ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಕರ್ಷಕ ಸಬ್ಸಡಿ ಯೋಜನೆಗಳನ್ನು ಪರಿಚಯಿಸಿದ್ದು, ಹೊಸ ಸಬ್ಸಡಿ ಯೋಜನೆಗಳ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಸಾಕಷ್ಟು ಏರಿಕೆಯಾಗಿದೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಇವಿ ವಾಹನ ಬಳಕೆಯನ್ನು ಹೆಚ್ಚಿಸಲು ಪ್ರೀಮಿಯಂ ಇವಿ ಸ್ಕೂಟರ್ ತಯಾರಕ ಕಂಪನಿಯಾಗಿರುವ ಎಥರ್ ಎನರ್ಜಿ ಕಂಪನಿಯು ತನ್ನ ಗ್ರಾಹಕರಿಗೆ ಪ್ರಮುಖ ಪ್ರೊತ್ಸಾಹ ಕ್ರಮಗಳನ್ನು ಪ್ರಕಟಿಸುತ್ತಿದ್ದು, ಇವಿ ಸ್ಕೂಟರ್ ಮಾಲೀಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದೆ. ಎಥರ್ ಕಂಪನಿಯು ಈಗಾಗಲೇ ಆಯ್ದ ನಗರಗಳಲ್ಲಿ ತನ್ನ ಗ್ರಾಹಕರಿಗಾಗಿ ಉಚಿತ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತಿದ್ದು, ಇದೀಗ ಉಚಿತ ಫಾಸ್ಟ್ ಚಾರ್ಜಿಂಗ್ ಸೇವೆಗಳನ್ನು ಈ ವರ್ಷಾಂತ್ಯದಿಂದ 2022ರ ಜೂನ್‌ಗೆ ವಿಸ್ತರಣೆ ಮಾಡಿದೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಎಥರ್ ಕಂಪನಿಯು ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ 200ಕ್ಕೂ ಹೆಚ್ಚು ಫಾಸ್ಟ್ ಚಾರ್ಜಿಂಗ್ ಗ್ರಿಡ್‌ಗಳನ್ನು ಹೊಂದಿದ್ದು, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ರೆಸ್ಟೊರೆಂಟ್‌ಗಳು ಮತ್ತು ಕಾಫಿ ಡೇ ಮಗಳಿಗಳ ಪಾರ್ಕಿಂಗ್ ಸ್ಥಳಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನ ಸ್ಥಾಪಿಸಿದೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಎಥರ್ ಗ್ರಿಡ್‌ಗಳಲ್ಲಿ ಎಥರ್ ಸ್ಕೂಟರ್ ಮಾಲೀಕರು ಮಾತ್ರವಲ್ಲದೆ ಇತರೆ ಎಲೆಕ್ಟ್ರಿಕ್ ಬ್ರಾಂಡ್ ಮಾಲೀಕರಿಗೂ ಚಾರ್ಜಿಂಗ್ ಸೇವೆಗಳನ್ನು ಒದಗಿಸುತ್ತಿದ್ದು, ಇವಿ ವಾಹನ ಮಾಲೀಕರನ್ನು ಉತ್ತೇಜಸಲು ಕಳೆದ ಅಕ್ಟೋಬರ್‌ನಲ್ಲಿ ಈ ತಿಂಗಳಾಂತ್ಯದ ತನಕ ಉಚಿತ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವುದಾಗಿ ಹೇಳಿಕೊಂಡಿತ್ತು.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಇದೀಗ ಕಂಪನಿಯು ಉಚಿತ ಚಾರ್ಜಿಂಗ್ ಸೌಲಭ್ಯ ಆಫರ್ ಅನ್ನು ಮುಂಬರುವ ಜೂನ್ 30ರ ತನಕ ವಿಸ್ತರಿಸಿದ್ದು, ಜೂನ್ ಕೊನೆಯ ತನಕ ಗ್ರಾಹಕರು ಅಸ್ತಿತ್ವದಲ್ಲಿರುವ ಎಥರ್ ಕಂಪನಿಯ ಯಾವುದೇ ಚಾರ್ಜಿಂಗ್ ನಿಲ್ದಾಣದಲ್ಲಿ ಅನಿಯಮಿತವಾಗಿ ಚಾರ್ಜಿಂಗ್ ಮಾಡಿಕೊಳ್ಳಲು ಅವಕಾಶ ನೀಡಿದೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಇವಿ ವಾಹನಗಳ ಹೆಚ್ಚಳಕ್ಕೆ ಇದೊಂದು ಅತ್ಯುತ್ತಮ ಉಪಕ್ರಮವೆಂದು ಭಾವಿಸಿರುವ ಎಥರ್ ಎನರ್ಜಿ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ನಗರಗಳಲ್ಲಿ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದು, ಪೆಟ್ರೋಲ್ ಬೆಲೆ ಏರಿಕೆ ಪರಿಣಾಮ ಹೊಸ ಇವಿ ಸ್ಕೂಟರ್‌ಗಳು ಉತ್ತಮ ಬೇಡಿಕೆ ಪಡದುಕೊಳ್ಳುತ್ತಿವೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಎಥರ್ ಎನರ್ಜಿ ಕಂಪನಿಯು ದೇಶಾದ್ಯಂತ ತನ್ನ ಚಾರ್ಜಿಂಗ್ ನೆಟ್‌ವರ್ಕ್ ವಿಸ್ತರಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆ ಅಡಿ ಎಥರ್ ಗ್ರಿಡ್ 2.0 