Just In
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನಪ್ರಿಯ ಅವೆಂಜರ್ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಡೋಮಿನರ್ ಬೈಕುಗಳ ಬೆಲೆಯನ್ನು ಹೆಚ್ಚಿಸಿತ್ತು. ಇದೀಗ ಬಜಾಜ್ ತನ್ನ ತನ್ನ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಮತ್ತು ಅವೆಂಜರ್ 220 ಕ್ರೂಸ್ ಬೈಕುಗಳ ಬೆಲೆಗಳನ್ನು ಹೆಚ್ಚಿಸಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಮತ್ತು ಅವೆಂಜರ್ 220 ಕ್ರೂಸ್ ಬೈಕುಗಳು ತುಸು ದುಬಾರಿಯಾಗಿವೆ. ಬೆಲೆ ಏರಿಕೆಯ ನಂತರ, ಅವೆಂಜರ್ 220 ಕ್ರೂಸ್ ಬೈಕಿನ ಬೆಲೆಯು ರೂ.1,24,635 ಗಳಾದರೆ, ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕಿನ ಬೆಲೆಯು ರೂ.1,02,592 ಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಿಎಸ್-6 ಅಪ್‌ಡೇಟ್‌ನ ನಂತರ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಮಾದರಿಯ ಬೆಲೆಯು ಮತ್ತೆ ಏರಿಕೆಯಾಗಿದೆ. ಬೆಲೆಯನ್ನು ಹೊರತುಪಡಿಸಿ ಇತರ ಬದಲಾವಣೆಗಳು ಯಾವುದು ಇಲ್ಲ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಬೈಕಿನಲ್ಲಿ 160 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನಲ್ಲಿ ಸಹ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ಹೊಸ ಅವೆಂಜರ್ ಸ್ಟ್ರೀಟ್ 160 ಬೈಕಿನಲ್ಲಿರುವ ಎಂಜಿನ್ 14.8 ಬಿಹೆಚ್‌ಪಿ ಪವರ್ ಹಾಗೂ 13.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡಿನ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಜಾಜ್ ಅವೆಂಜರ್ ಕ್ರೂಸ್ 220 ಬೈಕಿನಲ್ಲಿ 220 ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಈ ಎಂಜಿನ್ 8,500 ಆರ್‌ಪಿಎಂನಲ್ಲಿ 18.7 ಬಿಹೆಚ್‌ಪಿ ಪವರ್ ಹಾಗೂ 7,000 ಆರ್‌ಪಿಎಂನಲ್ಲಿ 17.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 5-ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಈ ಬೈಕಿನಲ್ಲಿ ಎಂಜಿನ್ ಅಪ್ ಗ್ರೇಡ್ ಹೊರತಾಗಿ, ಅವೆಂಜರ್ ಕ್ರೂಸ್ 220 ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳಾಗಿಲ್ಲ. ವಿನ್ಯಾಸವನ್ನು ಮೊದಲಿನಂತೆ ಉಳಿಸಿಕೊಳ್ಳಲಾಗಿದೆ. ಈ ಬೈಕ್ ಬಹುತೇಕ ಭಾಗಗಳಲ್ಲಿ ಒಂದೇ ಉದ್ದದ ವಿಂಡ್‌ಸ್ಕ್ರೀನ್ ಹಾಗೂ ಕ್ರೋಮ್ ಗಳನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಜಾಜ್ ಕಂಪನಿಯು ಇತ್ತೀಚೆಗೆ ತನ್ನ ಡೋಮಿನಾರ್ ಬೈಕುಗಳ ಬೆಲೆಯನ್ನು ಏರಿಕೆ ಮಾಡಿದ್ದಾರೆ. ಬೆಲೆ ಏರಿಕೆಯ ಬಳಿಕ ಡೋಮಿನಾರ್ 400 ಬೈಕಿನ ಬೆಲೆಯು ರೂ.1,99,755 ಗಳಾದರೆ. ಡೋಮಿನಾರ್ 250 ಬೈಕಿನ ಬೆಲೆಯು ರೂ.1,67,718 ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬಜಾಜ್ ಆಟೋ ಕಂಪನಿಯು ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಮತ್ತು ಅವೆಂಜರ್ 220 ಕ್ರೂಸ್ ಬೈಕುಗಳ ಬೆಲೆಯನ್ನು ಮೂರನೇ ಬಾರಿಗೆ ಹೆಚ್ಚಿಸಲಾಗಿದೆ. ಈ ಬೈಕುಗಳ ಬೆಲೆಯನ್ನು ಹೆಚ್ಚಿಸಿರುವುದು ಮಾರಾಟದ ಮೇಲೆ ಪರಿಣಾಮವನ್ನು ಬೀರುತ್ತಾ ಎಂಬುದು ಕಾದು ನೋಡಬೇಕು.