ್ಟ್ಯಗಳಿವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಹೊಸ ಹೆಲ್ಮೆಟ್‌ಗಳ ಸಂಪೂರ್ಣ ಸರಣಿಯು ಹಗುರವಾಗಿದ್ದು, ನಯವಾಗಿದ್ದು, ಹೆಚ್ಚು ಸ್ಟೈಲಿಶ್ ಆಗಿದ್ದು, ಮಹಿಳೆಯರಿಗೆ ಧರಿಸಲು ಆರಾಮದಾಯಕವಾಗಿವೆ ಎಂದು ರಾಜೀವ್ ಕಪೂರ್ ಹೇಳಿದರು.

ಕಂಪನಿಯು ವಿಶ್ವಾದ್ಯಂತ ಸಮೀಕ್ಷೆ ನಡೆಸಿದ ನಂತರ ಈ ಹೆಲ್ಮೆಟ್ ಅನ್ನು ವಿನ್ಯಾಸಗೊಳಿಸಿದೆ. ಈ ಹೆಲ್ಮೆಟ್ ವಿನ್ಯಾಸಕ್ಕೂ ಮುನ್ನ ವಿಶ್ವಾದ್ಯಂತ 100ಕ್ಕೂ ಹೆಚ್ಚು ಮಹಿಳಾ ಸವಾರರೊಂದಿಗೆ ಸಮೀಕ್ಷೆ ನಡೆಸಲಾಗಿತ್ತು.