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಿದೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಹೊಸ ಎಥರ್ ಗ್ರಿಡ್ 2.0 ಶೀಘ್ರದಲ್ಲೇ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಲಭ್ಯವಿರಲಿದ್ದು, ಹೊಸ ಯೋಜನೆಗಾಗಿ ಕಂಪನಿಯು ಬೆಂಗಳೂರು ಮತ್ತು ಚೆನ್ನೈನಲ್ಲಿ ಮೊದಲ ಹಂತದ ಯೋಜನೆಗೆ ಚಾಲನೆ ನೀಡಿದೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಎರಡನೇ ಹಂತದ ಚಾರ್ಜಿಂಗ್ ನಿಲ್ದಾಣಗಳ ವಿಸ್ತರಣಾ ಯೋಜನೆಯಲ್ಲಿ 500ಕ್ಕೂ ಹೆಚ್ಚು ನಗರಗಳಲ್ಲಿ ಆರಂಭಗೊಳ್ಳುತ್ತಿದ್ದು, ಹೊಸ ಫಾಸ್ಟ್ ಚಾರ್ಜಿಂಗ್‌ಗಳು ಪ್ರಸ್ತುತ ಕಾರ್ಯನಿರ್ವಹಣೆಯಲ್ಲಿ ಚಾರ್ಜಿಂಗ್ ನಿಲ್ದಾಣಗಳಿಂತಲೂ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರಲಿವೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಜೊತೆಗೆ ಹೊಸ ಎಥರ್ ಗ್ರಿಡ್ 2.0 ಸೌಲಭ್ಯವು ಹೆಚ್ಚು ಗುಣಮಟ್ಟದಿಂದ ಕೂಡಿದ್ದು, ಹೊಸ ನೆಟ್‌ವರ್ಕ್ ಅನ್ನು ಅತಿಯಾದ ಮಳೆ, ಬಿಸಿಲಿನ ಪರಿಸ್ಥಿತಿಗಳನ್ನು ಒಡ್ಡಿಕೊಳ್ಳುವ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಮಾಡ್ಯುಲರ್ ವಿನ್ಯಾಸದೊಂದಿಗೆ ರಿಮೋಟ್ ಡಯಾಗ್ನೋಸ್ಟಿಕ್ಸ್‌ ಜೋಡಿಸಲಾಗಿದೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಹೀಗಾಗಿ ಇವಿ ವಾಹನ ಮಾಲೀಕರಿಗೆ ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ, ಚಾರ್ಜಿಂಗ್ ಸೌಲಭ್ಯದ ಲಭ್ಯತೆಯ ನಿಖರ ಮಾಹಿತಿ ದೊರೆಯಲಿದ್ದು, ಎರಡನೇ ಹಂತದಲ್ಲಿ ಒಟ್ಟು 500 ಹೊಸ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಇನ್ನು ಎಥರ್ ಕಂಪನಿಯು ದುಬಾರಿ ಬೆಲೆ ನಡುವೆಯೂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇತ್ತೀಚೆಗೆ ತನ್ನ 25ನೇ ಮಾರಾಟ ಮಳಿಗೆ ತೆರೆಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿತು.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಎಥರ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮುಂದಿನ 2023 ಮಾರ್ಚ್ ವೇಳೆಗೆ 150 ಮಾರಾಟ ಮಳಿಗೆಗಳನ್ನು ದೇಶದ ಪ್ರಮುಖ ನೂರು ನಗರಗಳಿಗೆ ವಿಸ್ತರಿಸುವ ಸಿದ್ದತೆಯಲ್ಲಿದ್ದು, ಹೊಸ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳ ಬಿಡುಗಡೆಗೆ ಸಿದ್ದವಾಗುತ್ತಿದೆ.

ಇವಿ ಸ್ಕೂಟರ್ ಮಾಲೀಕರಿಗೆ ಹೊಸ ಆಫರ್ ಘೋಷಣೆ ಮಾಡಿದ ಎಥರ್ ಎನರ್ಜಿ

ಹೊಸ ಯೋಜನೆಗೆ ಪೂರಕವಾಗಿ ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಇದಕ್ಕಾಗಿ ಕಂಪನಿಯು ಎರಡನೇ ಉತ್ಪಾದನಾ ಘಟಕ ತೆರೆಯುತ್ತಿದೆ. ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ ಘಟಕವನ್ನು ಹೊಂದಿದ್ದು, ಇದೀಗ ಕಂಪನಿಯು ಎರಡನೇ ಘಟಕವನ್ನು ಸಹ ಹೊಸೂರಿನಲ್ಲಿಯೇ ತೆರೆಯಲು ನಿರ್ಧರಿಸಿದೆ.

Most Read Articles

Kannada
English summary
Ather energy extends free charging till june 30 next year details
Story first published: Tuesday, December 21, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X